For Quick Alerts
  ALLOW NOTIFICATIONS  
  For Daily Alerts

  ಪವನ್ ಕಲ್ಯಾಣ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾದ ಅನುಪಮಾ; ಕ್ಷಮೆಯಾಚಿಸಿದ ನಟಿ

  |

  ಮಲಯಾಳಂನ ಖ್ಯಾತ ನಟಿ ಅನುಪಮಾ ಪರಮೇಶ್ವರನ್ ಕನ್ನಡಿಗರು ಚಿರಪರಿಚಿತ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜೊತೆ ನಟಸಾರ್ವಭೌಮ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ಅನುಪಮಾ ಕನ್ನಡ ಪ್ರೇಕ್ಷಕರ ಹೃದಯ ಗೆದ್ದಿದ್ದರು. ಸದ್ಯ ಮಲಯಾಳಂ, ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಅನುಪಮಾ ಈಗ ಮತ್ತೆ ಸುದ್ದಿಯಲ್ಲಿದ್ದಾರೆ.

  ತೆಲುಗು ಸ್ಟಾರ್ ನಟ ಪವನ್ ಕಲ್ಯಾಣ್ ನಟನೆಯ ವಕೀಲ್ ಸಾಬ್ ಸಿನಿಮಾದ ವಿಮರ್ಶೆ ಮಾಡಿ ಪವನ್ ಕಲ್ಯಾಣ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಕೀಲ್ ಸಾಬ್ ಸಿನಿಮಾ ನೋಡಿದ ಬಗ್ಗೆ ಬರೆದುಕೊಂಡಿದ್ದಾರೆ. ಅಷ್ಟಕ್ಕೂ ಅನುಪಮಾ ಮಾಡಿದ ತಪ್ಪೇನು? ಪವನ್ ಕಲ್ಯಾಣ್ ಅಭಿಮಾನಿಗಳು ರೊಚ್ಚಿಗೆದ್ದಿದ್ದೇಕೆ? ಮುಂದೆ ಓದಿ...

  ಅನುಪಮಾ ಮಾಡಿದ ವಕೀಲ್ ಸಾಬ್ ವಿಮರ್ಶೆ

  ಅನುಪಮಾ ಮಾಡಿದ ವಕೀಲ್ ಸಾಬ್ ವಿಮರ್ಶೆ

  'ಕಳೆದ ರಾತ್ರಿ ನಾನು ವಕೀಲ್ ಸಾಬ್ ಸಿನಿಮಾ ವೀಕ್ಷಿಸಿದೆ. ಹೇಳಲೇ ಬೇಕು, ಪವನ್ ಕಲ್ಯಾಣ್ ಅದ್ಭುತವಾದ ನಟನೆ ಮತ್ತು ಪ್ರಭಲವಾದ ಸಂದೇಶವಿದೆ. ಮೂವರು ನಾಯಕಿಯರಾದ ನಿವೇತಾ, ಅನನ್ಯಾ ಮತ್ತು ಅಂಜಲಿ ಚಿತ್ರದ ಹೈಲೆಟ್ಸ್. ಪ್ರಕಾಶ್ ರಾಜ್ ಸರ್ ನೀವು ಇಲ್ಲದೆ ಈ ಸಿನಿಮಾ ಅಪೂರ್ಣ' ಎಂದು ಬರೆದೆದಿದ್ದಾರೆ.

