'ಸಲಾರ್' ಬಾಲನಟನಿಗೆ ಸುವರ್ಣಾವಕಾಶ: ತನ್ನ ಬ್ಲಾಕ್‌ಬಸ್ಟರ್ ಸಿನಿಮಾ ಸೀಕ್ವೆಲ್‌ನಲ್ಲಿ ಅವಕಾಶ ಕೊಟ್ಟ ನಟ

ಪ್ರಶಾಂತ್ ನೀಲ್ ನಿರ್ದೇಶನದ 'ಸಲಾರ್' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡ್ತಿದೆ. ಈಗಾಗಲೇ 200 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಸಿನಿಮಾ ಮುನ್ನುಗ್ಗುತ್ತಿದೆ. ಸತತ ಸೋಲುಗಳಿಂದ ಕಂಗೆಟ್ಟಿದ್ದ ಪ್ರಭಾಸ್ ನಿಟ್ಟುಸಿರು ಬಿಟ್ಟಿದ್ದಾರೆ. ಇನ್ನೆರಡು ದಿನ ಬಾಕ್ಸಾಫೀಸ್‌ನಲ್ಲಿ 'ಸಲಾರ್' ಸುನಾಮಿ ತಡೆಯೋದು ಕಷ್ಟ.

ಬಹಳ ಅದ್ಧೂರಿಯಾಗಿ 'ಸಲಾರ್' ಚಿತ್ರವನ್ನು ನಿರ್ಮಿಸಿದ್ದ ಹೊಂಬಾಳೆ ಸಂಸ್ಥೆ ಅಷ್ಟೇ ಗ್ರ್ಯಾಂಡ್ ಆಗಿ ರಿಲೀಸ್ ಮಾಡಿದೆ. ಪ್ರಶಾಂತ್ ನೀಲ್ ಟೇಕಿಂಗ್, ಪ್ರಭಾಸ್ ಪರ್ಫಾರ್ಮನ್ಸ್ ನೋಡಿ ಅಭಿಮಾನಿಗಳಂತೂ ಥ್ರಿಲ್ಲಾಗಿದ್ದಾರೆ. ಕನ್ನಡದ 'ಉಗ್ರಂ' ಕಥೆಯನ್ನೇ ದೊಡ್ಡಮಟ್ಟದಲ್ಲಿ 'ಸಲಾರ್' ಚಿತ್ರದಲ್ಲಿ ಕಟ್ಟಿಕೊಡಲಾಗಿದೆ. ಎರಡು ಭಾಗಗಳಾಗಿ ಸಿನಿಮಾ ತೆರೆಗೆ ಬರ್ತಿದೆ. ಕನ್ನಡದಲ್ಲಿ ತಿಲಕ್ ಮಾಡಿದ್ದ ಪಾತ್ರವನ್ನು ತೆಲುಗಿನಲ್ಲಿ ಪೃಥ್ವಿರಾಜ್ ಸುಕುಮಾರನ್ ಮಾಡಿದ್ದಾರೆ.

Bumper Offer For Salaar: Part 1 – Ceasefires child artist Karthikeya dev

ದೇವ- ವರದ ಬ್ರೊಮ್ಯಾನ್ಸ್‌ ಸಿನಿರಸಿಕರಿಗೆ ಇಷ್ಟವಾಗಿದೆ. ಶ್ರುತಿ ಹಾಸನ್ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಜಗಪತಿ ಬಾಬು, ಈಶ್ವರಿ ರಾವ್, ಗರುಡ ರಾಮ್, ಪ್ರಮೋದ್, ಬಾಬಿ ಸಿಂಹ ಸೇರಿದಂತೆ ಘಟಾನುಘಟಿ ಕಲಾವಿದರು ಚಿತ್ರದ ತಾರಾಗಣದಲ್ಲಿದ್ದಾರೆ. ದೇವ ಹಾಗೂ ವರದ ಬಾಲ್ಯದ ದಿನಗಳೊಂದಿಗೆ 'ಸಲಾರ್' ಸಿನಿಮಾ ಆರಂಭವಾಗುತ್ತದೆ.

