Drishyam 3: ಮೋಹನ್‌ಲಾಲ್ VS ಅಜಯ್ ದೇವಗನ್; ಒಂದೇ ದಿನ ಬಿಡುಗಡೆಯಿಲ್ಲ 'ದೃಶ್ಯಂ 3'..ಬಿಗ್ ಸೀಕ್ರೆಟ್ ಔಟ್

'ದೃಶ್ಯಂ' ಫ್ರಾಂಚೈಸಿಯ ಅಭಿಮಾನಿಗಳಿಗೆ ಇದೀಗ ಅನಿರೀಕ್ಷಿತ ಸುದ್ದಿಯೊಂದು ಹೊರಬಿದ್ದಿದೆ. ಬಹುನಿರೀಕ್ಷಿತ 'ದೃಶ್ಯಂ 3' ಸಿನಿಮಾ ರಿಲೀಸ್ ಸ್ಟ್ರಾಟಜಿಯಲ್ಲಿ ಮಹತ್ವದ ಬದಲಾವಣೆಯಾಗಿದೆ. ಈ ಕುರಿತು ಚಿತ್ರ ತಂಡ ಅಧಿಕೃತ ಮಾಹಿತಿ ನೀಡಿದ್ದು, ಬಾಕ್ಸ್ ಆಫೀಸ್ ಕಲೆಕ್ಷನ್ ಅನ್ನು ಗಮನದಲ್ಲಿಟ್ಟುಕೊಂಡು ಮಹತ್ತರ ನಿರ್ಧಾರ ತೆಗೆದುಕೊಳ್ಳಲಾಗಿದೆ.

'ದೃಶ್ಯಂ 3' ಸಿನಿಮಾ ಈಗ ಕೇವಲ ಮಲಯಾಳಂ ಸಿನಿಮಾವಾಗಿ ಉಳಿದಿಲ್ಲ. ಈ ಸಿನಿಮಾ ಒಂದೊಂದು ಭಾಷೆಯಲ್ಲೂ ಒಬ್ಬೊಬ್ಬ ಸ್ಟಾರ್‌ಗಳ ಮೂಲಕ ಗುರುತಿಸಲಾಗುತ್ತಿದೆ. ಆದರೆ, ಮೂಲ ಅಂತ ಬಂದಾಗ ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್ ನೆನಪಿಗೆ ಬರೋದು. ಸದ್ಯ 'ದೃಶ್ಯಂ 3' ಬಿಡುಗಡೆ ಬಗ್ಗೆ ಇದ್ದ ಗೊಂದಲ ಈಗ ಬಗೆ ಹರಿದಿದೆ.

Drishyam 3 release strategy revealed Malayalam first after 2 months Hindi and Telugu

ಮೋಹನ್‌ಲಾಲ್ ನಟಿಸುತ್ತಿರುವ 'ದೃಶ್ಯಂ 3' ಸಿನಿಮಾ ಹಿಂದಿ ಹಾಗೂ ತೆಲುಗಿನಲ್ಲಿ ರಿಮೇಕ್ ಆಗುತ್ತಿದೆ. ಹಿಂದಿಯಲ್ಲಿ ಅಜಯ್ ದೇವಗನ್ ನಟಿಸುತ್ತಿದ್ದಾರೆ. ಮಲಯಾಳಂ ಹಾಗೂ ಹಿಂದಿ 'ದೃಶ್ಯಂ 3' ಎರಡೂ ಒಂದೇ ದಿನ ಬಿಡುಗಡೆಯಾಗಲಿದೆ ಎಂಬ ಮಾತು ಕೇಳಿ ಬಂದಿದ್ದವು. ದೇಶಾದ್ಯಂತ ಇರೋ 'ದೃಶ್ಯಂ' ಸಿನಿಮಾ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿತ್ತು. 'ದೃಶ್ಯಂ' ಕಥೆಯ ಗುಟ್ಟನ್ನು ರಟ್ಟು ಮಾಡದೇ ನೋಡಲು ಪ್ರೇಕ್ಷಕರು ಸಿದ್ಧರಾಗಿದ್ದರು. ಆದರೆ, ಈ ಚರ್ಚೆಗಳಿಗೆ ಇದೀಗ ನಿರ್ದೇಶಕ ಜೀತು ಜೋಸೆಫ್ ಅವರೇ ತೆರೆ ಎಳೆದಿದ್ದಾರೆ.

