2023ರಲ್ಲಿ ಮದುವೆ 2025ರಲ್ಲಿ ಡಿವೋರ್ಸ್, ಎರಡೇ ವರ್ಷದಲ್ಲಿ ಮುರಿದು ಬಿತ್ತು ಸ್ಟಾರ್ ನಟಿಯ ದಾಂಪತ್ಯ..!
ಯಾವುದೇ ಸಂಬಂಧವಾದರೂ ಸರಿ, ಅಲ್ಲಿ ಪರಸ್ಪರ ನಂಬಿಕೆ, ಪ್ರೀತಿ, ವಿಶ್ವಾಸವಿರಬೇಕು. ಇಂತಹ ಸಂಬಂಧಗಳು ಮಾತ್ರ ದೀರ್ಘಕಾಲ ಬಾಳಲು ಸಾಧ್ಯ. ಕೆಲವು ಜೋಡಿಯನ್ನು ನೋಡಿದ ಕೂಡಲೇ ಇಂತಹ ಜೋಡಿ ನಮ್ಮದಾಗಿರ ಬೇಕು ಎನ್ನುವ ಭಾವನೆಯು ಕೆಲವರಲ್ಲಿ ಮೂಡುವುದು. ಆದರೆ ಎಲ್ಲರಿಗೂ ಇಂತಹ ಭಾಗ್ಯ ಸಿಗುವುದಿಲ್ಲ. ಕೆಲವು ಸಂಬಂಧಗಳು ಹಾಗೆ ಅರ್ಧದಲ್ಲೇ ಕಳಚಿ ಹೋಗುವುದು ಇದೆ. ಇದಕ್ಕೆ ಅಪರ್ಣಾ ವಿನೋದ್ ಮತ್ತು ರಿನಿಲ್ ರಾಜ್ ಸದ್ಯದ ಉದಾಹರಣೆ.
ಹೌದು, ಅಪರ್ಣ ಆನಂದ್. ಮಲಯಾಳಂ ಮನಮೋಹಕ ಸುಂದರಿ. ಆಸಿಫ್ ಅಲಿ ಮತ್ತು ಇಂದ್ರಜಿತ್ ಸುಕುಮಾರ್ ಅಭಿನಯದ ಮಲಯಾಳಂ ಚಿತ್ರ ಕೊಹಿನೂರ್ ಚಿತ್ರದ ಮೂಲಕ ಏಕಾಏಕಿ ಸ್ಟಾರ್ ಆದ ಅಪರ್ಣ ಆ ನಂತರ ಇಳಯ ದಳಪತಿ ವಿಜಯ್ ಅಭಿನಯದ ಭೈರವ ಚಿತ್ರದಲ್ಲಿ ಕೂಡ ಪ್ರಮುಖ ಪಾತ್ರ ನಿರ್ವಹಿಸಿದ್ದರು.

ಆದರೆ ಆ ನಂತರ ಅದೇನಾಯ್ತೋ ? ಅವಕಾಶದ ಹೆಬ್ಬಾಗಿಲು ತೆರೆದ ಸಮಯದಲ್ಲಿಯೇ ಚಿತ್ರರಂಗವನ್ನು ಎಡಗಾಲಿನಲ್ಲಿ ಒದ್ದ ಅಪರ್ಣಾ ಆ ನಂತರ ಕೇವಲ ತಮ್ಮ 26ರ ಪ್ರಾಯದಲ್ಲಿ ರಿನಿಲ್ ರಾಜ್ ಅವರ ಜೊತೆ ಅಕ್ಟೋಬರ್ 2022ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು. ಆ ನಂತರ ಪ್ರೇಮಿಗಳ ದಿನದಂದು 2023ರಲ್ಲಿ ಫೆಬ್ರವರಿ 14ರಂದು ಅದ್ಧೂರಿಯಾಗಿ ಮದುವೆ ಕೂಡ ಆದರು.
ಆದರೆ ಈಗ ಎರಡೇ ವರ್ಷದಲ್ಲಿ ಸಂಬಂಧದಲ್ಲಿ ಬಿರಕು ಮೂಡಿದೆ. ಉಸಿರುಗಟ್ಟಿದಂತೆ ಆಗುತ್ತಿದೆ. ಖುದ್ದು ಈ ವಿಚಾರವನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಅಪರ್ಣಾ ವಿನೋದ್ ನನ್ನ ಬದುಕಿನಲ್ಲಿ ತುಂಬಾ ಬದಲಾವಣೆಗಳಾಗಿವೆ. ತುಂಬಾ ಯೋಚಿಸಿದ ನಂತರ ಮದುವೆಯ ಸಂಬಂಧದಿಂದ ನಾನು ಹೊರ ಬರಲು ತೀರ್ಮಾನಿಸಿದ್ದೇನೆ ಎಂದಿದ್ದಾರೆ. ಈ ನಿರ್ಧಾರ ತೆಗೆದುಕೊಳ್ಳುವುದು ಖಂಡಿತ ಸುಲಭವಾಗಿರಲಿಲ್ಲ ಆದರೆ ಇದೇ ಸರಿಯಾದ ಸಮಯ ಎನ್ನುವುದು ನನ್ನ ಭಾವನೆ ಎಂದಿದ್ದಾರೆ.
