"ಈ ಗಿಫ್ಟ್ ಕೊಟ್ರೆ ಸಾಕು, ನಾನು ನಿಮ್ಮವಳಾಗುತ್ತೀನಿ"!; ಅನುಪಮಾ ಪರಮೇಶ್ವರನ್ ಓಪನ್ ಆಫರ್!

ಮಾಲಿವುಡ್ ಬ್ಯೂಟಿ ಅನುಪಮಾ ಪರಮೇಶ್ವರನ್ ಕನ್ನಡ ಸಿನಿರಸಿಕರಿಗೂ ಚಿರಪರಿಚಿತ. ಪುನೀತ್ ರಾಜ್‌ಕುಮಾರ್ ಜೊತೆ 'ನಟಸಾರ್ವಭೌಮ' ಚಿತ್ರದಲ್ಲಿ ನಟಿಸಿ ಅನು ಸ್ಯಾಂಡಲ್‌ವುಡ್ ಎಂಟ್ರಿ ಕೊಟ್ಟಿದ್ದರು. ಪಕ್ಕದ ಮನೆ ಹುಡುಗಿಯಂತ ಆಕೆಯ ನೋಟಕ್ಕೆ ಪಡ್ಡೆ ಹುಡುಗಳು ಫಿದಾ ಆಗಿ ಹೋಗಿದ್ದಾರೆ.

ಆರಂಭದಲ್ಲಿ ಹೋಮ್ಲಿ ಲುಕ್‌ನಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿದ್ದ ಅನುಪಮಾ ಬರ್ತಾ ಬರ್ತಾ ಸಖತ್ ಹಾಟ್ ಆಗ್ತಿದ್ದಾರೆ. ತೆರೆಮೇಲೆ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಬೋಲ್ಡ್ ಆಗುತ್ತಿದ್ದಾರೆ. ಇದು ಕೆಲ ಅಭಿಮಾನಿಗಳಿಗೆ ಬೇಸರ ತರಿಸಿರುವುದು ಸುಳ್ಳಲ್ಲ. 9 ವರ್ಷಗಳ ಹಿಂದೆ 'ಪ್ರೇಮಂ' ಚಿತ್ರದಲ್ಲಿ ಮೇರಿ ಜಾರ್ಜ್ ಆಗಿ ನಟಿಸಿ ಸಿನಿರಸಿಕ ಮನಗೆದ್ದಿದ್ದರು.

Anupama Parameswaran interesting instagram post goes viral

ಅನುಪಮಾ ನಟಿಸಿದ ಮೊದಲ ಚಿತ್ರವೇ ಸೂಪರ್ ಹಿಟ್ ಆಗಿತ್ತು. ಬಳಿಕ ತೆಲುಗು, ತಮಿಳು ಸಿನಿಮಾಗಳಲ್ಲಿ ನಟಿಸಲು ಆರಂಭಿದ್ದರು. 'ಅ ಆ' ಹಾಗೂ 'ಶತಮಾನಂ ಭವತಿ' ಚಿತ್ರಗಳಲ್ಲಿ ಲಂಗಾ ದಾವಣಿ, ಸೀರೆ ಉಟ್ಟು ಮೋಡಿ ಮಾಡಿದ್ದರು. ಈ ಸಿನಿಮಾಗಳಲ್ಲಿ ಆಕೆಯನ್ನು ನೋಡಿದ ಸಾಕಷ್ಟು ಜನ ಅಭಿಮಾನಿಗಳಾಗಿಬಿಟ್ಟರು. ಇನ್ನು 'ತಾಜಾ ಸಮಾಚಾರ' ಹಾಡಿನಲ್ಲಿ ಆಕೆಗೆ ಸ್ನಿಗ್ಧ ಸೌಂದರ್ಯಕ್ಕೆ ಮಾರು ಹೋದವರಿಗೆ ಲೆಕ್ಕವಿಲ್ಲ.

ಸದ್ಯ ಅನುಪಮಾ ನಟಿಸಿರುವ 'ಟಿಲ್ಲು-2' ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಮಾರ್ಚ್ ಕೊನೆಗೆ ಪ್ರೇಕ್ಷಕರ ಮುಂದೆ ಬರಲಿದೆ. ಟ್ರೈಲರ್ ರಿಲೀಸ್ ಆಗಿ ಸಖತ್ ವೈರಲ್ ಆಗುತ್ತಿದೆ. ಕಾರಣ ಅನುಪಮಾ ಪರಮೇಶ್ವರನ್ ಬೋಲ್ಡ್ ಆಗಿ ನಟಿಸಿರುವುದು. 'ಡಿಜೆ ಟಿಲ್ಲು' ಸೀಕ್ವೆಲ್‌ನಲ್ಲಿ ಅನು ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರದಲ್ಲಿ ಸಖತ್ ಹಾಟ್ ಆಗಿ ದರ್ಶನ ಕೊಟ್ಟಿದ್ದಾರೆ.

