ನಟ ಸಾರ್ವಭೌಮ ನಟಿ ಅನುಪಮಾಗೆ ಲವ್ ಬ್ರೇಕಪ್? ನಟಿಯ ಚಾಟ್ಸ್ ವೈರಲ್!

ಮಲಯಾಳಂನ ಬಿಗ್ಗೆಸ್ಟ್ ಬ್ಲಾಕ್ ಬಸ್ಟರ್ ಪ್ರೇಮಮ್ ಚಿತ್ರದ ಮೂಲಕ ಸಿನಿಮಾ‌ ಕ್ಷೇತ್ರಕ್ಕೆ ಕಾಲಿಟ್ಟ ಅನುಪಮಾ‌ ಪರಮೇಶ್ವರನ್ ಇಂದು ಸ್ಟಾರ್ ನಟಿಯಾಗಿದ್ದಾರೆ. ತನ್ನ ಹದಿನೆಂಟನೆಯ ವಯಸ್ಸಿಗೆ ನಟಿಯಾದ ಅನುಪಮಾ ಪರಮೇಶ್ವರನ್ ಪ್ರೇಮಂ ಬಳಿಕ‌ ಹಲವಾರು ಆಫರ್ ಪಡೆದು ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಕೇವಲ ಮಲಯಾಳಂ ಮಾತ್ರವಲ್ಲದೆ ತೆಲುಗು ಹಾಗೂ ಕನ್ನಡ ಚಿತ್ರಗಳಲ್ಲಿಯೂ ಸಹ ನಟಿ ಅನುಪಮಾ ಪರಮೇಶ್ವರನ್ ಅಭಿನಯಿಸಿದ್ದಾರೆ. ಕನ್ನಡದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ನಟನೆಯ ಹಿಟ್ ಚಿತ್ರ ನಟ ಸಾರ್ವಭೌಮದಲ್ಲಿ ಶೃತಿ ಪಾತ್ರದಲ್ಲಿ ಮಿಂಚಿದ್ದ ಅನುಪಮಾ ಪರಮೇಶ್ವರನ್ ತಮ್ಮ ಮಾತೃಭಾಷೆ ಮಲಯಾಳಂಗಿಂತ ಹೆಚ್ಚಾಗಿ ತೆಲುಗು ಚಿತ್ರಗಳಲ್ಲಿ ನಟಿಸಿದ್ದಾರೆ ಹಾಗೂ ಯಶಸ್ಸು ಕಂಡಿದ್ದಾರೆ.

Anupama Parameswaran herself clarifies about breakup news via instagram story

ನಟಿ ಯಶಸ್ಸು ಸಾಧಿಸಿದ ಬಳಿಕ ಸಾಮಾನ್ಯವಾಗಿ ಸಾಮಾಜಿಕ‌ ಜಾಲತಾಣದಲ್ಲಿ ದೊಡ್ಡ ಅನುಯಾಯಿ ಬಳಗ ಹೊಂದಿದ್ದು, ಹಲವಾರು ವದಂತಿಗಳಿಗೂ ಸಿಲುಕಿದ್ದರು. ತೆಲುಗಿನ ಕೆಲ ನಟರ ಹೆಸರು ಅನುಪಮಾ ಪರಮೇಶ್ವರನ್ ಜತೆ ತಳುಕಿ ಹಾಕಿಕೊಂಡಿತ್ತು. ಅಲ್ಲದೇ ಖ್ಯಾತ ಕ್ರಿಕೆಟಿಗ ಜಸ್ಪ್ರೀತ್ ಬುಮ್ರಾ ಜತೆ ಅನುಪಮಾ ಪರಮೇಶ್ವರನ್ ಡೇಟಿಂಗ್ ಮಾಡ್ತಿದ್ದಾರೆ ಎಂಬ ಸುದ್ದಿಯೂ ಇತ್ತು. ಇಬ್ಬರೂ ಪರಸ್ಪರ ಸಾಮಾಜಿಕ ಜಾಲತಾಣದಲ್ಲಿ ಫಾಲೋ ಮಾಡುತ್ತಿದ್ದದ್ದು ಹಾಗೂ ಕಾಮೆಂಟ್ ಹಂಚಿಕೊಂಡದ್ದು ಅದಕ್ಕೆಲ್ಲಾ ಕಾರಣವಾಗಿತ್ತು.

