ಸುದೀಪ್ ನಾಯಕಿಗೆ ಪತಿಯಿಂದ ದುಬಾರಿ ಕಾರ್ ಗಿಫ್ಟ್; ಅಲ್ಲೇ ಮುತ್ತಿನ ಮಳೆ ಸುರಿಸಿದ ಚೆಲುವೆ

By ಫಿಲ್ಮಿಬೀಟ್ ಡೆಸ್ಕ್

ಸ್ಟಾರ್ ನಟ, ನಟಿಯರು ಐಷಾರಾಮಿ ಜೀವನ ಸಾಗಿಸುತ್ತಾರೆ. ದುಬಾರಿ ಕಾರುಗಳಲ್ಲಿ ಸುತ್ತಾಡುತ್ತಾರೆ. ಕೋಟಿ ಕೋಟಿ ಬೆಲೆಯ ಉಡುಗೊರೆಗಳು ಅವರಿಗೆ ಸಿಗುತ್ತದೆ. ಕೆಲ ಸ್ಟಾರ್ ನಟಿಯರು ಉದ್ಯಮಿಗಳ ಕೈ ಹಿಡಿದಿದ್ದಾರೆ. ಅವರ ಜೀವನ ಶೈಲಿಯೇ ಬಹಳ ಆಡಂಬರದಿಂದ ಕೂಡಿರುತ್ತದೆ.

ಮಾಲಿವುಡ್ ನಟಿ ಅಮಲಾ ಪೌಲ್ ಕನ್ನಡದ 'ಹೆಬ್ಬುಲಿ' ಚಿತ್ರದಲ್ಲಿ ಕೂಡ ನಟಿಸಿದ್ದಾರೆ. ತೆಲುಗು, ತಮಿಳು ಸಿನಿಮಾಗಳಲ್ಲಿ ಬಣ್ಣ ಹಚ್ಚಿ ಸೈ ಎನಿಸಿಕೊಂಡಿದ್ದಾರೆ. ತಮಿಳು ಚಿತ್ರ ನಿರ್ದೇಶಕ ಎ. ಎಲ್. ವಿಜಯ್ ಕೈ ಹಿಡಿದಿದ್ದ ಆಕೆ ಬಳಿಕ ಡಿವೋರ್ಸ್ ಪಡೆದು ದೂರಾಗಿದ್ದರು. ಎರಡು ವರ್ಷಗಳ ಹಿಂದೆ ಉದ್ಯಮಿ ಜಗತ್ ದೇಸಾಯಿ ಜೊತೆ ಅಮಲಾ 2ನೇ ಮದುವೆ ಆಗಿದ್ದರು.

Famous Actress Gets surprise BMW Car From her Husband

ಮದುವೆಯಾದ ಕೆಲವೇ ತಿಂಗಳಲ್ಲಿ ಗಂಡು ಮಗುವಿಗೆ ಅಮಲಾ ಜನ್ಮ ನೀಡಿದ್ದರು. ಮಗನಿಗೆ 'ಇಳೈ' ಎಂದು ನಾಮಕರಣ ಮಾಡಿದ್ದಾರೆ. ಇತ್ತೀಚೆಗೆ ಅಮಲಾ ಮಲಯಾಳಂ ಸಿನಿಮಾಗಳಲ್ಲಿ ಹೆಚ್ಚು ನಟಿಸುತ್ತಿದ್ದಾರೆ. ಇದೆಲ್ಲದರ ನಡುವೆ ಆಕೆಗೆ ಪತಿ ಜಗತ್ ದೇಸಾಯಿ ದುಬಾರಿ ಕಾರ್ ಉಡುಗೊರೆಯಾಗಿ ನೀಡಿದ್ದಾರೆ. ಅದಕ್ಕೆ ಸಂಬಂಧಿಸಿದ ವೀಡಿಯೋ ವೈರಲ್ ಆಗುತ್ತಿದೆ.

ಬಿಎಂಡಬ್ಲಯೂ 7 ಸೀರಿಸ್ ಕಾರ್ ಅನ್ನು ಜಗತ್ ತಮ್ಮ ಪತ್ನಿಗೆ ಗಿಫ್ಟ್ ಮಾಡಿದ್ದಾರೆ. ಆ ಕಾರ್ ಅನ್ನು ನೋಡಿ ಅಮಲಾ ಬಹಳ ಥ್ರಿಲ್ ಆಗಿದ್ದು ಅಲ್ಲೇ ಪತಿ ಮುತ್ತಿಟ್ಟಿದ್ದಾರೆ. ನಮ್ಮ ಕುಟುಂಬಕ್ಕೆ ಹೊಸ ಅತಿಥಿ ಆಗಮನ ಎಂದು ಅಮಲಾ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ. ಕಳೆದ ವರ್ಷ 'ದಿ ಗೋಟ್ ಲೈಫ್' ಹಾಗೂ 'ಲೆವೆಲ್ ಕ್ರಾಸ್' ಸಿನಿಮಾಗಳಲ್ಲಿ ಅಮಲಾ ನಟಿಸಿದ್ದರು.

