Drishyam- 3 Teaser: ಪಶ್ಚಾತ್ತಾಪ.. ಭಯ..; ಜಾರ್ಜ್‌ಕುಟ್ಟಿ ಆತಂಕಕ್ಕೆ ಕಾರಣ ಏನು?

ಸೂಪರ್ ಹಿಟ್ 'ದೃಶ್ಯಂ' ಸರಣಿಯ 3ನೇ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಮತ್ತೊಮ್ಮೆ ಜಾರ್ಜ್‌ ಕುಟ್ಟಿ ಆಗಿ ತಮ್ಮ ಕುಟುಂಬದ ರಕ್ಷಣೆಗೆ ಮೋಹನ್ ಲಾಲ್ ನಿಂತಿದ್ದಾರೆ. ಈವರೆಗೆ ಕಥೆಯಲ್ಲಿ ತಮ್ಮ ಚಾಣಾಕ್ಷತನದಿಂದ ಕುಟುಂಬವನ್ನು ಬಚಾವ್ ಮಾಡುತ್ತಿದ್ದ ಜಾರ್ಜ್‌ಕುಟ್ಟಿ ಈಗ ಭಯಭೀತನಾಗಿದ್ದಾನೆ. ಮುಂದೇನು ಎನ್ನುವ ಗೊಂದಲಕ್ಕೆ ಸಿಲುಕಿದ್ದಾನೆ.

ಹಿಂದಿನ ಎರಡು ಸಿನಿಮಾಗಳ ಕಥೆಯನ್ನು ನೆನಪಿಸುತ್ತಾ ಮೋಹನ್ ಲಾಲ್ ವಾಯ್ಸ್‌ ಓವರ್‌ನಲ್ಲಿ 'ದೃಶ್ಯಂ'-3 ಟೀಸರ್ ಬಿಡುಗಡೆಯಾಗಿದೆ. 2013ರಲ್ಲಿ ಬಂದಿದ್ದ ಮೊದಲ ಭಾಗದಿಂದ ಶುರುವಾಗುವ ಟೀಸರ್ ಬಳಿಕ ಎರಡನೇ ಭಾಗದ ಕ್ಲೈಮ್ಯಾಕ್ಸ್ ದೃಶ್ಯವನ್ನು ನೆನೆಪಿಸುತ್ತದೆ. 'ದೃಶ್ಯಂ- 2' ಚಿತ್ರದ ಕೊನೆಗೆ ಈ ಕೇಸ್ ಕ್ಲೋಸ್ ಆದಂತಿದೆ. ಆದರೆ ಯಾವತ್ತಿಗೂ ಕ್ಲೋಸ್ ಆಗಲ್ಲ. ನಾವು ಅವನನ್ನು ಗಮನಿಸುತ್ತಿರಲಿಲ್ಲ, ಅವನೇ ನಮ್ಮನ್ನು ಗಮನಿಸುತ್ತಿದ್ದ ಎನ್ನುವ ಡೈಲಾಗ್ ಇತ್ತು.

Drishyam 3 Teaser Mohanlal s George Kutty Returns in 2026 Haunted by Past Sins and a New Threat

