ಹ್ಯಾಪಿ ಬರ್ತಡೇ ದುಲ್ಕರ್ ಸಲ್ಮಾನ್; 'ಬೆಂಗಳೂರು ಡೇಸ್' ನಟನ ಬಗ್ಗೆ ಇಂಟ್ರೆಸ್ಟಿಂಗ್ ಮಾಹಿತಿ

By ಫಿಲ್ಮಿಬೀಟ್ ಡೆಸ್ಕ್

ಮಲಯಾಳಂನ ಖ್ಯಾತ ನಟ ದುಲ್ಕರ್ ಸಲ್ಮಾನ್‌ಗೆ ಇಂದು ಹುಟ್ಟುಹಬ್ಬದ ಸಂಭ್ರಮ. 35ನೇ ವಸಂತಕ್ಕೆ ಕಾಲಿಟ್ಟಿರುವ ನಟ ದುಲ್ಕರ್‌ಗೆ ಅಭಿಮಾನಿಗಳು ಮತ್ತು ಸಿನಿ ಗಣ್ಯರಿಂದ ಶುಭಾಶಯಗಳ ಸುರಿಮಳೆಯೇ ಹರಿದುಬರುತ್ತಿದೆ. ಕೇವಲ ಮಲಯಾಳಂ ಮಾತ್ರವಲ್ಲದೆ ದುಲ್ಕರ್ ಗಡಿಗೂ ಮೀರಿದ ಅಭಿಮಾನಿ ಬಳಗ ಸಂಪಾದಿಸಿದ್ದಾರೆ.

ದುಲ್ಕರ್ ಮಲಯಾಳಂನ ಖ್ಯಾತ ನಟ ಮಮ್ಮುಟ್ಟಿ ಮಗ ಎನ್ನುವ ವಿಚಾರ ಎಲ್ಲರಿಗೂ ಗೊತ್ತಿದೆ. ಅಭಿನಯ ದುಲ್ಕರ್‌ಗೆ ರಕ್ತಗತವಾಗಿಯೇ ಬಂದಿದೆ. ತಂದೆಯ ಖ್ಯಾತಿ ಚಿತ್ರರಂಗದ ಎಂಟ್ರಿಗೆ ಸುಲಭದ ದಾರಿಯಾದರೂ ಸ್ಟಾರ್ ಆಗಿ ಗುರುತಿಸಿಕೊಂಡು, ಬೇಡಿಕೆ ನಟನಾಗಿ ಹೊರಹೊಮ್ಮಿ, ಅಪಾರ ಅಭಿಮಾನಿಗಳನ್ನು ಸಂಪಾದನೆ ಮಾಡಲು ದುಲ್ಕರ್ ಸಾಕಷ್ಟು ಶ್ರಮಿಸಿದ್ದಾರೆ. ಶ್ರದ್ಧೆ ಮತ್ತು ಶ್ರಮ ಭಾರತೀಯ ಸಿನಿಮಾರಂಗದ ಬಹುಬೇಡಿಕೆಯ ನಟರ ಸ್ಥಾನದಲ್ಲಿ ನಿಲ್ಲಿಸಿದೆ.

ತನ್ನ ಕಠಿಣ ಶ್ರಮದಿಂದನೆ ದುಲ್ಕರ್ ಮಲಯಾಳಂನಿಂದ ಆಚೆ ಅಂದರೆ ತಮಿಳು, ತೆಲುಗು ಮತ್ತು ಹಿಂದಿ ಸಿನಿಮಾರಂಗದಲ್ಲೂ ಖ್ಯಾತಿಗಳಿಸಲು ಸಾಧ್ಯವಾಗಿದೆ. ಭಾರತೀಯ ಸಿನಿಮಾರಂಗದ ಬಹುಬೇಡಿಕೆಯ ನಟನಾಗಿ ಗುರುತಿಸಿಕೊಂಡಿರುವ ದುಲ್ಕರ್ ಬಗ್ಗೆ ಗೊತ್ತಿಲ್ಲದ ಒಂದಿಷ್ಟು ಇಂಟ್ರಸ್ಟಿಂಗ್ ಮಾಹಿತಿ ಇಲ್ಲಿದೆ.

