ಬಿಕಿನಿ ಫೋಟೋ ಕಳುಹಿಸಿ ಎಂದ ನೆಟ್ಟಿಗನಿಗೆ ಅನುಪಮಾ ಕೊಟ್ಟ ಉತ್ತರ ಸಖತ್ ವೈರಲ್

By ಫಿಲ್ಮಿಬೀಟ್ ಡೆಸ್ಕ್

ಮಲಯಾಳಂನ ಖ್ಯಾತ ನಟಿ ಅನುಪಮಾ ಪರಮೇಶ್ವರನ್ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ದಕ್ಷಿಣ ಭಾರತದ ಎಲ್ಲಾ ಭಾಷೆಯಲ್ಲೂ ನಟಿಸಿರುವ ಅನುಪಮಾ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದಾರೆ. ಸೂಪರ್ ಹಿಟ್ ಪ್ರೇಮಂ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಅನುಪಮಾಗೆ ಮೊದಲ ಸಿನಿಮಾವೇ ದೊಡ್ಡ ಮಟ್ಟದ ಖ್ಯಾತಿ ತಂದುಕೊಟ್ಟಿದೆ.

ಅನುಪಮಾ ಕನ್ನಡ ಚಿತ್ರಪ್ರೇಕ್ಷಕರಿಗೂ ಚಿರಪರಿಚಿತರು. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ನಟಸಾರ್ವಭೌಮ ಸಿನಿಮಾದಲ್ಲಿ ಅನುಪಮಾ ನಾಯಕಿಯಾಗಿ ನಟಿಸುವ ಮೂಲಕ ಮೊದಲ ಬಾರಿಗೆ ಕನ್ನಡಕ್ಕೆ ಕಾಲಿಟ್ಟಿದ್ದರು. ಸದಾ ಸಾಂಪ್ರದಾಯಿಕ ಉಡುಗೆಯಲ್ಲಿ ಕಂಗೊಳಿಸುವ ಅನುಪಮಾ ಆಗಾಗ ಸುಂದರ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುತ್ತಿರುತ್ತಾರೆ.

ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟೀವ್ ಆಗಿರುವ ಅನುಪಮಾ ಆಗಾಗ ಅಭಿಮಾನಿಗಳ ಜೊತೆ ಸಂವಾದ ನಡೆಸುತ್ತಿರುತ್ತಾರೆ. ಅಭಿಮಾನಿಗಳು ಕೇಳುವ ಪ್ರಶ್ನೆಗೆ ಉತ್ತರಿಸುತ್ತಿರುತ್ತಾರೆ. ಇತ್ತೀಚಿಗೆ ಅನುಪಮಾ ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆಗಳನ್ನು ಕೇಳಿ ಎಂದು ಅಭಿಮಾನಿಗಳಿಗೆ ಹೇಳಿದ್ದರು. ಅನುಪಮಾ ಹೇಗೆ ಹೇಳುತ್ತಿದ್ದಂತೆ ಅಭಿಮಾನಿಗಳಿಂದ ಸಾಲು ಸಾಲು ಪ್ರಶ್ನೆಗಳ ಸುರಿಮಳೆಯೇ ಬಂದಿತ್ತು.

Fan wants to share bikini photo of Actress Anupama parameswaran

ತರಹೇವಾರಿ ಪ್ರಶ್ನೆಗಳನ್ನು ಅಭಿಮಾನಿಗಳು ಕೇಳಿದ್ದರು. ಮುಂದಿನ ಸಿನಿಮಾ ಯಾವುದು?, ಸದ್ಯ ಯಾವ ಸಿನಿಮಾದಲ್ಲಿ ನಟಿಸುತ್ತಿದ್ದೀರಿ, ತಮಿಳಿನಲ್ಲಿ ಮಾತನಾಡಿ, ತೆಲುಗಿನಲ್ಲಿ ಮಾತನಾಡಿ ಹೀಗೆ ಮಾಮೂಲಿ ಒಂದಿಷ್ಟು ಪ್ರಶ್ನೆಗಳು ಹರಿದುಬಂದಿವೆ. ಈ ನಡುವೆ ನೆಟ್ಟಿಗನೊಬ್ಬ ಅನುಪಮಾ ಅವರ ಬಿಕಿನಿ ಫೋಟೋ ಶೇರ್ ಮಾಡಿ ಎಂದು ಕೇಳಿದ್ದಾರೆ. ನೆಟ್ಟಿಗನಿಗೆ ಅನುಪಮಾ ಸರಿಯಾದ ಉತ್ತರ ನೀಡಿದ್ದಾರೆ.

ಬಿಕಿನಿ ಫೋಟೋ ಕಳುಹಿಸಿ ಎಂದು ನೆಟ್ಟಿಗನಿಗೆ ಅನುಪಮಾ ಪ್ರತಿಕ್ರಿಯೆ ನೀಡಿ, "ಬಿಕಿನಿ ಫೋಟೋ ಬೇಕೆ? ನಿಮ್ಮ ವಿಳಾಸ ಕಳುಹಿಸಿ ನಾನು ಫೋಟೋ ಕಳುಹಿಸುತ್ತೇನೆ. ಅದಕ್ಕೆ ಫ್ರೇಮ್ ಹಾಕಿಸಿ ನಿಮ್ಮ ಮನೆಯ ಗೋಡೆಯಲ್ಲಿ ಹಾಕಿಕೊಳ್ಳಿ" ಎಂದು ಹೇಳಿದ್ದಾರೆ. ಅನುಪಮಾ ಅವರ ಈ ಪ್ರತಿಕ್ರಿಯೆ ಈಗ ಎಲ್ಲ ಕಡೆ ವೈರಲ್ ಆಗಿದೆ. ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ ಅನುಪಮಾ ಸದ್ಯ ತಮಿಳು ಮತ್ತು ತೆಲುಗು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ತೆಲುಗಿನಲ್ಲಿ ನಾಲ್ಕು ಸಿನಿಮಾಗಳಲ್ಲಿ ನಟಿಸುತ್ತಿರುವ ಅನುಪಮಾ ಅಭಿಮಾನಿಗಳ ಮುಂದೆ ಬರಲು ಕಾತರದಿಂದ ಕಾಯುತ್ತಿದ್ದಾರೆ. ಕೊನೆಯದಾಗಿ ಮಲಯಾಳಂ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು.

ಇನ್ನು ಕನ್ನಡದಲ್ಲಿ ಒಂದು ಸಿನಿಮಾದಲ್ಲಿ ನಟಿಸಿದ್ದ ಅನುಪಮಾ ಮತ್ತೆ ಕನ್ನಡ ಪ್ರೇಕ್ಷಕರ ಮುಂದೆ ಬಂದಿಲ್ಲ. ಹಾಗಾಗಿ ಕನ್ನಡದಲ್ಲಿ ಅನುಪಮಾ ಮತ್ತೆ ಯಾವಾಗ ನಟಿಸುತ್ತಾರೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಆದಷ್ಟು ಬೇಗ ಕನ್ನಡದಲ್ಲಿಯೂ ಸಿನಿಮಾ ಮಾಡಲಿ ಎನ್ನುವುದು ಅನುಪಮಾ ಅಭಿಮಾನಿಗಳ ಆಶಯ.

More from Filmibeat

English summary
Fan wants to share bikini photo of Actress Anupama parameswaran.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X