ಅಲ್ಲಿಂದ ಮುಂದೆ 2026ರಲ್ಲಿ ಜಾರ್ಜ್‌ ಕುಟ್ಟಿ ಕಥೆ ಮುಂದುವರೆಯುತ್ತದೆ. ಚರ್ಚ್‌ನಲ್ಲಿ ಕೂತು ಆತ ದೇವರ ಮುಂದೆ ತಪ್ಪೊಪ್ಪಿಕೊಳ್ಳುತ್ತಿದ್ದಾನೆ. "ನಾನು ಹುಟ್ಟಿದಾಗಲೇ ಈ ಹೋರಾಟ ಶುರುವಾಯಿತು.. ನನಗೆ ಸ್ವಂತ ಅಂತ ಯಾರು ಇರಲಿಲ್ಲ. ಈ ಕುಟುಂಬ ನನ್ನ ಸ್ವಂತವಾಗಿತ್ತು.. ಆ ಕುಟುಂಬಕ್ಕೆ ಕಷ್ಟ ಅಂದಾಗ ಹಿಂದೆ ಮುಂದೆ ನೋಡ್ದೆ ಎದ್ದು ನಿಂತೆ.. ಈ ಹಾದಿಯಲ್ಲಿ ನಾನು ಎಷ್ಟು ಜನರನ್ನು ನೋಯಿಸಿದೆ ಗೊತ್ತಿಲ್ಲ.. ಆದರೆ ಈಗ ಭಯವಾಗ್ತಿದೆ ಸರ್.. ಬೇರೆ ಯಾರು ಗಮನಿಸುತ್ತಿದ್ದಾರೋ ಗೊತ್ತಿಲ್ಲ ಎಂದು ಜಾರ್ಜ್‌ ಕುಟ್ಟಿ ಹೇಳುವುದನ್ನು ಟೀಸರ್‌ನಲ್ಲಿ ನೋಡಬಹುದು.

"ಹಳೆಯದ್ದು ಎಂದೂ ಸೈಲೆಂಟ್ ಆಗಿ ಇರಲ್ಲ" ಎನ್ನುವ ಟ್ಯಾಗ್‌ಲೈನ್ 'ದೃಶ್ಯಂ- 3' ಚಿತ್ರಕ್ಕಿದೆ. ಈ ಬಾರಿ ಜಿತು ಜೋಸೆಫ್ ಬೇರೆಯದ್ದೇ ರೀತಿಯಲ್ಲಿ ಕ್ಲಾಸಿಕ್ ಕ್ರಿಮಿನಲ್ ಜಾರ್ಜ್ ಕುಟ್ಟಿ ಚಾಣಾಕ್ಷತನವನ್ನು ಹೇಳಲು ಮುಂದಾಗಿದ್ದಾರೆ. ಇದೊಂದು ರೀತಿ ಸೋತು ಗೆಲ್ಲುವ ಆಟದಂತಿದೆ. ತನ್ನ ಕುಟುಂಬಕ್ಕಾಗಿ ಈ ಬಾರಿ ಆತ ಏನೆಲ್ಲಾ ಸಾಹಸ ಮಾಡ್ತಾನೆ ಎನ್ನುವುದನ್ನು ಕಾದು ನೋಡಬೇಕಿದೆ.

ಏಪ್ರಿಲ್ ಮೊದಲ ವಾರದಲ್ಲೇ 'ದೃಶ್ಯಂ- 3' ಸಿನಿಮಾ ಬಿಡುಗಡೆ ಆಗಬೇಕಿತ್ತು. ಇರಾನ್- ಇಸ್ರೇಲ್ ಯುದ್ಧದ ಹಿನ್ನೆಲೆಯಲ್ಲಿ ರಿಲೀಸ್ ಮುಂದೂಡಲಾಗಿತ್ತು. ಮೇ 21ರಂದು ಸಿನಿಮಾ ತೆರೆಗೆ ಬರಲಿದೆ. ಅದಕ್ಕೂ ಮುನ್ನ ಟ್ರೈಲರ್ ಕೂಡ ಅನಾವರಣ ಆಗಲಿದೆ. ಈ ಹಿಂದಿನ ಎರಡು ಸಿನಿಮಾಗಳನ್ನು ನಿರ್ಮಿಸಿದ್ದ ಆಂತೋಣಿ ಪೆರುಂಬವೂರ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

