ಶಕೀಲಾ ನಿದ್ದೆಯನ್ನೇ ಭಾವಪ್ರಾಪ್ತಿ ಎಂದು ಭ್ರಮಿಸುತ್ತಿದ್ದರು

By ಉದಯರವಿ

Next »

« Previous

ನಾನೇಕೆ ಆತ್ಮಕಥೆ ಬರೆಯಬೇಕು? ನನ್ನ ಬದುಕಿನಿಂದ ಯಾರಾದರೂ ಕಲಿಯುವುದೇನಾದರೂ ಇದೆಯಾ? ನಾನೇನು ಮದರ್ ತೆರೇಸಾ ಅಲ್ಲ. ನನ್ನದು ಸಂಪೂರ್ಣ ಕೃತಕವಾದ ಜೀವನ. ನಾನು ಅಭಿನಯಿಸಿದ ಚಿತ್ರಗಳೂ ಅಷ್ಟೇ ಕೃತಕವಾಗಿದ್ದವು. ವಿಷಯ ಹೀಗಿದ್ದಾಗ ನಾನೇಕೆ ಆತ್ಮಕಥೆ ಬರೆಯಲಿ? ಯಾರಾದರೂ ಬಂದು ನನ್ನ ಆತ್ಮಕಥೆ ಬರೆಯುತ್ತೇನೆ ಎಂದಾಗ, ನಿರಾಕರಿಸುತ್ತಿದ್ದೆ. ಅ ಬಳಿಕ ನನ್ನ ಮನಸ್ಸು ಬದಲಾಯಿಸಿಕೊಂಡೆ.

ನಾನೂ ಎಲ್ಲ ಹೆಣ್ಣುಮಕ್ಕಳಂತೆ ಅಲ್ಲವೆ. ಸರಳವಾಗಿ ಬದುಕಬೇಕೆಂದಿದ್ದೆ. ಪ್ರೀತಿಸಬೇಕೆಂದಿದ್ದೆ, ಬೇರೆಯವರಿಂದ ಪ್ರೀತಿ ಅಪೇಕ್ಷಿಸಿದ್ದೆ. ಆದರೆ ಇದ್ಯಾವುದೂ ಈಡೇರಲಿಲ್ಲ. ನನ್ನ ಬಗ್ಗೆ ಯಾರಿಗೂ ಏನೂ ಗೊತ್ತಿಲ್ಲ. ನಾನು ಏನೆಲ್ಲಾ ಕಷ್ಟಪಟ್ಟಿದ್ದೇನೋ ಯಾರಿಗೂ ತಿಳಿದಿಲ್ಲ.

ನನ್ನ ಹೆಸರು ಶೃಂಗಾದೇವತೆಗೆ ಹೋಲಿಕೆಯಾಗಿ ಹೇಗೆ ಬದಲಾಯಿತೋ ಯಾರಿಗೂ ಗೊತ್ತಿಲ್ಲ. ನನ್ನಂತಹ ಅದೆಷ್ಟೋ ಶಕೀಲಾಗಳು ಹೇಗೆ ಹುಟ್ಟುತ್ತಾರೋ, ಹೇಗೆ ರೂಪುಪಡೆದುಕೊಳ್ಳುತ್ತಾರೋ ಎಂಬುದನ್ನು ಎಲ್ಲರಿಗೂ ಗೊತ್ತಾಗಬೇಕು ಎಂದು ಈಗ ಆತ್ಮಕಥೆ ಬರೆದಿದ್ದೇನೆ.

