ಪ್ಯಾನ್ ಇಂಡಿಯಾ ಸ್ಟಾರ್ ಎಂಬ ದುರಹಂಕಾರ, ಅಭಿಮಾನಿಯ ಮೊಬೈಲ್ ಕಿತ್ತುಕೊಂಡ ಖ್ಯಾತ ಹೀರೋ..!

ಸೋಲು-ಗೆಲುವು ಒಂದೇ ನಾಣ್ಯದ ಎರಡು ಮುಖಗಳು. ಸೋತಾಗ ಕುಗ್ಗದೇ, ಗೆದ್ದಾಗ ಹಿಗ್ಗದೇ, ಎರಡನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವ ಇರಬೇಕು. ಆದರೆ ಕೆಲವರು ಗೆಲುವು ಸಿಗುತ್ತಿದ್ದಂತೆಯೇ ಮೈ ಮರೆಯುತ್ತಾರೆ. ಇವರ ಕುತ್ತಿಗೆಯ ಮೇಲೆ ತಲೇನೆ ನಿಲ್ಲುವುದಿಲ್ಲ. ಈ ಸಾಲಿಗೆ ಉನ್ನಿ ಮುಕುಂದನ್ ಕೂಡ ಸೇರಿಕೊಂಡಿದ್ದಾರಾ ಎನ್ನುವುದು ಸದ್ಯಕ್ಕೆ ಕಲಾಭಿಮಾನಿಗಳಿಗೆ ಕಾಡುತ್ತಿರುವ ಯಕ್ಷ ಪ್ರಶ್ನೆ.

ಹೌದು, ಉನ್ನಿ ಮುಕುಂದನ್ ಅಭಿನಯದ ಮಾರ್ಕೊ ಬಾಕ್ಸಾಫೀಸ್‌ನಲ್ಲಿ ಬ್ಲಾಕ್ ಬಸ್ಟರ್ ಆಗಿದೆ. ಇನ್ನು, ಭಾರತೀಯ ಚಿತ್ರರಂಗದ ಇತಿಹಾಸದಲ್ಲಿಯೇ ಅತ್ಯಂತ ಹಿಂಸಾತ್ಮಕ ಚಿತ್ರ ಎಂಬ ಕುಖ್ಯಾತಿಗೆ ಕೂಡ ಪಾತ್ರವಾದ ಮಾರ್ಕೊ ಚಿತ್ರದಿಂದ ಉನ್ನಿ ಮುಕುಂದನ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಕೂಡ ಹೊರ ಹೊಮ್ಮಿದ್ದಾರೆ.

angry-unni-mukundan-seizes-fans-phone-for-recording-him-watch-the-viral-video

ಇದರ ನಡುವೆ ಉನ್ನಿ ಮುಕುಂದನ್ ಅಭಿನಯದ ಗೆಟ್ ಸೆಟ್ ಬೇಬಿ ಎಂಬ ಹೆಸರಿನ ಚಿತ್ರವೊಂದು ತೆರೆಗೆ ಬಂದಿದೆ. ಆದರೆ. ಈ ಚಿತ್ರವನ್ನು ಮಾರ್ಕೊವನ್ನು ಹೊತ್ತು ಮೆರೆಸಿದಂತೆ ಪ್ರೇಕ್ಷಕರು ಮೆರೆಸುತ್ತಿಲ್ಲ. ಬದಲಿಗೆ ಚಿತ್ರ ಅಷ್ಟಕಷ್ಟೇ ಎನ್ನುವ ಮಾತುಗಳನ್ನಾಡುತ್ತಿದ್ಧಾರೆ. ಆದರೂ, ಭರವಸೆಯನ್ನು ಕಳೆದುಕೊಳ್ಳದ ಉನ್ನಿ ಮುಕುಂದನ್ ಚಿತ್ರದ ಪ್ರಚಾರವನ್ನು ಮಾಡುತ್ತಿದ್ದಾರೆ. ಮಾಲ್‌ಗಳಿಗೆ ತೆರಳಿ ಪ್ರೇಕ್ಷಕರ ಎದುರು ಮುಖಾಮುಖಿಯಾಗುತ್ತಿದ್ದಾರೆ.

