For Quick Alerts
  ALLOW NOTIFICATIONS  
  For Daily Alerts

  ತನಗಿಂತ 17 ವರ್ಷ ಚಿಕ್ಕವಳನ್ನು ವರಿಸಿದ ನಟ, ಟ್ರೋಲಿಗರಿಗೆ ತಿರುಗೇಟು

  By Avani Malnad
  |

  ಎರಡು ತಿಂಗಳ ಹಿಂದೆ ಲಾಕ್ ಡೌನ್ ನಡುವೆಯೇ ಮಲಯಾಳಂನ ಖ್ಯಾತ ನಟ, ನಿರ್ದೇಶಕ ಚೆಂಬನ್ ವಿನೋದ್ ಜೋಸ್, ತಮಗಿಂತ 17 ವರ್ಷ ಚಿಕ್ಕವರಾದ ಮರಿಯಮ್ ಥಾಮಸ್ ಅವರನ್ನು ಮದುವೆಯಾಗಿದ್ದು ಸದ್ದು ಮಾಡಿತ್ತು. ಅತ್ಯಂತ ಸರಳವಾಗಿ ಗುಟ್ಟು ಗುಟ್ಟಾಗಿ ನಡೆದ ಮದುವೆಯಲ್ಲಿ ಚೆಂಬನ್ ವಿನೋದ್ ತಮ್ಮ ದಾಂಪತ್ಯ ಜೀವನದ ಎರಡನೆಯ ಇನ್ನಿಂಗ್ಸ್ ಆರಂಭಿಸಿದ್ದರು.

  Ambareesh memorial:ಅಂಬರೀಷ್ ಸ್ಮಾರಕ ನಿರ್ಮಾಣಕ್ಕೆ ಬಿಎಸ್‌ವೈ ಅಸ್ತು |Kanteerava Studio |Filmibeat Kannada

  ಸಾಮಾನ್ಯವಾಗಿ ಸೆಲೆಬ್ರಿಟಿಗಳು ಎರಡನೆಯ ಮದುವೆಯಾಗುವುದು ವಿಶೇಷವಲ್ಲ. ಆದರೆ ವಿನೋದ್ ಮದುವೆಯಾಗಿರುವುದು ತಮಗಿಂತ 17 ವರ್ಷ ಚಿಕ್ಕ ಯುವತಿಯನ್ನು. ಇತ್ತೀಚೆಗೆ ತೆಲುಗಿನ ಖ್ಯಾತ ನಿರ್ಮಾಪಕ ದಿಲ್ ರಾಜು ತಮ್ಮ ಮಗಳಿಗಿಂತ ಒಂದು ವರ್ಷವಷ್ಟೇ ದೊಡ್ಡವರಾದ ಮಹಿಳೆಯನ್ನು ಎರಡನೆಯ ಮದುವೆಯಾಗಿದ್ದು ಸುದ್ದಿಯಾಗಿತ್ತು.

  ಲಾಕ್‌ಡೌನ್ ನಡುವೆ ಎರಡನೇ ಮದುವೆಯಾದ ಮಲೆಯಾಳಂ ಖ್ಯಾತ ನಟ

  ಚೆಂಬನ್ ವಿನೋದ್ ಮತ್ತು ಮರಿಯಮ್ ಮದುವೆ ಕೆಲವೇ ಆಪ್ತರ ಸಮ್ಮುಖದಲ್ಲಿ ನಡೆದಿದ್ದರೂ, ದೊಡ್ಡ ಸದ್ದು ಮಾಡಿತ್ತು. ಇದಕ್ಕೆ ಕಾರಣ ಇಬ್ಬರ ನಡುವಿನ ವಯಸ್ಸಿನ ಅಂತರ ಹಾಗೂ ವಿನೋದ್ ಎರಡನೆಯ ಮದುವೆ ಎನ್ನುವುದು. ಮುಂದೆ ಓದಿ..

  ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವಿದೆ

  ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವಿದೆ

  ವಿನೋದ್ ಮತ್ತು ಮರಿಯಮ್ ಅವರನ್ನು ಟ್ರೋಲರ್‌ಗಳು ವಿಪರೀತ ಎನ್ನುವಷ್ಟು ಟ್ರೋಲ್ ಮಾಡಿದ್ದರು. ಈ ಬಗ್ಗೆ ಕೊನೆಗೂ ವಿನೋದ್ ಮಾತನಾಡಿದ್ದಾರೆ. 'ಆಕೆಗೆ 25 ವರ್ಷ. ಇಷ್ಟು ವರ್ಷದವರಿಗೆ ತಮ್ಮದೇ ನಿರ್ಧಾರಗಳನ್ನು ತೆಗೆದುಕೊಳ್ಳುವಷ್ಟು ವೈಯಕ್ತಿಕ ಸಾಮರ್ಥ್ಯ ಇರುತ್ತದೆ' ಎಂದು ತಿರುಗೇಟು ನೀಡಿದ್ದಾರೆ.

  ಮೂಗು ತೂರಿಸುವುದು ಬೇಡ

  ಮೂಗು ತೂರಿಸುವುದು ಬೇಡ

  ತಮ್ಮನ್ನು ಜನರು ಇಷ್ಟಪಡದೆ ಹೋದರೆ ತೊಂದರೆಯೇನೂ ಇಲ್ಲ. ಆದರೆ ಬೇರೆಯವರ ಖಾಸಗಿ ಜೀವನದಲ್ಲಿ ಅನಾವಶ್ಯಕವಾಗಿ ಮೂಗು ತೂರಿಸುವುದು ಸರಿಯಾದ ರೀತಿಯಲ್ಲ. ಮದುವೆಯಲ್ಲಿ ಗಂಡು ಮತ್ತು ಹೆಣ್ಣಿನ ನಡುವೆ ಇಷ್ಟೇ ವಯಸ್ಸಿನ ಅಂತರ ಕಾಪಾಡಿಕೊಳ್ಳಬೇಕು ಎಂಬ ಕಾನೂನೇನಾದರು ಇದೆಯೇ? ಎಂದು ಅವರು ಪ್ರಶ್ನಿಸಿದ್ದಾರೆ.

  ಲಾಕ್‌ಡೌನ್‌ನಲ್ಲಿ ಸಿಂಪಲ್ಲಾಗಿ ಮೂರನೇ ಮದುವೆಯಾದ ಜನಪ್ರಿಯ ನಟಿ

  ಮದುವೆ ಸಮಾರಂಭದಲ್ಲಿ ಭೇಟಿ

  ಮದುವೆ ಸಮಾರಂಭದಲ್ಲಿ ಭೇಟಿ

  ಮದುವೆಯೊಂದರಲ್ಲಿ ಇಬ್ಬರೂ ಭೇಟಿಯಾಗಿದ್ದೆವು. ವಯಸ್ಸಿನ ಅಂತರ ನನಗೆ ಮುಖ್ಯ ಎನಿಸಲಿಲ್ಲ. ಇಬ್ಬರಿಗೂ ಸ್ನೇಹಿತರಾಗಿರುವವರ ಮದವೆಯಲ್ಲಿ ಭೇಟಿ ಮಾಡಿದ್ದೆವು. ಪುಣೆಯಲ್ಲಿ ಓದು ಮುಗಿಸಿದ ಬಳಿಕ ನಾನು ಕೊಚ್ಚಿಯಲ್ಲಿ ಕೆಲಸ ಮಾಡಲು ಆರಂಭಿಸಿದೆ. ನಾವಿಬ್ಬರೂ ಸುದೀರ್ಘ ಸಮಯದಿಂದ ಇಷ್ಟಪಟ್ಟಿದ್ದೇವೆ. ಹಾಗೆಯೇ ಮದುವೆಯಾಗಲು ನಿರ್ಧರಿಸಿದ್ದೆವು ಎಂದು ಮರಿಯಮ್ ಹೇಳಿದ್ದಾರೆ.

