For Quick Alerts
  ALLOW NOTIFICATIONS  
  For Daily Alerts

  ದೃಶ್ಯಂ 2 ಬಿಡುಗಡೆ ದಿನಾಂಕ ಪ್ರಕಟ: ಹಳೆ ಕೊಲೆ ಜೊತೆ ಹೊಸ ಕೊಲೆ?

  |

  ಮೋಹನ್‌ಲಾಲ್ ನಟಿಸಿ 2013 ರಲ್ಲಿ ಬಿಡುಗಡೆ ಆಗಿದ್ದ 'ದೃಶ್ಯಂ' ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿತ್ತು. ಸಿನಿಮಾವನ್ನು ಕನ್ನಡ, ಹಿಂದಿ, ತೆಲುಗು, ತಮಿಳು, ಜೊತೆಗೆ ವಿದೇಶಿ ಭಾಷೆಗಳಲ್ಲೂ ಸಹ ರೀಮೇಕ್ ಮಾಡಲಾಗಿತ್ತು.

  ಮರ್ಡರ್ ಮಿಸ್ಟರಿ ಕತೆ ಹೊಂದಿದ್ದ 'ದೃಶ್ಯಂ' ಸಿನಿಮಾ ಈಗ 'ದೃಶ್ಯಂ2' ಆಗಿ ಮರಳಿ ಬಂದಿದೆ. 2013 ರ 'ದೃಶ್ಯಂ' ಸಿನಿಮಾದಲ್ಲಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದ ಅದೇ ನಟರು 'ದೃಶ್ಯಂ 2' ನಲ್ಲಿಯೂ ಮುಂದುವರೆದಿದ್ದಾರೆ. ವಿಶೇಷವೆಂದರೆ ಮೊದಲ ಸಿನಿಮಾದಲ್ಲಿ ಪೊಲೀಸರು ಭೇದಿಸಲು ವಿಫಲವಾದ ಕೊಲೆ ಪ್ರಕರಣದ ಕತೆ ಈ ಸಿನಿಮಾದಲ್ಲಿಯೂ ಮುಂದುವರೆದಿರುವುದು ಟ್ರೇಲರ್‌ನಿಂದ ಗೊತ್ತಾಗುತ್ತಿದೆ.

  'ದೃಶ್ಯಂ 2' ಸಿನಿಮಾ ಅಮೆಜಾನ್ ಪ್ರೈಂ ಒಟಿಟಿಯಲ್ಲಿ ಬಿಡುಗಡೆ ಆಗಲಿದ್ದು, ಇಂದು ಟ್ರೇಲರ್ ಅನ್ನು ಬಿಡುಗಡೆ ಮಾಡಲಾಗಿದೆ.

  ಮೊದಲ 'ದೃಶ್ಯಂ' ನಲ್ಲಿ ಸಾಮಾನ್ಯ ಕೇಬಲ್ ಟಿವಿ ಮಾಲೀಕ ಆಗಿದ್ದ ನಾಯಕ ಜಾರ್ಜ್ ಕುಟ್ಟಿ , ಈಗ ಸಿನಿಮಾ ನಿರ್ಮಾಪಕನಾಗುವ ಕನಸು ಕಾಣುತ್ತಿದ್ದಾನೆ. ಕಾರು ಖರೀದಿಸಿ ಇನ್ನಷ್ಟು ಶ್ರೀಮಂತನಾಗಿದ್ದಾನೆ. ಇಬ್ಬರು ಹೆಣ್ಣುಮುಕ್ಕಳು ಇನ್ನಷ್ಟು ಬೆಳೆದಿದ್ದಾರೆ. ಜಾರ್ಜ್ ಕುಟ್ಟಿಗೆ ಇನ್ನಷ್ಟು ವಯಸ್ಸಾಗಿದೆ ಆದರೆ ಆತನ ಸಮಚಿತ್ತ, ಬುದ್ಧಿವಂತಿಕೆ ಹಾಗೆಯೇ ಇದೆ ಎಂಬುದು ಟ್ರೇಲರ್ ನೋಡಿದರೆ ಗೊತ್ತಾಗುತ್ತಿದೆ.

  ವಿದೇಶದಲ್ಲಿ KGF 2 ಗೆ ಎದುರಾಯ್ತು ಅಡ್ಡಿ | Filmibeat Kannada

  ಒಂದು ಕೊಲೆಯನ್ನು ಮುಚ್ಚಲು ಹೋಗಿ ಮತ್ತೊಂದು ಕೊಲೆಯನ್ನು ಜಾರ್ಜ್ ಕುಟ್ಟಿ ಮಾಡಿದ್ದಾನಾ ಎಂಬ ಅನುಮಾನವೂ ಟ್ರೇಲರ್ ನೋಡಿದವರಿಗೆ ಕಾಡದೇ ಇರದು. ಸಿನಿಮಾವು ಅಮೆಜಾನ್ ಪ್ರೈಂ ನಲ್ಲಿ ಫೆಬ್ರವರಿ 19 ರಂದು ಬಿಡುಗಡೆ ಆಗಲಿದೆ. ಸಿನಿಮಾದಲ್ಲಿ ಮೋಹನ್‌ಲಾಲ್, ಮೀನಾ, ಅನ್ಸಿಬಾ ಹಾಸನ್, ಎಸ್ತರ್ ಅನಿಲ್, ಆಶಾ ಶರತ್ ಇನ್ನೂ ಹಲವರು ನಟಿಸಿದ್ದಾರೆ.

  English summary
  Malayalam movie Drishyam 2 will release on February 19 on Amazon prime. Trailer released today.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X