ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ: ಸಹಾಯಕ ನಿರ್ದೇಶಕ ವಿರುದ್ಧ ದೂರು
ಮದುವೆ ಆಗುವುದಾಗಿ ನಂಬಿಸಿ ಯುವತಿ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಸಹಾಯಕ ನಿರ್ದೇಶಕನೊಬ್ಬನ ಮೇಲೆ ಪ್ರಕರಣ ದಾಖಲಾಗಿದೆ.
Recommended Video
ಶಿವಣ್ಣನ ಈ ದಾಖಲೆಯನ್ನು ಯಾವ ಭಾಷೆಯ ಯಾವ ನಟನೂ ಮಾಡಿಲ್ಲ | Shivarajkumar | Pratham | Oneindia Kannada
ಘಟನೆ ಕೇರಳದಲ್ಲಿ ನಡೆದಿದ್ದು, ಅಸಿಸ್ಟೆಂಟ್ ಡೈರೆಕ್ಟರ್ ಆಗಿರುವ ರಾಹುಲ್ ಚಿರಕ್ಕಲ್ (32) ಎಂಬಾತ ಮದುವೆಯಾಗುವುದಾಗಿ ನಂಬಿಸಿ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಿದ್ದಾನೆ.
ಕೇರಳದ ಪಲ್ಲುರುತಿಯ ರಾಹುಲ್ ಚಿರಕ್ಕಲ್ ಮೇಲೆ ಪತ್ತನಂತಿಟ್ಟ ಪಟ್ಟಣದ ಯುವತಿಯೊಬ್ಬರು ದೂರು ನೀಡಿದ್ದು, ಮದುವೆಯಾಗುವುದಾಗಿ ಸುಳ್ಳು ಹೇಳಿ ಸತತ ಎರಡು ವರ್ಷದಿಂದ ಅತ್ಯಾಚಾರ ಎಸಗಿದ್ದಾನೆ ಎಂದು ದೂರಿನಲ್ಲಿ ಹೇಳಿದ್ದಾರೆ.

ಅಷ್ಟೆ ಅಲ್ಲದೆ, ರಾಹುಲ್, ಆ ಯುವತಿಯ ಬಳಿಯಿಂದ ಸುಮಾರು 6 ಲಕ್ಷ ಹಣ ಮೌಲ್ಯದ ವಸ್ತುಗಳನ್ನು ಸಹ ಪಡೆದುಕೊಂಡಿದ್ದರಂತೆ.
ಐಫೋನ್, ಲ್ಯಾಪ್‌ಟಾಪ್ ನೀಡಿದ್ದಲ್ಲದೆ, ರಾಹುಲ್ ತಾಯಿಗಾಗಿ ಚಿನ್ನದ ಓಲೆ, ರಾಹುಲ್ ನ ವಿಮಾನ ಟಿಕೆಟ್‌ಗಳಿಗೆ ಸಹ ಹಣ ನೀಡಿದ್ದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ ಆ ಸಂತ್ರಸ್ತ ಯುವತಿ.
More from Filmibeat
English summary
Case registerd against assistance director Rahul Chirakkal. Woman lodge complaint on him.


Click it and Unblock the Notifications











