Navya Nair: ಮನಿಲ್ಯಾಂಡರಿಂಗ್ ಪ್ರಕರಣ: IRS ಅಧಿಕಾರಿ ಜೊತೆ ಸ್ನೇಹ.. ಉಡುಗೊರೆ: 'ಗಜ' ನಟಿಗೆ ED ಸಂಕಷ್ಟ

ಮನಿಲ್ಯಾಂಡರಿಂಗ್ ಪ್ರಕರಣದಲ್ಲಿ ಇಡಿ ಅಧಿಕಾರಿಗಳು ಬಹುಭಾಷಾ ನಟಿ ನವ್ಯಾ ನಾಯರ್‌ ವಿಚಾರಣೆ ನಡೆಸಿದ್ದಾರೆ. ಕೇರಳದಲ್ಲಿ ಮನಿಲ್ಯಾಂಡರಿಂಗ್ ಪ್ರಕರಣ ಸಂಬಂಧ ಐಆರ್‌ಎಸ್ ಅಧಿಕಾರಿ ಸಚಿನ್ ಸಾವಂತ್ ಬಂಧನವಾಗಿದೆ. ಸಚಿನ್ ಸಾವಂತ್ ಹಾಗೂ ನಟಿ ನವ್ಯಾ ನಾಯರ್‌ಗೆ ಒಡನಾಟ ಇತ್ತು ಎಂದು ಇಡಿ ಅಧಿಕಾರಿಗಳು ಗುರ್ತಿಸಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಆಕೆಯನ್ನು ಮುಂಬೈಗೆ ಕರೆಸಿ ಪ್ರಶ್ನಿಸಲಾಗಿದ್ದು ಆಕೆಯ ಹೇಳಿಕೆ ದಾಖಲಿಸಿಕೊಂಡಿದ್ದಾರೆ.

ಸಿಬಿಐ ದಾಖಲಿಸಿರುವ ಎಫ್‌ಐಆರ್ ಪ್ರಕಾರ ಸಚಿನ್ ಸಾವಂತ್ ಮನಿಲ್ಯಾಂಡರಿಂಗ್‌ನಲ್ಲಿ ಭಾಗಿ ಆಗಿರುವುದಾಗಿ ಸಾಕ್ಷ್ಯಾಧಾರಗಳು ಲಭ್ಯವಾಗಿದೆ. ತನಿಖೆ ವೇಳೆ ಆತನ ಮೊಬೈಲ್ ಡೇಟಾ ಪರಿಶೀಲಿಸಲಾಗಿತ್ತು. ಅದರಲ್ಲಿ ಆತನ ವಾಟ್ಸಾಪ್ ಚಾಟಿಂಗ್ ದಾಖಲೆ ಸಂಗ್ರಹಿಸಿದ್ದರು. ಇದರಲ್ಲಿ ನಟಿ ನವ್ಯಾ ನಾಯರ್ ಜೊತೆಗೆ ಆತನಿಗೆ ಆತ್ಮೀಯ ಒಡನಾಟ ಇರುವುದು ಇಡಿ ಅಧಿಕಾರಿಗಳಿಗೆ ಗೊತ್ತಾಗಿತ್ತು. ಆಕೆಯನ್ನು ಭೇಟಿ ಮಾಡಿ ಸಚಿನ್ ಸಾವಂತ್ ಬಾರಿ ಕೊಚ್ಚಿನ್‌ಗೆ ಹೋಗಿರುವುದು ಗೊತ್ತಾಗಿದೆ. ಈ ವಿಚಾರವಾಗಿ ಅಧಿಕಾರಿಗಳು ಪ್ರಶ್ನಿಸಿದಾಗ ನನಗೂ ಆತನಿಗೂ ಯಾವುದೇ ಸಂಬಂಧ ಇಲ್ಲ ಎಂದು ನವ್ಯಾ ಹೇಳಿರುವುದಾಗಿ ವರದಿಯಾಗಿದೆ.

ED has questioned Navya Nair in a money laundering case against IRS officer Sachin Sawant

ನಾವಿಬ್ಬರು ಬರೀ ಸ್ನೇಹಿತರು ಅಷ್ಟೇ ಎಂದು ನವ್ಯಾ ವಿಚಾರಣೆಯಲ್ಲಿ ಹೇಳಿದ್ದಾರೆ. ಆದರೆ ಸಚಿನ್ ಸಾವಂತ್ ಉಡುಗೊರೆಯಾಗಿ ನವ್ಯಾಗೆ ಭಾರೀ ಮೌಲ್ಯದ ಚಿನ್ನಾಭರಣ ಸೇರಿದಂತೆ ಹಲವು ಬೆಲೆ ಬಾಳುವ ವಸ್ತುಗಳನ್ನು ನೀಡಿರುವುದು ದಾಖಲೆ ಸಮೇತ ವಿಚಾರಣೆಯಲ್ಲಿ ಬಯಲಾಗಿದೆ. ಈ ಬಗ್ಗೆ ಮಾತನಾಡಿರುವ ಆಕೆ "ಸ್ನೇಹದ ಸಂಕೇತವಾಗಿ ಚಿನ್ನಾಭರಣ, ಉಡುಗೊರೆ ನೀಡಿದ್ದರು. ಅದು ಬಿಟ್ಟು ಬೇರೇನು ಇಲ್ಲ. ಸಚಿನ್ ನಮ್ಮ ನೆರೆಹೊರೆಯವರಾಗಿದ್ದರು. ಹಾಗಾಗಿ ಪರಿಚಯವಾಗಿತ್ತು. ಇನ್ನು ಸಚಿನ್ ಗುರುವಾಯೂರು ದೇವಸ್ಥಾನಕ್ಕೆ ಭೇಟಿ ನೀಡಲು ಆಕೆ ವ್ಯವಸ್ಥೆ ಮಾಡಿದ್ದು ವಿಚಾರಣೆ ವೇಳೆ ತಿಳಿದು ಬಂದಿದೆ.