  ದೂರಮಾಡಿಕೊಳ್ಳಲು ಬಯಸೊಲ್ಲ

  ದೂರಮಾಡಿಕೊಳ್ಳಲು ಬಯಸೊಲ್ಲ

  ನನ್ನ ಹಾಗೂ ಚೆಂಬನ್ ನಡುವೆ ಉತ್ತಮ ಸಮರಸವಿದೆ. ಅವರ ಜತೆ ಯಾವ ವಿಚಾರವನ್ನೂ ನಾನು ಮುಕ್ತವಾಗಿ ಮಾತನಾಡಬಲ್ಲೆ. ಅವರು ನನಗಿಂತ ವಯಸ್ಸಿನಲ್ಲಿ ಹೆಚ್ಚು ದೊಡ್ಡವರು ಎಂಬ ಕಾರಣಕ್ಕೆ ಅವರನ್ನು ದೂರಮಾಡಿಕೊಳ್ಳಲು ಇಷ್ಟವಿಲ್ಲ ಎಂದಿದ್ದಾರೆ.

  ಮೊದಲ ಪತ್ನಿಯಿಂದ ವಿಚ್ಚೇದನ

  ಮೊದಲ ಪತ್ನಿಯಿಂದ ವಿಚ್ಚೇದನ

  44 ವರ್ಷ ಚೆಂಬನ್ ಬೆಂಗಳೂರಿನಲ್ಲಿ ಫಿಸಿಯೋಥೆರಪಿ ಉನ್ನತ ಶಿಕ್ಷಣ ಪಡೆದಿದ್ದರು. ನಾಯಕನ್, ಅಮೆನ್, ತಮಾರ್ ಪದಾರ್ ಮುಂತಾದ ಚಿತ್ರಗಳಲ್ಲಿ ನಟಿಸಿರುವ ಚೆಂಬನ್, ಸುನೀತಾ ಎಂಬುವವರನ್ನು ಮದುವೆಯಾಗಿದ್ದರು. ಅವರಿಗೆ ಜಾನ್ ಕ್ರಿಸ್ ಚೆಂಬನ್ ಎಂಬ ಮಗ ಇದ್ದಾರೆ. ಮೊದಲ ಪತ್ನಿಯಿಂದ ವಿಚ್ಚೇದನ ಪಡೆದಿದ್ದು, ಸುನೀತಾ ಮತ್ತು ಮಗ ನ್ಯೂಯಾರ್ಕ್‌ನಲ್ಲಿ ನೆಲೆಸಿದ್ದಾರೆ. ಚೆಂಬನ್ ಎರಡನೆಯ ಪತ್ನಿ ಮರಿಯಮ್ ವೃತ್ತಿಯಿಂದ ಸೈಕಾಲಜಿಸ್ಟ್ ಆಗಿದ್ದು, ಜುಂಬಾ ಡ್ಯಾನ್ಸರ್ ಕೂಡ ಹೌದು.

  ಟಗರು ಸರೋಜ ಜೊತೆ ಚಿಕ್ಕಣ್ಣ ಮದುವೆ ಆಗಿರುವುದು ನಿಜವೇ?

  ಐದು ಮಂದಿ ಹಾಜರಿ

  ಐದು ಮಂದಿ ಹಾಜರಿ

  ಇಬ್ಬರೂ ಅಂಗಮಲಿ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಸ್ಪೆಷಲ್ ಮ್ಯಾರಿಯೇಜ್ ಆಕ್ಟ್ ಅನುಗುಣವಾಗಿ ಮದುವೆಯಾಗಿದ್ದರು. ಲಾಕ್ ಡೌನ್ ನಿಯಮಗಳಂತೆ ಕೇವಲ ಐದು ಮಂದಿ ಮದುವೆಯಲ್ಲಿ ಹಾಜರಿದ್ದರು. ತಮಗಿಂತ ತುಂಬಾ ಚಿಕ್ಕವರನ್ನು ಮದುವೆಯಾದ ಚೆಂಬನ್ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡಲಾಗಿತ್ತು.

  English summary
  Malayalam actor Chemban Vinod Jose and Mariam Thomas reacts to trolls on their age difference.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more
  X