Best of Malayalam: ಓಟಿಟಿಯಲ್ಲಿರುವ ಈ ಅತ್ಯುತ್ತಮ ಮಲಯಾಳಂ ಚಿತ್ರಗಳನ್ನು ನೀವು ನೋಡಲೇಬೇಕು

ಓಟಿಟಿಯಲ್ಲಿ ವೀಕ್ಷಿಸಲು ಭಾರತದ ಒಳ್ಳೆಯ ಚಿತ್ರಗಳಿದ್ದರೆ ಸೂಚಿಸು ಎಂದು ಸಿನಿಮಾ ಪ್ರೇಮಿಯಾದ ಯಾವುದೇ ಸ್ನೇಹಿತರನ್ನು ಕೇಳಿದರೂ ಸಹ ಅವರು ಹೇಳುವ ಒಂದಷ್ಟು ಚಿತ್ರಗಳ ಪಟ್ಟಿಯಲ್ಲಿ ಕಡ್ಡಾಯವಾಗಿ ಮಲಯಾಳಂ ಚಿತ್ರಗಳು ಇದ್ದೇ ಇರುತ್ತವೆ. ಹೌದು, ಮಲಯಾಳಂ ಚಿತ್ರರಂಗಗಳಲ್ಲಿ ಅಂತಹ ಚಿತ್ರಗಳು ಹೆಚ್ಚಿವೆ. ಕುಟುಂಬ ಸಮೇತ ಕುಳಿತು ನೋಡಬಹುದಾದಂತಹ ಸಸ್ಪೆನ್ಸ್ ಹಾಗೂ ಹಾರರ್ ಥ್ರಿಲ್ಲರ್ ಕಥೆಗಳನ್ನು ಕಟ್ಟಿಕೊಡುವಲ್ಲಿ ಮಲಯಾಳಂ ಚಿತ್ರರಂಗದವರು ನಿಸ್ಸೀಮರು.

ಇಂತಹ ಒಳ್ಳೆಯ ಸಿನಿಮಾಗಳನ್ನು ನೀಡುತ್ತಾ ಬಂದಿರುವ ಮಲಯಾಳಂ ಚಿತ್ರರಂಗದಿಂದ ಇತ್ತೀಚೆಗೆ ಬಂದ, ಓಟಿಟಿಯಲ್ಲಿ ಲಭ್ಯವಿರುವ ಚಿತ್ರಗಳ ಪಟ್ಟಿ ಈ ಕೆಳಕಂಡಂತಿದೆ..

1. ಇರಟ್ಟ:

ಫೆಬ್ರವರಿ 3ರಂದು ಬಿಡುಗಡೆಯಾದ ಇರಟ್ಟ ಚಿತ್ರದಲ್ಲಿ ಜೋಜು ಜಾರ್ಜ್ ನಾಯಕನಾಗಿ ಅವಳಿಜವಳಿ ಸೋದರರ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇಬ್ಬರೂ ಸಹ ಪೊಲೀಸ್ ಅಧಿಕಾರಿಗಳಾಗಿದ್ದು, ಒಬ್ಬ ನಿಷ್ಠಾವಂತ ಪೊಲೀಸ್ (ಪ್ರಮೋದ್) ಆದರೆ, ಮತ್ತೊಬ್ಬ ಅಧಿಕಾರ ದುರುಪಯೋಗಪಡಿಸಿಕೊಳ್ಳುವ ಕಿಡಿಗೇಡಿ ಪೊಲೀಸ್ (ವಿನೋದ್) ಪಾತ್ರವಾಗಿದೆ. ಇನ್ನು ಅಣ್ಣ ಹಾಗೂ ತಮ್ಮ ಇಬ್ಬರಿಗೂ ಅಷ್ಟಕ್ಕಷ್ಟೇ. ತಮ್ಮ ಠಾಣೆಯಲ್ಲಿ ಕಾರ್ಯಕ್ರಮವೊಂದು ನಡೆಯುತ್ತಿರುವಾಗ ಪೊಲೀಸ್ ಆಗಿ ಅಕ್ರಮ ಎಸಗುತ್ತಾ ವಿಕೃತಿ ಮೆರೆಯುತ್ತಿದ್ದ ವಿನೋದ್‌ಗೆ ಅದೇ ಠಾಣೆಯೊಳಗೆ ಗನ್ ಶಾಟ್ ಬಿದ್ದು ಮೃತಪಟ್ಟಿರುತ್ತಾನೆ.