ಮಲಯಾಳಂನಲ್ಲಿ 'ದೃಶ್ಯಂ 3' ಮೊದಲು ಥಿಯೇಟರ್‌ಗೆ ಲಗ್ಗೆ ಇಡುತ್ತಿದೆ. ಹಿಂದಿ ಹಾಗೂ ತೆಲುಗು ಭಾಷೆಗಳ ರಿಮೇಕ್ ವರ್ಷನ್ ಮಲಯಾಳಂನಲ್ಲಿ ತೆರೆಕಂಡ 2 ತಿಂಗಳ ಬಳಿಕವಷ್ಟೇ ಪ್ರೇಕ್ಷಕರ ಮುಂದೆ ಬರಲಿವೆ. ಇದು ಬೃಹತ್ ಮಾರುಕಟ್ಟೆಯನ್ನು ಗುರಿಯಾಗಿಸಿಕೊಂಡು ಇಂತಹದೊಂದು ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎನ್ನಲಾಗಿದೆ.

ಮಲಯಾಳಂ ಚಿತ್ರವೇ ಮೊದಲು; ಸ್ಟ್ರಾಟಜಿ ಏನು?

'ದೃಶ್ಯಂ' ಸೀರಿಸ್‌ನ ಎರಡೂ ಭಾಗಗಳ ನಿರ್ದೇಶಕ ಜೀತು ಜೋಸೆಫ್ 'ದೃಶ್ಯಂ 3'ಗೆ ಆಕ್ಷನ್ ಕಟ್ ಹೇಳಿದ್ದಾರೆ. ಈಗ ಸಿನಿಮಾ ಬಿಡುಗಡೆ ಬಗ್ಗೆ ನಿರ್ದೇಶಕರೇ ಬಿಡುಗಡೆ ಸ್ಟ್ರಾಟಜಿಯನ್ನು ಖಚಿತಪಡಿಸಿದ್ದಾರೆ. ಬಹುಭಾಷೆಯಲ್ಲಿ ಏಕಕಾಲಕ್ಕೆ ಈ ಸಿನಿಮಾವನ್ನು ಬಿಡುಗಡೆ ಮಾಡುವ ಬಗ್ಗೆ ಹಿಂದಿ ಹಾಗೂ ತೆಲುಗು ನಿರ್ಮಾಪಕರು ಚರ್ಚಿಸಿದ್ದರು. 'ದೃಶ್ಯಂ 3' ನಿರ್ದೇಶಕ ಜೀತು ಜೋಸೆಫ್ ಬಳಿನೂ ಈ ಬಗ್ಗೆ ಚರ್ಚೆಯಾಗಿತ್ತು. ಆದರೆ ಕಥೆಯ ಸ್ವರೂಪ ಮತ್ತು ನಿರ್ಮಾಣದ ವೇಳಾಪಟ್ಟಿಯನ್ನು ಗಮನದಲ್ಲಿಟ್ಟುಕೊಂಡು ಮೊದಲು ಮಲಯಾಳಂ ಚಿತ್ರವನ್ನು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

Drishyam 3 release strategy revealed Malayalam first after 2 months Hindi and Telugu

