ಸೆಲ್ಫಿ ನೆಪದಲ್ಲಿ ಖ್ಯಾತ ನಟಿಯ ತುಟಿಗೆ ಮುತ್ತಿಟ್ಟ ಮಹಿಳಾ ಅಭಿಮಾನಿ ; ಬೆಚ್ಚಿ ಬಿದ್ದ ಚೆಲುವೆ-ವಿಡಿಯೋ ವೈರಲ್
ಸೆಲೆಬ್ರೆಟಿಗಳೂ ಅಭಿಮಾನಿಗಳ ಸೆಲ್ಫಿ ಸಮಸ್ಯೆಗಳಿಂದ ಈಗೀಗ ಪ್ರತಿದಿನವೂ ನರಳುವಂತಾಗಿದೆ. ಸಿನಿಮಾ ತಾರೆಯರು ಎಲ್ಲಿ ಹೋದರೂ ಅಭಿಮಾನಿಗಳು ಸೆಲ್ಫಿಗೆ ಮುಗಿಬಿದ್ದು ಅವರ ಸ್ವಾತಂತ್ರ್ಯ ಹರಣವನ್ನು ಮಾಡುತ್ತಲೇ ಇರುತ್ತಾರೆ.
ಸಾಕಷ್ಟು ಸೆಲೆಬ್ರೆಟಿಗಳು ಇದರ ಸಲುವಾಗಿ ಪಬ್ಲಿಕ್ಕಿಗೆ ತಲೆ ಹಾಕುವುದೂ ಕಡಿಮೆ.ಇನ್ನೂ ಕೆಲವರು ಬಾಡಿಗಾರ್ಡ್ ಗಳನ್ನಿಟ್ಟುಕೊಂಡು ಅವೆಲ್ಲವನ್ನೂ ಅವಾಯ್ಡ್ ಮಾಡುತ್ತಲೇ ಇರುತ್ತಾರೆ. ಇನ್ನೂ ಕೆಲವರು ಸೆಲ್ಫಿ ನೆಪದಲ್ಲಿ ಮಾಡಬಾರದ ಕೆಲಸ ಮಾಡಲು ಮುಂದಾಗುತ್ತಾರೆ.

ಅಭಿಮಾನದ ಸೋಗಿನಲ್ಲಿ ನಾಯಕಿಯರಿಗೆ ಕಿಸ್ ಕೊಡುವುದು, ಕೈ ಹಿಡಿದು ಎಳೆಯುವುದು, ಮುಟ್ಟಬಾರದ ಜಾಗವನ್ನೆಲ್ಲ ಮುಟ್ಟುವ ಪ್ರಯತ್ನ ಮಾಡುವುದನ್ನು ಮಾಡುತ್ತಾರೆ. ಇದಕ್ಕೆ ವೈರಲ್ ಆದ ಮಂಜು ವಾರಿಯರ್ ಅವರ ವಿಡಿಯೋ ಮತ್ತೊಂದು ಉದಾಹರಣೆ.
ಹೌದು, ಮಂಜು ವಾರಿಯರ್, ಮಲಯಾಳಂನ ಮನಮೋಹಕ ಚೆಲುವೆ. ''ಸಾಕ್ಷ್ಯಂ''.. ''ಹೌ ಓಲ್ಡ್ ಆರ್ ಯು''.. ''ಲೂಸಿಫರ್''..''ಅಸುರನ್''..''ತುಣಿವು''..''ಎಲ್ 2-ಎಂಪುರಾನ್''.. ಹೀಗೆ ಕಳೆದ ಮೂರು ದಶಕದಲ್ಲಿ ಹಲವಾರು ವೈವಿಧ್ಯಮಯ ಪಾತ್ರಗಳನ್ನು ಮಾಡಿರುವ ಮಂಜು ವಾರಿಯರ್ ರಜಿನಿಕಾಂತ್ ಅಭಿನಯದ ''ವೆಟ್ಟೈಯನ್'' ಚಿತ್ರದಲ್ಲಿ 'ಮನಸಿಲಾಯೋ' ಹಾಡಿನ ಮೂಲಕ ಪಡ್ಡೆ ಹುಡುಗರ ಹೃದಯಕ್ಕೆ ಮತ್ತೊಮ್ಮೆ ಕನ್ನ ಹಾಕಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡಿದ್ದರು.
ಇಂಥಾ ಮಂಜು ವಾರಿಯರ್ ಇತ್ತೀಚೆಗೆ ದೇವರ ನಾಡು ಎಂದೇ ಕರೆಯಲ್ಪಡುವ ಕೇರಳದ ಪಾಲಕ್ಕಾಡ್‌ನ ಟೌನ್ ಬಸ್ ಸ್ಟ್ಯಾಂಡ್ ರಸ್ತೆಯಲ್ಲಿರುವ ''ರೀಗಲ್ ಜ್ಯುವೆಲ್ಲರ್ಸ್''ನ ಹೊಸ ಮಳಿಗೆಯ ಉದ್ಘಾಟನಾ ಸಮಾರಂಭಕ್ಕೆ ಹೋಗಿದ್ದರು. ಸಹಜವಾಗಿಯೇ ಅಗಣಿತ ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕಿಯನ್ನು ನೋಡಲು ಅಲ್ಲಿ ಬಂದಿದ್ದರು.
ತಮ್ಮ ಅಭಿಮಾನಿಗಳನ್ನು ನೋಡಿ ಖುಷಿಯಾದ ಮಂಜು ವಾರಿಯರ್ ಕೂಡ ಯಾರನ್ನೂ ನಿರಾಸೆ ಮಾಡದೇ ಎಲ್ಲರ ಜೊತೆ ಮಾತನಾಡಿದ್ದಾರೆ. ಸಾಧ್ಯವಾದಷ್ಟು ಅಭಿಮಾನಿಗಳ ಕೈ ಕುಲುಕುವ ಪ್ರಯತ್ನ ಮಾಡಿದ್ದಾರೆ.

