twitter
    For Quick Alerts
    ALLOW NOTIFICATIONS  
    For Daily Alerts

    'ದೃಶ್ಯಂ 2' ಸಿನಿಮಾಕ್ಕೆ ಆದ ಖರ್ಚೆಷ್ಟು, ಗಳಿಸಿದ ಲಾಭ ಎಷ್ಟು?

    |

    ಮೋಹನ್‌ಲಾಲ್ ನಟನೆಯ ಮಲಯಾಳಂ ಸಿನಿಮಾ 'ದೃಶ್ಯಂ 2' ಕೆಲವು ದಿನಗಳ ಹಿಂದೆ ಫೆಬ್ರವರಿ 19 ರಂದು ಅಮೆಜಾನ್ ಪ್ರೈಂ ನಲ್ಲಿ ಬಿಡುಗಡೆ ಆಗಿ ಭರ್ಜರಿ ಹಿಟ್ ಆಗಿದೆ.

    ಮೊದಲ 'ದೃಶ್ಯಂ' ಸಿನಿಮಾ ಬಿಡುಗಡೆ ಆಗಿ ಬರೋಬ್ಬರಿ ಏಳು ವರ್ಷಗಳ ನಂತರ 'ದೃಶ್ಯಂ 2' ಬಿಡುಗಡೆ ಆಗಿದ್ದು, ಮೊದಲ ಸಿನಿಮಾದಂತೆಯೇ ಈ ಸಿನಿಮಾ ಸಹ ಸಖತ್ ಹಿಟ್ ಆಗಿದೆ. 'ದೃಶ್ಯಂ 2 ' ಸಿನಿಮಾ ಚಿತ್ರಮಂದಿರದಲ್ಲಿ ಬಿಡುಗಡೆ ಆಗಿಲ್ಲ, ಆದರೂ ದೊಡ್ಡ ಮೊತ್ತದ ಲಾಭವನ್ನೇ ಗಳಿಸಿದೆ.

    ಲಾಕ್‌ಡೌನ್ ಅವಧಿಯಲ್ಲಿ ಸಿನಿಮಾದ ಚಿತ್ರಕತೆ ರಚಿಸಿದ ನಿರ್ದೇಶಕ ಜೀತು ಜೋಸೆಫ್, ಲಾಕ್‌ಡೌನ್ ಕಳೆದ ಬಳಿಕ ಒಂದು ತಿಂಗಳ ಮೇಲೆ ಕೆಲವೇ ದಿನಗಳಲ್ಲಿ ಸಿನಿಮಾದ ಚಿತ್ರೀಕರಣ ಮುಗಿಸಿದರು. ಈ ಸಿನಿಮಾಕ್ಕೆ ಖರ್ಚಾದ ವೆಚ್ಚವೆಷ್ಟು, ಸಿನಿಮಾ ಗಳಿಸಿದ ಲಾಭವೆಷ್ಟು ಎಂಬ ಮಾಹಿತಿ ಇಲ್ಲಿದೆ.

    'ದೃಶ್ಯಂ 2' ಕಡಿಮೆ ಬಜೆಟ್‌ನಲ್ಲಿ ನಿರ್ಮಾಣವಾದ ಸಿನಿಮಾ

    'ದೃಶ್ಯಂ 2' ಕಡಿಮೆ ಬಜೆಟ್‌ನಲ್ಲಿ ನಿರ್ಮಾಣವಾದ ಸಿನಿಮಾ

    'ದೃಶ್ಯಂ 2' ಕಡಿಮೆ ಬಜೆಟ್‌ನಲ್ಲಿಯೇ ನಿರ್ಮಾಣವಾದ ಸಿನಿಮಾ. ಈ ಸಿನಿಮಾದ ಒಟ್ಟು ಬಂಡವಾಳ 20 ಕೋಟಿ ರೂಪಾಯಿ. ಇದರಲ್ಲಿ ನಟ-ನಟಿ, ತಂತ್ರಜ್ಞರ ಸಂಭಾವನೆಯೂ ಸೇರಿದೆ. ಸಿನಿಮಾಕ್ಕೆ ಬಂಡವಾಳ ಹೂಡಿರುವುದು ನಿರ್ಮಾಪಕ ಆಂಟನಿ ಪೆರಂಬವೂರ್. ಇವರು ಒಂದು ಕಾಲದಲ್ಲಿ ಮೋಹನ್‌ಲಾಲ್ ಅವರ ಕಾರು ಚಾಲಕರಾಗಿದ್ದರು.

    ದೊಡ್ಡ ಮೊತ್ತಕ್ಕೆ ಖರೀದಿಸಿದ ಅಮೆಜಾನ್ ಪ್ರೈಂ

    ದೊಡ್ಡ ಮೊತ್ತಕ್ಕೆ ಖರೀದಿಸಿದ ಅಮೆಜಾನ್ ಪ್ರೈಂ

    20 ಕೋಟಿ ಬಜೆಟ್ ಅಲ್ಲಿ ನಿರ್ಮಾಣವಾದ ಸಿನಿಮಾವನ್ನು 25 ಕೋಟಿ ಹಣ ಕೊಟ್ಟು ಖರೀದಿಸಿತು ಅಮೆಜಾನ್ ಪ್ರೈಂ. ಮೊದಲ 'ದೃಶ್ಯಂ' ಸೂಪರ್-ಡೂಪರ್ ಹಿಟ್ ಆಗಿದ್ದು ಹಾಗೂ ಮೊದಲ ಸಿನಿಮಾ ಮಾಡಿದ್ದ ತಂಡವೇ ಎರಡನೇ ಸಿನಿಮಾದಲ್ಲಿ ಇದ್ದ ಕಾರಣ ಸಿನಿಮಾದ ಮೇಲೆ ನಿರೀಕ್ಷೆಗಳು ಸಾಕಷ್ಟಿತ್ತು. 'ದೃಶ್ಯಂ' ಸಿನಿಮಾಕ್ಕೆ ಪ್ರತ್ಯೇಕ ಅಭಿಮಾನಿ ವರ್ಗವೇ ಇದ್ದ ಕಾರಣ ಸಿನಿಮಾವನ್ನು ದೊಡ್ಡ ಮೊತ್ತಕ್ಕೆ ಖರೀದಿಸಿತು ಅಮೆಜಾನ್ ಪ್ರೈಂ.

