ದೃಶ್ಯಂ-3: ಮೋಹನ್ ಲಾಲ್ ಜೊತೆ ಮತ್ತೊಬ್ಬ ಸೂಪರ್ ಸ್ಟಾರ್ ಎಂಟ್ರಿ?
ದೃಶ್ಯಂ 2 ಸಿನಿಮಾ ಫೆಬ್ರವರಿ ತಿಂಗಳಲ್ಲಿ ತೆರೆಗೆ ಬಂದಿತ್ತು. ಚಿತ್ರಮಂದಿರಗಳು ಮುಚ್ಚಿದ್ದರಿಂದ ಒಟಿಟಿಯಲ್ಲಿ ಬಿಡುಗಡೆಯಾಗಿದ್ದ ಈ ಸಿನಿಮಾ ದೊಡ್ಡ ಯಶಸ್ಸು ಕಂಡಿದೆ. ಮೊದಲ ಚಿತ್ರದಂತೆ ಎರಡನೇ ಸಿನಿಮಾವನ್ನು ಪ್ರೇಕ್ಷಕರು ಖುಷಿಯಿಂದ ಸ್ವೀಕರಿಸಿದರು.
ದೃಶ್ಯಂ ಸರಣಿಯಿಂದ ಗೆಲುವು ಕಾಣ್ತಿರುವ ನಿರ್ದೇಶಕ ಜಿತು ಜೋಸೆಫ್ ಈಗ ಮೂರನೇ ಚಿತ್ರದ ತಯಾರಿಯಲ್ಲಿದ್ದಾರೆ ಎಂಬ ಮಾತಿದೆ. ಈ ಕುರಿತು ಟಿವಿ ಸಂದರ್ಶನವೊಂದರಲ್ಲಿ ನಿರ್ದೇಶಕ ಜಿತು ಜೋಸೆಫ್ ಖಚಿತಪಡಿಸಿದ್ದಾರೆ. ಮೂರನೇ ಪ್ರಾಜೆಕ್ಟ್‌ನ ವಿಶೇಷ ಏನಪ್ಪಾ ಅಂದ್ರೆ ಮೋಹನ್ ಲಾಲ್ ಜೊತೆ ಮತ್ತೊಬ್ಬ ಸೂಪರ್ ಸ್ಟಾರ್ ನಟನನ್ನು ಕರೆತರುವ ಚಿಂತನೆ ನಡೆದಿದೆ ಎಂಬ ಹೊಸ ಸುದ್ದಿ ಚರ್ಚೆಯಲ್ಲಿದೆ. ಮುಂದೆ ಓದಿ....

ಕಥೆ, ಕ್ಲೈಮ್ಯಾಕ್ಸ್ ಪ್ಲಾನ್ ಆಗಿದೆ
ದೃಶ್ಯಂ 3 ಚಿತ್ರಕ್ಕಾಗಿ ಸ್ಟೋರಿ ಲೈನ್ ಹಾಗೂ ಕ್ಲೈಮ್ಯಾಕ್ಸ್ ಈಗಾಗಲೇ ತಲೆಯಲ್ಲಿದೆ ಎಂದು ಜಿತು ಜೋಸೆಫ್ ತಿಳಿಸಿದ್ದಾರೆ. ಈ ಸಂಬಂಧ ಮೋಹನ್ ಲಾಲ್ ಜೊತೆಯೂ ಮಾತುಕತೆ ಆಗಿದ್ದು, ಸದ್ಯಕ್ಕೆ ಈ ಪ್ರಾಜೆಕ್ಟ್ ಬಗ್ಗೆ ಪಾಸಿಟಿವ್ ಆಗಿದ್ದಾರೆ ಎಂದು ತಿಳಿದು ಬಂದಿದೆ. ಆದರೆ, ಶೀಘ್ರದಲ್ಲಂತೂ ಸಾಧ್ಯವಿಲ್ಲ ಎಂದು ಸಹ ಜಿತು ಜೋಸೆಫ್ ಮಾಹಿತಿ ನೀಡಿದ್ದಾರೆ.

