For Quick Alerts
  ALLOW NOTIFICATIONS  
  For Daily Alerts

  ಮಮ್ಮುಟ್ಟಿ ಚಿತ್ರದ ರಿಮೇಕ್ ಹಕ್ಕು ಪಡೆದ ಬೋನಿ ಕಪೂರ್

  |

  ಹಿಂದಿ ಚಿತ್ರರಂಗದ ಖ್ಯಾತ ನಿರ್ಮಾಪಕ ಬೋನಿ ಕಪೂರ್ ಮಲಯಾಳಂ ಸಿನಿಮಾವೊಂದರ ರಿಮೇಕ್ ಹಕ್ಕು ಪಡೆದುಕೊಂಡಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ಮಲಯಾಳಂ ಸೂಪರ್ ಸ್ಟಾರ್ ಮಮ್ಮುಟ್ಟಿ ನಟನೆಯ 'ಒನ್' ಚಿತ್ರವನ್ನು ಹಿಂದಿಯಲ್ಲಿ ಮಾಡಲು ಬೋನಿ ಕಪೂರ್ ಆಸಕ್ತಿ ತೋರಿದ್ದಾರೆ.

  2021ರಲ್ಲಿ ಬಿಡುಗಡೆಯಾಗಿ ಹಿಟ್ ಆಗಿದ್ದ 'ಒನ್' ಚಿತ್ರವನ್ನು ಹಿಂದಿಯಲ್ಲಿ ಮಾತ್ರವಲ್ಲ, ಭಾರತೀಯ ಪ್ರಮುಖ ಭಾಷೆಗಳಲ್ಲಿಯೂ ರಿಮೇಕ್ ಮಾಡಲು ಬೋನಿ ಕಪೂರ್ ನಿರ್ಧರಿಸಿದ್ದಾರೆ ಎನ್ನಲಾಗಿದೆ. ಹಿಂದಿಯಲ್ಲಿ ಸ್ಟಾರ್ ನಟರೊಬ್ಬರು ಈ ಚಿತ್ರದಲ್ಲಿ ನಾಯಕನ ಪಾತ್ರದಲ್ಲಿ ನಟಿಸುವ ಸಾಧ್ಯತೆ ಇದ್ದು, 2022ರ ಆರಂಭದಲ್ಲಿ ಸಿನಿಮಾ ಶುರುವಾಗಲಿದೆ ಎಂಬ ಮಾಹಿತಿ ಇದೆ. ಮುಂದೆ ಓದಿ...

  ಮಮ್ಮುಟ್ಟಿ ಪಾತ್ರದಲ್ಲಿ ಯಾರು?

  ಮಮ್ಮುಟ್ಟಿ ಪಾತ್ರದಲ್ಲಿ ಯಾರು?

  'ಒನ್' ಸಿನಿಮಾ ಪೊಲಿಟಿಕಲ್ ಥ್ರಿಲ್ಲರ್ ಆಧರಿತ ಸಿನಿಮಾ. ಮುಖ್ಯಮಂತ್ರಿ ಪಾತ್ರಧಾರಿಯ ಸುತ್ತ ಇಡಿ ಕಥೆ ಸಾಗುತ್ತದೆ. ಮಮ್ಮುಟ್ಟಿ ಸಿಎಂ ಪಾತ್ರದಲ್ಲಿ ಅಭಿನಯಿಸಿ ಯಶಸ್ಸು ಕಂಡಿದ್ದರು. ಈಗ ಮಮ್ಮುಟ್ಟಿ ಪಾತ್ರವನ್ನು ಹಿಂದಿಯಲ್ಲಿ ಯಾರು ನಿಭಾಯಿಸಲಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ.

  ಸೌತ್ ಇಂಡಸ್ಟ್ರಿಗೆ ಫಿದಾ ಆದ ಬೋನಿ ಕಪೂರ್: ಮತ್ತೊಮ್ಮೆ ಸ್ಟಾರ್ ನಟನ ಚಿತ್ರ ನಿರ್ಮಾಣ?ಸೌತ್ ಇಂಡಸ್ಟ್ರಿಗೆ ಫಿದಾ ಆದ ಬೋನಿ ಕಪೂರ್: ಮತ್ತೊಮ್ಮೆ ಸ್ಟಾರ್ ನಟನ ಚಿತ್ರ ನಿರ್ಮಾಣ?