ಸ್ಕಿನ್ ಶೋ ಮಾತ್ರವಲ್ಲದೇ ಹೀರೊ ಸಿದ್ದು ಜೊತೆ ಲಿಪ್‌ಲಾಕ್ ಸನ್ನಿವೇಶಗಳಲ್ಲಿ ಕಾಣಿಸಿಕೊಂಡು ಎಲ್ಲರ ಹುಬ್ಬೇರಿಸಿದ್ದಾರೆ. ಇದನ್ನು ನೋಡಿ ಕೆಲ ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಆಂಧ್ರದ ಆಟೋ ಡ್ರೈವರ್ ಒಬ್ಬರು ವಿಡಿಯೋ ಮಾಡಿ ಬಹಿರಂಗವಾಗಿ ಬೇಸರ ಹೊರ ಹಾಕಿದ್ದು ವೈರಲ್ ಆಗಿತ್ತು. ಸದ್ಯ ಅನುಪಮಾ ಇನ್‌ಸ್ಟಾ ಸ್ಟೋರಿ ಎಲ್ಲರ ಗಮನ ಸೆಳೆಯುತ್ತಿದೆ.

Anupama Parameswaran interesting instagram post goes viral

ಅನುಪಮಾ ಸದ್ಯ ಪಡ್ಡೆ ಹುಡುಗರಿಗೆ ಕ್ರೇಜಿ ಆಫರ್ ಕೊಟ್ಟಿದ್ದಾರೆ. ತನಗೆ ಬೇಕಾದ ಈ ಉಡುಗೊರೆಯನ್ನು ಯಾರು ಕೊಡುತ್ತಾರೋ ಅವರಿಗೆ ನಾನು ಸ್ವಂತ ಎಂದು ಪೋಸ್ಟ್ ಮಾಡಿದ್ದಾರೆ. ಅನುಪಮಾ ಕೇಳಿದ ಗಿಫ್ಟ್ ಏನು ಅಂದ್ರೆ ನೀರಾನೆ ಮರಿ. ಹೌದು ಪುಟ್ಟ ನೀರಾನೆ ಮರಿಯ ವಿಡಿಯೋ ಹಂಚಿಕೊಂಡಿರುವ ಕೇರಳ ಕುಟ್ಟಿ, "ಈತನನ್ನು ಗಿಫ್ಟ್‌ ಕೊಟ್ಟರೆ ನಾನು ನಿಮ್ಮವಳಾಗುತ್ತೇನೆ" ಎಂದು ಬರೆದುಕೊಂಡಿದ್ದಾರೆ.

ಈ ಇನ್‌ಸ್ಟಾ ಸ್ಟೋರಿ ನೋಡಿದ ಕೆಲವರು ಅರೇ, ಎಲ್ಲಾ ಬಿಟ್ಟು ಮರಿ ನೀರಾನೆ ಮೇಲೆ ಅನುಪಮಾ ಪರಮೇಶ್ವರನ್‌ಗೆ ಯಾಕೆ ಲವ್ವಾಯ್ತು? ಎಂದು ತಲೆ ಕೆಡಿಸಿಕೊಂಡಿದ್ದಾರೆ. ಅಂದಹಾಗೆ ಆಕೆಗೆ ಈ ಉಡುಗೊರೆ ಕೊಡುವುದು ಅಷ್ಟು ಸುಲಭವಲ್ಲ ಬಿಡಿ. ನಮ್ಮ ದೇಶದಲ್ಲಿ ಕಾಡು ಪ್ರಾಣಿಗಳನ್ನು ಕೊಲ್ಲುವುದು ಹಾಗೂ ಸಾಕುವುದು ಅಪರಾಧ. ಕೆಲವು ಪ್ರಾಣಿಗಳನ್ನು ಸಾಕಲು ಅವಕಾಶ ಇದ್ದರೂ ವಿಶೇಷ ಅನುಮತಿ ಅಗತ್ಯವಿದೆ. ಹಾಗಾಗಿ ಅಪರೂಪದ ಪ್ರಾಣಿಗಳಲ್ಲಿ ಒಂದಾದ ನೀರಾನೆ ಮರಿಯನ್ನು ಅನುಪಮಾಗೆ ಉಡುಗೊರೆಯಾಗಿ ಕೊಡುವುದು ಕಷ್ಟದ ಕೆಲಸವೇ ಸರಿ.

ಇತ್ತೀಚೆಗೆ ಬಂದ ತೆಲುಗಿನ 'ಬಟರ್‌ಪ್ಲೈ', 'ಈಗಲ್' ಹಾಗೂ ತಮಿಳಿನ 'ಸಿರೇನ್' ಸಿನಿಮಾಗಳಲ್ಲಿ ಅನುಪಮಾ ಪರಮೇಶ್ವರನ್ ನಟಿಸಿದ್ದರು. ಸದ್ಯ 'ಟಿಲ್ಲು-2' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಮತ್ತೊಂದು ಮಲಯಾಳಂ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ.

More from Filmibeat

English summary
Anupama Parameswaran asked to gift this;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X