ಅನಿಲ್ ಜಾನ್ಸನ್ ಸಂಗೀತ ಚಿತ್ರಕ್ಕಿದೆ. ಕೇರಳ ಆಶೀರ್ವಾದ್ ಸಿನಿಮಾಸ್ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಪನೋರಮಾ ಸ್ಟುಡಿಯೋಸ್ ಸಂಸ್ಥೆ 'ದೃಶ್ಯಂ-3' ಚಿತ್ರವನ್ನು ಬಿಡುಗಡೆ ಮಾಡುತ್ತಿದೆ. ಸಾಲು ಸಾಲು ಸಿನಿಮಾಗಳಲ್ಲಿ ಮೋಹನ್ ಲಾಲ್ ನಟಿಸುತ್ತಿದ್ದಾರೆ. ಆದರೆ ಕಳೆದ ವರ್ಷ ಕೊನೆಗೆ ಬಂದಿದ್ದ 'ವೃಷಭ' ಸಿನಿಮಾ ಹೀನಾಯವಾಗಿ ಸೋತಿತ್ತು. ಹಾಗಾಗಿ ಲಾಲೆಟ್ಟನ್ ಕಂಬ್ಯಾಕ್ ಮಾಡಲು ಸಜ್ಜಾಗಿದ್ದಾರೆ.

'ದೃಶ್ಯಂ' ಸರಣಿ ಸಿನಿಮಾಗಳು ಕನ್ನಡ ಸೇರಿ ವಿವಿಧ ಭಾಷೆಗಳಿಗೆ ರೀಮೆಕ್ ಆಗಿತ್ತು. ಇದೀಗ ಮೂರನೇ ಭಾಗ ಬರ್ತಿದ್ದು ಯಾವ ಯಾವ ಭಾಷೆಗಳಲ್ಲಿ ರೀಮೆಕ್ ಮಾಡ್ತಾರೆ ಕಾದು ನೋಡಬೇಕಿದೆ. ಬಹುನಿರೀಕ್ಷಿತ ಸೀಕ್ವೆಲ್ ಸಿನಿಮಾ ಇದಾಗಿದ್ದು ಕಡಿಮೆ ಬಜೆಟ್‌ನಲ್ಲಿ ನಿರ್ಮಾಣವಾಗಿರುವ ಸಿನಿಮಾ ದೊಡ್ಡಮಟ್ಟದಲ್ಲಿ ಬಾಕ್ಸಾಫೀಸ್ ಶೇಕ್ ಮಾಡುವ ನಿರೀಕ್ಷೆಯಿದೆ. 14 ವರ್ಷಗಳ ಹಿಂದೆ 'ದೃಶ್ಯಂ' ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ಆದರೆ 2ನೇ ಭಾಗ ಕೋವಿಡ್ ಸಂಕಷ್ಟದ ಸಮಯದಲ್ಲಿ ನೇರವಾಗಿ ಓಟಿಟಿಗೆ ಬಂದು ಗೆದ್ದಿತ್ತು. ಇದೀಗ 3ನೇ ಭಾಗ ತೆರೆಗಪ್ಪಳಿಸಲು ಸಜ್ಜಾಗಿದೆ.

ಮೋಹನ್ ಲಾಲ್ ಮಡದಿ ಪಾತ್ರದಲ್ಲಿ ಮೀನಾ ಹಾಗೂ ಮಕ್ಕಳ ಪಾತ್ರಗಳಲ್ಲಿ ಅನ್ಸಿಬಾ ಹಸನ್ ಹಾಗೂ ಎಸ್ತರ್ ಅನಿಲ್ ಮುಂದುವರೆದಿದ್ದಾರೆ. 3ನೇ ಭಾಗಕ್ಕೆ 'ದೃಶ್ಯಂ' ಕಥೆ ಮುಕ್ತಾಯವಾಗುತ್ತೆ ಎನ್ನಲಾಗ್ತಿದೆ. ಶೀಘ್ರದಲ್ಲೇ ಅದಕ್ಕೆಲ್ಲಾ ಉತ್ತರ ಸಿಗಲಿದೆ.

Read more about: mohanlal
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X