ದುಲ್ಕರ್ ಸಲ್ಮಾನ್‌ಗಾಗಿ ಮಲಯಾಳಂ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಾರಾ ರಾಜ್ ಬಿ ಶೆಟ್ಟಿ!?
ಸದ್ಯಕ್ಕೆ ದೇಶದಲ್ಲಿ ಪ್ಯಾನ್ ಇಂಡಿಯಾ ಸ್ಟಾರ್ ಎಂಬುದಕ್ಕೆ ಬೇರೆ ಬೇರೆಯ ಅರ್ಥಗಳಿವೆ. ಸಿನಿಮಾ ಹೆಚ್ಚು ಓಡಿದ್ದು, ಎಲ್ಲಾ ಭಾಷೆಗಳಲ್ಲಿ ಸಿನಿಮಾ ಬಿಡುಗಡೆಯಾಗಿದ್ದು....ಹೀಗೆ ಒಬ್ಬೋಬ್ಬರಿಗೆ ಒಂದೊಂದು ಅರ್ಥದಲ್ಲಿ ಪ್ಯಾನ್ ಇಂಡಿಯಾ ಸ್ಟಾರ್ ಇದ್ದಾರೆ. ಆದರೆ, ಬೇರೆ ಬೇರೆ ಭಾಷೆಗಳಲ್ಲಿ ಬೇರೆ ಬೇರೆ ಚಿತ್ರರಂಗದಲ್ಲಿ ನಾಯಕನಾಗಿ ಗುರುತಿಸಿಕೊಂಡಿರುವುದು ನಟ ದುಲ್ಕರ್ ಸಲ್ಮಾನ್. ಅವರನ್ನು ಪ್ಯಾನ್ ಇಂಡಿಯಾ ಸ್ಟಾರ್ ಎಂದರೆ ಖಂಡಿತ ತಪ್ಪಲ್ಲ.
ಮಲಯಾಳಂ ನಟ ದುಲ್ಕರ್ ಸಲ್ಮಾನ್ ಕೇವಲ ತಮ್ಮ ಚಿತ್ರಂಗಕ್ಕೆ ಮಾತ್ರ ಸೀಮಿತವಾದವರಲ್ಲ. ಅವರ ತವರು ಮಲಯಾಳಂ ಜೊತೆಗೆ, ತಮಿಳು, ಹಿಂದಿ ಮತ್ತು ತೆಲುಗು ಭಾಷೆಗಳಲ್ಲಿ ನಟಿಸಿದ್ದಾರೆ. ಈ ಚಿತ್ರರಂಗಗಳಲ್ಲೂ ತನ್ನನ್ನು ತಾನು ಯಶಸ್ವಿ ನಟನಾಗಿ ನಿರೂಪಿಸಿಕೊಂಡಿದ್ದಾರೆ. ಆದರೆ, ಕನ್ನಡ ಸಿನಿಮಾ ಇಂಡಸ್ಟ್ರೀಗೆ ಮಾತ್ರ ದುಲ್ಕರ್ ಕಾಲಿಟ್ಟಿಲ್ಲ.

