ಶಿಕ್ಷಕರ ಅರ್ಹತ ಪರೀಕ್ಷೆ ಫಲಿತಾಂಶದಲ್ಲಿ ನಟಿ ಅನುಪಮಾ ಫೋಟೋ; ಅಚ್ಚರಿ ಮೂಡಿಸಿದ ರಿಸಲ್ಟ್

ಇತ್ತೀಚಿಗಷ್ಟೆ ನಟಿ ಸನ್ನಿ ಲಿಯೋನ್ ಹೆಸರು ಕಾಲೇಜು ಮೆರಿಟ್ ಪಟ್ಟಿಯಲ್ಲಿ ಕಾಣಿಸಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದರು. ಇದರ ಬೆನ್ನಲ್ಲೇ ಈಗ ಮಲಯಾಳಂ ನಟಿ ಅನುಪಮಾ ಪರಮೇಶ್ವರನ್ ಫೋಟೋ ಶಿಕ್ಷಕರ ಅರ್ಹತ ಪರೀಕ್ಷೆ ಫಲಿತಾಂಶದಲ್ಲಿ ಕಾಣಿಸಿಕೊಂಡಿದೆ.

ಈ ಘಟನೆ ಬಿಹಾರದಲ್ಲಿ ನಡೆದಿದೆ. ಬಿಹಾರ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ ಬರೆದ ರಿಪುಸುದನ್ ಪ್ರಸಾದ್ ಗೆ ಫಲಿತಾಂಶ ಅಚ್ಚರಿ ಮೂಡಿಸಿದೆ. ರಿಸಲ್ಟ್ ಶೀಟ್ ನಲ್ಲಿ ದಕ್ಷಿಣ ಭಾರತದ ಖ್ಯಾತ ನಟಿ ಅನುಪಮಾ ಪರಮೇಶ್ವರನ್ ಫೋಟೋ ನೋಡಿ ಶಾಕ್ ಆಗಿದ್ದಾರೆ.

ಅನುಪಮಾ ಫೋಟೋ ಇರುವ ಫಲಿತಾಂಶದ ಶೀಟ್ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆ ಬಿಹಾರ ಶಿಕ್ಷಣ ಇಲಾಖೆೆಯ ಅಧಿಕಾರಿಗಳನ್ನು ಮುಜುಗರಕ್ಕೆ ಈಡುಮಾಡಿದೆ. ಗುರುವಾರ ಫಲಿತಾಂಶ ಹೊರಬಿದಿದ್ದು, ರಿಪುಸುದನ್ ತನ್ನ ಫೋಟೋ ಇರುವ ಜಾಗದಲ್ಲಿ ಅನುಪಮಾ ಫೋಟೋ ನೋಡಿ ದಂಗ್ ಆಗಿದ್ದಾರೆ.

Anupama Parameswaran photo in Bihar STET Exam result

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಿಪುಕುಮರ್, "ತಪ್ಪನ್ನು ಸರಿ ಪಡಿಸಲು ನಾನು ಇಲಾಖೆಯನ್ನು ಸಂಪರ್ಕಿಸಿದೆ. ಆದರೆ ನನ್ನ ಮನವಿಯನ್ನು ಯಾರೂ ಗಮನಿಸಿಲ್ಲ" ಎಂದು ಮಾಧ್ಯಮಕ್ಕೆ ತಿಳಿಸಿದ್ದಾರೆ.

ಇನ್ನು ಈ ಪ್ರತಿಕ್ರಿಯೆ ನೀಡಿದ ಶಿಕ್ಷಣದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸಂಜಯ್ ಕುಮಾರ್, ಇಂತಹ ದೊಡ್ಡ ತಪ್ಪು ಹೇಗೆ ಆಗಿದೆ ಎಂದು ಕಂಡು ಹಿಡಿಯಲು ತನಿಖೆಗೆ ಆದೇಶಿಸಲಾಗಿದೆ" ಎಂದು ಹೇಳಿದ್ದಾರೆ. ಇತ್ತೀಚಿಗೆ ಬಿಹಾರದ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಯೊಬ್ಬ ತನ್ನ ಪೋಷಕರ ಹೆಸರಿನ ಜಾಗದಲ್ಲಿ ತಾಯಿ ಸನ್ನಿ ಲಿಯೋನ್, ತಂದೆ ಇಮ್ರಾನ್ ಹಶ್ಮಿ ಎಂದು ವಿಳಾಸ ನೀಡಿದ್ದರು. ಇದು ಕೂಡ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು.

Recommended Video

10 ಕೋಟಿ ಕೊಟ್ರು ಈ ಕೆಲಸ ಮಾಡಲ್ಲ ಎಂದ ಶಿಲ್ಪಾ ಶೆಟ್ಟಿ | Filmibeat Kannada

ಬಿಹಾರ ಶಿಕ್ಷಣ ಇಲಾಖೆಯಲ್ಲಿ ಪದೇ ಪದೇ ಇಂತಹ ತಪ್ಪುಗಳು ನಡೆಯುತ್ತಿವೆ. ಈ ಬಗ್ಗೆ ಅನೇಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಬಿಹಾರ ಶಿಕ್ಷಕರ ಅರ್ಹತ ಫಲಿತಾಂಶದ ಬಗ್ಗೆ ನಟಿ ಅನುಪಮಾ ಪರಮೇಶ್ವರನ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

More from Filmibeat

English summary
Malayalam Actress Anupama Parameswaran photo in Bihar STET Exam result, viral on social media.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X