"ನೀನು ಹೀರೊಯಿನ್ ಮೆಟೀರಿಯಲ್ ಅಲ್ಲ" ಎಂದವನಿಗೆ ಅನುಪಮಾ ಪರಮೇಶ್ವರನ್ ತಿರುಗೇಟು
ಸೋಶಿಯಲ್ ಮೀಡಿಯಾದಲ್ಲಿ ಹೆಣ್ಣು ಮಕ್ಕಳಿಗೆ ಕಿರುಕುಳ ಸಹಜ. ಅದರಲ್ಲೂ ಸಿನಿಮಾ ನಟಿಯರಿಗೆ ಕಿರುಕುಳ ಕೊಡುವವರ ಸಂಖ್ಯೆ ಕೂಡ ದೊಡ್ಡದಿದೆ. ಯಾವುದೋ ಮೂಲೆಯಲ್ಲಿ ಕೂತು ಯಾರ ಬಗ್ಗೆ ಏನು ಬೇಕಾದರೂ ಬರೆಯಬಹುದು ಎಂದು ಕೆಲವರು ಅಂದುಕೊಂಡಿದ್ದಾರೆ. ಇದೇ ಕಾರಣಕ್ಕೆ ಮನಸ್ಸಿಗೆ ತೋಚಿದಂತೆ ಕಾಮೆಂಟ್ ಮಾಡುತ್ತಿರುತ್ತಾರೆ. ಕೆಲವರ ಕೆಟ್ಟ ಕೆಟ್ಟ ಕಾಮೆಂಟ್ಸ್, ಅಶ್ಲೀಲ ಪೋಸ್ಟ್ ಹಾಕುತ್ತಾರೆ.
ಸೋಶಿಯಲ್ ಮೀಡಿಯಾ ನೆಗಿಟಿವಿಟಿ, ಹೇಟ್, ಟ್ರೋಲ ದೊಡ್ಡ ಸಮಸ್ಯೆಯಾಗಿ ಮಾರ್ಪಟ್ಟಿದೆ. ಇದನ್ನು ನಿಯಂತ್ರಿಸುವ ಕಾನೂನುಗಳು ಇದ್ದರೂ ಕೂಡ ಯಾರೂ ಹೆದರುವುದಿಲ್ಲ. ಇತ್ತೀಚಿಗೆ ನೆಟ್ಟಿಗನೊಬ್ಬ ಬಹುಭಾಷಾ ನಟಿ ಅನುಪಮಾ ಪರಮೇಶ್ವರ್ ಆತ್ಮ ಸ್ಥೈರ್ಯ ಕುಗ್ಗಿಸುವಂತಹ ಕಾಮೆಂಟ್ ಮಾಡಿದ್ದಾನೆ. ಅದಕ್ಕೆ ಆಕೆಯ ಕೂಡ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ. ಸದ್ಯ ಈ ಕಾಮೆಂಟ್ ವೈರಲ್ ಆಗ್ತಿದೆ.

"ಅನುಪಮಾ ನೀನು ಸ್ಟಾರ್ ಹೀರೋಯಿನ್ ಅಲ್ಲ. ನಿಜ ಹೇಳಬೇಕು ಅಂದರೆ ನೀನು ಹೀರೋಯಿನ್ ಮೆಟೀರಿಯಲೇ ಅಲ್ಲ. ಅದೇ ಕಾರಣಕ್ಕೆ ನಿನಗೆ ಸ್ಟಾರ್ ನಟರ ಜೊತೆ ನಟಿಸುವ ಅವಕಾಶಗಳು ಬರಲಿಲ್ಲ" ಎಂದು ವ್ಯಂಗ್ಯವಾಡಿದ್ದಾನೆ. ಆತನ ಕಾಮೆಂಟ್‌ಗೆ ತಾಳ್ಮೆಯಿಂದಲೇ ಅನುಪಮಾ ಪ್ರತಿಕ್ರಿಯೆ ನೀಡಿದ್ದಾರೆ. ಪರೋಕ್ಷವಾಗಿ ಆತನಿಗೆ ತಿವಿದಿದ್ದಾರೆ. ಅನುಪಮಾ "ಹೌದು ನಿಜ, ನಾನು ಹೀರೊಯಿನ್ ಅಲ್ಲ. ನಾನು ಕೇವಲ ನಟಿ" ಎಂದು ಉತ್ತರ ನೀಡಿದ್ಧಾರೆ.

ಹೀರೋಯಿನ್ ಅನಿಸಿಕೊಳ್ಳುವುದಕ್ಕಿಂತ ನಟಿ ಅನ್ನಿಸಿಕೊಳ್ಳೋದು ದೊಡ್ಡ ವಿಷಯ ಎಂದು ನಟಿ ಅನುಪಮ ಪರಮೇಶ್ವರನ್ ಪರೋಕ್ಷವಾಗಿ ಹೇಳಿದ್ದಾರೆ. ಸದ್ಯ ಅನುಪಮಾ 'ಡೀಜೆ ಟಿಲ್ಲು' ಸೀಕ್ವೆಲ್ 'ಡೀಜೆ ಸ್ಕ್ವೇರ್' ಚಿತ್ರದಲ್ಲಿ ನಟಿಸ್ತಿದ್ದಾರೆ. ಈ ಚಿತ್ರ ಸೆಪ್ಟೆಂಬರ್ 15ರಂದು ಬಿಡುಗಡೆ ಆಗಲಿದೆ. ಸಿದ್ದು ಜೊನ್ನಲಗಡ್ಡ ನಾಯಕನಾಗಿ ನಟಿಸುತ್ತಿದ್ದಾರೆ. ಕಳೆದ ವರ್ಷ ಅನುಪಮಾಗೆ 'ಕಾರ್ತಿಕೇಯ'- 2 ಚಿತ್ರ ದೊಡ್ಡ ಬ್ರೇಕ್ ಕೊಟ್ಟಿತ್ತು. ಹಿಂದಿ ಬೆಲ್ಟ್‌ನಲ್ಲೂ ಸಿನಿಮಾ ಹಿಟ್ ಆಗಿತ್ತು.
'ಡೀಜೆ ಸ್ಕ್ವೇರ್' ಜೊತೆಗೆ ತೆಲುಗು, ತಮಿಳು ಸಿನಿಮಾಗಳಲ್ಲೂ ಅನುಪಮಾ ನಟಿಸುತ್ತಿದ್ದಾರೆ. ತಮ್ಮ ಸಹಜ ಸೌಂದರ್ಯ ಹಾಗೂ ಸಹಜ ನಟನೆಯಿಂದ ಈ ಕೇರಳ ಕುಟ್ಟಿ ಅಭಿಮಾನಿಗಳ ಮನಗೆದ್ದಿದ್ದಾರೆ. ಕನ್ನಡದ 'ನಟಸಾರ್ವಭೌಮ' ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್ ಜೋಡಿಯಾಗಿ ಅನು ನಟಿಸಿದ್ದರು. ಅಪ್ಪು- ಅನುಪಮಾ ಜೋಡಿಯ 'ತಾಜಾ ಸಮಾಚಾರ' ಹಾಡು ಅಭಿಮಾನಿಗಳ ಹಾಟ್ ಫೇವರಿಟ್ ಎನಿಸಿಕೊಂಡಿದೆ.


Click it and Unblock the Notifications











