ನಟಿ ಮೇಲೆ ಅತ್ಯಾಚಾರ ಯತ್ನ: ಸ್ಟಾರ್ ನಟನ ಬಗ್ಗೆ ಸತ್ಯ ಹೇಳಲಿದ್ದಾನೆ ಆರೋಪಿ

ಮಲಯಾಳಂ ಸಿನಿಮಾ ರಂಗದ ಸ್ಟಾರ್ ನಟಿಯ ಮೇಲೆ ಚಲಿಸುವ ಕಾರಿನಲ್ಲಿ ಅತ್ಯಾಚಾರಕ್ಕೆ ಯತ್ನಿಸಿದ ಹಾಗೂ ಹಲ್ಲೆ ಮಾಡಿದ ಪ್ರಕರಣ ದೇಶದಾದ್ಯಂತ ಸುದ್ದಿಯಾಗಿತ್ತು. 2017 ರಲ್ಲಿ ನಡೆದ ಈ ಪ್ರಕರಣದ ಹಿಂದೆ ಮಲಯಾಳಂ ಚಿತ್ರರಂಗದ ನಾಯಕ ನಟ ದಿಲೀಪ್ ಬಂಧನವಾದಾಗಲಂತೂ ಈ ಪ್ರಕರಣದ ಬಗ್ಗೆ ದೇಶದ ಸಿನಿ ಪ್ರೇಮಿಗಳಿಗೆ ಇನ್ನಷ್ಟು ಕುತೂಹಲ ಮೂಡಿತ್ತು.

ಪ್ರಕರಣ ನಡೆದು ಇದೀಗ ಐದು ವರ್ಷವಾಗಿದ್ದು, ಪ್ರಕರಣದಲ್ಲಿ ಆರೋಪಿ ದಿಲೀಪ್ ವಿರುದ್ಧ ಈವರೆಗೆ ಗಟ್ಟಿ ಸಾಕ್ಷ್ಯವೊಂದನ್ನು ನ್ಯಾಯಾಲಯಕ್ಕೆ ಸಲ್ಲಿಸಲು ಸಾಧ್ಯವಾಗಿರಲಿಲ್ಲ. ಆದರೆ ಇದೀಗ ಪ್ರಕರಣದ ಪ್ರಮುಖ ಆರೋಪಿ ಪಲ್ಸರ್ ಸುನಿಯೇ ದಿಲೀಪ್ ವಿರುದ್ಧ ಸಾಕ್ಷ್ಯ ಹೇಳಲು ತಯಾರಾಗಿದ್ದು, ಕೊನೆಗೂ ನಟ ದಿಲೀಪ್‌ಗೆ ಶಿಕ್ಷೆ ಆಗುವ ಸಾಧ್ಯತೆ ದಟ್ಟವಾಗಿದೆ.

ನಟಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಹಲ್ಲೆ ಮಾಡಿದ್ದ ಪ್ರಕರಣದ ಪ್ರಮುಖ ಆರೋಪಿ ಪಲ್ಸರ್ ಸುನಿ ತಾನು ಎಲ್ಲ ಸತ್ಯವನ್ನು ನ್ಯಾಯಾಲಯದ ಮುಂದೆ ಹೇಳುವುದಾಗಿ ತನ್ನ ತಾಯಿ ಶೋಭಾನಾ ಬಳಿ ಹೇಳಿದ್ದಾನೆ. ಈ ವಿಷಯವನ್ನು ಪಲ್ಸರ್ ಸುನಿಯ ತಾಯಿಯೇ ಮಾಧ್ಯಮಗಳಿಗೆ ಹೇಳಿದ್ದಾರೆ.