ಆದರೆ, ಇದೇ ಸಮಯದಲ್ಲಿ ಮಹಿಳಾ ಅಭಿಮಾನಿಯೊಬ್ಬರು ಭದ್ರತಾ ಕೋಟೆಯನ್ನು ಭೇದಿಸಿ ಮಂಜು ವಾರಿಯರ್ ಅವರ ಹತ್ತಿರ ಬಂದಿದ್ದಾರೆ. ಸೆಲ್ಫಿ ತೆಗೆದುಕೊಳ್ಳಲು ಬಂದಿರಬಹುದು ಎಂದು ಮಂಜು ವಾರಿಯರ್ ಮತ್ತು ಕಾರ್ಯಕ್ರಮದ ನಿರೂಪಕಿ ಅಂದುಕೊಳ್ಳುವಷ್ಟರಲ್ಲಿಯೇ ಮಹಿಳಾ ಅಭಿಮಾನಿ ಮಂಜು ವಾರಿಯರ್ ಅವರನ್ನು ಅಪ್ಪಿಕೊಂಡಿದ್ದಾರೆ. ಬಲವಂತವಾಗಿ ತುಟಿಗೆ ತುಟಿಯನ್ನೊತ್ತಿದ್ದಾರೆ.
ಮಹಿಳಾ ಅಭಿಮಾನಿಯ ಈ ವರ್ತನೆಯಿಂದ ಮಂಜು ವಾರಿಯರ್ ಅರೆ ಕ್ಷಣ ದಿಗ್ಬ್ರಾಂತರಾದರೂ, ತಮ್ಮ ಕೋಪವನ್ನು.. ಅಸಮಾಧಾನವನ್ನು.. ವೇದಿಕೆಯಲ್ಲಿ ಹೊರ ಹಾಕಲಿಲ್ಲ. ಬದಲಿಗೆ ಸಾವರಿಸಿಕೊಂಡು ನಗುಮುಖದಿಂದಲೇ ಪರಿಸ್ಥಿತಿಯನ್ನು ನಿಭಾಯಿಸಿದ್ದಾರೆ. ಸರತಿ ಸಾಲಿನಲ್ಲಿ ಕಾಯುತ್ತಿದ್ದ ಅಭಿಮಾನಿಗಳ ಜೊತೆ ಆ ನಂತರ ಸೆಲ್ಫಿಯನ್ನು ಕ್ಲಿಕಿಸಿಕೊಂಡಿದ್ದಾರೆ.
ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದ್ದು, ಹಲವರು ಮಹಿಳಾ ಅಭಿಮಾನಿಯ ವರ್ತನೆಯನ್ನು ಖಂಡಿಸಿದ್ದಾರೆ. ಇದನ್ನು ಅಭಿಮಾನದ ಪರಾಕಾಷ್ಠೆ ಎನ್ನಬೇಕಾ..? ಸೆಲೆಬ್ರೆಟಿಗಳ ಜೊತೆ ಏನು ಬೇಕಾದರೂ ಮಾಡಬಹುದು ಎನ್ನುವ ಧೋರಣೆ ಎನ್ನಬೇಕಾ..? ಎಂದು ಹಲವರು ಪ್ರಶ್ನೆಯನ್ನು ಮಾಡುತ್ತಿದ್ದು ಮಂಜು ವಾರಿಯರ್ ಅವರ ಒಪ್ಪಿಗೆ ಇಲ್ಲದೆ ಈ ರೀತಿ ವರ್ತಿಸುವುದು ಸರಿ ಅಲ್ಲ ಎಂಬ ಅಭಿಪ್ರಾಯವನ್ನು ಹಲವರು ವ್ಯಕ್ತಪಡಿಸುತ್ತಿದ್ದಾರೆ. ಅಭಿಮಾನದ ಹೆಸರಿನಲ್ಲಿ ಆ ಮಹಿಳೆ ಮಂಜು ವಾರಿಯರ ಅವರಿಗೆ ಕಿರುಕುಳ ನೀಡಿದ್ದಾರೆ ಎಂದು ಕಿಡಿಯನ್ನು ಕೂಡ ಕಾರುತ್ತಿದ್ದಾರೆ.
ಮತ್ತೂ ಕೆಲವರು ಕಾರ್ಯಕ್ರಮದ ಆಯೋಜಕರ ವಿರುದ್ಧ ಕಿಡಿಯನ್ನು ಕಾರುತ್ತಿದ್ದು, ಭದ್ರತಾ ವ್ಯವಸ್ಥೆಯ ಲೋಪದೋಷಕ್ಕೆ ಇದು ಅತ್ಯುತ್ತಮ ಕೈಗನ್ನಡಿ ಎಂದು ಕಾಮೆಂಟ್ ಮಾಡಿದ್ದಾರೆ. ತಾಳ್ಮೆಯನ್ನು ಕಳೆದುಕೊಳ್ಳದೆ ಮಂಜು ವಾರಿಯರ್ ಪರಿಸ್ಥಿತಿಯನ್ನು ಸಂಭಾಳಿಸಿದ ರೀತಿಗೆ ಹಲವರು ಮೆಚ್ಚುಗೆಯನ್ನು ಕೂಡ ಸೂಚಿಸುತ್ತಿದ್ದಾರೆ. ಅಭಿಮಾನದ ಹೆಸರಿನಲ್ಲಿ ನಡೆಯುವ ಇಂತಹ ವರ್ತನೆಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು? ಕಾಮೆಂಟ್ ಮೂಲಕ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ.


Click it and Unblock the Notifications