    ಸ್ಯಾಟಲೈಟ್ ಹಕ್ಕು ದೊಡ್ಡ ಮೊತ್ತಕ್ಕೆ ಮಾರಾಟ

    ಸ್ಯಾಟಲೈಟ್ ಹಕ್ಕು ದೊಡ್ಡ ಮೊತ್ತಕ್ಕೆ ಮಾರಾಟ

    ಹಾಗೆಂದು ಕೇವಲ ಐದು ಕೋಟಿ ಅಷ್ಟೆಯೇ ಈ ಸಿನಿಮಾ ಗಳಿಸಿದ ಲಾಭ ಎಂದುಕೊಳ್ಳುವಂತಿಲ್ಲ. ಏಕೆಂದರೆ 'ದೃಶ್ಯಂ 2' ಸಿನಿಮಾದ ಸ್ಯಾಟಲೈಟ್ ಹಕ್ಕು ಸೇಲ್ ಆಗಿರುವುದು ಬರೋಬ್ಬರಿ 15 ಕೋಟಿಗೆ. ಏಷ್ಯನ್ ನೆಟ್‌ವರ್ಕ್ ಸಂಸ್ಥೆಯು ಸಿನಿಮಾದ ಟಿವಿ ಪ್ರಸಾರ ಹಕ್ಕನ್ನು ಖರೀದಿಸಿದೆ.

    40 ಕೋಟಿ ಲಾಭ ಆಗಿದೆ. ಹಣ ಬರುವುದು ಇನ್ನೂ ಬಾಕಿ ಇದೆ

    40 ಕೋಟಿ ಲಾಭ ಆಗಿದೆ. ಹಣ ಬರುವುದು ಇನ್ನೂ ಬಾಕಿ ಇದೆ

    'ದೃಶ್ಯಂ 2' ಸಿನಿಮಾದ ಲಾಭ ಈವರೆಗೆ 40 ಕೋಟಿ. ಅಂದರೆ ಹಾಕಿದ್ದ ಬಂಡವಾಳದ ಎರಡರಷ್ಟು ಲಾಭ. ಆದರೆ ಲಾಭದ ಲೆಕ್ಕ ಇಲ್ಲಿಗೇ ನಿಲ್ಲುವುದಿಲ್ಲ. ಸಿನಿಮಾದ ರೀಮೇಕ್ ಹಕ್ಕು ಮಾರಾಟದಿಂದ ಬರುವ ಲಾಭ ಇನ್ನೂ ಬಾಕಿ ಇದೆ. ಈಗಾಗಲೇ ತೆಲುಗಿಗೆ ರೀಮೇಕ್ ಹಕ್ಕು ಮಾರಾಟವಾಗಿದೆ. ಬೇರೆ ಭಾಷೆಗಳಿಗೂ ರೀಮೇಕ್ ಹಕ್ಕು ಮಾರಾಟವಾಗುವ ಸಾಧ್ಯತೆ ಇದೆ.

    Recommended Video

    ದೃಶ್ಯಂ 2 ಸಿನಿಮಾ ಮೆಚ್ಚಿಕೊಂಡ ಕ್ರಿಕೆಟರ್ R ಅಶ್ವಿನ್ | Filmibeat Kannada
    ಹಲವು ಭಾಷೆಗಳಿಗೆ ರೀಮೇಕ್ ಆಗಿದ್ದ ಸಿನಿಮಾ

    ಹಲವು ಭಾಷೆಗಳಿಗೆ ರೀಮೇಕ್ ಆಗಿದ್ದ ಸಿನಿಮಾ

    2013 ರಲ್ಲಿ ಬಿಡುಗಡೆ ಆಗಿದ್ದ 'ದೃಶ್ಯಂ' ಸಿನಿಮಾವು ಕನ್ನಡ, ತೆಲುಗು, ತಮಿಳು, ಹಿಂದಿ, ಸಿಂಹಳಿ, ಚೈನೀಸ್ ಭಾಷೆಗಳಿಗೆ ರೀಮೇಕ್ ಆಗಿ ದಾಖಲೆ ಬರೆದಿತ್ತು. ಬಿಡುಗಡೆ ಆದ ಎಲ್ಲ ಭಾಷೆಗಳಲ್ಲಿಯೂ ಸಿನಿಮಾ ಹಿಟ್ ಆಗಿತ್ತು. ಇದೀಗ 'ದೃಶ್ಯಂ 2' ಸಿನಿಮಾ ತೆಲುಗು ಭಾಷೆಗೆ ರೀಮೇಕ್ ಆಗುತ್ತಿರುವುದು ಖಚಿತಗೊಂಡಿದೆ. ಹಿಂದಿಗೂ ರೀಮೇಕ್ ಆಗಲಿದೆ ಎನ್ನಲಾಗುತ್ತಿದೆ. ಕನ್ನಡ ರೀಮೇಕ್‌ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ದೊರೆತಿಲ್ಲ.

    English summary
    Mohan Lal-Meena starer Malayalam movie Drishyam 2 movie total budget final collection details.
    Tuesday, March 2, 2021, 8:08
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X