ಯುವನಟಿ ಅನುಮಾನಾಸ್ಪದ ಸಾವು: ಪೊಲೀಸರ ವಶಕ್ಕೆ ಪತಿ
ಮಾಡೆಲ್ ಹಾಗೂ ಪಾರ್ಟ್ ಟೈಮ್ ನಟಿಯಾಗಿದ್ದ ಕಾಸರಗೋಡಿನ ಯುವತಿ ಶಹಾನಾ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದಾರೆ. ಶಹಾನಾಗೆ ಕೇವಲ 20 ವರ್ಷ ವಯಸ್ಸಾಗಿತ್ತು.
ಶಹಾನಾರನ್ನು ಎರಡು ವರ್ಷದ ಹಿಂದೆ ಕೇರಳದ ಕೋಯಿಕೊಡ್ ಬಳಿಯ ಸಜಾದ್ ಎಂಬಾತನಿಗೆ ಕೊಟ್ಟು ಮದುವೆ ಮಾಡಲಾಗಿತ್ತು. ಈಗ ಅದೇ ಮನೆಯಲ್ಲಿ ಶಹಾನಾ ಹೆಣವಾಗಿದ್ದಾರೆ. ಮನೆಯ ಕಿಟಕಿ ಸರಳುಗಳಿಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಶಹಾನಾ ಶವ ಪತ್ತೆಯಾಗಿದೆ.
ಫ್ಯಾಷನ್ ಮಾಡೆಲ್ ಆಗಿದ್ದ ಶಹಾನಾ ಕೆಲವು ಸಿನಿಮಾ, ಧಾರಾವಾಹಿಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸುತ್ತಿದ್ದರು. ಆದರೆ ಪತಿ ಸಜಾದ್, ಶಹಾನಾಗೆ ಸಾಕಷ್ಟು ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಶಹಾನಾ ಕುಟುಂಬದವರು ಸಹ ಶಹಾನಾ, ಸಜಾದ್ ಬಗ್ಗೆ ಹಾಗೂ ಅವರ ತಾಯಿಯ ಬಗ್ಗೆ ಸದಾ ದೂರು ಹೇಳುತ್ತಿದ್ದಳು, ಅವರು ದೌರ್ಜನ್ಯ ಎಸಗುತ್ತಿರುವ ಬಗ್ಗೆ, ಕಿರುಕುಳ ನೀಡುತ್ತಿರುವ ಬಗ್ಗೆ ಹೇಳುತ್ತಿದ್ದಳು ಎಂದಿದ್ದಾರೆ.

ಕೇವಲ 18 ವರ್ಷಕ್ಕೆ ಶಹಾನಾಗೆ ವಿವಾಹ ಮಾಡಲಾಗಿತ್ತು. ಪತ್ನಿಯ ಮಾಡೆಲಿಂಗ್ ಹಾಗೂ ನಟನೆಯ ಹವ್ಯಾಸವನ್ನು ಸಹಿಸದ ಪತಿ ಆಕೆಗೆ ಸದಾ ಕಿರುಕುಳ ನೀಡುತ್ತಿದ್ದ ಎನ್ನಲಾಗುತ್ತಿದೆ. ಕೋಯಿಕೋಡ್ ಪೊಲೀಸರು ಶಹಾನಾ ಪತಿಯನ್ನು ವಶಕ್ಕೆ ಪಡೆದಿದ್ದು ವಿಚಾರಣೆ ನಡೆಸುತ್ತಿದ್ದಾರೆ.
ಶಹಾನಾ ಸಾವಿಗೆ ಸಾಮಾಜಿಕ ಜಾಲತಾಣದಲ್ಲಿ ಸಂತಾಪ ಸೂಚಿಸಲಾಗಿದೆ. ಶಹಾನಾಗೆ ನ್ಯಾಯ ಸಿಗಬೇಕೆಂದು ಹಲವರು ಒತ್ತಾಯ ಮಾಡಿದ್ದಾರೆ.


Click it and Unblock the Notifications