ದುಲ್ಕರ್‌ಗೆ ಆಕ್ಷನ್ ಕಟ್ ಹೇಳುತ್ತಾರೆ ರಾಜ್ ಬಿ ಶೆಟ್ಟಿ!
ನಟ ದುಲ್ಕರ್ ಸಲ್ಮಾನ್ ಇನ್ನೂ ಚಂದನವನಕ್ಕೆ ಕಾಲಿಟ್ಟಿಲ್ಲ. ಇಲ್ಲೂ ಅವರಿಗೆ ಅಭಿಮಾನಿಗಳಿದ್ದು, ಅವರು ಈ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು. ಆದರೆ, ಇತ್ತೀಚಿನ ಸಂದರ್ಶನವೊಂದರಲ್ಲಿ ಈ ಕುರಿತು ಕೇಳಿದಾಗ, ನಾನು ಉದ್ದೇಶಪೂರ್ವಕವಾಗಿ ಕನ್ನಡದಿಂದ ಹೊರಗುಳಿದಿಲ್ಲ ಎಂದು ಹೇಳಿದ್ದಾರೆ. ಜೊತೆಗೆ ಸದ್ಯದಲ್ಲೇ ಕನ್ನಡ ಚಿತ್ರರಂಗದಿಂದ ರೋಮಾಂಚನಕಾರಿ ಸಂಗತಿಗಾಗಿ ಕಾಯುತ್ತಿದ್ದೇನೆ ಎಂದು ಹೇಳಿದ್ದರು.
ಮುಂದುವರೆದು ಮಾತನಾಡಿದ್ದ ದುಲ್ಕರ್ ಸಲ್ಮಾನ್, ತಾವು ನಟ, ನಿರ್ದೇಶಕ ರಾಜ್ ಬಿ ಶೆಟ್ಟಿ ಅವರೊಂದಿಗೆ ಮುಮದಿನ ಸಿನಿಮಾ ಮಾಡುವ ಬಗ್ಗೆ ಯೋಜನೆಯಲ್ಲಿರುವುದಾಗಿ ಮಾಹಿತಿ ಬಹಿರಂಗಪಡಿಸಿದರು. ಅವರು ತಮ್ಮ ಬ್ಯಾನರ್, ವೇಫೇರರ್ ಫಿಲ್ಮ್ಸ್ ಅಡಿಯಲ್ಲಿ ಮಲಯಾಳಂ ಚಿತ್ರವನ್ನು ರಾಜ್ ಬಿ ಶೆಟ್ಟಿ ನಿರ್ದೇಶನ ಮಾಡಬಹುದು ಎಂಬ ಸುಳಿವು ನೀಡಿದ್ದರು.

ರಾಜ್ ಬಿ ಶೆಟ್ಟಿ ತಮ್ಮ ಟೋಬಿ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಅತ್ತ ದುಲ್ಕರ್ ಸಲ್ಮಾನ್ ಕೂಡ ಬಹುನಿರೀಕ್ಷಿತ ಕಿಂಗ್ ಆಫ್ ಕೋಥಾ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಹೀಗಾಗಿ ಇವರ ಕೆಲಸಗಳು ಮುಗಿಸಿದ ನಂತರ ನಿರ್ದೇಶಕರಾಗಿ ರಾಜ್ ಬಿ ಶೆಟ್ಟಿ ಮಲಯಾಳಂ ಚಿತ್ರರಂಗಕ್ಕೆ ಎರಡನೇ ಬಾರಿ ಪದಾರ್ಪಣೆ ಮಾಡುವುದು ಖಚಿತ ಎನ್ನುತ್ತಿದೆ ಚಿತ್ರರಂಗ.
ಒಂದು ಮೊಟ್ಟೆಯ ಕಥೆ ಮತ್ತು ಗರುಡ ಗಮನ ವೃಷಭ ವಾಹನದಿಂದ ಪ್ರಸಿದ್ಧರಾಗಿರುವ ರಾಜ್ ಬಿ ಶೆಟ್ಟಿ ಅವರು ಈ ಹಿಂದೆ ರುಧಿರಂ ಚಿತ್ರದ ಮೂಲಕ ಮಲಯಾಳಂ ಚಿತ್ರರಂಗಕ್ಕೆ ನಾಯಕರಾಗಿ ಪದಾರ್ಪಣೆ ಮಾಡಿದ್ದರು. ಅಪರ್ಣಾ ಬಾಲಮುರಳಿ ನಾಯಕಿಯಾಗಿದ್ದ ಈ ಚಿತ್ರಕ್ಕೆ ಜಿಶೋ ಲೋನ್ ಆಂಟೋನಿ ನಿರ್ದೇಶನವಿದೆ. ಜಿಶೋ ಲೋನ್ ಆಂಟೋನಿ ಕಥೆ ಬರೆದು ಸಿನಿಮಾ ನಿರ್ದೇಶಿಸಿದ್ದಾರೆ.


Click it and Unblock the Notifications










