ಕನ್ನಡದ ಈ ಸ್ಟಾರ್ ನಟ ನಮಗೆ ತಿನ್ನಲಾಗದಷ್ಟು ಊಟ ಕಳುಹಿಸಿದ್ರು ಎಂದ ದುಲ್ಕರ್ ಸಲ್ಮಾನ್

ದುಲ್ಕರ್ ಸಲ್ಮಾನ್ ಪ್ರಸ್ತುತ ಕನ್ನಡ ಚಿತ್ರರಂಗವನ್ನು ಹೊರತುಪಡಿಡಿ ಭಾರತದ ಎಲ್ಲಾ ಪ್ರಮುಖ ಚಿತ್ರರಂಗಗಳಲ್ಲಿಯೂ ನಟಿಸಿರುವ ನಟ. ಮೂಲತಃ ಮಲಯಾಳಂ ಚಿತ್ರರಂಗದ ನಟನಾಗಿರುವ ದುಲ್ಕರ್ ಸಲ್ಮಾನ್ ಮಾಲಿವುಡ್‌ನ ಮೆಗಾಸ್ಟಾರ್ ಮಮ್ಮೂಟಿ ಅವರ ಪುತ್ರ. ಸ್ಟಾರ್ ನಟರ ಪುತ್ರನಾಗಿದ್ದರೂ ಸಹ ತನ್ನದೇ ಆದ ಸ್ವಂತ ಪ್ರತಿಭೆಯಿಂದ ಮಲಯಾಳಂ ಚಿತ್ರರಂಗದಲ್ಲಿ ಭಿನ್ನ ವಿಭಿನ್ನ ಚಿತ್ರಗಳಲ್ಲಿ ನಟಿಸಿದ ದುಲ್ಕರ್ ಸಲ್ಮಾನ್ ಸ್ಟಾರ್ ಆಗಿ ನೆಲೆಯೂರಿದರು.

2012ರಲ್ಲಿ ತೆರೆಕಂಡ ಸೆಕೆಂಡ್ ಶೋ ಎಂಬ ಚಿತ್ರದ ಮೂಲಕ ಸಿನಿಮಾ ಜರ್ನಿ ಆರಂಭಿಸಿದ ದುಲ್ಕರ್ ಸಲ್ಮಾನ್ ನಂತರ ತೆರೆಕಂಡ ಎರಡನೇ ಚಿತ್ರ ಉಸ್ತಾದ್ ಹೋಟೆಲ್ ಮೂಲಕ ಬಿಗ್ ಬ್ರೇಕ್ ಪಡೆದುಕೊಂಡರು. ಹೀಗೆ ಮಲಯಾಳಂನಲ್ಲಿ ಸಾಲು ಸಾಲು ಚಿತ್ರಗಳಲ್ಲಿ ನಟಿಸುತ್ತಿದ್ದಾಗಲೇ ಪರಭಾಷೆಯಲ್ಲಿ ಅಭಿಮಾನಿಗಳನ್ನು ಸಂಪಾದಿಸಿದ್ದ ನಟ ದುಲ್ಕರ್ ಸಲ್ಮಾನ್ ಕಾಲಿವುಡ್ ಹಾಗೂ ಟಾಲಿವುಡ್‌ಗೂ ಕಾಲಿಟ್ಟರು.

