Bhavana Menon: ಮಲಯಾಳಂನಲ್ಲಿ ಕಂಬ್ಯಾಕ್ ಸಿನಿಮಾ ಘೋಷಿಸಿದ ನಟಿ ಭಾವನಾ ಮೆನನ್!

ಕೆಲವು ವರ್ಷಗಳಿಂದ ಮಲಯಾಳಂ ಚಿತ್ರರಂಗದಿಂದ ದೂರವಿದ್ದ ಭಾವನಾ ಮೆನನ್ ಇದೀಗ ಮತ್ತೆ ಮಲಯಾಳಂ ಚಿತ್ರರಂಗಕ್ಕೆ ಮರಳುವುದಾಗಿ ಸಾಮಾಜಿಕ ಜಾಲತಾಣದ ಮೂಲಕ ಅನೌನ್ಸ್ ಮಾಡಿಕೊಂಡಿದ್ದಾರೆ. ಅಲ್ಲದೆ ತಾನು ಅಭಿನಯಿಸಲಿರುವ ಚಿತ್ರದ ಪೋಸ್ಟರ್‌ ಅನ್ನು ಕೂಡ ಭಾವನಾ ಮೆನನ್ ಹಂಚಿಕೊಂಡಿದ್ದಾರೆ. ಭಾವನಾ ಮೆನನ್ ಹಂಚಿಕೊಂಡಿರುವ ಈ ಸುದ್ದಿ ಕೇಳಿ ಮಲಯಾಳಂ ಚಿತ್ರರಂಗದ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಸೋಶಿಯಲ್ ಮೀಡಿಯಾ ಮೂಲಕವೇ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ.

ಭಾವನಾ ಮೆನನ್ ಸುಮಾರು ಐದು ವರ್ಷಗಳಿಂದ ಮಲಯಾಳಂ ಸಿನಿಮಾ ಮಾಡುವುದನ್ನು ಬಿಟ್ಟಿದ್ದರು. ಇದರಿಂದ ಅವರ ಅಭಿಮಾನಿಗಳು ಕೂಡ ನಿರಾಶರಾಗಿದ್ದರು. ಮತ್ತೆ ಮಲಯಾಳಂ ಸಿನಿಮಾಗಳಲ್ಲಿ ನಟಿಸಬೇಕು ಅಂತ ಎಷ್ಟೇ ಒತ್ತಾಯಿಸಿದ್ರೂ, ಮನಸ್ಸು ಮಾಡಿರದ ಭಾವನಾ ಮೆನನ್‌ ಕಂಬ್ಯಾಕ್‌ಗೆ ಫ್ಯಾನ್ಸ್ ಸಖತ್ ಉತ್ಸುಕರಾಗಿದ್ದಾರೆ. ಭಾವನಾ ಮೆನನ್ ಕಂಬ್ಯಾಕ್ ಸಿನಿಮಾದ ಬಗ್ಗೆ ಇದೀಗ ಫ್ಯಾನ್ಸ್‌ಗೆ ಸಾಕಷ್ಟು ಕುತೂಹಲ ಕೂಡ ಮೂಡಿದೆ. "ಎನ್ಟಿಕಕ್ಕಕ್ಕೋರು ಪ್ರೇಮಂಡರ್ನ್" ಎಂಬ ಟೈಟಲ್‌ನಲ್ಲಿ ಈ ಸಿನಿಮಾ ಮೂಡಿಬರಲಿದ್ದು, ರಿಲೀಸ್ ಆಗಿರುವ ಪೋಸ್ಟರ್‌ ಕೂಡ ಸಾಕಷ್ಟು ವಿಭಿನ್ನವಾಗಿದೆ. ಈ ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿ ಇನ್ನು ಚಿತ್ರತಂಡ ಹೊರಹಾಕಿಲ್ಲ. ಆದಿಲ್ ಅಶ್ರಫ್ ಈ ಸಿನಿಮಾ ನಿರ್ದೇಶನ ಮಾಡಲಿದ್ದಾರೆ.

