twitter
    For Quick Alerts
    ALLOW NOTIFICATIONS  
    For Daily Alerts

    ನಟ ಮಮ್ಮುಟಿ ಸೇರಿ 300 ಮಂದಿ ವಿರುದ್ಧ ಪ್ರಕರಣ ದಾಖಲು

    |

    ಮಲಯಾಳಂ ಚಿತ್ರರಂಗದ ಖ್ಯಾತ ನಟ ಮಮ್ಮುಟಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಮ್ಮುಟಿ ವಿರುದ್ಧ ಕೇರಳ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಮಮ್ಮುಟಿ ಮಾತ್ರವಲ್ಲದೆ 300 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.

    ಕೊರೊನಾ ನಿಯಮಗಳನ್ನು ಉಲ್ಲಂಘಿಸಿದ್ದಾರೆಂಬ ಆರೋಪದಲ್ಲಿ ನಟ ಮಮ್ಮುಟಿ ವಿರುದ್ಧ ಕೇರಳದ ಕೋಯಿಕ್ಕೊಡ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

    ಕೋಯಿಕ್ಕೊಡ್‌ನಲ್ಲಿ ಕಳೆದ ಮಂಗಳವಾರ (ಆಗಸ್ಟ್ 03)ರಂದು ಆಸ್ಪತ್ರೆಯೊಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಟ ಮಮ್ಮುಟಿ ಭಾಗವಹಿಸಿದ್ದರು. ಆ ಸಮಯದ ದೊಡ್ಡ ಸಂಖ್ಯೆಯ ಅಭಿಮಾನಿಗಳು ತಮ್ಮ ಮೆಚ್ಚಿನ ನಟನನ್ನು ನೋಡಲು ಆಸ್ಪತ್ರೆಯ ಬಳಿ ನೆರೆದರು. ದೊಡ್ಡ ಸಂಖ್ಯೆಯ ಜನ ಸೇರಿದ್ದರಿಂದ ಕೊರೊನಾ ನಿಯಮಗಳ ಉಲ್ಲಂಘನೆ ಆದ ಕಾರಣ ಕೋಯಿಕ್ಕೊಡ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

    ಕೋಯಿಕ್ಕೊಡ್‌ನಲ್ಲಿ ಮೈತ್ರಾ ಆಸ್ಪತ್ರೆಯಲ್ಲಿ ರೋಬೋಟ್ ನೆರವಿನ ಶಸ್ತ್ರ ಚಿಕಿತ್ಸಾ ಘಟಕ ಉದ್ಘಾಟನೆ ಕಳೆದ ಮಂಗಳವಾರ ನಡೆದಿತ್ತು ಆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಮಮ್ಮುಟಿ ಆಗಮಿಸಿದ್ದರು. ಆ ಸಂದರ್ಭದಲ್ಲಿ ಮಮ್ಮುಟಿಯನ್ನು ನೋಡಲು ಭಾರಿ ಸಂಖ್ಯೆಯ ಜನ ಸೇರಿದ್ದದ್ದರಿಂದ ಕೊರೊನಾ ನಿಯಮಗಳ ಉಲ್ಲಂಘನೆ ಆಗಿತ್ತು. ಮಮ್ಮುಟಿ ವಿರುದ್ಧ ದೂರು ದಾಖಲಿಸಬೇಕೆಂದು ಸಾಮಾಜಿಕ ಜಾಲತಾಣದಲ್ಲಿ ಒತ್ತಾಯ ಸಹ ಕೇಳಿಬಂದಿತ್ತು.

    Case Registered Against Malayalam Actor Mammootty For Violating COVID 19 Rules

    ಅಂದಿನ ಕಾರ್ಯಕ್ರಮದ ವಿಡಿಯೋ, ಚಿತ್ರಗಳನ್ನು ಪರಿಶೀಲಿಸಿದ ಕೋಯಿಕ್ಕೊಡ್ ಪೊಲೀಸರು ಇದೀಗ ಮಮ್ಮುಟಿ ಮತ್ತು ಇತರ 300 ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಆಸ್ಪತ್ರೆಯ ಆಡಳಿತ ಸಿಬ್ಬಂದಿ ವಿರುದ್ಧವೂ ಪ್ರಕರಣ ದಾಖಲಾಗಿದೆ. ಪ್ರಕರಣದ ಬಗ್ಗೆ ಹೇಳಿಕೆ ನೀಡಿರುವ ಆಸ್ಪತ್ರೆ ಆಡಳಿತ ಮಂಡಳಿ, ''ಕೋವಿಡ್ ನಿಯಮಗಳನ್ನು ಉಲ್ಲಂಘಿಸಿಲ್ಲ. ಸೆಲೆಬ್ರಿಟಿ ಅತಿಥಿಯಾಗಿ ಬಂದಿದ್ದರಿಂದ ಕೆಲವು ಅನಿರೀಕ್ಷಿತ ಘಟನೆಗಳು ನಡೆದಿರಬಹುದಷ್ಟೆ'' ಎಂದಿದ್ದಾರೆ.