ಅಲ್ಲಿ ಕೆಲಸ ಮಾಡುತ್ತಿದ್ದ ಉಳಿದ ಎಲ್ಲಾ ಪೊಲೀಸರಿಗೂ ವಿನೋದ್ ಜತೆ ಜಗಳವಾಗಿರುತ್ತದೆ. ಪುಟ್ಟ ಬಾಲಕಿಗೂ, ವಯಸ್ಸಾದ ಹೆಂಗಸಿಗೂ ವ್ಯತ್ಯಾಸವಿಲ್ಲ ಎಂಬಂತೆ ವರ್ತಿಸುತ್ತಿದ್ದ ವಿನೋದ್ ಕೊಂದವರಾರು ಎಂಬುದನ್ನು ಪ್ರಮೋದ್ ಬೆನ್ನತ್ತಿ ಪತ್ತೆ ಹಚ್ಚುವುದೇ ಚಿತ್ರದ ಕಥೆ. ಇನ್ನು ಈ ತನಿಖೆಯಲ್ಲಿ ಕೊನೆಗೆ ವಿನೋದ್ ಸಾವಿಗೆ ಕಾರಣ ಏನೆಂಬುದು ಪ್ರಮೋದ್‌ಗೆ ತಿಳಿದಾಗ ಪ್ರಮೋದ್ ಜತೆಗೆ ಪ್ರೇಕ್ಷಕನಿಗೂ ಸಹ ಒಂದು ನಿಮಿಷ ಶಾಕ್ ಆಗುತ್ತೆ ಹಾಗೂ ಸಸ್ಪೆನ್ಸ್ ಕಥೆಯನ್ನು ಇಷ್ಟರ ಮಟ್ಟಿಗೆ ಕಾಡುವ ಹಾಗೆ ಹೆಣೆಯಬಹುದಾ ಎಂಬ ಆಲೋಚನೆ ಶುರುವಾಗುತ್ತೆ. ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾಗಳನ್ನು ವೀಕ್ಷಿಸುವವರಿಗೆ ಈ ಚಿತ್ರ ಬೆಸ್ಟ್‌ಗಳಲ್ಲಿಯೇ ಬೆಸ್ಟ್ ಎಂದರೆ ತಪ್ಪಾಗಲಾರದು. ಈ ಚಿತ್ರ ನೆಟ್‌ಫ್ಲಿಕ್ಸ್‌ನಲ್ಲಿ ಲಭ್ಯವಿದೆ.

Best of Malayalam: 3 recent films available on OTT which you should watch

2. ರೋಮಾಂಚಂ:

ರೋಮಾಂಚಂ.. ನಮ್ಮ ಬೆಂಗಳೂರಿನಲ್ಲಿಯೇ ನಡೆದ ನೈಜ ಘಟನೆಗಳ ಮೇಲೆ ಮಾಡಲಾಗಿರುವ ಚಿತ್ರ. 2007ರಲ್ಲಿ ಕೇರಳ ಮೂಲದ ಏಳು ಸ್ನೇಹಿತರು ಬೆಂಗಳೂರಿನಲ್ಲಿ ತಾವು ವಾಸವಿದ್ದ ಮನೆಯಲ್ಲಿ ಊಜಾ ಬೋರ್ಡ್ ಬಳಸಿ ಆತ್ಮವನ್ನು ಕರೆಸುವ ಕೆಟ್ಟ ಪ್ರಯತ್ನಕ್ಕೆ ಮುಂದಾಗ್ತಾರೆ. ಮೊದಲಿಗೆ ವಿಫಲವಾದ ಬಳಿಕ ಗುಂಪಿನ ಸದಸ್ಯನೋರ್ವ ತಾನು ಕೊಟ್ಟ ಐಡಿಯಾ ಫ್ಲಾಪ್ ಆಗಬಾರದು ಎಂಬ ಕಾರಣಕ್ಕೆ ಯಾವುದೋ ಒಂದು ಹೆಸರು ಬರುವ ಹಾಗೆ ನಾಟಕ ಮಾಡುತ್ತಾನೆ. ವಿಪರ್ಯಾಸಕ್ಕೆ ಆತ ಮಾಡಿದ ನಾಟಕವೇ ನಂತರ ನಿಜವಾಗಿಬಿಡುತ್ತದೆ. ಹೀಗೆ ಇಕ್ಕಟ್ಟಿಗೆ ಸಿಲುಕಿಕೊಳ್ಳುವ ಬ್ಯಾಚುಲರ್ಸ್ ಪಾಡು ಏನಾಗುತ್ತದೆ ಎಂಬುದೇ ಚಿತ್ರದ ಕಥೆ. ಈ ಚಿತ್ರ ಡಿಸ್ನೆ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ಲಭ್ಯವಿದೆ.

3. ಜಯ ಜಯ ಜಯ ಹೇ:

ಗಂಡಸು ಎಂಬ ಅಹಂ ಹೊಂದಿರುವ ನಾಯಕ ತನ್ನಿಂದಲೇ ಎಲ್ಲಾ, ತಾನು ಹೇಳಿದ್ದನ್ನು ಎಲ್ಲರೂ ಕೇಳಬೇಕು ಎಂಬುದನ್ನು ಪ್ರತಿ ಬಾರಿಯೂ ಅತಿ ಕೋಪದಿಂದಲೇ ವ್ಯಕ್ತಪಡಿಸುತ್ತಿರುತ್ತಾನೆ. ಹೀಗಿರುವ ನಾಯಕನನ್ನು ಚಿಕ್ಕ ವಯಸ್ಸಿನಿಂದಲೂ ಕಷ್ಟದಲ್ಲೇ, ಕಟ್ಟುನಿಟ್ಟಾಗಿ ಬೆಳೆದ ನಾಯಕಿ ಮದುವೆಯಾಗ್ತಾಳೆ. ಇನ್ನು ಮದುವೆಯಾದ ನಂತರವೂ ಸಹ ತನ್ನ ರೋಷಾವೇಶವನ್ನು ಮುಂದುವರೆಸುವ ನಾಯಕ ನಾಯಕಿ ಮೇಲೂ ಸಹ ತನ್ನ ಪ್ರಭಾವವನ್ನು ಮುಂದುವರೆಸುತ್ತಾನೆ. ಹೀಗೆ ಅಹಂನಿಂದ ಎಲ್ಲರ ಮೇಲೂ ಹಿಡಿತ ಸಾಧಿಸುವ ನಾಯಕನನ್ನು ನಾಯಕಿ ಯಾವ ರೀತಿ ಕಟ್ಟಿಹಾಕುತ್ತಾಳೆ ಎಂಬುದೇ ಜಯ ಜಯ ಜಯ ಹೇ ಚಿತ್ರದ ಕಥೆ.

More from Filmibeat

English summary
Best of Malayalam: 3 recent films available on OTT which you should watch
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X