ಹೀಗೆ ಉನ್ನಿ ಮುಕುಂದನ್ ಮಾಲ್‌ವೊಂದಕ್ಕೆ ತೆರಳಿದ ಸಮಯದಲ್ಲಿ ಅಭಿಮಾನಿಯೊಬ್ಬರು ಉನ್ನಿ ಮುಕುಂದನ್ ಫೋಟೊ ಸೆರೆ ಹಿಡಿಯುವ ಪ್ರಯತ್ನ ಮಾಡಿದ್ದಾರೆ. ಈ ಸಮಯದಲ್ಲಿ ತಾಳ್ಮೆಯನ್ನು ಕಳೆದುಕೊಂಡ ಉನ್ನಿ ಸೀದಾ ಆ ಅಭಿಮಾನಿಯ ಮೊಬೈಲ್ ಕಿತ್ತುಕೊಂಡಿದ್ಧಾರೆ. ಮೊಬೈಲ್‌ನ ತಮ್ಮ ಜೇಬ್‌ನಲ್ಲಿ ಹಾಕಿಕೊಂಡು ಕೋಪದಲ್ಲಿ ಮುನ್ನಡೆದಿದ್ದಾರೆ. ಆ ನಂತರ ನಾಲ್ಕು ಹೆಜ್ಜೆ ಮುಂದಕ್ಕೆ ಹೋದ ನಂತರ ಆ ವ್ಯಕ್ತಿಗೆ ಉನ್ನಿ ಮುಕುಂದನ್ ಫೋನ್ ಕೊಟ್ಟಂತೆ ಕಾಣುತ್ತದೆ.

ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಉನ್ನಿ ಮುಕುಂದನ್ ವರ್ತನೆಯ ಬಗ್ಗೆ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಕಹಲವಾರು ಜನ ಉನ್ನಿ ಮುಕುಂದನ್‌ಗೆ ಯಶಸ್ಸು ನೆತ್ತಿಗೇರಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಉನ್ನಿ ಮುಕುಂದನ್ ಅವರ ಈ ವರ್ತನೆಯನ್ನು ಖಂಡಿಸಿದ್ದಾರೆ. ಸೋತಾಗ, ಬೆಂಬಲ ಬೇಕಾದಾಗ ಮಾತ್ರ ನಿಮಗೆ ಅಭಿಮಾನಿಗಳು ಬೇಕು ಆದರೆ ಅದೇ ಗೆದ್ದಾಗ ಅದೇ ಅಭಿಮಾನಿಗಳಿಂದ ಜನರಿಂದ ನಿಮಗೆ ಕಿರಿಕಿರಿಯಾಗುತ್ತೆ ಎಂದಿದ್ದಾರೆ. ಕೆಲವರು ಉನ್ನಿ ಮುಕುಂದನ್ ಪರ ವಕಾಲತ್ತು ವಹಿಸಿದ್ದು ಮುಖದ ಹತ್ತಿರ ಬಂದು ಹಾಗೇ ಕ್ಯಾಮರಾ ಹಿಡಿದರೆ ಯಾರಿಗೆ ತಾನೇ ಕೋಪ ಬರುವುದಿಲ್ಲ ಎಂದಿದ್ದಾರೆ. ತಪ್ಪು ಆ ವ್ಯಕ್ತಿಯದ್ದೇ ಹೊರತು ಉನ್ನಿ ಮುಕುಂದನ್ ಅವರದ್ದಲ್ಲ ಎಂದಿದ್ದಾರೆ.

ಇನ್ನುಳಿದಂತೆ ಸದ್ಯ ಬಿಡುಗಡೆಯಾಗಿರುವ ಉನ್ನಿ ಮುಕುಂದನ್ ಅಭಿನಯದ ಗೆಟ್ ಸೆಟ್ ಬೇಬಿ ಚಿತ್ರದಲ್ಲಿ ನಿಖಿಲಾ ವಿಮಲ್ ನಾಯಕಿಯ ಪಾತ್ರವನ್ನು ನಿರ್ವಹಿಸಿದ್ದಾರೆ. ವಿನಯ್ ಗೋವಿಂದ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಪ್ರೇಕ್ಷಕರ ಮತ್ತು ವಿಮರ್ಷಕರಿಂದ ಮಿಶ್ರ ಪ್ರತಿಕ್ರಿಯೆಯನ್ನು ಪಡೆದ ಈ ಚಿತ್ರದ ಗಳಿಕೆ ಕೂಡ ಹೇಳಿಕೊಳ್ಳುವಂತೆ ಇಲ್ಲ. ಮೊದಲ ದಿನ ಕೇವಲ 29 ಲಕ್ಷ ಗಳಿಸಿದ್ದ ಈ ಚಿತ್ರ ಎರಡನೇ ದಿನ 45 ಲಕ್ಷವನ್ನು ಗಳಿಸಿದೆ. ನಿನ್ನೆ ಚಿತ್ರದ ಗಳಿಕೆಯಲ್ಲಿ ಏರಿಕೆಯಾಗಿದ್ದು 48 ಲಕ್ಷ ರೂಪಾಯಿಯನ್ನು ಚಿತ್ರ ಗಳಿಸಿದೆ. ಮೂರು ದಿನದಲ್ಲಿ ಚಿತ್ರದ ಗಳಿಕೆ 1.22 ಕೋಟಿ ಗಳಿಸಿದೆ ಎಂದು ಸ್ಯಾಕ್ನಿಲ್ ವೆಬ್ ಸೈಟ್ ವರದಿ ಮಾಡಿದೆ.

More from Filmibeat

Read more about: fans selfie mollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X