'ದೃಶ್ಯಂ-2' ಚಿತ್ರದ ನಟ ರಘು ನಿಧನ
ಮಲಯಾಳಂನ ಸೂಪರ್ ಹಿಟ್ 'ದೃಶ್ಯಂ-2' ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ನಟ ರಘು ಕೇರಳದ ಕೊಚ್ಚಿಯ ಖಾಸಗಿ ಆಸ್ಪತ್ರೆಯಲ್ಲಿ ನಿನ್ನೆ (ಮೇ 4) ನಿಧನ ಹೊಂದಿದ್ದಾರೆ.
ಪಾರ್ಶ್ವವಾಯುಗೆ ತುತ್ತಾಗಿದ್ದ 60 ವರ್ಷದ ನಟ ರಘು ಅವರನ್ನು ಕಳೆದ ಕೆಲವು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿಧನ ಹೊಂದಿದ್ದಾರೆ ಎಂದು ವರದಿಯಾಗಿದೆ. ಹಿರಿಯ ನಟ ರಘು ನಿಧನಕ್ಕೆ ಮಲಯಾಳಂ ಖ್ಯಾತ ನಟರು ಸಂತಾಪ ಸೂಚಿಸಿದ್ದಾರೆ.
ಮೋಹನ್ ಲಾಲ್, ಮಮ್ಮುಟ್ಟಿ, ಪೃಥ್ವಿರಾಜ್ ಸುಕುಮಾರನ್ ಸೇರಿದಂತೆ ಅನೇಕರು ಸಂತಾಪ ಸೂಚಿಸಿದ್ದಾರೆ. ಅಭಿಮಾನಿಗಳು ಮತ್ತು ನೆಟ್ಟಿಗರು ಸಾಮಾಜಿಕ ಜಾಲತಾಣದ ಮೂಲಕ ಸಂತಾಪ ಸೂಚಿಸುತ್ತಿದ್ದಾರೆ.

1980ರಲ್ಲಿ ಬಣ್ಣದ ಲೋಕಕ್ಕೆ ಕಾಲಿಟ್ಟ ರಘು ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕಬ್ಜನಟನಾಗಿ ರಘು ಸಖತ್ ಖ್ಯಾತಿ ಗಳಿಸಿದ್ದರು. ಮಮ್ಮುಟ್ಟಿ ಮತ್ತು ಅಂಜಲಿ ಜೊತೆ ತೆರೆಹಂಚಿಕೊಂಡಿದ್ದ ರಘು ಮೇಳ ಪಾತ್ರದ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಬಳಿಕ ಮೇಳ ರಘು ಎಂದೇ ಖ್ಯಾತಿಗಳಿಸಿದ್ದಾರೆ.
ಕಮಲ್ ಹಾಸನ್ ನಟನೆಯ ಅಪರ್ವ ಸಾಗೋಧರರ್ಗಲ್ ಸೇರಿದಂತೆ ಇತ್ತೀಚಿಗೆ ಬಿಡುಗಡೆಯಾದ ದೃಶ್ಯಂ-2 ಸೇರಿದಂತೆ 30ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸಿನಿಮಾ ಜೊತೆಗೆ ರಂಗಭೂಮಿಯಲ್ಲೂ ರಘು ಸಕ್ರೀಯರಾಗಿದ್ದರು.


Click it and Unblock the Notifications