Bhavana Menon announces comeback to Mollywood

ವಿಶೇಷ ಎಂದರೆ, ಭಾವನಾ ಮೆನನ್ ಈ ಸಿನಿಮಾದ ಮೊದಲ ಪೋಸ್ಟರ್ ಅನ್ನು ಮಾಲಿವುಡ್ ಮೆಗಾಸ್ಟಾರ್ ಮಮ್ಮುಟ್ಟಿ ಬಿಡುಗಡೆ ಮಾಡಿದ್ದಾರೆ. ರಿಲೀಸ್ ಮಾಡಿದ್ದು ಅಷ್ಟೇ ಅಲ್ಲದೇ ಭಾವನಾ ಮೆನನ್‌ಗೆ ಮತ್ತೆ ಮಲಯಾಳಂ ಇಂಡಸ್ಟ್ರಿಗೆ ವೆಲ್ಕಂ ಮಾಡಿದ್ದಾರೆ. ಮಮ್ಮುಟ್ಟಿ ಮಾತ್ರವಲ್ಲದೇ ಭಾವನಾ ಅವರ ಅಭಿಮಾನಿಗಳು ಚಿತ್ರರಂಗದ ಸ್ನೇಹಿತರು, ಕುಟುಂಬ ಸದಸ್ಯರು ಕಂಬ್ಯಾಕ್ ಸಿನಿಮಾಗೆ ಆಲ್‌ದಿ ಬೆಸ್ಟ್ ಹೇಳೋದ್ರ ಜೊತೆಗೆ ಭಾವನಾಗೂ ಶುಭವಾಗಲಿ ಎಂದು ಹರಸುತ್ತಿದ್ದಾರೆ.

Bhavana Menon announces comeback to Mollywood

2017 ರಲ್ಲಿ, ಭಾವನಾ ಲೈಂಗಿಕ ದೌರ್ಜನ್ಯದಂತಹ ಕಹಿ ಘಟನೆಯನ್ನು ಎದುರಿಸಿದ್ದರು. ಈ ಘಟನೆ ಆದ ನಂತ್ರದಿಂದ ಭಾವನಾ ಮೆನನ್ ಮಲಯಾಳಂ ಚಿತ್ರರಂಗದಿಂದ ದೂರವೇ ಉಳಿದಿದ್ದರು. ಇತ್ತೀಚಿನ ಸಂದರ್ಶನವೊಂದರಲ್ಲಿ ಭಾವನಾ ಲೈಂಗಿಕ ದೌರ್ಜನ್ಯದ ನಂತರ ಎದುರಿಸಿದ ಪರಿಣಾಮಗಳು, ಮಾನಸಿಕ ಆಘಾತ ಬಗ್ಗೆ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ಭಾವನಾ ಮೆನನ್ ಹಲ್ಲೆ ಪ್ರಕರಣದಲ್ಲಿ ಮಲಯಾಳಂ ನಟ ದಿಲೀಪ್ ಪ್ರಮುಖ ಆರೋಪಿ ಎಂದು ಹೇಳಲಾಗುತ್ತಿದೆ. ಹೀಗಾಗಿ ಸ್ನೇಹಿತರು ಮತ್ತು ಹಿತೈಷಿಗಳಿಂದ ಸಿನಿಮಾ ಆಫರ್‌ಗಳು ಬಂದಿತ್ತಿ. ಆದರೂ ಐದು ವರ್ಷಗಳ ಕಾಲ ಮಲಯಾಳಂ ಸಿನಿಮಾದಲ್ಲಿ ನಟಿಸದೇ ಇರುವುದು ನನ್ನ ನಿರ್ಧಾರವಾಗಿತ್ತು ಎಂದು ಭಾವನಾ ಸಂದರ್ಶನದಲ್ಲಿ ಹೇಳಿದ್ದರು. ಈಗ ಆ ನೋವನ್ನೆಲ್ಲಾ ಮರೆತು ಮತ್ತೆ ಮಲಯಾಳಂ ಚಿತ್ರರಂಗಕ್ಕೆ ಬರುತ್ತಿರುವ ವಿಚಾರ ಅಭಿಮಾನಿಗಳಿಗೆ ಸಂತಸ ತಂದಿದೆ.

More from Filmibeat

English summary
Today actress Bhavana Menon took to her social media handle and her comeback movie, which is titled Ntikkakkakkoru Premondarnn.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X