ಮಗನನ್ನು ಸಿಕ್ಕಿ ಹಾಕಿಸಲಾಗಿದೆ: ಸುನಿ ತಾಯಿ

ಮಗನನ್ನು ಸಿಕ್ಕಿ ಹಾಕಿಸಲಾಗಿದೆ: ಸುನಿ ತಾಯಿ

''ನನ್ನ ಮಗ ಸುನಿ ಜೈಲಿನಲ್ಲಿದ್ದರೂ ಅವನಿಗೆ ಹೊರಗೆ ಏನಾಗುತ್ತಿದೆ ಎಂಬುದು ಎಲ್ಲವೂ ಗೊತ್ತಿದೆ. ನಿರ್ದೇಶಕ ಬಾಲಚಂದ್ರ ಕುಮಾರ್, ಈ ಪ್ರಕರಣದ ಬಗ್ಗೆ ಹೇಳಿರುವುದೆಲ್ಲವೂ ಸತ್ಯ. ಹೊರಗೆ ಏನೂ ಹೇಳದಂತೆ ನನಗೆ ಮಗ ಸುನಿ ಹೇಳಿದ್ದಾನೆ. ಹೇಳಿದರೂ ಪ್ರಯೋಜನವಿಲ್ಲ ಎಂದು ಅವನು ಹೇಳಿದ್ದಾನೆ. ಆದರೆ ಅವನನ್ನು ಪ್ರಕರಣದಲ್ಲಿ ಸಿಕ್ಕಿ ಹಾಕಿಸಿರುವ ಬಗ್ಗೆ ಅವನಿಗೆ ದುಃಖವಿದೆ. ಅವನು ಎಲ್ಲ ಸತ್ಯವನ್ನೂ ನ್ಯಾಯಾಲಯದ ಮುಂದೆ ಹೇಳಲಿದ್ದಾನೆ. ನಾನೂ ಸಹ ನ್ಯಾಯಾಲಯಕ್ಕೆ ಹೇಳಿಕೆ ನೀಡಲಿದ್ದೇನೆ'' ಎಂದು ಸುನಿ ತಾಯಿ ಶೋಭನಾ ಹೇಳಿದ್ದಾರೆ. ಜೊತೆಗೆ, ''ದಿಲೀಪ್ ದೊಡ್ಡ ಆನೆ, ಅವನೊಟ್ಟಿಗೆ ಕೆಲವು ಅಳಿಲುಗಳು ಇದ್ದವು. ಈಗ ಆನೆಯೇ ಇಲ್ಲದ ಕಾರಣ ಅಳಿಲುಗಳು ಒದ್ದಾಡುತ್ತಿವೆ'' ಎಂದು ಒಗಟಿನಂಥ ಮಾತುಗಳನ್ನು ಸಹ ಶೋಭನಾ ಮಾಧ್ಯಮದ ಮುಂದೆ ಆಡಿದ್ದಾರೆ.

2017ರಲ್ಲಿ ನಡೆದಿದ್ದ ಆಘಾತಕಾರಿ ಘಟನೆ

2017ರಲ್ಲಿ ನಡೆದಿದ್ದ ಆಘಾತಕಾರಿ ಘಟನೆ

ನಟ ದಿಲೀಪ್ ಆದೇಶದ ಮೇರೆಗೆ ಪಲ್ಸರ್ ಸುನಿ ಹಾಗೂ ಕೆಲವರು 2017 ರ ಫೆಬ್ರವರಿಯಲ್ಲಿ ಕೊಚ್ಚಿಯ ಬಳಿ ಚಿತ್ರೀಕರಣ ಮುಗಿಸಿ ಮನೆಗೆ ಹೋಗುತ್ತಿದ್ದ ನಟಿಯ ಕಾರನ್ನು ಹಿಂಬಾಲಿಸಿ ಆಕೆಯನ್ನು ತಮ್ಮ ಕಾರಿಗೆ ಎಳೆದುಕೊಂಡು ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು. ಅದನ್ನು ವಿಡಿಯೋ ಸಹ ಮಾಡಿದ್ದರು. ಆ ವಿಡಿಯೋವನ್ನು ಅವರು ನಟ ದಿಲೀಪ್‌ಗೆ ತಲುಪಿಸಿದ್ದರು ಎಂಬ ಆರೋಪ ಇದೆ. ಆದರೆ ಈ ಆರೋಪ ಇನ್ನೂ ಸಾಬೀತಾಗಿಲ್ಲ. ವಿಡಿಯೋಕ್ಕಾಗಿ ಕೊಚ್ಚಿ ಪೊಲೀಸರು ಕೆಲವು ದಿನಗಳ ಹಿಂದೆಯಷ್ಟೆ ದಿಲೀಪ್ ಮನೆಯ ಹುಡುಕಾಟ ನಡೆಸಿದರು.