ಚಿಕ್ಕಂದಿನಲ್ಲಿ ಒಬ್ಬರಿಗೊಬ್ಬರು ಜೀವ ಕೊಡುವಷ್ಟು ಆತ್ಮೀಯ ಸ್ನೇಹಿತರಾಗಿದ್ದ ವರದ ಹಾಗೂ ದೇವ ಕಾರಣಾಂತರಗಳಿಂದ ದೂರಾಗುತ್ತಾರೆ. ದೊಡ್ಡವರಾದ ಮೇಲೆಯೂ ಅವರಿಬ್ಬರ ಸ್ನೇಹ ಮುಂದುವರೆಯುತ್ತದೆ. ಆದರೆ ಅದೊಂದು ಘಟನೆ ಇಬ್ಬರನ್ನು ದೂರ ಮಾಡುತ್ತದೆ. ಅದು ಏನು? ಎನ್ನುವುದು ಮುಂದಿನ ಭಾಗದಲ್ಲಿ ಗೊತ್ತಾಗಲಿದೆ. ಆದರೆ ದೇವ ಹಾಗೂ ವರದ ಬಾಲ್ಯದ ಪಾತ್ರಗಳಲ್ಲಿ ನಟಿಸಿದ್ದ ಕಲಾವಿದರು ಕೂಡ ಗಮನ ಸೆಳೆದಿದ್ದಾರೆ.

'ಸಲಾರ್' ಚಿತ್ರದಲ್ಲಿ ಕಾರ್ತಿಕೇಯ ದೇವ್, ವರದ ರಾಜ್ ಆಗಿ ಪೃಥ್ವಿರಾಜ್ ಬಾಲ್ಯದ ಪಾತ್ರದಲ್ಲಿ ನಟಿಸಿದ್ದಾರೆ. ಕಾರ್ತಿಕೇಯ ದೇವ್ ಲುಕ್ಸ್, ನಟನೆ ಸಿನಿರಸಿಕರ ಮನಗೆದ್ದಿದೆ. ಟ್ರೈಲರ್ ಹಾಗೂ ಚಿತ್ರದ ಮೊದಲ ಹಾಡಿನಲ್ಲಿ ಆತ ನೋಡುಗರ ಗಮನ ಸೆಳೆದಿದ್ದ. ಆ ಪಾತ್ರಕ್ಕಾಗಿ ಸಾಕಷ್ಟು ಜನ ಆಡಿಷನ್ ಕೊಟ್ಟಿದ್ದರು. ಅದರಲ್ಲಿ ಕಾರ್ತಿಕೇಯ ಪಾಸ್ ಆಗಿ ನೀಲ್ ನಿರ್ದೇಶನದಲ್ಲಿ ನಟಿಸುವ ಅವಕಾಶ ಗಿಟ್ಟಿಸಿಕೊಂಡಿದ್ದನು.

Bumper Offer For Salaar: Part 1 – Ceasefires child artist Karthikeya dev

ತೆಲುಗು ನಟ ರವಿತೇಜ ಸಂಬಂಧಿಕರ ಮಗನಾಗಿರುವ ಕಾರ್ತಿಕೇಯ 10ನೇ ತರಗತಿ ಓದುತ್ತಿದ್ದಾನೆ. 'ಸಲಾರ್' ಚಿತ್ರಕ್ಕಾಗಿ ತಿಂಗಳ ಕಾಲ ರಿಹರ್ಸಲ್ ಮಾಡಿ 15 ದಿನಗಳ ಕಾಲ ಚಿತ್ರೀಕರಣದಲ್ಲಿ ಭಾಗಿ ಆಗಿದ್ದಾಗಿ ಸಂದರ್ಶನವೊಂದರಲ್ಲಿ ಕಾರ್ತಿಕೇಯ ಹೇಳಿದ್ಧಾನೆ. ಆತನ ಲುಕ್ಸ್ ಪೃಥ್ವಿರಾಜ್ ಅವರನ್ನು ಹೋಲುತ್ತದೆ. ಇನ್ನು ಆತನ ನಟನೆಯನ್ನು ಮೆಚ್ಚಿರುವ ಪೃಥ್ವಿರಾಜ್ ತಮ್ಮ ಮುಂದಿನ ಸಿನಿಮಾದಲ್ಲಿ ನಟಿಸುವ ಅವಕಾಶ ನೀಡಿದ್ದಾರೆ.