'ದೃಶ್ಯಂ 3'ಯನ್ನು ಮಲಯಾಳಂನಲ್ಲಿ ನೋಡಿದ ನಂತರವೇ ರಿಮೇಕ್ ವರ್ಷನ್‌ಗೆ ಬೇಕಾದ ಅಂತಿಮ ಬದಲಾವಣೆಗಳು ಮಾಡಿಕೊಳ್ಳಲು ಸಮಯ ಸಿಗುತ್ತದೆ. ಇದು ಸಿನಿಮಾದ ಗುಣಮಟ್ಟಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳುವ ಒಂದು ಪ್ರಮುಖ ಮತ್ತು ಅಂತಿಮ ನಿರ್ಧಾರವಾಗಿದೆ. ನಿರ್ದೇಶಕರ ಈ ಸ್ಪಷ್ಟನೆಯಿಂದ ಇಡೀ ಚಿತ್ರೋದ್ಯಮದಲ್ಲಿ ಹರಡಿದ್ದ ಗೊಂದಲಕ್ಕೆ ತೆರೆ ಬಿದ್ದಿದೆ. ಈ ಮೂಲಕ ಸೀರಿಸ್‌ನ ಯಶಸ್ಸಿನ ಸೂತ್ರವನ್ನು ಮುಂದುವರಿಸಲು ತಂಡ ಮುಂದಾಗಿದೆ.

ಏಕಕಾಲದ ಬಿಡುಗಡೆ ಏಕೆ ಅಪಾಯಕಾರಿ?

ಎಲ್ಲಾ ಭಾಷೆಗಳ ಚಿತ್ರಗಳು ಏಕಕಾಲದಲ್ಲಿ ಬಿಡುಗಡೆಯಾದರೆ ಅದು ಫ್ರಾಂಚೈಸಿಗೆ ದೊಡ್ಡ ಅಪಾಯವನ್ನು ತಂದೊಡ್ಡಬಹುದು. ವಿಶೇಷವಾಗಿ 'ದೃಶ್ಯಂ'ನಂತಹ ಸಸ್ಪೆನ್ಸ್-ಥ್ರಿಲ್ಲರ್ ಕಥೆಗಳಲ್ಲಿ ಇದು ಅತ್ಯಂತ ಮುಖ್ಯ. ಮಲಯಾಳಂ ಭಾಷೆಯಲ್ಲಿಯೇ ಮೊದಲು ಬಿಡುಗಡೆಯಾದರೆ ಕಥೆಯ ಎಲ್ಲಾ ಸೀಕ್ರೆಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಕ್ಷಣಾರ್ಧದಲ್ಲಿ ಹರಡುತ್ತವೆ. ಇದರಿಂದಾಗಿ ಬೇರೆ ಭಾಷೆಯ ಸಿನಿಮಾಗಳಿಗೆ ಬಾಕ್ಸ್ ಆಫೀಸ್‌ನಲ್ಲಿ ಭಾರೀ ನಷ್ಟವಾಗುವ ಸಾಧ್ಯತೆ ಇರುತ್ತದೆ. ಏಕೆಂದರೆ ಕಥೆಯ ಗುಟ್ಟನ್ನು ತಿಳಿದ ಪ್ರೇಕ್ಷಕರು ಥಿಯೇಟರ್‌ಗೆ ಬರುವುದು ಕಡಿಮೆಯಾಗುತ್ತದೆ.

ಹಿಂದಿನ 'ದೃಶ್ಯಂ 1' ಮತ್ತು 'ದೃಶ್ಯಂ 2' ಸಿನಿಮಾ ಬಿಡುಗಡೆ ವೇಳೆಯೂ ಇದೇ ಸೂತ್ರವನ್ನು ಅನುಸರಿಸಲಾಗಿತ್ತು. ಮೊದಲು ಮಲಯಾಳಂ ಸಿನಿಮಾ ಬಂದು ಕಥೆಯ ಕುರಿತ ಚರ್ಚೆಗಳು ಆದ ನಂತರವೇ ಹಿಂದಿ ಮತ್ತು ತೆಲುಗು ಸೇರಿದಂತೆ ಇತರ ಭಾಷೆಯಲ್ಲಿ ಬಂದಿದ್ದವು. ಇದು ಬೇರೆ ಭಾಷೆಯಲ್ಲಿ ರಿಮೇಕ್ ಆದ ಸಿನಿಮಾಗಳ ಮಾರ್ಕೆಟಿಂಗ್‌ಗೆ ಅನುಕೂಲ ಮಾಡಿಕೊಟ್ಟಿದ್ದವು.

More from Filmibeat

English summary
Drishyam 3 release strategy revealed: Malayalam first after 2 months Hindi and Telugu.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X