Dileep Case: ನಟಿ ಮೇಲೆ ದೌರ್ಜನ್ಯ ಪ್ರಕರಣಕ್ಕೆ ಮಹತ್ವದ ತಿರುವು!
ಕೇರಳದ ಜನಪ್ರಿಯ ನಟಿಯ ಮೇಲೆ ಅತ್ಯಾಚಾರ ಯತ್ನ ಪ್ರಕರಣಕ್ಕೆ ಮಹತ್ವದ ತಿರುವೊಂದು ಲಭಿಸಿದೆ. ಪ್ರಕರಣದ ಪ್ರಮುಖ ಆರೋಪಿ ನಟ ದಿಲೀಪ್ ಪತ್ನಿಯೂ ಪ್ರಕರಣದಲ್ಲಿ ಪ್ರಮುಖ ಆರೋಪಿ ಎಂಬುದು ದೊರಕಿರುವ ಹೊಸ ಸಾಕ್ಷಿಯಿಂದ ಬೆಳಕಿಗೆ ಬಂದಿದೆ.
2017 ರಲ್ಲಿ ಶೂಟಿಂಗ್‌ನಿಂದ ಮನೆಗೆ ವಾಪಸ್ಸಾಗುತ್ತಿದ್ದ ಕೇರಳದ ಜನಪ್ರಿಯ ನಟಿಯೊಬ್ಬರನ್ನು ಅಡ್ಡ ಹಾಕಿ ಅವರನ್ನು ಕಾರಿಗೆ ಎಳೆದುಕೊಂಡು ನಟಿಯ ಮೇಲೆ ಅತ್ಯಾಚಾರ ಯತ್ನ ಮಾಡಲಾಗಿತ್ತು. ನಟಿಯ ಮೇಲೆ ಹಲ್ಲೆ ಸಹ ಮಾಡಲಾಗಿತ್ತು. ಈ ಪ್ರಕರಣ ದೇಶದಾದ್ಯಂತ ಸದ್ದು ಮಾಡಿತ್ತು.
ಮಲಯಾಳಂ ಚಿತ್ರರಂಗದ ಪ್ರಮುಖ ನಟ ದಿಲೀಪ್ ಆದೇಶದ ಮೇರೆಗೆ ರೌಡಿ ಪಲ್ಸರ್ ಸುನಿ ಹಾಗೂ ಇತರರು ನಟಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದರು. ಪ್ರಕರಣದ ಬಳಿಕ ಪಲ್ಸರ್ ಸುನಿಯ ಬಂಧನವಾಗಿತ್ತು. ನಂತರ ನಟ ದಿಲೀಪ್ ಬಂಧನವೂ ಆಯ್ತು. ಇದೀಗ ದಿಲೀಪ್ ವಿರುದ್ಧ ತನಿಖೆ ಚುರುಕುಗೊಂಡಿದ್ದು, ಇದೀಗ ಪೊಲೀಸರು ವಶಪಡಿಸಿಕೊಂಡಿರುವ ಸಾಕ್ಷಿಯ ಪ್ರಕಾರ ದಿಲೀಪ್ ಪತ್ನಿ ಕಾವ್ಯಾ ಮಾಧವನ್ ಸಹ ಆರೋಪಿಯೇ ಆಗಿದ್ದಾರೆ.

ಆಡಿಯೋ ಒಂದು ಪೊಲೀಸರಿಗೆ ದೊರಕಿದ್ದು, ಆಡಿಯೋನಲ್ಲಿ, ದೌರ್ಜನ್ಯ ಪ್ರಕರಣದ ಪ್ರಮುಖ ಆರೋಪಿ ಸೂರಜ್ (ನಟ ದಿಲೀಪ್ ಸಂಬಂಧಿ) ಶರತ್ ಎಂಬುವರೊಟ್ಟಿಗೆ ಮಾತನಾಡುತ್ತಾ, ನಟಿಗೆ ಸಮಸ್ಯೆ ನೀಡುವಂತೆ ಕಾವ್ಯಾ ಮಹದೇವ್ ಹೇಳಿರುವುದಾಗಿ ಹೇಳುತ್ತಾನೆ. ಕಾವ್ಯಾಳ ಖಾಸಗಿ ಜೀವನದಲ್ಲಿ ಸಮಸ್ಯೆ ಮಾಡಿರುವ ಆಕೆಗೆ (ದೌರ್ಜನ್ಯಕ್ಕೆ ಒಳಗಾದ ನಟಿ) ತೊಂದರೆ ಕೊಡಬೇಕು ಎಂಬುದು ಕಾವ್ಯಾಳ ಬೇಡಿಕೆ ಆಗಿದೆ ಎಂದು ಸೂರಜ್, ಶರತ್‌ಗೆ ಹೇಳಿರುವ ಆಡಿಯೋ ಅದಾಗಿದೆ. ಕಾವ್ಯಾ ಹಾಗೂ ದೌರ್ಜನ್ಯಕ್ಕೆ ಒಳಗಾಗಿರುವ ನಟಿ ಇಬ್ಬರೂ ಗೆಳತಿಯರೇ ಆಗಿದ್ದರು.
ನಟ ದಿಲೀಪ್ ಕುಮಾರ್ ಹಾಗೂ ಕಾವ್ಯಾ ನಡುವೆ ಸಂಬಂಧ ಇರುವುದನ್ನು ಗಮನಿಸಿದ್ದ ಸಂತ್ರಸ್ಥ ನಟಿ ಅದನ್ನು ಆಗ ದಿಲೀಪ್ ಪತ್ನಿ ಆಗಿದ್ದ ಮಂಜು ವಾರಿಯರ್‌ಗೆ ತಿಳಿಸಿದ್ದರು. ಇದರಿಂದಾಗಿ ದಿಲೀಪ್ ಹಾಗೂ ಕಾವ್ಯಾ ಸಾಕಷ್ಟು ಮುಜುಗರ ಅನುಭವಿಸಬೇಕಾಯಿತು. ಇದೇ ಕಾರಣಕ್ಕೆ ಕಾವ್ಯಾ, ತನ್ನ ಖಾಸಗಿ ಜೀವನಕ್ಕೆ ತೊಂದರೆ ಕೊಟ್ಟ ನಟಿಗೆ ತೊಂದರೆ ಕೊಡಬೇಕೆಂದು ನಟಿಯ ಮೇಲೆ ದಾಳಿ ಮಾಡಿಸಿದಳು ಎಂದು ಈಗ ವೈರಲ್ ಆಗಿರುವ ಆಡಿಯೋದಲ್ಲಿ ಆರೋಪಿ ಸೂರಜ್ ಹಾಗೂ ಶರತ್ ಜೊತೆ ಮಾತನಾಡಿದ್ದಾರೆ.


Click it and Unblock the Notifications











