ಮತ್ತೊಂದು ಥ್ರಿಲ್ಲರ್ ಯಾನಕ್ಕೆ ತಯಾರಾಗಿ: ಬರಲಿದೆ ದೃಶ್ಯಂ 2

ಕುತೂಹಲ ಭರಿತ ಕತೆ, ಅನಿರೀಕ್ಷಿತ ತಿರುವ, ಕುಟುಂಬ ಆದರ್ಶ, ಸಿರಿವಂತರೊಂದಿಗೆ ಸಾಮಾನ್ಯನೊಬ್ಬನ ಯುದ್ಧ ಹೀಗೆ ಹಲವು ಆಯಾಮಗಳನ್ನು ಮುಟ್ಟಿ ಕತೆ ಹೇಳಿದ್ದ ಮಲೆಯಾಳಂ ನ 'ದೃಶ್ಯಂ' ಸಿನಿಮಾ ದೇಶದ ಗಮನವನ್ನು ಸೆಳೆದಿತ್ತು.

Recommended Video

ಗ್ಲ್ಯಾಮರ್ ಲುಕ್ ನಲ್ಲಿ ಜೂನಿಯರ್ ಪುಟ್ಟಗೌರಿ | Saniya | Junior Puttagowri | Then - Now

ಮೋಹನ್‌ಲಾಲ್ ನಟಿಸಿದ್ದ ದೃಶ್ಯಂ ಸಿನಿಮಾ ಮಲೆಯಾಳಂ ನಲ್ಲಿ ಭಾರಿ ಹಿಟ್ ಆಗಿತ್ತು, ಅಷ್ಟು ಮಾತ್ರವೇ ಅಲ್ಲ ಕನ್ನಡ, ತೆಲುಗು, ಹಿಂದಿ ಹೀಗೆ ಹಲವು ಭಾಷೆಗಳಿಗೆ ರೀಮೇಕ್ ಆಗಿ ಎಲ್ಲೆಡೆಯೂ ಹಿಟ್ ಆಯಿತು.

ಥ್ರಿಲ್ಲರ್ ಕತೆಗಳ ಭಾಷ್ಯವನ್ನೇ ಬದಲಾಯಿಸಿದ ದೃಶ್ಯಂ ಸಿನಿಮಾದ ಮುಂದಿನ ಭಾಗಕ್ಕಾಗಿ ಬಹುವಾಗಿ ಒತ್ತಾಯ ಬರುತ್ತಲೇ ಇತ್ತು. ಕೊನೆಗೂ ಈಗ ದೃಶ್ಯಂ ಅಭಿಮಾನಿಗಳ ಆಸೆ ಪೂರೈಸಿದ್ದು, ದೃಶ್ಯಂ ಸಿನಿಮಾದ ಎರಡನೇ ಭಾಗ ಬರುವ ಸುಳಿವು ಸಿಕ್ಕಿದೆ.

ಬರಲಿದೆ ದೃಶ್ಯಂ 2, ಮೋಹನ್‌ಲಾಲ್ ನಾಯಕ

ಬರಲಿದೆ ದೃಶ್ಯಂ 2, ಮೋಹನ್‌ಲಾಲ್ ನಾಯಕ

ಹೌದು, ದೃಶ್ಯಂ 2 ಸಿನಿಮಾ ತಯಾರಾಗುತ್ತಿದ್ದು, ಈ ಬಗ್ಗೆ ನಟ ಮೋಹನ್‌ಲಾಲ್ ಅವರೇ ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ. ಅಷ್ಟೆ ಅಲ್ಲದೆ ಸಿನಿಮಾದ ಟ್ರೇಲರ್ ಅನ್ನು ಸಹ ಬಿಡುಗಡೆ ಮಾಡಿದ್ದಾರೆ.

ಟ್ರೇಲರ್ ಬಿಡುಗಡೆ ಮಾಡಿದ ಮೋಹನ್‌ ಲಾಲ್

ಟ್ರೇಲರ್ ಬಿಡುಗಡೆ ಮಾಡಿದ ಮೋಹನ್‌ ಲಾಲ್

ಇಂದು ಮೋಹನ್ ಲಾಲ್ ಅವರ ಹುಟ್ಟುಹಬ್ಬ. ಇಂದೇ ಮೋಹನ್ ಲಾಲ್ ಅವರು ದೃಶ್ಯಂ 2 ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದ್ದಾರೆ. ಆದರೆ ಈ ಟ್ರೇಲರ್‌ನಲ್ಲಿ ಹೆಚ್ಚಿನ ಮಾಹಿತಿ ಏನೂ ಇಲ್ಲ ಬದಲಿಗೆ ದೃಶ್ಯಂ 2 ಹೆಸರು ಮತ್ತು ತಂತ್ರಜ್ಞರ ಹೆಸರಿದೆ.

ಜೀತು ಜೋಸೆಫ್ ಅವರದ್ದೇ ನಿರ್ದೇಶನ

ಜೀತು ಜೋಸೆಫ್ ಅವರದ್ದೇ ನಿರ್ದೇಶನ

ದೃಶ್ಯಂ ಸಿನಿಮಾವನ್ನು ನಿರ್ದೇಶಿಸಿದ್ದ ಜೀತು ಜೋಸೆಫ್ ಅವರೇ ದೃಶ್ಯಂ 2 ಸಿನಿಮಾವನ್ನೂ ನಿರ್ದೇಶಿಸುತ್ತಿದ್ದಾರೆ. ಈಗಾಗಲೇ ಕತೆ ಸಿದ್ಧಗೊಂಡಿದ್ದು, ಲಾಕ್‌ಡೌನ್ ಅಂತ್ಯವಾದ ಬಳಿಕ ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಲಿದೆ.

ಬಹುತೇಕ ದೃಶ್ಯಂ ತಂಡವನ್ನೇ ಉಳಿಸಿಕೊಳ್ಳಲಾಗಿದೆ

ಬಹುತೇಕ ದೃಶ್ಯಂ ತಂಡವನ್ನೇ ಉಳಿಸಿಕೊಳ್ಳಲಾಗಿದೆ

ದೃಶ್ಯಂ ಸಿನಿಮಾ ನಿರ್ಮಿಸಿದ್ದ ಆಂಥೊಣಿ ಪೆರಂಬವೂರ್ ಅವರೇ ದೃಶ್ಯಂ 2 ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಆಶೀರ್ವಾದ್ ಸಿನಿಮಾಸ್ ಮೂಲಕವೇ ಈ ಸಿನಿಮಾ ಬಿಡುಗಡೆ ಆಗಲಿದೆ. ದೃಶ್ಯಂ 2 ಸಿನಿಮಾ ಬರಲಿದೆ ಎಂಬ ಸುದ್ದಿ ದೃಶ್ಯಂ ಅಭಿಮಾನಿಗಳಿಗೆ ಭಾರಿ ಸಂತಸ ತಂದಿದೆ.

More from Filmibeat

English summary
Malayalam movie Drishyam 2 trailer released by actor Mohanlal today. Drishyam was a huge hit movie. it remade in several languages.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X