ಒಮ್ಮೆ ಚಿತ್ರೀಕರಣ ಮುಗಿದ ಬಳಿಕ ಆತನ ದೃಶ್ಯಗಳನ್ನು ಪ್ರಶಾಂತ್ ನೀಲ್ ಮಧ್ಯರಾತ್ರಿ 2 ಗಂಟೆಗೆ ಪೃಥ್ವಿರಾಜ್‌ಗೆ ಕಳುಹಿಸಿದಂತೆ. ಫೋನ್ ಮಾಡಿ ಇದು 'ಸಲಾರ್' ಚಿತ್ರದಲ್ಲಿ ನಿನ್ನ ಬಾಲ್ಯದ ಪಾತ್ರ. ಕಾರ್ತಿಕೇಯ ಎನ್ನುವ ಹುಡುಗ ನಟಿಸಿದ್ದಾನೆ. ಚೆನ್ನಾಗಿ ನಟನೆ ಮಾಡುತ್ತಾನೆ ಎಂದು ಪ್ರಶಾಂತ್ ನೀಲ್ ಹೇಳಿದ್ದರಂತೆ. ಪೃಥ್ವಿರಾಜ್‌ಗೂ ಕಾರ್ತಿಕೇಯ ನಟನೆ ಇಷ್ಟವಾಗಿ ಕೇರಳಕ್ಕೆ ಕರೆಸಿಕೊಂಡಿದ್ದಾರೆ. 'ಲೂಸಿಫರ್' ಸೀಕ್ವೆಲ್‌ನಲ್ಲಿ ತಮ್ಮ ಜಾಯೆದ್ ಮಸೂದ್ ಚಿಕ್ಕಂದಿನ ಪಾತ್ರಕ್ಕೆ ಕಾರ್ತಿಕೇಯನ ಆಯ್ಕೆ ಮಾಡಿದ್ದಾರೆ.

2019ರಲ್ಲಿ ಪೃಥ್ವಿರಾಜ್ ಸುಕುಮಾರನ್ ನಿರ್ದೇಶಿಸಿ ನಟಿಸಿದ್ದ 'ಲೂಸಿಫರ್' ಸಿನಿಮಾ ದಾಖಲೆ ಬರೆದಿತ್ತು. ಚಿತ್ರದಲ್ಲಿ ಮೋಹನ್ ಲಾಲ್ ಮುಖ್ಯವಾದ ಪಾತ್ರದಲ್ಲಿ ನಟಿಸಿದ್ದರು. ಜಾಯೆದ್ ಮಸೂದ್ ಎನ್ನುವ ಮುಖ್ಯವಾದ ಪಾತ್ರದಲ್ಲಿ ಪೃಥ್ವಿರಾಜ್ ಬಣ್ಣ ಹಚ್ಚಿದ್ದರು. ಆ ಪಾತ್ರಕ್ಕೂ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು. ಸದ್ಯ ಸಿನಿಮಾ ಸೀಕ್ವೆಲ್ ಕೆಲಸಗಳು ನಡೀತಿದೆ. ಆ ಚಿತ್ರದಲ್ಲಿ ಕಾರ್ತಿಕೇಯ ದೇವ್ ನಟಿಸುತ್ತಿರುವುದು ವಿಶೇಷ.

More from Filmibeat

English summary
Salaar child artist Karthikeya dev grabbed the lucky chance
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X