twitter
    For Quick Alerts
    ALLOW NOTIFICATIONS  
    For Daily Alerts

    2021ರ ಆರಂಭದಲ್ಲೇ 'ದೃಶ್ಯಂ-2' ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್

    |

    2013ರಲ್ಲಿ ತೆರೆಕಂಡ ಮಲಯಾಳಂ ಹಿಟ್ ಸಿನಿಮಾ ದೃಶ್ಯಂ ಚಿತ್ರದ ಎರಡನೇ ಭಾಗ ಭಾರಿ ನಿರೀಕ್ಷೆ ಮೂಡಿಸಿದೆ. ಲಾಕ್‌ಡೌನ್ ಮುಗಿ ಬಳಿಕ ಮೊದಲು ಶೂಟಿಂಗ್ ಆರಂಭಿಸಿದ್ದ ಈ ಚಿತ್ರ ಕಳೆದ ವಾರ ಚಿತ್ರೀಕರಣ ಮುಕ್ತಾಯ ಮಾಡಿದೆ.

    ಪ್ರಸ್ತುತ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ತೊಡಗಿಕೊಂಡಿರುವ ಚಿತ್ರತಂಡ ರಿಲೀಸ್ ಪ್ಲಾನ್ ಮಾಡುತ್ತಿದೆ. ಸದ್ಯದ ಪರಿಸ್ಥಿತಿ ಗಮನಿಸಿದರೆ ಒಟಿಟಿಯಲ್ಲಿ ಈ ಸಿನಿಮಾ ತೆರೆಕಾಣಬಹುದು ಎಂದು ಹೇಳಲಾಗಿತ್ತು. ಆದ್ರೆ, ಒಟಿಟಿಯಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಆಸಕ್ತಿ ಹೊಂದಿಲ್ಲ. ಹಾಗಾಗಿ, ಚಿತ್ರಮಂದಿರದಲ್ಲೇ ಬರಲು ಸಿದ್ಧವಾಗುತ್ತಿದ್ದಾರೆ.

    ದೃಶ್ಯಂ-2 ಚಿತ್ರದ ಕುರಿತು ಇಂಟರೆಸ್ಟಿಂಗ್ ಮಾಹಿತಿ ಇಲ್ಲಿದೆದೃಶ್ಯಂ-2 ಚಿತ್ರದ ಕುರಿತು ಇಂಟರೆಸ್ಟಿಂಗ್ ಮಾಹಿತಿ ಇಲ್ಲಿದೆ

    ಎಲ್ಲ ಅಂದುಕೊಂಡಂತೆ ಆದರೆ 2021ರ ಆರಂಭದಲ್ಲೇ ದೃಶ್ಯಂ 2 ಸಿನಿಮಾ ಚಿತ್ರಮಂದಿರಕ್ಕೆ ಬರಬಹುದು ಎನ್ನಲಾಗಿದೆ. ಈ ಮೊದಲು ಆನ್‌ಲೈನ್‌ನಲ್ಲಿ ಸಿನಿಮಾ ಬಿಡುಗಡೆ ಮಾಡಲು ಚಿಂತಿಸಿದ್ದರು. ನಂತರ ಚಿತ್ರಮಂದಿರ ತೆರೆಯಲು ಕೇಂದ್ರ ಸರ್ಕಾರ ಅನುಮತಿ ನೀಡಿತ್ತು. ಈಗ ನಿಧಾನವಾಗಿ ಪರಿಸ್ಥಿತಿ ಮೊದಲಿನಂತೆ ಬರುತ್ತಿದೆ.

    Drishyam 2 is all set to release in 2021 first quarter

    ಮೂಲಗಳ ಪ್ರಕಾರ ದೃಶ್ಯಂ ಮುಂದುವರಿದ ಭಾಗ ಥ್ರಿಲ್ಲಿಂಗ್ ಆಗಿರಲಿದೆ ಎನ್ನಲಾಗಿತ್ತು. ಈ ಬಗ್ಗೆ ನಿರ್ದೇಶಕ ಜಿತು ಜೋಸೆಫ್ ಸ್ಪಷ್ಟನೆ ನೀಡಿದ್ದು, ಇದು ಕೌಟುಂಬಿಕ ಭಾವನೆಗಳ ಆಧಾರಿತವಾಗಿ ತಯಾರಾಗಲಿದೆ. ಇದು ಥ್ರಿಲ್ಲರ್ ಅಲ್ಲ ಎಂದಿದ್ದಾರೆ.

    ಅಂದ್ರೆ, ದೃಶ್ಯಂ ಚಿತ್ರದಲ್ಲಿ ಅಪರಾಧದಿಂದ ತನ್ನ ಕುಟುಂಬವನ್ನು ರಕ್ಷಿಸಿಕೊಂಡ ನಾಯಕ, ಅದಾದ ಬಳಿಕ ಕುಟುಂಬವನ್ನು ಹೇಗೆ ಕಾಪಾಡಿಕೊಂಡು ಮುಂದುವರಿಯುತ್ತಾನೆ ಎಂಬುದನ್ನು ಭಾವನಾತ್ಮಕ ಅಂಶದ ಮೂಲಕ ಪ್ರಸ್ತುತ ಪಡಿಸಿದ್ದಾರೆ ನಿರ್ದೇಶಕರು.

    Recommended Video

    ತಮಿಳು ಸ್ಟಾರ್ ಡೈರೆಕ್ಟರ್ ಸಿನಿಮಾ ಮೂಲಕ ಮತ್ತೆ ಒಂದಾದ ಶಿವಣ್ಣ, ಡಾಲಿ | Filmibeat Kannada

    ಇನ್ನುಳಿದಂತೆ ಈ ಹಿಂದಿನ ಚಿತ್ರದಲ್ಲಿ ಪಾತ್ರಗಳನ್ನೇ ಮುಂದುವರಿದ ಭಾಗದಲ್ಲೂ ಉಳಿಸಿಕೊಳ್ಳಲಾಗಿದೆ. ಮೋಹನ್ ಲಾಲ್, ಮೀನಾ, ಹಾಗೂ ಮಕ್ಕಳ ಪಾತ್ರದಲ್ಲಿ ಎಸ್ತರ್ ಅನಿಲ್ ಮತ್ತು ಅನ್ಸಿಬಾ ಹಸನ್ ಬಣ್ಣ ಹಚ್ಚಲಿದ್ದಾರೆ.

    English summary
    Malayalam superstar Mohanlal starrer Drishyam 2 is all set to release in 2021 first quarter.
    Thursday, November 19, 2020, 10:25
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X