Audience Misunderstood Shakeela Sleeping Scenes

ನನ್ನ ಸಿನಿಮಾಗಳು ನನ್ನ ಶರೀರವನ್ನು ಶೃಂಗಾರಭರಿತವಾಗಿ ತೋರಿಸುವುದರ ಹೊರತಾಗಿ ಇನ್ನೇನು ಮಾಡುವುದಿಲ್ಲ. ನನ್ನಲ್ಲಿನ ಸ್ತ್ರೀಯನ್ನಾಗಲಿ, ನಟಿಯನ್ನಾಗಲಿ ಯಾರೂ ನೋಡುವುದಿಲ್ಲ. ಮಲಯಾಳಿ ಹೈಕಳ ಶೃಂಗಾರ ಕನಸುಗಳಿಗೆ ನಾನು ಪ್ರತಿರೂಪ ಎಂದು ಒಬ್ಬ ಪತ್ರಕರ್ತ ನನ್ನ ಬಳಿ ಹೇಳಿದ್ದ. ಯಾರಿಗಾದರೂ ಹಸಿವಾಗಿದ್ದರೆ ಅವರಿಗೆ ಅನ್ನ ಕೊಡಬೇಕು. ಅದುಬಿಟ್ಟು ಬೇರೆ ಏನೂ ಅವರಿಗೆ ಖುಷಿಕೊಡುವುದಿಲ್ಲ ಎಂದಿದ್ದೆ.

ಒಂದು ಹಂತದಲ್ಲಿ ಸಿನಿಮಾ ಹೀರೋಯಿನ್ ಗಳಿಗಿಂತಲೂ ನಾನು ಹೆಚ್ಚಾಗಿ ಸಂಭಾವನೆ ಪಡೆಯುತ್ತಿದ್ದೆ. ಒಂದು ಲೊಕೇಷನ್ ನಿಂದ ಇನ್ನೊಂದು ಲೋಕೇಷನ್ ಗೆ ವಿಮಾನದಲ್ಲಿ ಹೋಗುತ್ತಿದ್ದೆ. ಹಗಲು ರಾತ್ರಿ ಎನ್ನದೆ ಶೂಟಿಂಗ್ ನಲ್ಲಿ ಪಾಲ್ಗೊಳ್ಳುತ್ತಿದ್ದೆ. ಕೆಲವೊಮ್ಮೆ ದಿನಕ್ಕೆ ಎರಡು, ಮೂರು ಗಂಟೆ ನಿದ್ರೆಯೂ ಸಿಗುತ್ತಿರಲಿಲ್ಲ.

ಬಹಳಷ್ಟು ಸಾರಿ ಬೆಡ್ ರೂಂ ಸನ್ನಿವೇಶಗಳ ಚಿತ್ರೀಕರಣದಲ್ಲಿ ಮೈಮರೆದು ನಿದ್ದೆ ಮಾಡಿಬಿಡುತ್ತಿದ್ದೆ. ಆ ರೀತಿಯ ಸನ್ನಿವೇಶಗಳನ್ನು ನೋಡಿದ ಪ್ರೇಕ್ಷಕರು ಭಾವಪ್ರಾಪ್ತಿ ಪಡೆಯುತ್ತಿದ್ದೇನೆಂದು ಭಾವಿಸುತ್ತಿದ್ದರು. ಬಹಳಷ್ಟು ಮಂದಿಯ ದೃಷ್ಟಿಯಲ್ಲಿ ನಾನು ಕಾಮೋದ್ದೀಪನಗೊಳಿಸುವ ಒಂದು ಶರೀರ ಅಷ್ಟೆ. ನನ್ನಲ್ಲಿರುವ ನಟಿಯನ್ನು ಹೊರತೆಗೆಯಲು ಯಾರೂ ಪ್ರಯತ್ನಿಸಲಿಲ್ಲ.

Next »

« Previous

More from Filmibeat

English summary
Shakeela mostly acted in film industries of Malayalam, Tamil, Telugu, Punjabi, and Kannada languages. She had acted more than 110 movies, mostly in B grade movies. This autobiography (Shakeela Athmakadha) is supposed to include all her acquaintances with notable film personalities, politicians and childhood friends. She explains how she entered the film industry, her relationship with Silk Smitha and much else. She also narrates various anecdotes from her life.
Notifications
Settings
Clear Notifications
Notifications
Use the toggle to switch on notifications
• Block for 8 hours
• Block for 12 hours
• Block for 24 hours
• Don't block
Gender
Select your Gender
• Male
• Female
• Others
Age
Select your Age Range
• Under 18
• 18 to 25
• 26 to 35
• 36 to 45
• 45 to 55
• 55+
X