ಫೇಸ್‌ಬುಕ್‌ನಲ್ಲಿ ಅಶ್ಲೀಲವಾಗಿ ಬೈದಿದ್ದ ವ್ಯಕ್ತಿಯನ್ನು ನೇರವಾಗಿ ಭೇಟಿ ಮಾಡಿ ಶಾಕ್ ಕೊಟ್ಟ ನಟಿ

ಸಾಮಾಜಿಕ ಜಾಲತಾಣದಲ್ಲಿ ನಟಿಯರು ಪ್ರತಿದಿನ ಕಿರುಕುಳ ಅನುಭವಿಸುತ್ತಿದ್ದಾರೆ. ಕೆಟ್ಟ ಬೈಗುಳಗಳು, ಅಸಹ್ಯಕರ ಕಮೆಂಟ್‌ಗಳು ಪ್ರತಿದಿನ ಸಾಮಾಜಿಕ ಜಾಲತಾಣದಲ್ಲಿ ಇದನ್ನು ಎದುರಿಸುತ್ತಿದ್ದಾರೆ ಬಹುತೇಕ ಸಿನಿಮಾ ನಟಿಯರು.

ಆದರೆ ಇತ್ತೀಚಿನ ದಿನಗಳಲ್ಲಿ ಇದರ ವಿರುದ್ಧ ಸಿಡಿದು ಬೀಳುವ ಗಟ್ಟಿ ಪ್ರವೃತ್ತಿಯನ್ನು ಕೆಲವು ನಟಿಯರು ತೋರುತ್ತಿದ್ದಾರೆ. ರಶ್ಮಿಕಾ ಮಂದಣ್ಣ ಇತ್ತೀಚೆಗಷ್ಟೆ ಟ್ರೋಲ್‌ಗಳನ್ನು ಟೀಕಿಸಿ ಪೋಸ್ಟ್‌ ಹಾಕಿದ್ದರು.

ನಟಿ ಮೀರಾ ಚೋಪ್ರಾ ಅಂತೂ ಒಂದು ಹೆಜ್ಜೆ ಮುಂದೆ ಹೋಗಿ ತನಗೆ ಅತ್ಯಾಚಾರ ಬೆದರಿಕೆ ಹಾಕಿದ ಜೂ ಎನ್‌ಟಿಆರ್ ಅಭಿಮಾನಿಗಳಿಗೆ ಛೀಮಾರಿ ಹಾಕಿದ್ದಲ್ಲದೆ, ನಟನನ್ನೂ ಪ್ರಶ್ನೆ ಮಾಡಿದರು ಜೊತೆಗೆ ಪೊಲೀಸ್‌ ದೂರು ಸಹ ನೀಡಿದರು. ಇದೇ ಸಾಲಿಗೆ ಸೇರುತ್ತಾರೆ ಮಾಲಯಾಳಂ ಸಿನಿಮಾ ನಟಿ ಅಪರ್ಣಾ ನಾಯರ್.

ಏಕೆ ಹೀಗೆ ಮಾಡಿದೆ ಎಂದು ಪ್ರಶ್ನಿಸಿದರು

ಏಕೆ ಹೀಗೆ ಮಾಡಿದೆ ಎಂದು ಪ್ರಶ್ನಿಸಿದರು

ಸಾಮಾಜಿಕ ಜಾಲತಾಣದಲ್ಲಿ ತನ್ನ ಬಗ್ಗೆ ಕೆಟ್ಟದಾಗಿ ಕಮೆಂಟ್‌ ಮಾಡಿದ ಅಜಿತ್ ಕುಮಾರ್‌ ಎಂಬ ವ್ಯಕ್ತಿಯ ವಿರುದ್ಧ ದೂರು ನೀಡಿದ್ದರು ಅಪರ್ಣಾ ನಾಯರ್. ಅಷ್ಟೆ ಅಲ್ಲ ಆತನನ್ನು ನೇರವಾಗಿ ಭೇಟಿ ಮಾಡಿ 'ಏಕೆ ಹೀಗೆ ಮಾಡಿದೆ?' ಎಂದು ಪ್ರಶ್ನೆ ಮಾಡಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಅಶ್ಲೀಲ ಕಮೆಂಟ್‌ ಮಾಡಿದ್ದ ಅಜಿತ್ ವಿರುದ್ಧ ದೂರು

ಅಶ್ಲೀಲ ಕಮೆಂಟ್‌ ಮಾಡಿದ್ದ ಅಜಿತ್ ವಿರುದ್ಧ ದೂರು

ಈ ಬಗ್ಗೆ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿರುವ ಅಪರ್ಣಾ, 'ನನ್ನ ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡಿದ ಅಜಿತ್‌ ಕುಮಾರ್‌ ವಿರುದ್ಧ ಸೈಬರ್ ಠಾಣೆಗೆ ದೂರು ನೀಡಿದ್ದೆ. ಅದರಂತೆ ಠಾಣೆಯಿಂದ ಇಂದು ನನಗೆ ಕರೆ ಬಂತು, ಕಚೇರಿಗೆ ಬರುವಂತೆ ತಿಳಿಸಿದರು. ನಾನೂ ಸಹ ಹೋದೆ ಕೆಲವು ನಿಮಿಷ ಕಾಯ್ದ ಬಳಿಕ, ನನ್ನ ಬಗ್ಗೆ ಅಶ್ಲೀಲವಾಗಿ ಮಾತನಾಡಿದ್ದ ಅಜಿತ್ ಕುಮಾರ್‌ ಎದುರಿಗೆ ಸಿಕ್ಕಿದ' ಎಂದು ಬರೆದುಕೊಂಡಿದ್ದಾರೆ.