ಕರ್ವಾನ್ ಎಂಬ ಹಿಂದಿ ಚಿತ್ರದಲ್ಲಿ ನಟಿಸಿ ಬಾಲಿವುಡ್ ಪ್ರವೇಶವನ್ನೂ ಸಹ ಮಾಡಿದ ದುಲ್ಕರ್ ಸಲ್ಮಾನ್ ಮಲಯಾಳಂ, ತಮಿಳು, ತೆಲುಗು ಹಾಗೂ ಹಿಂದಿಯ ಮೂಲ ಚಿತ್ರಗಳಲ್ಲಿ ನಟಿಸಿದರು. ಹೀಗೆ ಪ್ರಮುಖ ಇಂಡಸ್ಟ್ರಿಗಳ ಮೂಲ ಚಿತ್ರಗಳಲ್ಲಿ ನಟಿಸಿರುವ ದುಲ್ಕರ್ ಸಲ್ಮಾನ್ ಕನ್ನಡ ಚಿತ್ರಗಳಲ್ಲಿ ಯಾವಾಗ ನಟಿಸಲಿದ್ದಾರೆ ಎಂಬ ಪ್ರಶ್ನೆ ಹಾಗೂ ಕುತೂಹಲ ದುಲ್ಕರ್ ಸಲ್ಮಾನ್ ಅವರ ಕರ್ನಾಟಕ ಅಭಿಮಾನಿಗಳು ಹಾಗೂ ಸಿನಿ ರಸಿಕರಲ್ಲಿ ಇತ್ತು. ಸದ್ಯ ಈ ಕುರಿತು ದುಲ್ಕರ್ ತಮ್ಮ ಟ್ವಿಟರ್ ಖಾತೆಯಲ್ಲಿ ಅನುಯಾಯಿಗಳ ಜತೆ ನಡೆಸಿದ ಪ್ರಶ್ನೋತ್ತರ ಚರ್ಚೆಯಲ್ಲಿ ಪ್ರತಿಕ್ರಿಯಿಸಿದ್ದು, ಕನ್ನಡ ಚಿತ್ರಗಳಲ್ಲಿ ನಟಿಸುವುದರ ಬಗ್ಗೆ ಹಾಗೂ ಕನ್ನಡದ ಸ್ಟಾರ್ ನಟನೋರ್ವನ ಬಗ್ಗೆ ಈ ಕೆಳಕಂಡಂತೆ ಬರೆದುಕೊಂಡಿರುವುದು ವೈರಲ್ ಆಗಿದೆ.

ಯಶ್ ಬಗ್ಗೆ ದುಲ್ಕರ್ ಟ್ವೀಟ್

ಯಶ್ ಬಗ್ಗೆ ದುಲ್ಕರ್ ಟ್ವೀಟ್

ತನ್ನ ಟ್ವಿಟರ್ ಹಿಂಬಾಲಕರಿಗೆ ಪ್ರಶ್ನೆಗಳನ್ನು ಕೇಳುವ ಅವಕಾಶವನ್ನು ನೀಡಿದ್ದ ದುಲ್ಕರ್ ಸಲ್ಮಾನ್ ಆ ಪ್ರಶ್ನೆಗಳಿಗೆ ಉತ್ತರಗಳನ್ನು ಸಹ ನೀಡಿದ್ದಾರೆ. ಈ ವೇಳೆ ಯಶ್ ಅವರ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂಬ ಪ್ರಶ್ನೆಯನ್ನು ಟ್ವಿಟರ್ ಹಿಂಬಾಲಕನೊಬ್ಬ ಕೇಳಿದ್ದಾರೆ. ಈ ಪ್ರಶ್ನೆಗೆ ಉತ್ತರಿಸಿರುವ ದುಲ್ಕರ್ ಸಲ್ಮಾನ್ "ಯಶ್ ಓರ್ವ ಸಹೃದಯಿ. ನನ್ನ ಮತ್ತು ಅವರ ಚಿತ್ರಗಳು ಒಂದೇ ಸಮಯಕ್ಕೆ ಮೈಸೂರಿನಲ್ಲಿ ಚಿತ್ರೀಕರಣಗೊಳ್ಳುತ್ತಿರಬೇಕಾದರೆ ಯಶ್ ನನ್ನ ಹಾಗೂ ನನ್ನ ಚಿತ್ರತಂಡಕ್ಕೆ ತಿನ್ನಲಾಗದಷ್ಟು ಊಟವನ್ನು ಕಳುಹಿಸಿಕೊಟ್ಟಿದ್ದರು. ಸೋ ಮಚ್ ಲವ್ ಫಾರ್ ದ ರಾಕಿಂಗ್ ಸ್ಟಾರ್" ಎಂದು ಬರೆದುಕೊಂಡಿದ್ದಾರೆ.

ಕನ್ನಡ ಚಿತ್ರದಲ್ಲಿ ಯಾವಾಗ ನಟಿಸುತ್ತೀರ?

ಕನ್ನಡ ಚಿತ್ರದಲ್ಲಿ ಯಾವಾಗ ನಟಿಸುತ್ತೀರ?