ಅಂದಹಾಗೆ BMW 7 ಸಿರೀಸ್ ಕಾರಿನ ದರ ಬರೋಬ್ಬರಿ 2 ಕೋಟಿ ರೂ. ಇದೆ. 1.84 ಕೋಟಿ ರೂ. ಇಂದ ಕಾರಿನ ದರ ಆರಂಭವಾಗುತ್ತದೆ. ಅಭಿಮಾನಿಗಳು ಲೈಕ್ಸ್, ಕಾಮೆಂಟ್ಸ್ ಮೂಲಕ ವೀಡಿಯೋಗೆ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಈಗಾಗಲೇ ಅಮಲಾ- ಜಗತ್ ದಂಪತಿ ಬಳಿ ಸಾಕಷ್ಟು ಐಷಾರಾಮಿ ಕಾರುಗಳಿವೆ. ಆ ಪಟ್ಟಿಗೆ ಈ BMW ಕಾರ್ ಹೊಸ ಸೇರ್ಪಡೆಯಾಗಿದೆ.

ಬೋಲ್ಡ್ ನಟಿ ಅಮಲಾ ಪೌಲ್ ಸಾಕಷ್ಟು ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. 16 ವರ್ಷಗಳ ಹಿಂದೆ 'ನೀಲತಾಮರ' ಎಂಬ ಮಲಯಾಳಂ ಚಿತ್ರದಲ್ಲಿ ಮೊದಲಿಗೆ ನಟಿಸಿದ್ದರು. ಬಳಿಕ ಬಂದಿದ್ದ ತಮಿಳಿನ 'ಮೈನಾ' ಸಿನಿಮಾ ದೊಡ್ಡ ಬ್ರೇಕ್ ನೀಡಿತ್ತು. ಮುಂದೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದರು. ತಮಿಳಿನಲ್ಲಿ 'ತಲೈವಾ' ಚಿತ್ರದಲ್ಲಿ ದಳಪತಿ ವಿಜಯ್ ಜೊತೆ ನಟಿಸಿದ್ದರು. ಆ ಚಿತ್ರಕ್ಕೆ ಎ. ಎಲ್ ವಿಜಯ್ ಆಕ್ಷನ್ ಕಟ್ ಹೇಳಿದ್ದರು.

ಈ ಸಿನಿಮಾ ಚಿತ್ರೀಕರಣದ ಸಮಯದಲ್ಲೇ ನಿರ್ದೇಶಕ ಎ. ಎಲ್ ವಿಜಯ್ ಹಾಗೂ ಅಮಲಾ ಪೌಲ್ ನಡುವೆ ಲವ್ವಾಗಿತ್ತು. 2014ರಲ್ಲಿ ಮದುವೆ ಕೂಡ ಆಗಿದ್ದರು. 3 ವರ್ಷಗಳ ಬಳಿಕ ಭಿನ್ನಾಭಿಪ್ರಾಯಗಳಿಂದ ದೂರಾಗಿದ್ದರು. ಆ ಬಳಿಕ ಮುಂಬೈ ಮೂಲದ ಗಾಯಕ ಭವನಿಂದರ್ ಸಿಂಗ್ ಜೊತೆ ಅಮಲಾ ಮದುವೆ ನಡೆದಿದೆ ಎನ್ನಲಾಗಿತ್ತು. ಅದಕ್ಕೆ ಸಂಬಂಧಿಸಿದ ಫೋಟೊಗಳು ವೈರಲ್ ಆಗಿತ್ತು. ಬಳಿಕ ಅದೆಲ್ಲಾ ಸುಳ್ಳು ಎಂದು ಅಮಲಾ ಹೇಳಿದ್ದರು.

ಅದು ಜಾಹೀರಾತು ಚಿತ್ರೀಕರಣದ ಸನ್ನಿವೇಶ. ನಾವಿಬ್ಬರು ಮದುವೆ ಆಗಿಲ್ಲ ಎಂದಿದ್ದರು. ಗಾಯಕ ಭವನಿಂದರ್ ಸಿಂಗ್ ವಿರುದ್ಧ ಕಿರುಕುಳದ ಆರೋಪ ಮಾಡಿ ಅಮಲಾ ದೂರು ದಾಖಲಿಸಿದ್ದರು. ಆ ಬಳಿಕ ಜಗತ್ ಪರಿಚಯವಾಗಿತ್ತು. ಗುಜರಾತ್ ಮೂಲದ ಜಗತ್ ಗೋವಾದಲ್ಲಿ ನೆಲೆಸಿದ್ದರು. ಕೊಚ್ಚಿಯ ರೆಸಾರ್ಟ್‌ವೊಂದರಲ್ಲಿ ಇಬ್ಬರ ಮದುವೆ ನಡೆದಿತ್ತು. ಈವೆಂಟ್ ಮ್ಯಾನೇಜ್‌ಮೆಂಟ್ ಕಂಪನಿಯನ್ನು ಜಗತ್ ಹೊಂದಿದ್ದಾರೆ.

More from Filmibeat

English summary
Actress receives a special gift from husband, kissed him;
Read more about: amala paul mollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X