For Quick Alerts
  ALLOW NOTIFICATIONS  
  For Daily Alerts

  ಕೊರೊನಾ ಎಫೆಕ್ಟ್: ಮಲಯಾಳಂ ಸಿನಿಮಾ ಪ್ರದರ್ಶನ ರದ್ದು

  |

  ವಿಶ್ವದಾದ್ಯಂತ ಮಾರಣಾಂತಿಕ ಕೊರೊನಾ ವೈರಸ್ ಅಟ್ಟಹಾಸ ಮೆರೆಯುತ್ತಿದೆ. ಕೊರೊನಾ ವೈರಸ್ ಭಾರತಕ್ಕೂ ಎಂಟ್ರಿ ಕೊಟ್ಟಿದೆ. ಈಗ ಬೆಂಗಳೂರಿನಲ್ಲಿಯೂ ನಾಲ್ಕು ಜನರಲ್ಲಿ ಕೊರೊನಾ ವೈರಸ್ ಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ. ವೇಗವಾಗಿ ಹಬ್ಬುತ್ತಿರುವ ಕೊರೊನಾ ವೈರಸ್ ಪರಿಣಾಮ ಹಲವು ಕಡೆ ಶಾಲಾ ಕಾಲೇಜು, ಐಟಿ ಕಚೇರಿಗಳಿಗೆ ರಜೆ ಘೋಷಿಸಲಾಗಿದೆ.

  ಲೇಡಿ ಸೂಪರ್ ಸ್ಟಾರ್ ಹೆಸರಿನ ಬಗ್ಗೆ ಭಾರೀ ಚರ್ಚೆ | NAYANTARA | SUPERSTAR | ONEINDIA KANNADA

  ಈಗ ಕೇರಳದಲ್ಲಿ ಚಿತ್ರಮಂದಿರಗಳನ್ನು ಬಂದ್ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ. ನಾಳೆಯಿಂದ (ಮಾರ್ಚ್ 11) ಈ ತಿಂಗಳು ಕೊನೆ 31ರ ವರೆಗೂ ಕೇರಳದಲ್ಲಿ ಚಿತ್ರಮಂದಿರಗಳನ್ನು ಬಂದ್ ಮಾಡಲಾಗಿದೆ. ಮಲಯಾಳಂ ಸಿನಿಮಾ ಒಕ್ಕೂಟ ಈ ನಿರ್ಧಾರ ತೆಗೆದುಕೊಂಡಿದೆ.

  ಹೊಸ ದಾಖಲೆ ಬರೆದ ಮೋಹನ್ ಲಾಲ್ -ಪೃಥ್ವಿರಾಜ್ ಜೋಡಿಹೊಸ ದಾಖಲೆ ಬರೆದ ಮೋಹನ್ ಲಾಲ್ -ಪೃಥ್ವಿರಾಜ್ ಜೋಡಿ


  ಈಗಾಗಲೆ ಬೇರೆ ಬೇರೆ ಭಾಷೆಯ ಸಾಕಷ್ಟು ಸಿನಿಮಾ ಚಿತ್ರೀಕರಣಗಳು ಸ್ಥಗಿತಗೊಂಡಿವೆ. ಕನ್ನಡ ಚಿತ್ರಗಳು ಸೇರಿದಂತೆ ತೆಲುಗು, ತಮಿಳು ಮತ್ತು ಬಾಲಿವುಡ್ ನ ಅನೇಕ ಸಿನಿಮಾಗಳ ಚಿತ್ರೀಕರಣ ರದ್ದಾಗಿವೆ. ವಿದೇಶಿದಲ್ಲಿ ಚಿತ್ರೀಕರಣ ಮಾಡಲು ನಿರ್ಧರಿಸಿದ್ದ ಚಿತ್ರಗಳ ಚಿತ್ರೀಕರಣ ಸ್ಥಗಿತಗೊಳಿಸಿದ್ದಾರೆ.

  ಚಿತ್ ಪ್ರದರ್ಶನ ರದ್ದಾಗಿವೆ ಅಂದ್ಮೇಲೆ ಮಲಯಾಳಂ ಸಿನಿಮಾಗಳು ಇನ್ನು ಒಂದು ತಿಂಗಳು ಆಗುವುದಿಲ್ಲ. ಕೇವಲ ಮಲಯಾಳಂ ಮಾತ್ರವಲ್ಲದೆ ಬೇರೆ ಬೇರೆ ಚಿತ್ರರಂಗದ ಮೇಲೂ ಕೊರೊನಾ ಎಫೆಕ್ಟ್ ಆಗಿದೆ. ವಿಶೇಷವಾಗಿ ಈ ತಿಂಗಳು ಮತ್ತು ಮುಂದಿನ ತಿಂಗಳು ರಿಲೀಸ್ ಗೆ ರೆಡಿಯಾಗಿರುವ ಸಿನಿಮಾಗಳು ತೊಂದರೆಗೆ ಸಿಲುಕುವ ಸಾಧ್ಯತೆ ಇದೆ. ಸದ್ಯ ಕೇರಳದಲ್ಲಿ ಚಿತ್ರಪ್ರದರ್ಶನ ರದ್ದು ಮಾಡಿದ ಹಾಗೆ ಬೇರೆ ಬೇರೆ ರಾಜ್ಯಗಳು ಈ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

  English summary
  Film theatre will remain closed from 11 till March 31 in Kerala for coronavirus effects.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X