ಇನ್ನು ಮತ್ತೋರ್ವ ನೆಟ್ಟಿಗ ಕನ್ನಡ ಚಿತ್ರಗಳಲ್ಲಿ ಯಾವಾಗ ನಟಿಸುತ್ತೀರ ಎಂಬ ಪ್ರಶ್ನೆಯನ್ನು ಕೇಳಿದ್ದಾರೆ. ಇದಕ್ಕೆ ಉತ್ತರಿಸಿರುವ ದುಲ್ಕರ್ ಸಲ್ಮಾನ್ "ಕನ್ನಡ ಚಿತ್ರಗಳಲ್ಲಿ ನಟಿಸುವುದೆಂದರೆ ನನಗೂ ಇಷ್ಟ. ಕನ್ನಡ ಚಿತ್ರರಂಗ ನಿರ್ಮಿಸುತ್ತಿರುವ ಹಲವು ಅದ್ಭುತ ಸಿನಿಮಾಗಳು ನನಗಿಷ್ಟ ಹಾಗೂ ನಾನು ಭೇಟಿಯಾದ ಕನ್ನಡದ ನಟರು ಹಾಗೂ ನಿರ್ದೇಶಕರ ಜತೆ ಒಳ್ಳೆಯ ಚರ್ಚೆ ಮಾಡಿದ್ದೇನೆ ಎಂದಿದ್ದಾರೆ. ಈ ಮೂಲಕ ಕನ್ನಡ ಚಿತ್ರದಲ್ಲೂ ನಟಿಸುವ ಪ್ಲಾನ್ ಇದೆ ಎಂಬುದನ್ನು ದುಲ್ಕರ್ ಸಲ್ಮಾನ್ ತಿಳಿಸಿದ್ದಾರೆ.

ಪ್ರಶ್ನೆ ಕೇಳಿದ ಅಭಿಮಾನಿ ಕಾಲೆಳೆದ ದುಲ್ಕರ್

ಪ್ರಶ್ನೆ ಕೇಳಿದ ಅಭಿಮಾನಿ ಕಾಲೆಳೆದ ದುಲ್ಕರ್

ದುಲ್ಕರ್ ಸಲ್ಮಾನ್ ಅವರು ಡಿಕ್ಯು ಎಂದೇ ಖ್ಯಾತಿಯನ್ನು ಗಳಿಸಿದ್ದಾರೆ. ಹಲವು ಸಿನಿ ರಸಿಕರು ದುಲ್ಕರ್ ಸಲ್ಮಾನ್ ಅವರನ್ನು ಡಿಕ್ಯು ಎಂದೇ ಕರೆಯುತ್ತಾರೆ. ಸದ್ಯ ಇದೇ ಪದವನ್ನು ಬಳಸಿಕೊಂಡು ದುಲ್ಕರ್ ಸಲ್ಮಾನ್ ತನ್ನ ಮಹಿಳಾ ಅಭಿಮಾನಿಯೋರ್ವಳ ಕಾಲನ್ನು ಎಳೆದಿದ್ದಾರೆ. ಅದಿತಿ ಎಂಬಾಕೆ ದುಲ್ಕರ್ ಸಲ್ಮಾನ್ ನೀವೆಂದರೆ ನನಗೆ ತುಂಬಾ ಇಷ್ಟ, ನಾನು ನಿಮ್ಮನ್ನು ತುಂಬಾ ಪ್ರೀತಿಸುತ್ತೇನೆ, ನನಗೊಂದು ರಿಪ್ಲೈ ಕೊಡುವಿರಾ ಎಂದು ಬರೆದುಕೊಂಡಿದ್ದಳು. ಈ ಕೋರಿಕೆಗೆ ಸ್ಪಂದಿಸಿದ ದುಲ್ಕರ್ "ಅಯ್ಯೋ ದೇವರೇ.. ನೀವು ನಿಜವಾದ ಡಿಕ್ಯು ( ಡ್ರಾಮಾ ಕ್ವೀನ್ )" ಎಂದು ರಿಪ್ಲೈ ಮಾಡಿ ಕಾಲೆಳೆದಿದ್ದಾರೆ.

More from Filmibeat

English summary
Dulquer Salmaan recalls food arrangement done by Yash for him and his team in Mysore. Read on
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X