ಮುಂದುವರೆದು ಮದುವೆಯ ನಂತರದ ಜೀವನ ನನ್ನ ಪಾಲಿಗೆ ತುಂಬಾನೇ ಕಷ್ಟಕರವಾಗಿತ್ತು. ಹೀಗಾಗಿ ಬದುಕಿನಲ್ಲಿ ಮುನ್ನಡೆಯಲು ಮದುವೆಯ ಈ ಅಧ್ಯಾಯಕ್ಕೆ ಶುಭಂ ಹಾಡಲು ನಿರ್ಧಾರ ಮಾಡಿದ್ದೇನೆ ಎಂದು ಹೇಳಿದ್ದಾರೆ. ಈ ಸಮಯದಲ್ಲಿ ನಿಮ್ಮೆಲ್ಲರಿಂದ ನಾನು ಪಡೆದ ಪ್ರೀತಿ ವಿಶ್ವಾಸ ಮತ್ತು ಬೆಂಬಲಕ್ಕೆ ಸದಾ ಕೃತಜ್ಞಳಾಗಿದ್ದೇನೆ ಮುಂದೆ ಒಳ್ಳೆಯದಾಗುತ್ತೆ ಎನ್ನುವ ವಿಶ್ವಾಸ ಮತ್ತು ನಂಬಿಕೆ ನನಗೆ ಇದೆ ಎಂದಿದ್ದಾರೆ. ಇನ್ಸ್ಟಾಗ್ರಾಮ್‌ನಲ್ಲಿ ತಮ್ಮ ಮದುವೆಯ ಫೋಟೊಗಳನ್ನೆಲ್ಲ ಡಿಲೀಟ್ ಮಾಡಿದ್ದಾರೆ. ಮಾಜಿ ಪತಿ ರಿನಲ್ ರಾಜ್ ಅವರ ಒಂದೇ ಒಂದು ನೆನಪನ್ನು ಕೂಡ ಉಳಿಸಿಕೊಂಡಿಲ್ಲ ಅಪರ್ಣಾ ವಿನೋದ್.
ಇನ್ನುಳಿದಂತೆ ಅಪರ್ಣಾ ಕೊಹಿನೂರ್ ಚಿತ್ರದ ಮೂಲಕ ಖ್ಯಾತಿಯನ್ನು ಗಳಿಸುವ ಮೊದಲು 2015ರಲ್ಲಿ ನನ್ನ ನಿನ್ನೊಡು ಕೊಡೆಯುಂಡು ಚಿತ್ರದ ಮೂಲಕ ಚಿತ್ರರಂಗವನ್ನು ಪ್ರವೇಶಿಸಿದ್ದರು. ವಿನಯ್ ಫೋರ್ಟ್ ಮತ್ತು ಸಿದ್ಧಾರ್ಥ್ ಭರತನ್ ಈ ಚಿತ್ರದ ನಾಯಕರಾಗಿದ್ದರು. ಪ್ರಿಯಾನಂದನನ್ ನಿರ್ದೇಶನ ಈ ಚಿತ್ರಕ್ಕೆ ಇತ್ತು. ಎರ್ನಾಕುಲಂ ಮೂಲದ ಅಪರ್ನಾ ವಿನೋದ್ ಮನೋವಿಜ್ಞಾನದಲ್ಲಿ ಪದವಿಯನ್ನು ಕೂಡ ಪಡೆದಿದ್ದಾರೆ. ಚೆನ್ನೈನ ಪ್ರೆಸಿಡೆನ್ಸಿ ಕಾಲೇಜ್‌ನಲ್ಲಿ ಬಿಎಸ್‌ಸಿ ಮತ್ತು ಎಂಎಸ್‌ಸಿ ಪದವಿಗಳನ್ನು ಕೂಡ ಪಡೆದಿದ್ದಾರೆ. ಸದ್ಯ ತಮ್ಮ ಪತಿ ರಿನಲ್ ರಾಜ್ ಅವರಿಂದ ದೂರವಾಗುವ ತೀರ್ಮಾನಕ್ಕೆ ಬಂದಿರುವ ಅಪರ್ಣಾ ವಿನೋದ್ ಮತ್ತೆ ಚಿತ್ರರಂಗದ ಕಡೆ ಮುಖ ಮಾಡುತ್ತಾರಾ, ಚಿತ್ರಗಳಲ್ಲಿ ಅಭಿನಯಿಸುತ್ತಾರಾ ಅನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











