ದುನಿಯಾ ವಿಜಯ್ 20 ಕೋಟಿ ಬಜೆಟ್ ಚಿತ್ರ

By Rajendra

Actor Duniya Vijay
ಕನ್ನಡ ಚಿತ್ರೋದ್ಯಮದಲ್ಲಿ ತನ್ನದೇ ಆದಂತಹ ಪ್ರೇಕ್ಷಕ ವರ್ಗ ನಟ ದುನಿಯಾ ವಿಜಯ್ ಅವರಿಗಿದೆ. ಅವರ ಪಕ್ಕಾ ಮಾಸ್ ಚಿತ್ರಗಳನ್ನು ಇಷ್ಟಪಡುವವರಿಗೂ ಬರವಿಲ್ಲ. ಈಗ ದುನಿಯಾ ವಿಜಯ್ ಮತ್ತೊಂದು ಭಾರಿ ಬಜೆಟ್ ಚಿತ್ರಕ್ಕೆ ಸಜ್ಜಾಗಿದ್ದಾರೆ.

ಇದೊಂದು ತ್ರಿಭಾಷಾ ಚಿತ್ರವಾಗಿದ್ದು ಕನ್ನಡ, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಬರಲಿದೆ. ಕಾಮರಾಜನ್ ಎಂಬುವವರು ನಿರ್ಮಿಸುತ್ತಿರುವ ಚಿತ್ರಕ್ಕೆ ನಾಗರಾಜನ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಹಿಂದೆ ಇವರು 'ಅರವಿಂದನ್' ಹಾಗೂ 'ವಂದೇ ಮಾತರಂ' ಚಿತ್ರಗಳನ್ನು ನಿರ್ದೇಶಿಸಿದ್ದರು.

ಚಿತ್ರದ ಶೀರ್ಷಿಕೆ ಬಗ್ಗೆ ಇನ್ನೂ ಅಂತಿಮ ನಿರ್ಧಾರಕ್ಕೆ ಬಂದಿಲ್ಲ. ಮೂರು ಭಾಷೆಗಳಿಗೆ ಸೂಕ್ತ ಎನ್ನಿಸುವ ಶೀರ್ಷಿಕೆಗಾಗಿ ಹುಡುಕಾಟ ನಡೆದಿದೆ. ಇನ್ನು ಚಿತ್ರದ ಕಥೆ ಬಗ್ಗೆ ಹೇಳುವುದಾದರೆ ಇದೊಂದು ಮಾಸ್ ಚಿತ್ರವಾಗಿದ್ದು ಭೂಗತ ಜಗತ್ತಿನ ಹಿನ್ನೆಲೆಯಲ್ಲಿ ಸಾಗುತ್ತದೆ ಎನ್ನುತ್ತಾರೆ ನಿರ್ದೇಶಕರು.

ಚಿತ್ರದ ಬಹುತೇಕ ಚಿತ್ರೀಕರಣ ಇಟಲಿಯಲ್ಲಿ ನಡೆಲಿದೆ. ಉಳಿದ ಭಾಗದ ಚಿತ್ರೀಕರಣ ಬೆಂಗಳೂರು, ಮೈಸೂರು, ಮಡಿಕೇರಿ, ಚೆನ್ನೈ, ಕೊಚ್ಚಿನ್ ನಲ್ಲಿ ನಡೆಯಲಿದೆ. ಚಿತ್ರದ ನಿರ್ಣಾಯಕ ಪಾತ್ರವನ್ನು ಶರತ್ ಕುಮಾರ್ ಪೋಷಿಸಲಿದ್ದಾರೆ. ಬಹುಶಃ ಫೆಬ್ರವರಿಯಲ್ಲಿ ಚಿತ್ರ ಸೆಟ್ಟೇರುವ ಸಾಧ್ಯತೆಗಳಿವೆ.

ಚಿತ್ರದ ಉಳಿದ ಪಾತ್ರವರ್ಗ, ತಾಂತ್ರಿಕ ಬಳಗವನ್ನು ಶೀರ್ಘದಲ್ಲೇ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಮೂರು ಭಾಷೆಗಳಿಗೆ ಸೂಕ್ತ ನಾಯಕನಿಗಾಗಿ ಹುಡುಕಿದಾಗ ತಮ್ಮ ಮನಸ್ಸಿಗೆ ಹೊಳೆದದ್ದು ದುನಿಯಾ ವಿಜಯ್. ಅವರೇ ಈ ಚಿತ್ರಕ್ಕೆ ಸೂಕ್ತ ಎನ್ನಿಸಿತು ಎನ್ನುತ್ತಾರೆ ನಾಗರಾಜನ್. (ಏಜೆನ್ಸೀಸ್)

More from Filmibeat

English summary
Kannada films mass hero Duniya Vijay signed for Rs 20 cr budget film which will be made in Kannada, Tamil and Malayalam. The film being produced by Kamarajan and directed by Nagarajan.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X