ಸಚಿನ್ ಜೊತೆ ಸ್ನೇಹ ಬಿಟ್ಟರೆ ಮತ್ಯಾವುದೇ ಸಂಬಂಧ ಇಲ್ಲ. ನಮ್ಮ ಮಗವಿಗೂ ಚಿನ್ನಾಭರಣ ಉಡುಗೊರೆ ಕೊಟ್ಟಿದ್ದರು ಎಂದು ನವ್ಯಾ ಹೇಳಿಕೆ ನೀಡಿದ್ದಾರೆ. ಸಚಿನ್ ಯಾರು ಎನ್ನುವುದನ್ನು ನೋಡುವುದಾಗರೇ ಆತ ಈ ಹಿಂದೆ ಇಡಿ ಮುಂಬೈ ವಲಯ ಕಚೇರಿಯ ಉಪ ನಿರ್ದೇಶಕರಾಗಿ ನೇಮಕಗೊಂಡಿದ್ದರು. ಸಿಬಿಐ ಆತನ ಭ್ರಷ್ಟಾಚಾರ, ಆದಾಯಕ್ಕೂ ಮೀರಿದ ಆಸ್ತಿ ಹೊಂದಿದ್ದ ಆರೋಪದಲ್ಲಿ ಕೇಸು ದಾಖಲಿಸಿತ್ತು. ಸದ್ಯ ಕಸ್ಟಮ್ಸ್, ಜಿಎಸ್‌ಟಿ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಆದರೆ ಆತ ಮನಿಲ್ಯಾಂಡರಿಂಗ್ ವ್ಯವಹಾರ ನಡೆಸಿದ್ದರು ಎಂದು ದಾಖಲೆ ಸಿಕ್ಕಿದ ಹಿನ್ನೆಲೆ ಸಿಬಿಐ ಅಧಿಕಾರಿಗಳು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಕೇರಳದ ಅಳಪುಳ ಮುತ್ತುಕುಳಂನಲ್ಲಿ ಹುಟ್ಟಿ ಬೆಳೆದ ನವ್ಯಾ ನಾಯರ್, 2001ರಲ್ಲಿ ಚಿತ್ರರಂಗ ಪ್ರವೇಶಿಸಿದರು. ಮಲಯಾಳಂನ 'ಇಷ್ಟಂ' ಆಕೆಯ ಚೊಚ್ಚಲ ಸಿನಿಮಾ. ನಂತರ ಸಾಲು ಸಾಲು ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ ಚೆಲುವೆ ನಿಧಾನವಾಗಿ ತಮಿಳು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಕನ್ನಡದ ಸೂಪರ್ ಹಿಟ್ 'ಗಜ' ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೋಡಿಯಾಗಿ ನಟಿಸಿದ್ದರು. 'ಐತಲಕಡಿ' ಚಿತ್ರದಲ್ಲಿ ದರ್ಶನ್- ನವ್ಯಾ ಡ್ಯಾನ್ಸ್ ಅಭಿಮಾನಿಗಳ ಮನಗೆದ್ದಿತ್ತು.

'ಗಜ' ಬಳಿಕ ಸಾಹಸಸಿಂಹ ವಿಷ್ಣುವರ್ಧನ್ ಜೊತೆ 'ನಮ್‌ ಯಜಮಾನ್ರು' ಸಿನಿಮಾದಲ್ಲಿ ನವ್ಯಾ ನಾಯರ್ ಬಣ್ಣ ಹಚ್ಚಿದ್ದರು. 'ಭಾಗ್ಯದ ಬಳೆಗಾರ', 'ಬಾಸ್', 'ದೃಶ್ಯ' ಹಾಗೂ 'ದೃಶ್ಯ- 2' ಸಿನಿಮಾಗಳಲ್ಲಿ ನವ್ಯಾ ನಟಿಸಿ ಪ್ರೇಕ್ಷಕರ ಮನಗೆದ್ದಿದ್ದಾರೆ.

13 ವರ್ಷಗಳ ಹಿಂದೆ ಸಂತೋಷ್ ಮೆನನ್ ಎಂದುವವರ ಕೈ ಹಿಡಿದರು. ದಂಪತಿಗೆ ಸಾಯಿ ಕೃಷ್ಣ ಎನ್ನುವ ಮಗನೂ ಇದ್ದಾನೆ. ಮದುವೆ ಬಳಿಕವೂ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಆಕೆ ಮೋಡಿ ಮಾಡಿದ್ದಾರೆ. 2 ತಿಂಗಳ ಹಿಂದೆ ಬಿಡುಗಡೆಯಾದ 'ಜಾನಕಿ ಜಾನೆ' ಆಕೆಯ ನಟಿಸಿದ ಕೊನೆಯ ಸಿನಿಮಾ.

More from Filmibeat

English summary
Money Laundering Case: Navya Nair questioned by ED in connection with IRS Sachin Sawant
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X