ನಟಸಾರ್ವಭೌಮ ನಾಯಕಿಯ ತಿದ್ದಿದ ಚಿತ್ರ ವೈರಲ್ ಮಾಡಿದ ಕಿಡಿಗೇಡಿಗಳು

ನಟಿಯರ ಚಿತ್ರಗಳನ್ನು ಸದಾ ದುರುಪಯೋಗಪಡಿಸಿಕೊಂಡು ಅಶ್ಲೀಲ ಚಿತ್ರಗಳನ್ನಾಗಿ ಪರಿವರ್ತಿಸಿ ಹರಿಯಬಿಡಲಾಗುತ್ತದೆ. ನಟಿಯರಿಗೆ ಇದೊಂದು ತೀರದ ಗೋಳು.

ಕೆಲವು ದಿನಗಳ ಹಿಂದಷ್ಟೆ ನಟಿ ನಮಿತಾ ಅವರ ಫೇಕ್‌ ಅಶ್ಲೀಲ ಚಿತ್ರಗಳನ್ನು ಹರಿಯಬಿಡುವುದಾಗಿ ವ್ಯಕ್ತಿಯೊಬ್ಬ ಧಮ್ಕಿ ಹಾಕಿ, ನಟಿಯ ಕೈಯಲ್ಲಿ ಮಂಗಳಾರತಿ ಮಾಡಿಸಿಕೊಂಡಿದ್ದ.

ಈಗ ಮುದ್ದು ನಟಿ ಅನುಪಮಾ ಪರಮೇಶ್ವರನ್ ಅವರ ಸರದಿ. ಅವರ ಚಿತ್ರಗಳನ್ನು ತಿದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಲಾಗಿದೆ. ಈ ಬಗ್ಗೆ ಅನುಪಮಾ ಪರಮೇಶ್ವರನ್ ಅವರು ಗರಂ ಆಗಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣದಲ್ಲೂ ಸಹ ಈ ಬಗ್ಗೆ ಪೋಸ್ಟ್ ಹಾಕಿದ್ದಾರೆ.

ಹಳೆಯ ಚಿತ್ರವನ್ನು ತಿದ್ದಿದ ಕಿಡಿಗೇಡಿಗಳು

ಹಳೆಯ ಚಿತ್ರವನ್ನು ತಿದ್ದಿದ ಕಿಡಿಗೇಡಿಗಳು

ಅನುಪಮಾ ಪರಮೇಶ್ವರ್ ಅವರ ಹಳೆಯ ಚಿತ್ರವೊಂದನ್ನು ತೆಗೆದುಕೊಂಡು ಅದರ ಮುಖವನ್ನು ಬೇರೊಂದು ಚಿತ್ರಕ್ಕೆ ಅಂಟಿಸಿ ಆ ಚಿತ್ರವನ್ನು ವೈರಲ್ ಮಾಡಲಾಗಿದೆ. ತಿದ್ದಿರುವ ಚಿತ್ರ ಸ್ವಲ್ಪ ಗ್ಲಾಮರಸ್ ಆಗಿದೆ.

ಅಸಮಾಧಾನ ಹೊರಹಾಕಿದ ನಟಿ ಅನುಪಮಾ

ಅಸಮಾಧಾನ ಹೊರಹಾಕಿದ ನಟಿ ಅನುಪಮಾ

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಚಿತ್ರ ಹಾಗೂ ಅದರ ಮೂಲ ಚಿತ್ರವನ್ನು ಒಟ್ಟಿಗೆ ಇನ್‌ಸ್ಟಾಗ್ರಾಂ ನಲ್ಲಿ ಹಾಕಿರುವ ಅನುಪಮಾ ಪರೇಶ್ವರನ್, 'ಇಂಥಹಾ ಅಸಂಬಂಧ್ದಗಳಿಗೆ ಸಾಕಷ್ಟು ಸಮಯ ಇದೆಯಲ್ಲವೇ ನಿಮಗೆ'' ಎಂದು ತಮ್ಮ ಚಿತ್ರವನ್ನು ತಿದ್ದಿದ ಕಿಡಿಗೇಡಿಗಳನ್ನು ಪ್ರಶ್ನಿಸಿದ್ದಾರೆ.

ಅಭಿಮಾನಿಗಳು ಗರಂ ಆಗಿದ್ದಾರೆ

ಅಭಿಮಾನಿಗಳು ಗರಂ ಆಗಿದ್ದಾರೆ

ಅನುಪಮಾ ಪರಮೇಶ್ವರನ್ ಅಭಿಮಾನಿಗಳು ಸಹ ತಮ್ಮ ಅಭಿಮಾನದ ನಟಿಯ ಚಿತ್ರವನ್ನು ತಿದ್ದಿ ಪ್ರಕಟಿಸಿ, ವೈರಲ್ ಮಾಡಿದ್ದಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ನಟಿಯ ತಿದ್ದಿದ ಮತ್ತು ಒರಿಜಿನಲ್ ಚಿತ್ರಗಳು ಸದ್ಯ ಒಟ್ಟಿಗೆ ವೈರಲ್ ಆಗಿವೆ.

ಪುನೀತ್ ರಾಜ್‌ಕುಮಾರ್ ಜೊತೆಗೆ ನಟನೆ

ಪುನೀತ್ ರಾಜ್‌ಕುಮಾರ್ ಜೊತೆಗೆ ನಟನೆ

ಪುನೀತ್ ರಾಜ್‌ಕುಮಾರ್ ನಟನೆಯ ನಟಸಾರ್ವಭೌಮ ಚಿತ್ರದಲ್ಲಿ ನಾಯಕಿಯಾಗಿ ಅನುಪಮಾ ಪರಮೇಶ್ವರನ್ ನಟಿಸಿದ್ದರು. ಪ್ರೇಮಂ ಸಿನಿಮಾ ಮೂಲಕ ನಟನೆಗೆ ಕಾಲಿಟ್ಟ ಅವರು ತಮ್ಮ ಸಹಜ ಅಭಿನಯ ಸ್ನಿಗ್ಧ ಸೌಂದರ್ಯದ ಮೂಲಕ ಹೆಸರಾಗಿದ್ದಾರೆ.

More from Filmibeat

English summary
Actress Anupama Parameshwaran morphed image gets viral. Actress express anger about morphing her image.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X