ದುಲ್ಕರ್ ಸಲ್ಮಾನ್‌ರ ಕಿಂಗ್ ಆಫ್ ಕೋಥಾ ಕಲಾವಿದರು ಪಡೆದ ಸಂಭಾವನೆ ಎಷ್ಟು ಗೊತ್ತೆ?
ಬಹುಭಾಷಾ ನಟ ದುಲ್ಕರ್ ಸಲ್ಮಾನ್ ಅವರ ಬಹುನಿರೀಕ್ಷಿತ ಮಲಯಾಳಂ ಗ್ಯಾಂಗ್‌ಸ್ಟರ್ ಚಲನಚಿತ್ರ "ಕಿಂಗ್ ಆಫ್ ಕೋಥಾ" ಸಿನಿರಂಗದಲ್ಲಿ ಸುದ್ದಿ ಮಾಡುತ್ತಿದೆ. ಪೋಸ್ಟರ್ , ಟೀಸರ್‌ಗಳ ಮೂಲಕ ಸದ್ದು ಮಾಡಿರುವ ಚಿತ್ರ 2023 ರ ಓಣಂ ಹಬ್ಬಕ್ಕೆ ತೆರೆಗೆ ಅಪ್ಪಳಿಸಲಿದೆ.
ಆಗಸ್ಟ್ 24 ರಂದು ತೆರೆಗೆ ಬರಲು ಸಿದ್ಧವಾಗಿರುವ ಕಿಂಗ್ ಆಫ್ ಕೋಥಾ ಚಿತ್ರವು ನಿರ್ದೇಶಕ ಅಭಿಲಾಷ್ ಜೋಶಿಯವರ ಚೊಚ್ಚಲ ಪ್ರಯತ್ನ. ವೇಫೇರರ್ ಫಿಲ್ಮ್ಸ್ ಮತ್ತು ಝೀ ಸ್ಟುಡಿಯೋಸ್ ಸಹಯೋಗದೊಂದಿಗೆ ನಿರ್ಮಾಣ ಮಾಡಿರುವ ಈ ಸಿನಿಮಾದಲ್ಲಿನ ಆಕ್ಷನ್ ದೃಶ್ಯಗಳು, ಪೋಸ್ಟರ್‌ಗಳು ಸಿನಿ ಪ್ರೇಮಿಗಳಲ್ಲಿ ಹೊಸ ನಿರೀಕ್ಷೆ ಸೃಷ್ಟಿಸುತ್ತಿದೆ.

ದುಲ್ಕರ್ ಸಲ್ಮಾನ್, ಶಬೀರ್ ಕಲ್ಲರಕ್ಕಲ್, ಐಶ್ವರ್ಯ ಲಕ್ಷ್ಮಿ, ಪ್ರಸನ್ನ, ಗೋಕುಲ್ ಸುರೇಶ್, ನೈಲಾ ಉಷಾ, ಚೆಂಬನ್ ವಿನೋದ್, ಶಮ್ಮಿ ತಿಲಕನ್, ಸರಣ್, ಸುರೇಂದ್ರನ್ ಮತ್ತು ಯುವಪ್ರತಿಭೆ ಅನಿಖಾ ಸೇರಿದಂತೆ ಹಲವು ತಾರೆಯರನ್ನು ಒಟ್ಟುಗೂಡಿಸುವ ಪ್ರಯತ್ನವನ್ನು ನವ ನಿರ್ದೇಶಕ ಅಭಿಲಾಷ್ ಜೋಶಿ ಮಾಡಿದ್ದಾರೆ.
ಪ್ರೀತಿಯಿಂದ ಡಿಕ್ಯೂ ಎಂದು ಕರೆಯಲ್ಪಡುವ ದುಲ್ಕರ್ ಸಲ್ಮಾನ್, ಸಿನಿಮಾ ಪ್ರೇಕ್ಷಕರಿಗೆ ಹೊಸಬರಲ್ಲ. ಮಲೆಯಾಳಂ ಮೆಗಾಸ್ಟಾರ್ ಮಮ್ಮುಟ್ಟಿ ಅವರ ಮಗನಾಗಿ, ಮಲಯಾಳಂ, ತಮಿಳು, ತೆಲುಗು ಮತ್ತು ಹಿಂದಿ ಚಿತ್ರರಂಗದಲ್ಲಿ ಪ್ರಮುಖ ನಟನಾಗಿ ಗುರುತಿಸಿಕೊಂಡಿದ್ದಾರೆ. ನಟನಾಗಿ ಅವರ ಪ್ರತಿಭೆ ವಿವಿಧ ಭಾಷೆಗಳಲ್ಲಿ ಮಿಂಚಿದೆ. ಇದರ ಜೊತೆಗೆ ದುಲ್ಕರ್ ಸಲ್ಮಾನ್ ಅವರನ್ನು ಎಲ್ಲರಿಗಿಂತ ವಿಶೇಷ ನಟನಾಗಿಸುವುದು ಅವರು ಆಯ್ಕೆ ಮಾಡಿಕೊಳ್ಳುವ ವೈವಿಧ್ಯಮಯ ಮತ್ತು ವಿಭಿನ್ನ ಸ್ಕ್ರಿಪ್ಟ್‌ಗಳು.

