For Quick Alerts
  ALLOW NOTIFICATIONS  
  For Daily Alerts

  ಪ್ರಿಯಕರನಿಂದ ಮೋಸ, ಆಸಿಡ್ ಹಾಕುವ ಬೆದರಿಕೆ, ಫೇಸ್ಬುಕ್ನಲ್ಲಿ ನಟಿ ಅಂಜಲಿ ಕಣ್ಣೀರು!

  |

  ಮಲಯಾಳಂ ನಟಿ ಹಾಗೂ ಬಿಗ್ ಬಾಸ್ ಮಲಯಾಳಂ ಕಾರ್ಯಕ್ರಮದ ಮಾಜಿ ಸ್ಪರ್ಧಿ ಅಂಜಲಿ ಅಮೀರ್ ಅವರಿಗೆ ಜೀವ ಬೆದರಿಕೆ ಇದೆಯಂತೆ. ತಮ್ಮ ಲೀವ್-ಇನ್ ಗೆಳೆಯನಿಂದ ಬೆದರಿಕೆ ಇದೆ ಎಂದು ಸ್ವತಃ ನಟಿ ಫೇಸ್ ಬುಕ್ನಲ್ಲಿ ವಿಡಿಯೋ ಮಾಡುವ ಮೂಲಕ ಬಹಿರಂಗಪಡಿಸಿದ್ದಾಳೆ.

  ವಿಜಯ್ ದೇವರಕೊಂಡ ಮುಂದೆಯೇ 'ಅರ್ಜುನ್ ರೆಡ್ಡಿ' ಸಿನಿಮಾ ತಪ್ಪನ್ನು ಎತ್ತಿಹಿಡಿದ 'ಮಿಲನ' ನಟಿವಿಜಯ್ ದೇವರಕೊಂಡ ಮುಂದೆಯೇ 'ಅರ್ಜುನ್ ರೆಡ್ಡಿ' ಸಿನಿಮಾ ತಪ್ಪನ್ನು ಎತ್ತಿಹಿಡಿದ 'ಮಿಲನ' ನಟಿ

  'ಪೇರನ್ಬು' ಸಿನಿಮಾ ಮೂಲಕ ಖ್ಯಾತಿ ಗಳಿಸಿಕೊಂಡಿದ್ದ ಅಂಜಲಿ ಅಮೀರ್ ಅವರ ಜೊತೆ ಲೀವ್ ಇನ್ ಸಂಬಂಧದಲ್ಲಿದ್ದ ವ್ಯಕ್ತಿ, ಆಸಿಡ್ ಹಾಕುವುದಾಗಿ ಬೆದರಿಕೆ ಹಾಕುತ್ತಿದ್ದಾನೆ ಎಂದು ಫೇಸ್ಬುಕ್ನಲ್ಲಿ ವಿಡಿಯೋ ಮಾಡಿ ಕಣ್ಣೀರು ಹಾಕಿದ್ದಾರೆ. ಅಷ್ಟಕ್ಕೂ, ಅಂಜಲಿಗೆ ಆದ ಅನ್ಯಾಯವೇನು? ಮುಂದೆ ಓದಿ.....

  ದೂರವಾದರೆ ಕೊಲ್ಲುವೆ

  ದೂರವಾದರೆ ಕೊಲ್ಲುವೆ

  ಮಂಗಳಮುಖಿ ನಟಿ ಅಂಜಲಿ ಅಮೀರ್ ಜೊತೆ ಲೀವ್ ಇನ್ ಸಂಬಂಧದಲ್ಲಿದ್ದ ವ್ಯಕ್ತಿ 'ಒಂದು ವೇಳೆ ನೀನು ನನ್ನಿಂದ ದೂರವಾದರೆ ಆಸಿಡ್ ಹಾಕಿ, ನಿನ್ನನ್ನು ಕೊಲೆ ಮಾಡುತ್ತೇನೆ' ಎಂದು ಬೆದರಿಕೆ ಹಾಕಿದ್ದಾನಂತೆ. ಇದರಿಂದ ಭಯಗೊಂಡ ನಟಿ ಅಂಜಲಿ ಫೇಸ್ಬುಕ್ನಲ್ಲಿ ಕಣ್ಣೀರು ಹಾಕಿಕೊಂಡು ತಮ್ಮ ನೋವು ಹೊರಹಾಕಿದ್ದಾರೆ.