ದುಲ್ಕರ್ ಸಿನಿರಂಗಕ್ಕೆ ಬರುವ ಕನಸುಕಂಡಿರಲಿಲ್ಲ

ದುಲ್ಕರ್ ಸಿನಿರಂಗಕ್ಕೆ ಬರುವ ಕನಸುಕಂಡಿರಲಿಲ್ಲ

ದುಲ್ಕರ್ ಸಲ್ಮಾನ್ ಖ್ಯಾತ ನಟ ಮಮ್ಮುಟ್ಟಿ ಮಗನಾಗಿದ್ದರೂ ಸಿನಿಮಾರಂಗಕ್ಕೆ ಬರುವ ಕನಸು ಕಂಡಿರಲಿಲ್ಲ. ಮುಂದೊಂದು ದಿನ ಸ್ಟಾರ್ ನಟನಾಗಿ ಬೆಳೆಯುತ್ತೇನೆ ಅಂತ ಯಾವತ್ತು ಅಂದುಕೊಂಡವರಲ್ಲ. ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ದುಲ್ಕರ್, "ನಾನು ಎಂದಿಗೂ ಸಿನಿಮಾರಂಗಕ್ಕೆ ಬರಬೇಕು ಎಂದು ಬಯಸಿರಲಿಲ್ಲ. ಆದರೆ ನನಗೆ ಎಲ್ಲೋ ಏಕತಾನತೆಯೇ ದಿನಚರಿಯಾಯಿತು ಅಂತ ಅನಿಸುತ್ತಿತ್ತು. ಹಾಗಾಗಿ ನಾನು ನಟನೆ ಪ್ರಯತ್ನ ಮಾಡೋಣ ಅಂತ ಬಂದೆ" ಎಂದು ಈ ಹಿಂದೆ ಹೇಳಿದ್ದರು.

ವಿದೇಶದಲ್ಲಿ ಕೆಲಸ, ಮುಂಬೈನಲ್ಲಿ ನಟನೆ ತರಬೇತಿ

ವಿದೇಶದಲ್ಲಿ ಕೆಲಸ, ಮುಂಬೈನಲ್ಲಿ ನಟನೆ ತರಬೇತಿ

ದುಲ್ಕರ್ ಯುಎಸ್‌ನಲ್ಲಿ ಪದವಿ ಮುಗಿಸಿದವರು. ಬ್ಯುಸಿನೆಸ್ ಮ್ಯಾನೇಜ್ ಮೆಂಟ್ ಮಾಡಿರುವ ದುಲ್ಕರ್ ಶಿಕ್ಷಣದ ಬಳಿಕ ಅಲ್ಲೇ ಕೆಲಸಕ್ಕೆ ಸೇರಿದರು. ಬಳಿಕ ದುಬೈ ತೆರಳಿದ ದುಲ್ಕರ್ ಅಲ್ಲಿಯೂ ಕೆಲಸ ಮಾಡಿದರು. ಆದರೆ ಈ ಕೆಲಸದಲ್ಲಿ ಏಕತಾನತೆ ಕಾಡುತ್ತಿದ್ದೆ ಎನ್ನುವ ಕಾರಣಕ್ಕೆ ಕೆಲಸಕ್ಕೆ ಗುಡ್ ಬೈ ಹೇಳಿ ನಟನೆ ಕಡೆ ಮುಖ ಮಾಡಿದರು. ಬಳಿಕ ಮುಂಬೈನಲ್ಲಿ ದುಲ್ಕರ್ ನಟನೆ ತರಬೇತಿಗೂ ಸೇರಿದರು.