ಚಾರ್ಲಿ, ಬೆಂಗಳೂರು ಡೇಸ್, ಉಸ್ತಾದ್ ಹೋಟೆಲ್, ಕುರುಪ್, ಸೀತಾ ರಾಮಮ್, ಚುಪ್: ಆರ್ಟಿಸ್ಟ್ ರಿವೆಂಜ್ ಸೇರಿದಂತೆ ಉತ್ತಮ ಕಥೆಗಳೊಂದಿಗೆ ನಟ ತನ್ನದೆ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಇತ್ತೀಚಿನ ವರದಿಗಳ ಪ್ರಕಾರ ಅವರು ಪ್ರತಿ ಚಿತ್ರಕ್ಕೆ 3 ರಿಂದ 8 ಕೋಟಿ ರೂಪಾಯಿಗಳ ಭಾರಿ ಶುಲ್ಕವನ್ನು ವಿಧಿಸುತ್ತಿದ್ದಾರೆ.
ಇನ್ನು, ಕುತೂಹಲಕಾರಿಯಾಗಿ "ಕಿಂಗ್ ಆಫ್ ಕೋಥಾ" ಸಿನಿಮಾದಲ್ಲಿ ದುಲ್ಕರ್ ಸಲ್ಮಾನ್ ಅವರ ವೇಫೇರರ್ ಫಿಲ್ಮ್ಸ್ ನಿರ್ಮಾಣದ ಪಾತ್ರವನ್ನು ಹೊಂದಿದೆ. ಕಿಂಗ್ ಆಫ್ ಕೋಥಾ ಚಿತ್ರವು ತನ್ನ ಬೃಹತ್ ಬಜೆಟ್‌ಯಿಮದಾಗಿ ಸುದ್ದಿ ಮಾಡಿದೆ. ವರದಿಯ ಪ್ರಕಾರ ರೂ. 50 ಕೋಟಿ ಇದರ ಬಕೆಟ್. ಈವರೆಗೆ ಮಲೆಯಾಳಂ ಚಿತ್ರರಂಗದಲ್ಲಿ ಇಷ್ಟು ದೊಡ್ಡ ಬಜೆಟ್‌ನ ಚಿತ್ರ ಇದು.
ಕಿಂಗ್ ಆಫ್ ಕೋಥಾ ಸಿನಿಮಾದ ಮುದ್ರಣ ಮತ್ತು ಜಾಹೀರಾತು ವೆಚ್ಚಕ್ಕಾಗಿ 10 ಕೋಟಿ, ಉಳಿದ ರೂ. 40 ಕೋಟಿಯನ್ನು ಸಿನಿಮಾ ಬಜೆಟ್‌ಗೆ ಮೀಸಲಿಡಲಾಗಿದೆ. ಚಿತ್ರದ ಪ್ರಮುಖ ನಟಿಯರಲ್ಲಿ ಒಬ್ಬರಾದ ಐಶ್ವರ್ಯ ಲಕ್ಷ್ಮಿ ಅವರು ರೂ. 70 ಲಕ್ಷ ದಿಂದ 1 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.
ಕಿಂಗ್ ಆಫ್ ಕೋಥಾ ಚಲನಚಿತ್ರವು ಮಲಯಾಳಂ, ತಮಿಳು, ತೆಲುಗು, ಕನ್ನಡ ಮತ್ತು ಹಿಂದಿಯಲ್ಲಿ ಅಂದರೆ ಐದು ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಸಿನಿಮಾವಾಗಿ ಬಿಡುಗಡೆಗೆ ಸಿದ್ಧವಾಗಿದೆ.


Click it and Unblock the Notifications