ದೂರು ಹಿಂಪಡೆದ ಅಪರ್ಣಾ: ಕಾರಣವೇನು?

ದೂರು ಹಿಂಪಡೆದ ಅಪರ್ಣಾ: ಕಾರಣವೇನು?

ವಿಚಿತ್ರವೇನೆಂದರೆ ಆತನನ್ನು ಭೇಟಿ ಮಾಡಿದ ಬಳಿಕ ಅಪರ್ಣಾ ತಾವು ನೀಡಿದ್ದ ದೂರನ್ನು ಹಿಂಪಡೆದಿದ್ದಾರೆ. ಅಜಿತ್‌ನ ಕುಟುಂಬ ಮತ್ತು ಆರ್ಥಿಕ ಸ್ಥಿತಿ ನೋಡಿ ನಾನು ನನ್ನ ದೂರನ್ನು ಹಿಂಪಡೆದೆ ಆದರೆ ಆತನಿಂದ ಒಂದು ಕ್ಷಮಾಪಣಾ ಪತ್ರವನ್ನು ಬರೆಸಿಕೊಂಡೆ, ಇನ್ನೆಂದೂ, ಇನ್ಯಾರಿಗೂ ಹೀಗೆ ಮಾಡಬೇಡ ಎಂದು ಹೇಳಿದೆ' ಎಂದು ಬರೆದಿಕೊಂಡಿದ್ದಾರೆ ಅಪರ್ಣಾ.

ಅಶ್ಲೀಲ ಕಮೆಂಟ್‌ ಮಾಡಿದ್ದು ಏಕೆ?

ಅಶ್ಲೀಲ ಕಮೆಂಟ್‌ ಮಾಡಿದ್ದು ಏಕೆ?

ಆದರೆ ಅಶ್ಲೀಲ ಕಮೆಂಟ್ ಮಾಡಲು ಕಾರಣವೇನು? ಎಂದು ನಾನು ಆತನನ್ನು ಪ್ರಶ್ನೆ ಮಾಡಿದೆ. ಅದಕ್ಕೆ ಆತ ಹೇಳಿದ್ದು, 'ನಾನು ಸಾಕಷ್ಟು ಈ ರೀತಿಯ ಕಮೆಂಟ್‌ಗಳನ್ನು ಮಾಡುತ್ತಿರುತ್ತೇನೆ, ಇದನ್ನೂ ಹಾಗೆಯೇ 'ಸ್ವಾಭಾವಿಕ'ವಾಗಿ ಮಾಡಿದೆ' ಎಂದನಂತೆ. ಆತ ರಾಜಕಾರಣಿಗಳಿಗೆ, ಇತರ ನಟಿಯರಿಗೂ ಕೆಟ್ಟ ಕಮೆಂಟ್‌ಗಳನ್ನು ಮಾಡುತ್ತಿರುತ್ತಾನಂತೆ.

ಬಹಳ ಅಶ್ಲೀಲವಾಗಿ ಕಮೆಂಟ್ ಮಾಡಿದ್ದ ಅಜಿತ್‌

ಬಹಳ ಅಶ್ಲೀಲವಾಗಿ ಕಮೆಂಟ್ ಮಾಡಿದ್ದ ಅಜಿತ್‌

ಅಪರ್ಣಾ ನಾಯರ್ ಕೆಲವು ದಿನಗಳ ಹಿಂದೆ ತಮ್ಮ ಚಿತ್ರವೊಂದನ್ನು ಹಂಚಿಕೊಂಡಿದ್ದರು. ಅಪರ್ಣಾ ಮರ್ಮಾಂಗಳನ್ನು ಉಲ್ಲೇಖಿಸಿ ಬಹು ಅಶ್ಲೀಶವಾಗಿ ಅಜಿತ್ ಎಂಬಾತ ಕಮೆಂಟ್ ಹಾಕಿದ್ದ. ಅಜಿತ್‌ ಕಮೆಂಟ್ ಬಗ್ಗೆ ದೂರು ಕೊಡುವುದಕ್ಕೆ ಮುನ್ನವೇ ಅಪರ್ಣಾ ಅದರ ಬಗ್ಗೆ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದರು.

More from Filmibeat

English summary
Actress Aparna Nair met Ajit Kumar who abused her on social media and questioned him directly why he did like that.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X