  ವಕೀಲ್ ಸಾಬ್ ಸಕ್ಸಸ್

  ವಕೀಲ್ ಸಾಬ್ ಸಕ್ಸಸ್

  ಸದ್ಯ ಬೋನಿ ಕಪೂರ್ ದಕ್ಷಿಣ ಚಿತ್ರರಂಗದ ಕಡೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಪವನ್ ಕಲ್ಯಾಣ್ ನಟನೆಯ 'ವಕೀಲ್ ಸಾಬ್' ಚಿತ್ರ ನಿರ್ಮಿಸಿದ್ದು ಇದೇ ಬೋನಿ ಕಪೂರ್. ಹಿಂದಿ 'ಪಿಂಕ್' ಚಿತ್ರದ ರಿಮೇಕ್ ಇದಾಗಿದ್ದು, ತೆಲುಗಿನಲ್ಲಿ ಸೂಪರ್ ಹಿಟ್ ಆಗಿದೆ. ಕಮರ್ಷಿಯಲ್ ಆಗಿ ವಕೀಲ್ ಸಾಬ್ ಒಳ್ಳೆಯ ಬಿಸಿನೆಸ್ ಮಾಡಿಕೊಟ್ಟಿದೆ.

  ಅಜಿತ್ ಜೊತೆ ವಾಲಿಮೈ

  ಅಜಿತ್ ಜೊತೆ ವಾಲಿಮೈ

  ತಮಿಳಿನ 'ತಲಾ' ಖ್ಯಾತಿಯ ಅಜಿತ್ ಜೊತೆ 'ವಾಲಿಮೈ' ಸಿನಿಮಾ ನಿರ್ಮಾಣ ಮಾಡಿದ್ದಾರೆ. ಈ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಅದಕ್ಕೂ ಮುಂಚೆ ಅಜಿತ್ ಕಾಣಿಸಿಕೊಂಡಿದ್ದ 'ನೇರ್ಕೊಂಡು ಪಾರ್ವೈ' ಚಿತ್ರಕ್ಕೂ ಬೋನಿ ಬಂಡವಾಳ ಹಾಕಿದ್ದರು.

  ಪಾಕ್ ನಿರ್ಮಾಪಕರಿಗೆ ವಾರ್ನಿಂಗ್ ಕೊಟ್ಟ ಇಮ್ರಾನ್ ಖಾನ್ | Filmibeat Kannada
  ಆರ್ಟಿಕಲ್ 15 ರಿಮೇಕ್

  ಆರ್ಟಿಕಲ್ 15 ರಿಮೇಕ್

  ಹಿಂದಿಯಲ್ಲಿ ಯಶಸ್ಸು ಕಂಡಿದ್ದ 'ಆರ್ಟಿಕಲ್ 15' ಚಿತ್ರವನ್ನು ತಮಿಳಿನಲ್ಲಿ ತಯಾರು ಮಾಡಲು ಮುಂದಾಗಿದ್ದಾರೆ ಬೋನಿ ಕಪೂರ್. ಈ ಚಿತ್ರದಲ್ಲಿ ಉದಯನಿಧಿ ಸ್ಟಾಲಿನ್ ನಾಯಕರಾಗಿ ನಟಿಸುತ್ತಿದ್ದಾರೆ. ಮತ್ತೊಂದೆಡೆ ಅಜಯ್ ದೇವಗನ್ ಅಭಿನಯದ ಮೈದಾನ್ ಸಿನಿಮಾ ತೆರೆಗೆ ಬರಬೇಕಿದೆ. ಈ ಚಿತ್ರವನ್ನು ಬೋನಿ ಕಪೂರ್ ನಿರ್ಮಾಣ ಮಾಡಿದ್ದಾರೆ.

  English summary
  Bollywood Star Producer Boney Kapoor acquires mammootty starrer One film remake right to Hindi.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X