ಇನ್ನು ಈ ಎಲ್ಲಾ ಸುದ್ದಿಗಳ‌ ಕುರಿತು ಹಲವಾರು ಬಾರಿ ಮಾತನಾಡಿದ್ದ ನಟಿ ಅನುಪಮಾ ಪರಮೇಶ್ವರನ್ ಈ ಎಲ್ಲಾ ಸುದ್ದಿಗಳೂ ಸತ್ಯಕ್ಕೆ ದೂರವಾದವು, ಎಲ್ಲಾ ಊಹಾಪೋಗಳಷ್ಟೇ ಎಂದು ಎಲ್ಲಾ ಸುದ್ದಿಗಳನ್ನು ವದಂತಿ ಎಂದು ತಳ್ಳಿಹಾಕಿದ್ದರು. ಹೀಗೆ ಅನೇಕ‌ ಬಾರಿ ಲವ್ ಗಾಸಿಪ್ ಸುದ್ದಿಗಳಿಗೆ ಒಳಗಾಗಿದ್ದ ಅನುಪಮಾ ಪರಮೇಶ್ವರನ್ ಈಗ ಮತ್ತೊಮ್ಮೆ ಅಂತಹದ್ದೇ ಸುದ್ದಿಗೀಡಾಗಿದ್ದಾರೆ.

ಸಿನಿಮಾ ಪೇಜ್ ಒಂದು ಅನುಪಮಾ ಪರಮೇಶ್ವರನ್ ಹಾಕಿದ್ದ ಇನ್ಸ್ಟಾಗ್ರಾಮ್ ಸ್ಟೋರಿಯನ್ನು ಆಧರಿಸಿ ಅನುಪಮಾಗೆ ಲವ್ ಬ್ರೇಕಪ್ ಆಗಿದೆ, ತುಂಬಾ ನೋವಿನಲ್ಲಿದ್ದಾರೆ ಎಂದು ಸುದ್ದಿ ಮಾಡಿತ್ತು. ಈ ಸುದ್ದಿಯನ್ನು ಅನುಪಮಾ ಪರಮೇಶ್ವರನ್ ಗೆಳತಿಯೊಬ್ಬಳು ಅನುಪಮಾಗೆ ಮೆಸೇಜ್ ಮೂಲಕ ಕಳುಹಿಸಿ ಲವ್ ಬ್ರೇಕಪ್ ನಿಂದ ತುಂಬಾ ನೋವಾಗ್ತಾ ಇದೆಯಾ ಎಂದು ಕಾಲೆಳೆದಿದ್ದಾರೆ.

Anupama Parameswaran herself clarifies about breakup news via instagram story

ಈ ಸಂದೇಶಕ್ಕೆ ಪ್ರತಿಕ್ರಿಯೆ ನೀಡಿರುವ ಅನುಪಮಾ ಪರಮೇಶ್ವರನ್ ನಕ್ಕು ಅದೆಲ್ಲಾ ಸುಳ್ಳು, ನಾನು ತೋಚಿದ್ದನ್ನು ಬರೆದುಕೊಂಡಿದ್ದೆ ಅಷ್ಟೇ, ಬ್ರೇಕಪ್ ಅಲ್ಲ ಎಂದು ಸ್ಪಷ್ಟಪಡಿಸಿದರು. ಇದನ್ನು ತನ್ನ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಅನುಪಮಾ ಪರಮೇಶ್ವರನ್ ಗೆಳತಿ ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ನೋಡುವ ಸುದ್ದಿಗಳೆಲ್ಲಾ ನಿಜವಲ್ಲ. ಅನುಪಮಾ ಆರಾಮಾಗಿದ್ದಾಳೆ ಎಂದು ಬರೆದುಕೊಂಡಿದ್ದಾರೆ‌.

ಅಂದ್ಹಾಗೆ ಅನುಪಮಾ ಪರಮೇಶ್ವರನ್ 'ನೋವು ಜನರನ್ನು ಬದಲಾಯಿಸುತ್ತದೆ. ಕೆಲವರು ಕಠೋರವಾಗ್ತಾರೆ. ಇನ್ನೂ ಕೆಲವರು ಸೈಲೆಂಟ್ ಆಗ್ತಾರೆ' ಎಂದು ಸ್ಟೋರಿಯಲ್ಲಿ ಬರೆದುಕೊಂಡಿದ್ದರು.

More from Filmibeat

English summary
Anupama Parameswaran herself clarifies about breakup news via instagram story . Read on
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X