  ಪವನ್ ಕಲ್ಯಾಣ್ ಗೆ ಸರ್ ಎಂದು ಕರೆಯದ ನಟಿ

  ಪವನ್ ಕಲ್ಯಾಣ್ ಗೆ ಸರ್ ಎಂದು ಕರೆಯದ ನಟಿ

  ಅಷ್ಟಕ್ಕೂ ಅನುಪಮಾ ಮಾಡಿರುವ ವಿಮರ್ಶೆಯಲ್ಲಿ ತಪ್ಪೇನಿದೆ ಅಂತಿರಾ? ಅನುಪಮಾ, ಪವನ್ ಕಲ್ಯಾಣ್ ಹೆಸರಿನ ಜೊತೆ 'ಸರ್' ಎನ್ನುವುದನ್ನು ಸೇರಿಸಿಲ್ಲ. ಅಭಿಮಾನಿಗಳಿಗೆ ಇದೇ ದೊಡ್ಡ ತಪ್ಪಾಗಿ ಕಾಣುತ್ತಿದೆ. ಪವನ್ ಕಲ್ಯಾಣ್ ಅವರಿಗೆ ಗೌರವ ಕೊಟ್ಟಿಲ್ಲ, ಪ್ರಕಾಶ್ ರಾಜ್ ಅವರನ್ನು 'ಸರ್' ಎಂದು ಕರೆದಿದ್ದೀರಿ, ಆದರೆ ಪವನ್ ಕಲ್ಯಾಣ್ ಅವರನ್ನು ಯಾಕೆ ಗೌರವ ಕೊಟ್ಟಿಲ್ಲ ಎಂದು ಅನುಪಮಾ ವಿರುದ್ಧ ಮುಗಿಬಿದ್ದಿದ್ದಾರೆ.

  ಕ್ಷಮೆಯಾಚಿಸಿದ ಅನುಪಮಾ

  ಕ್ಷಮೆಯಾಚಿಸಿದ ಅನುಪಮಾ

  ಪವನ್ ಅಭಿಮಾನಿಗಳು ಕಾಮೆಂಟ್ ಸಿಟ್ಟಿಗೆದ್ದು ಕಾಮೆಂಟ್ ಮಾಡುವುದನ್ನು ಗಮನಿಸಿದ ಅನುಪಮಾ ಕ್ಷಮೆಯಾಚಿಸಿದ್ದಾರೆ. ಕ್ಷಮಿಸಿ ಹುಡುಗರೇ. ನನ್ನ ಗಮನಕ್ಕೆ ಈಗ ಬಂತು. ಪವನ್ ಕಲ್ಯಾಣ್ ಅವರಿಗೆ ನಾನು ತುಂಬಾ ಗೌರವ ಕೊಡುತ್ತೇನೆ ಮತ್ತು ಪ್ರೀತಿಸುತ್ತೇನೆ' ಎಂದು ಹೇಳಿದ್ದಾರೆ.

  ಮನ ಮುಟ್ಟುವಂತಿದೆ ಚಿರು ಫೋಟೋ‌ ಮುಂದೆ ಮಗನ ಆಟದ ವಿಡಿಯೋ | Filmibeat Kannada
  ಸರ್ ಅಥವಾ ಗಾರು ಎಂದು ಕರೆಯಬೇಕೆಂದ ಅಭಿಮಾನಿಗಳು

  ಸರ್ ಅಥವಾ ಗಾರು ಎಂದು ಕರೆಯಬೇಕೆಂದ ಅಭಿಮಾನಿಗಳು

  ಅನುಪಮಾ ಕ್ಷಮೆಯಾಚಿಸಿದ ಬಳಿಕ ಕೆಲವು ನೆಟ್ಟಿಗರು ಪರವಾಗಿಲ್ಲ ಬಿಡಿ ಡಾರ್ಲಿಂಗ್ ಎಂದು ಹೇಳಿದ್ರೆ ಇನ್ನು ಕೆಲವರು ನಿಮ್ಮಿಂದ ಇದನ್ನ ನಿರೀಕ್ಷೆ ಮಾಡಿರಲಿಲ್ಲ ಎಂದು ಹೇಳಿದ್ದಾರೆ. ಪವನ್ ಕಲ್ಯಾಣ್ ನಿಮಗಿಂತ ತುಂಬಾ ದೊಡ್ಡವರು ಅವರನ್ನು ಸರ್, ಗಾರು ಎಂದು ಹೇಳಿ ಕರೆಯಬೇಕು ಎಂದು ಕಾಮೆಂಟ್ ಮಾಡುತ್ತಿದ್ದಾರೆ.

  ಅನುಪಮಾ ಸದ್ಯ ತಮಿಳಿನಲ್ಲಿ ಒಂದು ಸಿನಿಮಾ ಮತ್ತು ತೆಲುಗಿನ ಒಂದು ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

  English summary
  Malayalam Actress Anupama parameswaran apologies to Pawan Kalyan fan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X