ದುಲ್ಕರ್ ಸಲ್ಮಾನ್ ನಿರ್ಮಾಣ ಸಂಸ್ಥೆಯ ಮೇಲೆ ಗಂಭೀರ ಆರೋಪ, ಪಾತ್ರಕ್ಕಾಗಿ ಪಲ್ಲಂಗದ ಅಸಲಿಯತ್ತೇನು ?
ಕಳೆದ ವರ್ಷ ಇದೇ ಸಮಯದಲ್ಲಿ ಚಿತ್ರರಂಗದಲ್ಲಿ ಕಂಪನ ಆಗಿತ್ತು. ಹೇಮಾ ಆಯೋಗದ ವರದಿ ಮಲಯಾಳಂ ಚಿತ್ರರಂಗವನ್ನು ಬೆಚ್ಚಿ ಬೀಳಿಸಿತ್ತು. ಆ ಸಮಯದಲ್ಲಿ ಮಲಯಾಳಂ ಚಿತ್ರರಂಗದಲ್ಲಿ ಒಬ್ಬೊಬ್ಬರಾಗಿಯೇ ತಮಗಾದ ಕಹಿ ಅನುಭವ ಹಂಚಿಕೊಳ್ಳಲು ಶುರು ಮಾಡಿದ್ದರು. ಮಲಯಾಳಂನ ಪ್ರಮುಖ ನಟರಾದ ಎಂ.ಮುಕೇಶ್, ಮಣಿಯನ್ ಪಿಲ್ಲ ರಾಜು, ಎಡವೇಲು ಬಾಬು ಮತ್ತು ಜಯಸೂರ್ಯ ಹೀಗೆ ಹಲವರು ಕಾಮಾಂಧರು ಮಲಯಾಳಂ ಚಿತ್ರರಂಗದಲ್ಲಿದ್ದಾರೆ....
ಎಂದು ಕೆಲ ನಟಿಯರು ಆರೋಪ ಮಾಡಲು ಶುರು ಮಾಡಿದ್ದರು. ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದರು. ಇದೀಗ ಒಂದು ವರ್ಷದ ನಂತರ ಮಲಯಾಳಂ ಚಿತ್ರರಂಗದಲ್ಲಿ ಮತ್ತೊಮ್ಮೆ ಕಾಮಕಾಂಡದ ಕಥೆ ಸದ್ದು ಮಾಡುತ್ತಿದೆ. ಆದರೆ ಈ ಬಾರಿ ಮಾಲಿವುಡ್‌ನ ಸೂಪರ್ ಸ್ಟಾರ್ ದುಲ್ಕರ್ ಸಲ್ಮಾನ್ ಸುತ್ತ ಮುತ್ತ ಈ ವಿವಾದದ ಹುತ್ತ ಬೆಳೆದಿದೆ.

ಹೌದು, ದುಲ್ಕರ್ ಸಲ್ಮಾನ್ ಕೇವಲ ನಾಯಕ ಮಾತ್ರ ಅಲ್ಲ. ನಿರ್ಮಾಪಕ ಕೂಡ ಹೌದು. ತೀರಾ ಇತ್ತೀಚೆಗೆ ಬಿಡುಗಡೆಯಾದ ಕಲ್ಯಾಣಿ ಪ್ರಿಯದರ್ಶನ್ ಅಭಿನಯದ ''ಲೋಕಾ'' ಚಿತ್ರದ ಹಿಂದೆ ಇದ್ದಿದ್ದು ಇವರದ್ದೇ ನಿರ್ಮಾಣ ಸಂಸ್ಥೆ. ಸದ್ಯ ಇದೇ ನಿರ್ಮಾಣ ಸಂಸ್ಥೆಯಲ್ಲಿ ನಿರ್ಮಾಣವಾಗುವ ಮುಂದಿನ ಚಿತ್ರದಲ್ಲಿ ಅವಕಾಶ ಕೊಡುವ ನೆಪದಲ್ಲಿ ಲೈಂಗಿ*ಕ ದೌರ್ಜನ್ಯ ಎಸಗಿದ್ದಾರೆ ಎನ್ನುವ ಆರೋಪವನ್ನು ಮಹಿಳೆಯೊಬ್ಬರು ಮಾಡಿದ್ದಾರೆ. ಪೊಲೀಸರಲ್ಲಿ ದೂರನ್ನು ಕೂಡ ದಾಖಲಿಸಿದ್ದಾರೆ.
ಆ ಪ್ರಕಾರ ದುಲ್ಕರ್ ಸಲ್ಮಾನ್ ಅವರ ʻವೇಫೇರರ್ ಫಿಲ್ಮ್ಸ್ʼ ನಲ್ಲಿ ಕೆಲಸ ಮಾಡುವ ಸಹಾಯಕ ನಿರ್ದೇಶಕ ಧಿನಿಲ್ ಬಾಬು ಪಾತ್ರದ ಆಸೆ ತೋರಿಸಿ ಮಹಿಳೆಯನ್ನ ಸಂಸ್ಥೆಯ ಪಣಂಪಿಲ್ಲಿ ನಗರ ಕಚೇರಿಯ ಸಮೀಪದ ಕಟ್ಟಡಕ್ಕೆ ಕರೆದಿದ್ದಾನೆ.ಆ ನಂತರ ಆಕೆಯನ್ನ ಕೋಣೆಗೆ ಕರೆದೊಯ್ದು ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ್ದಾನೆ. ಇಷ್ಟೇ ಅಲ್ಲ ಸಹಕರಿಸದಿದ್ದರೆ ಮುಂದೆ ಮಲಯಾಳಂ ಚಿತ್ರರಂಗದಲ್ಲಿ ಯಾರೊಬ್ಬರು ಕರೆದು ಅವಕಾಶ ಕೊಡುವುದಿಲ್ಲ ಆ ರೀತಿ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ.