  ಪ್ರತಿದಿನದ ಖರ್ಚಿಗೆ ಹಣ ಕೊಡುತ್ತಿದ್ದೆ

  ಪ್ರತಿದಿನದ ಖರ್ಚಿಗೆ ಹಣ ಕೊಡುತ್ತಿದ್ದೆ

  ''ಕಳೆದ ಎರಡು ವರ್ಷದಿಂದ ನಾನು ಅವನ ಜೊತೆ ಸಂಬಂಧದಲ್ಲಿದ್ದೆ. ಇಲ್ಲಿಯವರೆಗೂ ಸುಮಾರು 4 ಲಕ್ಷದ ವರೆಗೂ ಹಣ ಪಡೆದುಕೊಂಡಿದ್ದಾನೆ. ಆತನಿಗೆ ಯಾವುದೇ ಉದದ್ಯೋಗ ಇರಲಿಲ್ಲ. ಪ್ರತಿದಿನದ ಖರ್ಚಿಗೂ ಆತ ನನ್ನನ್ನೇ ಅವಲಂಬಿತವಾಗಿದ್ದ'' ಎಂದು ನಟಿ ಆರೋಪಿಸಿದ್ದಾಳೆ.

  ಕನ್ನಡದಿಂದ ದೂರವಾದರು ಮಲೆಯಾಳಂನ ಈ ನಟಿಯರು

  ಯಾರೂ ಸಪೋರ್ಟ್ ಮಾಡ್ತಿಲ್ಲ

  ಯಾರೂ ಸಪೋರ್ಟ್ ಮಾಡ್ತಿಲ್ಲ

  ಇಲ್ಲಿಯವರೆಗೂ ಅಂಜಲಿ ಅಮೀರ್ ಅವರ ಬೆಂಬಲಕ್ಕೆ ಯಾರೂ ಮುಂದಾಗಿಲ್ಲ. ಸ್ವತಃ ಪೋಷಕರು ಕೂಡ ಮಗಳ ಜೊತೆಗಿಲ್ಲ. ಹಾಗಾಗಿ, ಅಂಜಲಿ ಅವರು ಪೊಲೀಸರ ಮೊರೆ ಹೋಗುವುದಾಗಿ ವಿಡಿಯೋದಲ್ಲಿ ತಿಳಿಸಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗಿದ್ದು ಹೆಚ್ಚು ಸದ್ದು ಮಾಡ್ತಿದೆ.

  ನಿವಿನ್ ಪೌಲಿ ನಟನೆಯ ಹೊಸ ಸಿನಿಮಾ ಆರಂಭನಿವಿನ್ ಪೌಲಿ ನಟನೆಯ ಹೊಸ ಸಿನಿಮಾ ಆರಂಭ

  ಆತ್ಮಹತ್ಯೆಯ ಆಲೋಚನೆ

  ಆತ್ಮಹತ್ಯೆಯ ಆಲೋಚನೆ

  ವಿಡಿಯೋದಲ್ಲಿ ಮಾತನಾಡುತ್ತಿರುವ ಸಂದರ್ಭದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಯೋಚನೆಗಳು ನನ್ನನ್ನು ಕಾಡುತ್ತಿದೆ ಎಂದು ಹೇಳಿಕೊಂಡಿದ್ದಾರೆ. ನಾನು ಎದುರಿಸಿದ ಕಷ್ಟಗಳು ನನ್ನನ್ನು ಕಾಡಿದೆ. ಇದು ಆತ್ಮಹತ್ಯೆಗೂ ಪ್ರಚೋದಿಸಿದೆ. ಅಂತಹ ಆಲೋಚನೆಗಳು ಬರುತ್ತಿದೆ' ಎಂದು ಆಘಾತ ವ್ಯಕ್ತಪಡಿಸಿದ್ದಾರೆ.

  ಮಮ್ಮುಟ್ಟಿ ಚಿತ್ರದಲ್ಲಿ ಚೊಚ್ಚಲ ಬಾರಿಗೆ ಮಂಜು ವಾರಿಯರ್ಮಮ್ಮುಟ್ಟಿ ಚಿತ್ರದಲ್ಲಿ ಚೊಚ್ಚಲ ಬಾರಿಗೆ ಮಂಜು ವಾರಿಯರ್

  ತಮ್ಮದೇ ಬಯೋಪಿಕ್!

  ತಮ್ಮದೇ ಬಯೋಪಿಕ್!

  ಅಂಜಲಿ ಅಮೀರ್ ಅವರು ತಮ್ಮದೇ ಬಯೋಪಿಕ್ ಸಿನಿಮಾ ಮಾಡಲು ಚಿಂತಿಸಿದ್ದಾರಂತೆ. ಈ ಚಿತ್ರದಲ್ಲಿ ತಾನು ಮಂಗಳಮುಖಿಯಾಗಿ ಬದಲಾದ ಕಥೆಯನ್ನು ಹೇಳಲು ಹೊರಟಿದ್ದಾರಂತೆ. ತಮ್ಮ ಪಾತ್ರದಲ್ಲಿ ತಾವೇ ನಟಿಸುತ್ತಿದ್ದು, 2020ರಲ್ಲಿ ಈ ಸಿನಿಮಾ ಸೆಟ್ಟೇರುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳುತ್ತಿದೆ.

  English summary
  Bigg Boss Malayalam Ex Contestant Anjali ameer get death threat from her live in partner.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X