'ದೃಶ್ಯಂ 2' ಟೀಸರ್: ಬಯಲಾಗದ ಕೊಲೆಯ ರಹಸ್ಯಗಳು ಇನ್ನೂ ಇವೆ
ಬಹುನಿರೀಕ್ಷಿತ 'ದೃಶ್ಯಂ 2' ಮಲಯಾಳಂ ಸಿನಿಮಾದ ಟೀಸರ್ ಇಂದು ಬಿಡುಗಡೆ ಆಗಿದೆ. ಏಳು ವರ್ಷಗಳ ಹಿಂದೆ ಬಿಡುಗಡೆ ಆಗಿ ಸೂಪರ್ ಡೂಪರ್ ಹಿಟ್ ಆಗಿದ್ದ 'ದೃಶ್ಯಂ' ಸಿನಿಮಾದ ಮುಂದುವರೆದ ಭಾಗವೇ 'ದೃಶ್ಯಂ 2'
ದೃಶ್ಯಂ ಸಿನಿಮಾದಲ್ಲಿ ನಟಿಸಿದ್ದ ಬಹತೇಕ ಅದೇ ಪಾತ್ರವರ್ಗ ದೃಶ್ಯಂ 2 ಸಿನಿಮಾದಲ್ಲಿಯೂ ಮುಂದುವರೆದಿದೆ. ಪಾತ್ರವರ್ಗ ಮಾತ್ರವಲ್ಲ, ದೃಶ್ಯಂ ನಲ್ಲಿನ ಕೊಲೆಯ ಕತೆಯೇ ದೃಶ್ಯಂ 2 ಸಿನಿಮಾದಲ್ಲಿಯೂ ಮುಂದುವರೆದಿರುವುದು ಟೀಸರ್‌ನಿಂದ ಗೊತ್ತಾಗುತ್ತಿದೆ.
'ದೃಶ್ಯಂ' ಸಿನಿಮಾದಲ್ಲಿ ಆಗಿದ್ದ ಕೊಲೆಯ ಪ್ರಕರಣ ಮತ್ತೆ ರೀ ಓಪನ್ ಆಗುತ್ತಿದೆ ದೃಶ್ಯಂ 2 ನಲ್ಲಿ. ಟೀಸರ್‌ನಲ್ಲಿ ನೀಡಿರುವ ಸುಳಿವಿನಂತೆ, 'ಆ ಸಮಯದಲ್ಲಿ ಹೇಳದೇ ಇದ್ದ ಕೆಲವು ರಹಸ್ಯಗಳಿದ್ದವು, ರಹಸ್ಯಗಳು, ರಹಸ್ಯಗಳಾಗಿ ಉಳಿಯುವುದಿಲ್ಲ' ಎಂದು ಕುತೂಹಲ ಕೆರಳಿಸುವ ಕ್ಯಾಪ್ಷನ್ ನೀಡಲಾಗಿದೆ.

7 ವರ್ಷದ ಹಿಂದೆ ದೃಶ್ಯಂ ಸಿನಿಮಾ ನಿರ್ದೇಶಿಸಿದ್ದ ಜೀತು ಜೋಸೆಫ್ ಅವರೇ ದೃಶ್ಯಂ 2 ಸಿನಿಮಾವನ್ನು ಸಹ ನಿರ್ದೇಶಿಸಿದ್ದಾರೆ. ಸಿನಿಮಾವು ಚಿತ್ರಮಂದಿರದಲ್ಲಿ ಬಿಡುಗಡೆ ಆಗುವ ಬದಲಿಗೆ ಅಮೆಜಾನ್ ಪ್ರೈಂ ನಲ್ಲಿ ಶೀಘ್ರದಲ್ಲಿಯೇ ಬಿಡುಗಡೆ ಆಗಲಿದೆ.
2013 ರಲ್ಲಿ ಬಿಡುಗಡೆ ಆಗಿದ್ದ ದೃಶ್ಯಂ ಸಿನಿಮಾ ಕನ್ನಡ, ತೆಲುಗು, ತಮಿಳು, ಹಿಂದಿ, ಸಿಂಹಳ, ಚೈನೀಸ್ ಭಾಷೆಗಳಿಗೆ ರೀಮೇಕ್ ಆಗಿ ಬಹುತೇಕ ಎಲ್ಲ ಭಾಷೆಗಳಲ್ಲೂ ಹಿಟ್ ಆಗಿತ್ತು. ದೃಶ್ಯಂ 2 ಮೇಲೆ ಸಹ ಭಾರಿ ನಿರೀಕ್ಷೆಯೇ ಪ್ರೇಕ್ಷಕರಿಗೆ ಇದೆ.
Recommended Video
ದೃಶ್ಯಂ ನಲ್ಲಿದ್ದ ಮೋಹನ್‌ಲಾಲ್, ಮೀನಾ, ಅನ್ಸಿಬಾ ಹಾಸನ್, ಎಸ್ತರ್ ಅನಿಲ್, ಆಶಾ ಶರತ್, ಅನಿಲ್ ಸಿದ್ಧಿಕಿ ಇನ್ನೂ ಹಲವರು ದೃಶ್ಯಂ 2 ನಲ್ಲೂ ನಟಿಸಿದ್ದಾರೆ. ದೃಶ್ಯಂ ಸಿನಿಮಾದ ಕೊನೆಯಲ್ಲಿ ನಿರ್ಮಾಣ ಮಾಡಲಾಗುವ ಹೊಸ ಪೊಲೀಸ್ ಠಾಣೆಯಿಂದಲೇ ದೃಶ್ಯಂ 2 ಸಿನಿಮಾ ಪ್ರಾರಂಭವಾಗಲಿದೆ.


Click it and Unblock the Notifications