2011ರಲ್ಲಿ ಮದುವೆ

2011ರಲ್ಲಿ ಮದುವೆ

ದುಲ್ಕರ್ ಸಿನಿಮಾರಂಗಕ್ಕೆ ಎಂಟ್ರಿ ಕೊಡುವ ಮೊದಲೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಚೆನ್ನೈ ಮೂಲದ ಆರ್ಕಿಟೆಕ್ಚರ್ ಅಮಲ ಸುಫಿಯಾ ಜೊತೆ ದುಲ್ಕರ್ 2011ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಬೇಗ ಮದುವೆಯಾದ ಬಗ್ಗೆ ದುಲ್ಕರ್, "ನಮ್ಮ ಕುಟುಂಬದಲ್ಲಿ ಎಲ್ಲಾ ಪುರುಷರು ಬೇಗ ಮದುವೆಯಾಗುತ್ತಾರೆ. ನನ್ನ ತಾಯಿ ಸೂಕ್ತ ಹುಡುಗಿ ಹುಡುಕುತ್ತಿದ್ದರು. ಆಗ ಅಮ್ಮನಿಗೆ ಅಮಲ್ ಸಿಕ್ಕಿದರು. ನನಗೂ ಇಷ್ಟವಾದರೂ" ಎಂದು ಹೇಳಿದ್ದರು. ದುಲ್ಕರ್ ಮತ್ತು ಸೂಫಿಯಾ ದಂಪತಿಗೆ ಒಬ್ಬಳು ಮಗಳಿದ್ದಾಳೆ.

ತಂದೆಯ ಹೆಸರನ್ನು ಬಳಸದ ನಟ

ತಂದೆಯ ಹೆಸರನ್ನು ಬಳಸದ ನಟ

ದುಲ್ಕರ್ ಸಲ್ಮಾನ್ ತನ್ನ ಹೆಸರಿನ ಜೊತೆ ತಂದೆಯ ಹೆಸರನ್ನು ಬಳಸುವುದಿಲ್ಲ. ಖ್ಯಾತ ನಟನ ಮಕ್ಕಳು ಅಂದ್ಮೇಲೆ ತಂದೆಯನ್ನು ಹೆಸರನ್ನು ಹೇರಿಕೊಂಡು ಮೈಲೇಜ್ ಪಡೆಯುತ್ತಿರುತ್ತಾರೆ. ಆದರೆ ದುಲ್ಕರ್ ತಂದೆ ಮಮ್ಮುಟ್ಟಿ ಹೆಸರನ್ನು ತನ್ನ ಹೆಸರಿನ ಜೊತೆ ಸೇರಿಸಿಕೊಂಡಿಲ್ಲ. "ನಾನು ತಂದೆಯ ಹಾಗೆ ಕಾಣುವುದಿಲ್ಲ. ನನ್ನ ತಾಯಿಯ ಹಾಗೆ ಇದ್ದೀನಿ. ನನ್ನ ಹೆಸರಿನ ಕೊನೆಯಲ್ಲಿ ತಂದೆಯ ಹೆಸರನ್ನು ಸೇರಿಸಿಲ್ಲ. ಶಾಲೆಯಲ್ಲಿದ್ದಾಗ ನನಗೆ ಕಿರುಕುಳ ಆಗುತ್ತೆ ಎನ್ನುವ ಕಾರಣಕ್ಕೆ ತಂದೆಯ ಹೆಸರನ್ನು ಸೇರಿಸಲು ಅಪ್ಪ ಬಯಸಿಲ್ಲ" ಎಂದಿದ್ದರು.

2012ರಲ್ಲಿ ಸಿನಿಮಾರಂಗಕ್ಕೆ ಎಂಟ್ರಿ

2012ರಲ್ಲಿ ಸಿನಿಮಾರಂಗಕ್ಕೆ ಎಂಟ್ರಿ

ಸೆಕೆಂಡ್ ಶೋ ಸಿನಿಮಾ ಮೂಲಕ ದುಲ್ಕರ್ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟರು. ಹರಿಲಾಲ್ ಎನ್ನುವ ಗ್ಯಾಂಗ್ ಸ್ಟಾರ್ ಪಾತ್ರದಲ್ಲಿ ನಟಿಸಿದ್ದರು. ಸಿನಿಮಾ ಹೇಳುವಷ್ಟು ಖ್ಯಾತಿಗಳಿಸದಿದ್ದರೂ ಸಲ್ಮಾನ್ ಅಭಿನಯ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಬಳಿಕ ಸಿನಿಮಾರಂಗದಲ್ಲೇ ಮುಂದುವರೆಯಲು ನಿರ್ಧರಿಸಿದರು.