ಬಾಲಚಂದ್ರ ಕುಮಾರ್ ಸಾಕ್ಷಿ

ಬಾಲಚಂದ್ರ ಕುಮಾರ್ ಸಾಕ್ಷಿ

ಕೆಲವು ದಿನಗಳ ಹಿಂದೆ ಸಿನಿಮಾ ನಿರ್ದೇಶಕ ಬಾಲಚಂದ್ರ ಕುಮಾರ್, ತಮಗೆ ನಟಿಯ ಅತ್ಯಾಚಾರ ವಿಷಯ ಮೊದಲೇ ಗೊತ್ತಿತ್ತೆಂದು, ದಿಲೀಪ್‌, ಪಲ್ಸರ್ ಸುನಿಗೆ ನಟಿಗೆ ತೊಂದರೆ ಕೊಡೆಂದು ಸೂಚಿಸಿದ್ದಾಗಿ ಹೇಳಿದ್ದ ಎಂದಿದ್ದಾರೆ. ದಿಲೀಪ್ ಪತ್ನಿಯ ಸಂಸ್ಥೆಯಲ್ಲಿ ತಾವು ಪಲ್ಸರ್ ಸುನಿಯನ್ನು ನೋಡಿದ್ದು, ದಿಲೀಪ್‌ ಬಳಿ ಆ ಘಟನೆಯ ವಿಡಿಯೋ ಇದ್ದುದನ್ನು ತಾನು ನೋಡಿದ್ದಾಗಿಯೂ ಬಾಲಚಂದ್ರ ಕುಮಾರ್ ಹೇಳಿದ್ದರು. ಕೆಲವು ಆಡಿಯೋ ದಾಖಲೆಗಳನ್ನು ಸಹ ಬಿಡುಗಡೆ ಮಾಡಿದ್ದರು. ಬಾಲಚಂದ್ರ ಹೇಳಿಕೆಯ ಮೇರೆಗೆ ಪೊಲೀಸರು ದಿಲೀಪ್ ಮನೆಯ ಹುಡುಕಾಟ ನಡೆಸಿದ್ದರು. ಬಾಲಚಂದ್ರ ಕುಮಾರ್ ಹೇಳಿಕೆ ನೀಡಿದ ಬಳಿಕ ನಟ ದಿಲೀಪ್ ಹೈಕೋರ್ಟ್‌ನಲ್ಲಿ ಬಾಲಚಂದ್ರ ವಿರುದ್ಧ ಸುಲಿಗೆ, ಬೆದರಿಕೆ ಪ್ರಕರಣ ದಾಖಲಿಸಿದ್ದಾರೆ.

ಪೊಲೀಸರನ್ನೇ ಕೊಲ್ಲಲು ಸಂಚು!

ಪೊಲೀಸರನ್ನೇ ಕೊಲ್ಲಲು ಸಂಚು!

ಇದರ ಜೊತೆಗೆ ನಟ ದಿಲೀಪ್‌ ವಿರುದ್ಧ ಪೊಲೀಸರು ಮತ್ತೊಂದು ಪ್ರಕರಣ ದಾಖಲಿಸಿದ್ದಾರೆ. ಈ ಪ್ರಕರಣದ ತನಿಖೆ ನಡೆಸುತ್ತಿದ್ದ ಪೊಲೀಸ್ ಅಧಿಕಾರಿಗಳನ್ನು ಕೊಲ್ಲಲು ದಿಲೀಪ್ ಸಂಚು ರೂಪಿಸಿದ್ದನೆಂಬ ಪ್ರಕರಣವನ್ನು ಪೊಲೀಸರು ದಾಖಲಿಸಿದ್ದಾರೆ. ತಮ್ಮನ್ನು ಬಂಧಿಸಿದ ಪೊಲೀಸ್ ಅಧಿಕಾರಿಯ ಕೈ ಕತ್ತರಿಸುವುದಾಗಿ ದಿಲೀಪ್ ಬೆದರಿಕೆ ಹಾಕಿದ್ದ ಎಂದು ಪೊಲೀಸರು ದೂರಿನಲ್ಲಿ ಉಲ್ಲೇಖಿಸಿದ್ದಾರೆ. 1992ರಿಂದಲೂ ಸಿನಿಮಾಗಳಲ್ಲಿ ನಟಿಸುತ್ತಿರುವ ದಿಲೀಪ್ ಹಲವು ಸಿನಿಮಾಗಳಲ್ಲಿ ನಾಯಕ ನಟನಾಗಿ ನಟಿಸಿದ್ದಾರೆ. ಇನ್ನು ಸಂತ್ರಸ್ತ ನಟಿಯು ಮಲಯಾಳಂ ಚಿತ್ರರಂಗದ ಸ್ಟಾರ್ ನಟಿಯಾಗಿದ್ದು, ಕನ್ನಡದ ಕೆಲವು ಜನಪ್ರಿಯ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಪುನೀತ್ ರಾಜ್‌ಕುಮಾರ್, ಶಿವರಾಜ್ ಕುಮಾರ್, ಸುದೀಪ್, ಗಣೇಶ್ ಇನ್ನೂ ಕೆಲವು ನಟರೊಡನೆ ನಾಯಕಿಯಾಗಿ ತೆರೆ ಹಂಚಿಕೊಂಡಿದ್ದಾರೆ.

More from Filmibeat

English summary
Malayalam actor Dileep Case: Main Accused Puslar Suni will tell everything to court soon. Pulsar Suni's mother Sobana said his son will tell about Dileep to police.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X