ಮೋಹನ್ ಲಾಲ್ ಜೊತೆ ಸೂಪರ್ ಸ್ಟಾರ್ ಎಂಟ್ರಿ?
ಈ ನಡುವೆ ದೃಶ್ಯಂ 3 ಸಿನಿಮಾದಲ್ಲಿ ಮೋಹನ್ ಲಾಲ್ ಜೊತೆ ಮಮ್ಮುಟ್ಟಿ ಸಹ ಇರಲಿದ್ದಾರೆ ಎನ್ನುವುದು ಮಲಯಾಳಂ ಪ್ರೇಕ್ಷಕರ ಕುತೂಹಲ ಹೆಚ್ಚಿಸಿದೆ. ಬಹಳ ವರ್ಷದ ನಂತರ ಇಬ್ಬರು ಸೂಪರ್ ಸ್ಟಾರ್‌ಗಳು ತೆರೆಹಂಚಿಕೊಳ್ಳುವುದನ್ನು ನೋಡಬಹುದು ಎಂದು ಥ್ರಿಲ್ ಆಗಿದ್ದಾರೆ. ದೃಶ್ಯಂ ಚಿತ್ರದಲ್ಲಿ ಮಮ್ಮುಟ್ಟಿ ಸಿಬಿಐ ಅಧಿಕಾರಿ ಪಾತ್ರ ನಿರ್ವಹಿಸಬಹುದು ಎಂದು ಹೇಳಲಾಗುತ್ತಿದೆ.

ಮಮ್ಮುಟ್ಟಿ ಬಗ್ಗೆ ನಿರ್ದೇಶಕ ಹೇಳಿದ್ದೇನು?
ದೃಶ್ಯಂ 3 ಚಿತ್ರದಲ್ಲಿ ಮಮ್ಮುಟ್ಟಿ ನಟಿಸಲಿದ್ದಾರೆ ಎಂಬ ವಿಚಾರಕ್ಕೆ ಸ್ಪಷ್ಟನೆ ನೀಡಿರುವ ನಿರ್ದೇಶಕ ಜಿತು ಜೋಸೆಫ್ ''ಇದು ಬರಿ ವದಂತಿ ಅಷ್ಟೇ, ದೃಶ್ಯಂ 3 ಬಗ್ಗೆ ಇಷ್ಟು ಬೇಗ ಮಾತನಾಡುವುದು ಕಷ್ಟ. ಸದ್ಯಕ್ಕೆ ಕ್ಲೈಮ್ಯಾಕ್ಸ್ ಮಾತ್ರ ಮನಸ್ಸಿನಲ್ಲಿದೆ. ಕಥಾಹಂದರ ಮೇಲೆ ಕೆಲಸ ಮಾಡಬೇಕು. ಮಮ್ಮುಟ್ಟಿ ಈ ಚಿತ್ರದಲ್ಲಿ ಇಲ್ಲ'' ಎಂದು ನಿರಾಕರಿಸಿದರು.
Recommended Video

ಮೂರು ವರ್ಷದ ಬಳಿಕ ದೃಶ್ಯಂ 3
'ದೃಶ್ಯಂ 3 ಬರುವುದು ಖಚಿತ. ಆದರೆ, ಅದಕ್ಕೆ ಸಮಯ ಬೇಕು. ದೃಶ್ಯಂ ತಂಡದಲ್ಲಿ ಕೆಲಸ ಮಾಡಿದ ತಾಂತ್ರಿಕ ವರ್ಗ ಈಗ ಬೇರೆ ಬೇರೆ ಪ್ರಾಜೆಕ್ಟ್‌ಗಳಲ್ಲಿ ತೊಡಗಿಕೊಂಡಿದ್ದಾರೆ. ಸ್ಕ್ರಿಪ್ಟ್ ಮೇಲೆ ಕೆಲಸ ಆರಂಭಿಸಬೇಕು' ಎಂದು ಜಿತು ಜೋಸೆಫ್ ಮಾಹಿತಿ ನೀಡಿದ್ದಾರೆ. ಈ ಮೂಲಕ ದೃಶ್ಯಂ ಸೀಕ್ವೆಲ್ ಬಗ್ಗೆ ಸದ್ಯಕ್ಕೆ ಯಾವುದೇ ನಿರೀಕ್ಷೆ ಬೇಡ.


Click it and Unblock the Notifications