ಕಾರ್ ಕ್ರೇಜ್

ಕಾರ್ ಕ್ರೇಜ್

ದುಲ್ಕರ್ ಸಲ್ಮಾನ್ ಅವರಿಗೆ ಕಾರ್ ಕ್ರೇಜ್ ಸಿಕ್ಕಾಪಟ್ಟೆ ಇದೆ. ಐಷಾರಾಮಿ ಕಾರು ಕಲೆಕ್ಷನ್ ಮಾಡುವುದರಲ್ಲಿ ಸಂತಸ ಪಡುವ ದುಲ್ಕರ್ ಮರ್ಸಿಡಿಸ್ ಬೆಂಜ್, ಎಸ್ ಎಲ್ ಎಸ್ ಎಎಂಜಿ, ಬಿ ಎಂ ಡಬ್ಲ್ಯೂ ಎಂ 3 ಸೇರಿದಂತೆ ಅನೇಕ ಕಾರ್ ಗಳಿವೆ. ಜೊತೆಗೆ ದುಬಾರಿ ಬೈಕ್ ಗಳನ್ನು ಹೊಂದಿದ್ದಾರೆ.

ಹಿಟ್ ಸಿನಿಮಾಗಳು

ಹಿಟ್ ಸಿನಿಮಾಗಳು

ಬೆಂಗಳೂರು ಡೇಸ್, ಓ ಕಾದಲ್ ಕಣ್ಮಣಿ, ಚಾರ್ಲಿ, ಕಲಿ, ಮಹಾನಟಿ ಸೇರಿದಂತೆ ಅನೇಕ ಅದ್ಭುತ ಸಿನಿಮಾಗಳನ್ನು ನೀಡಿದ್ದಾರೆ. ಬೆಂಗಳೂರು ಡೇಟ್ ದುಲ್ಕರ್ ವೃತ್ತಿ ಜೀವನಕ್ಕೆ ದೊಡ್ಡ ತಿರುವು ನೀಡಿದ ಸಿನಿಮಾ. ಖ್ಯಾತ ನಿರ್ದೇಶಕ ಮಣಿರತ್ನಂ ಸಾರಥ್ಯದಲ್ಲಿ ಬಂದ ಓ ಕಾದಲ್ ಕಣ್ಮಣಿ ದುಲ್ಕರ್ ಖ್ಯಾತಿಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದ ಸಿನಿಮಾ. ಜೊತೆಗೆ ಈ ಸಿನಿಮಾ ಮೂಲಕ ದುಲ್ಕರ್ ಗಡಿಗೂ ಮೀರಿದ ಅಭಿಮಾನಿ ಬಳಗ ಸಂಪಾದಿಸಿದರು.

ದುಲ್ಕರ್ ಬಳಿ ಇರುವ ಸಿನಿಮಾಗಳು

ದುಲ್ಕರ್ ಬಳಿ ಇರುವ ಸಿನಿಮಾಗಳು

ದುಲ್ಕರ್ ಸದ್ಯ ಮಲಯಾಳಂ ಜೊತೆಗೆ ತಮಿಳು ಮತ್ತು ತೆಲುಗು ಸಿನಿಮಾರಂಗದಲ್ಲೂ ಬ್ಯುಸಿಯಾಗಿದ್ದಾರೆ. ಕುರುಪ್, ಸೆಲ್ಯೂಟ್, ಹೇ ಸಿನಮಿಕಾ ಮತ್ತು ಯುಧಂ ತೋ ರಸಿನಾ ಪ್ರೇಮ ಕಥ ಎನ್ನುವ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

More from Filmibeat

English summary
Dulquer Salmaan Birthday; Interesting facts about Dulquer Salmaan.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X