ಪೊಲೀಸರಿಗೆ ನೀಡಿರುವ ದೂರಿನಲ್ಲಿ ಈ ಎಲ್ಲಾ ವಿಚಾರವನ್ನು ಉಲ್ಲೇಖಿಸಿರುವ ಮಹಿಳೆ ಆಡಿಯೋ ರೆಕಾರ್ಡಿಂಗ್‌ನ್ನು ಪೊಲೀಸರಿಗೆ ಸಾಕ್ಷಿಯಾಗಿ ನೀಡಿದ್ದಾರೆ. ಇನ್ನು ತಮ್ಮ ನಿರ್ಮಾಣ ಸಂಸ್ಥೆಯ ವಿರುದ್ದ ಆರೋಪ ಕೇಳಿ ಬಂದ ಹಿನ್ನೆಲೆ ''ವೇಫೇರಲ್ ಸಂಸ್ಥೆ''ಯ ಮೂಲಕ ಸ್ಪಷ್ಟೀಕರಣವನ್ನು ದುಲ್ಕರ್ ನೀಡಿದ್ದಾರೆ.
ಧಿನಿಲ್ ಬಾಬು ಜೊತೆ ನಮ್ಮ ಸಂಸ್ಥೆಗೆ ಯಾವುದೇ ರೀತಿಯ ಸಂಬಂಧ ಇಲ್ಲ ಎಂದು ಸಂಸ್ಥೆ ಹೇಳಿದ್ದು ನಮ್ಮ ಯಾವ ಚಿತ್ರದಲ್ಲಿಯೂ ಆ ವ್ಯಕ್ತಿ ಕೆಲಸ ಮಾಡಿಲ್ಲ ಎಂದು ಹೇಳಿದೆ. ''ವೇಫೇರರ್ ಫಿಲ್ಮ್ಸ್''ನ ಹೆಸರನ್ನು ಹಾಳುಮಾಡುವ ಉದ್ದೇಶದಿಂದ ಮಾಡಿರಬಹುದಾದ ಪ್ರಯತ್ನ ಇದಾಗಿರಬಹುದು ಎಂದು ಹೇಳಿದೆ.
ಸದ್ಯ ಎರ್ನಾಕುಲಂನ ದಕ್ಷಿಣ ಪೊಲೀಸರು ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ವಿಷಯದ ಬಗ್ಗೆ ತನಿಖೆಯನ್ನು ಶುರು ಮಾಡಿದ್ದಾರೆ. ಮುಂಬರುವ ದಿನಗಳಲ್ಲಿ ಈ ಪ್ರಕರಣದ ಸತ್ಯಾಸತ್ಯತೆ ಹೊರ ಬರುವ ಸಾಧ್ಯತೆ ಇದೆ. ಇನ್ನುಳಿದಂತೆ ಹೇಮಾ ಆಯೋಗದ ವರದಿ ಬಂದ ನಂತರ ತಮಿಳು ಮತ್ತು ಮಲಯಾಳಂನ ಹಲವು ಚಿತ್ರಗಳಲ್ಲಿ ಅಭಿನಯಿಸಿರುವ ''ಮೀನು ಮುನೀರ್'' ದಿನಕ್ಕೊಬ್ಬರ ಮೇಲೆ ಲೈಂ"ಗಿಕ ಕಿರುಕುಳದ ಆರೋಪ ಮಾಡಿದ್ದರು. ಆದರೆ.ವಿಪರ್ಯಾಸ ತಮ್ಮದೇ ಸಂಬಂಧಿಯಾದ ಯುವತಿಯೊಬ್ಬರನ್ನು ವೇಶ್ಯಾವಾಟಿಕೆಗೆ ತಳ್ಳುವ ಪ್ರಯತ್ನವನ್ನು ಒಂದು ದಶಕದ ಹಿಂದೆ ''ಮೀನು ಮುನೀರ್'' ಮಾಡಿದ್ದ ವಿಚಾರ ಈ ಸಮಯದಲ್ಲಿ ಜಗಜ್ಜಾಹೀರಾಗಿತ್ತು.
ತಮಿಳುನಾಡಿನ ಚೆನ್ನೈನ ತಿರುಮಂಗಲಂ ಪೊಲೀಸರ ಬಳಿ ಈ ಬಗ್ಗೆ ದೂರು ದಾಖಲಾಗಿತ್ತು. ಪೋಕ್ಸೊ ಕಾಯ್ದೆ ಅಡಿಯಲ್ಲಿ ಕೇಸು ದಾಖಲಿಸಿಕೊಂಡಿದ್ದ ಪೊಲೀಸರು ಮೀನು ಮುನೀರ್ ಅವರನ್ನು ಬಂಧಿಸಿದ್ದರು.


Click it and Unblock the Notifications