    ಘಟನೆ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಕೋಯಿಕ್ಕೊಡ್ ಪೊಲೀಸರು, ''ಕಾರ್ಯಕ್ರಮದ ಆರಂಭದಲ್ಲಿ ಎಲ್ಲರೂ ಕೋವಿಡ್ ನಿಯಮಗಳನ್ನು ಪಾಲಿಸಿದ್ದಾರೆ ಆದರೆ ಕಾರ್ಯಕ್ರಮ ಮುಂದೆ ಸಾಗುತ್ತಲೂ ಕೋವಿಡ್ ನಿಯಮಗಳನ್ನು ಉಲ್ಲಂಘಿಸಲಾಗಿದೆ. ಕಾರ್ಯಕ್ರಮಕ್ಕೆ ಆಗಮಿಸಿದ್ದ ಅತಿಥಿಗಳು ಸಹ ಬೇಜವಾಬ್ದಾರಿಯಿಂದ ವರ್ತಿಸಿರುವುದು ವಿಡಿಯೋಗಳಲ್ಲಿ ದಾಖಲಾಗಿದೆ. ಮಮ್ಮುಟಿ ಸೇರಿ ಎಲ್ಲರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು'' ಎಂದು ಪೊಲೀಸರು ಹೇಳಿದ್ದಾರೆ.

    ಪ್ರಸ್ತುತ ದೇಶದಲ್ಲಿಯೇ ಅತಿ ಹೆಚ್ಚು ಕೋವಿಡ್ ಪ್ರಕರಣಗಳು ಕೇರಳದಲ್ಲಿ ದಾಖಲಾಗುತ್ತಿವೆ. ಆಗಸ್ಟ್ 07ರಂದು ಒಂದೇ ದಿನ 20,000ಕ್ಕೂ ಹೆಚ್ಚು ಹೊಸ ಪ್ರಕರಣಗಳು ಕೇರಳ ರಾಜ್ಯದಲ್ಲಿ ದಾಖಲಾಗಿವೆ. ಕೇರಳವು ಕೋವಿಡ್ ಪ್ರಕರಣಗಳನ್ನು ನಿಯಂತ್ರಿಸಲು ವಿಫಲವಾಗಿದೆ ಎಂದು ರಾಷ್ಟ್ರಮಟ್ಟದಲ್ಲಿ ಟೀಕೆಗಳು ಕೇಳಿ ಬರುತ್ತಿವೆ. ಕೇರಳದಲ್ಲಿ ಪ್ರಸ್ತುತ 1.76 ಲಕ್ಷ ಸಕ್ರಿಯ ಕೋವಿಡ್‌ ಪ್ರಕರಣಗಳಿವೆ. 17 ಸಾವಿರಕ್ಕೂ ಹೆಚ್ಚು ಮಂದಿ ಈ ವರೆಗೆ ನಿಧನ ಹೊಂದಿದ್ದಾರೆ. ಹಾಗಾಗಿ ಕೇರಳ ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಕರ್ನಾಟಕ ಸೇರಿದಂತೆ ಕೇರಳದೊಂದಿಗೆ ಗಡಿ ಹಂಚಿಕೊಂಡಿರುವ ರಾಜ್ಯಗಳು ಕೇರಳದಿಂದ ಆಗಮಿಸುವ ಪ್ರಯಾಣಿಕರ ಮೇಲೆ ಕೆಲವು ನಿರ್ಬಂಧಗಳನ್ನು ಹೇರಿವೆ. ಕೇರಳ ಸರ್ಕಾರವು ಕೋವಿಡ್ ಪ್ರಕರಣಗಳನ್ನು ನಿಯಂತ್ರಿಸಲು ಹೆಣಗಾಡುತ್ತಿದೆ. ಈ ಸಮಯದಲ್ಲಿ ಮಮ್ಮುಟಿಯಿಂದ ಆಗಿರುವ ಬೇಜವಾಬ್ದಾರಿಯುತ ನಡೆಗೆ ತೀಕ್ಷ್ಣವಾಗಿ ಪೊಲೀಸ್ ಇಲಾಖೆ ಪ್ರತಿತಿಕ್ರಿಯಿಸಿದೆ.

    ಮಮ್ಮುಟಿ ಮಲಯಾಳಂನ ಸೂಪರ್ ಸ್ಟಾರ್ ನಟ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಇದೇ ವರ್ಷ ಮಮ್ಮುಟಿ ಅಭಿನಯದ 'ದಿ ಪ್ರೀಸ್ಟ್' ಮತ್ತು 'ಒನ್' ಎಂಬ ಎರಡು ಸಿನಿಮಾಗಳು ಬಿಡುಗಡೆ ಆಗಿದೆ. ಇದೀಗ 'ಭೀಷ್ಮ ಪರ್ವಂ' ಮಲಯಾಳಂ ಸಿನಿಮಾದಲ್ಲಿ ನಟಿಸುತ್ತಿರುವ ಮಮ್ಮುಟಿ, 'ಏಜೆಂಟ್' ಹೆಸರಿನ ತೆಲುಗು ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ. 1971ರಿಂದಲೂ ಸಿನಿಮಾಗಳಲ್ಲಿ ನಟಿಸುತ್ತಿರುವ ಮಮ್ಮುಟಿ ಈವರೆಗೆ 400ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಮಲಯಾಳಂ ಮಾತ್ರವೇ ಅಲ್ಲದೆ ಹಿಂದಿ, ತೆಲುಗು, ತಮಿಳು ಹಾಗೂ 'ಶಿಕಾರಿ' ಹೆಸರಿನ ಒಂದು ಕನ್ನಡ ಸಿನಿಮಾದಲ್ಲಿಯೂ ಮಮ್ಮುಟಿ ನಟಿಸಿದ್ದಾರೆ.

    English summary
    Case registered against Malayalam star actor Mammootty for violating COVID 19 rules in Kozhikode. Police registered case against 300 people.
    Sunday, August 8, 2021, 21:16
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X