For Quick Alerts
  ALLOW NOTIFICATIONS  
  For Daily Alerts

  ದೇವರಮನೆಯಲ್ಲಿ 'ನಟಸಾರ್ವಭೌಮ' ನಟಿಯ ಫೋಟೊ: ಅಭಿಮಾನಿಯ ಅಭಿಮಾನಕ್ಕೆ ಅನುಪಮಾ ಫಿದಾ

  By ಫಿಲ್ಮಿಬೀಟ್ ಡೆಸ್ಕ್
  |

  ಸಿನಿಮಾತಾರೆಯರ ಮೇಲೆ ಪ್ರೇಕ್ಷಕರಿಗೆ ವಿಶೇಷವಾದ ಪ್ರೀತಿ. ಅಪಾರ ಸಂಖ್ಯೆಯ ಅಭಿಮಾನಿ ಬಳಗಹೊಂದಿರುತ್ತಾರೆ. ಅಭಿಮಾನಿಗಳು ತಮ್ಮ ನೆಚ್ಚಿನ ತಾರೆಯರ ಮೇಲಿನ ಅಭಿಮಾನವನ್ನು ನಾನಾರೀತಿ ವ್ಯಕ್ತಪಡಿಸುತ್ತಿರುತ್ತಾರೆ. ತಮ್ಮ ನೆಚ್ಚಿನ ಹೀರೋಗಳ ಫೋಟೋ ಇಟ್ಟುಕೊಳ್ಳುವುದು, ಪೂಜೆ ಮಾಡುವುದು, ಹೆಸರನ್ನು ಹಚ್ಚೆ ಹಾಕಿಸಿಕೊಳ್ಳುವುದು ಹೀಗೆ ನಾನಾರೀತಿ ತೋರ್ಪಡಿಸುತ್ತಾರೆ.

  ಅಭಿಮಾನಿಗಳ ವಿಚಿತ್ರ ಪ್ರೀತಿ ಹೀರೋಗಳ ಮೇಲೆ ಮಾತ್ರವಲ್ಲದೆ ನಟಿಯರ ಮೇಲೂ ವ್ಯಕ್ತಪಡಿಸುತ್ತಾರೆ. ಇದಕ್ಕೆ ಉದಾಹರಣೆ ಎಂದರೆ ಅಭಿಮಾನಿಯೊಬ್ಬ ಕನ್ನಡದ ನಟಸಾರ್ವಭೌಮ ಸಿನಿಮಾದಲ್ಲಿ ಮಿಂಚಿದ್ದ ನಟಿ ಅನುಪಮಾ ಪರಮೇಶ್ವರನ್ ಫೋಟೋವನ್ನು ದೇವರ ಮನೆಯಲ್ಲಿಟ್ಟು ಪ್ರತಿದಿನ ಪೂಜೆ ಮಾಡುತ್ತಿದ್ದಾರೆ. ಈ ಮೂಲಕ ತನ್ನ ಅಭಿಮಾನ, ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.

  ಪುನೀತ್ ರಾಜ್ ಕುಮಾರ್ ನಟನೆಯ ನಟಸಾರ್ವಭೌಮ ಸಿನಿಮಾ ಮೂಲಕ ಕನ್ನಡ ಪ್ರೇಕ್ಷಕರಿಗೆ ಪರಿಚಿತರಾದ ನಟಿ ಅನುಪಮಾ ಪರಮೇಶ್ವರನ್. ಕೇರಳ ಮೂಲದ ಅನುಪಮಾ, ದಕ್ಷಿಣ ಭಾರತದ ಎಲ್ಲಾ ಭಾಷೆಯಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಅಪಾರ ಸಂಖ್ಯೆಯ ಅಭಿಮಾನಿ ಬಳಗ ಹೊಂದಿರುವ ಅನುಪಮಾ ಮೇಲೆ ಅಭಿಮಾನಿಗಳು ನಾನಾರೀತಿ ಪ್ರೀತಿ ವ್ಯಕ್ತಪಡಿಸುತ್ತಿದ್ದಾರೆ.

  ಆದರೀಗ ಈ ವಿಶೇಷ ಅಭಿಮಾನಿಯ ಅಭಿಮಾನ ಎಲ್ಲರ ಗಮನ ಸೆಳೆಯುತ್ತಿದೆ. ಪೂಜೆಯ ಫೋಟೋ ಶೇರ್ ಮಾಡಿ ಅನುಪಮಾ ಅವರ ದೊಡ್ಡ ಅಭಿಮಾನಿ ಎಂದು ಬರೆದುಕೊಂಡಿದ್ದಾರೆ. ಅಭಿಮಾನಿಯ ವಿಶೇಷ ಪ್ರೀತಿಗೆ ಅನುಪಮಾ ಮೂಕವಿಸ್ಮಿತರಾಗಿದ್ದಾರೆ.

  ದೇವರ ಮನೆಯಲ್ಲಿ ದೇವರ ಫೋಟೋ ಜೊತೆಗೆ ಅನುಪಮಾ ಅವರ ದೊಡ್ಡ ಫೋಟೋವನ್ನು ಇಡಲಾಗಿದೆ. ದೇವರ ಫೋಟೋಗಳಿಗೆ ಪೂಜೆ ಮಾಡುವ ಹಾಗೆ ಅನುಪಮಾ ಫೋಟೋಗೂ ಪೂಜೆ ಮಾಡುತ್ತಿದ್ದಾರೆ. ಈ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

  Fan did Pooja for Actress Anupama Parameswaran photo

  ನಟಿ ಅನುಪಮಾ ಪ್ರೇಮಂ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಮೊದಲ ಸಿನಿಮಾದಲ್ಲೇ ದೊಡ್ಡ ಮಟ್ಟದ ಖ್ಯಾತಿಗಳಿಸಿದ ಅನುಪಮಾ ಬಳಿಕ ಮಲಯಾಳಂನಿಂದ ತೆಲುಗು ಚಿತ್ರರಂಗದ ಕಡೆ ಮುಖಮಾಡಿದರು. ಮಲಯಾಳಂ ಜೊತೆಗೆ ತಮಿಳು, ತೆಲುಗು ಮತ್ತು ಕನ್ನಡ ಮೂರು ಭಾಷೆಯಲ್ಲೂ ನಟಿಸಿದ್ದಾರೆ. ಸದ್ಯ ಅನುಪಮಾ ಬಳಿ ಒಂದು ತಮಿಳು ಮತ್ತು ತೆಲುಗು ಸಿವಿಮಾವಿದೆ.

  English summary
  Fan did Pooja for Actress Anupama Parameswaran photo.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X