ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಆರೋಪ; ಮಲಯಾಳಂ ನಿರ್ದೇಶಕ ಜಾಸಿಕ್ ಅಲಿ ಬಂಧನ

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಲಯಾಳಂ ಚಿತ್ರ ನಿರ್ದೇಶಕ ಜಾಸಿಕ್ ಅಲಿ ಅವರನ್ನು ಬಂಧಿಸಲಾಗಿದೆ. ಅಪ್ರಾಪ್ತ ವಯಸ್ಸಿನ ಬಾಲಕಿಗೆ ಚಲನಚಿತ್ರಗಳಲ್ಲಿನ ಪಾತ್ರ ನೀಡುವ ಭರವಸೆ ನೀಡಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ವರದಿಯಾಗಿದೆ.

ಲೈಂಗಿಕ ದೌರ್ಜನ್ಯ ಎಸಗಿ ನಡಕ್ಕಾವುವಿನ ಮನೆಯೊಂದರಲ್ಲಿ ತಲೆಮರೆಸಿಕೊಂಡಿದ್ದ ಈತನಿಗಾಗಿ ಪೊಲೀಸರು ಬಹಳ ದಿನಗಳಿಂದ ಶೋಧ ನಡೆಸುತ್ತಿದ್ದರು ಎಂದು ವರದಿಯಾಗಿದೆ. ತೀವ್ರ ಶೋಧ ನಡೆಸಿದ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಪೋಕ್ಸೋ ಆರೋಪದಡಿ ಬಂಧಿಸಲಾಗಿದ್ದು, ನಿರ್ದೇಶಕರ ಜಾಸಿಕ್ ಅಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ.

filmmaker-jasik-ali-arrested

36 ವರ್ಷ ವಯಸ್ಸಿನ ಜಾಸಿಕ್ ಅಲಿ ಅವರು ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ, ಚಲನಚಿತ್ರಗಳಲ್ಲಿ ಪಾತ್ರಗಳನ್ನು ನೀಡುವ ಭರವಸೆ ನೀಡಿ, ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಆರೋಪಿ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದ್ದು, ನ್ಯಾಯಾಲಯ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ನಿರ್ದೇಶಕ ಜಾಸಿಕ್ ಅಲಿ ಕೋಯಿಕ್ಕೋಡ್‌ನ ಕುರುವಂಗಾಡ್‌ನವರು. ಕೆಲವು ದಿನಗಳಿಂದ ತಲೆ ಮರೆಸಿಕೊಂಡಿದ್ದರು ಎನ್ನಲಾಗಿದೆ. ಕೊಯಿಲಾಂಡಿ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್‌ಪೆಕ್ಟರ್ ಎಂ.ವಿ.ಬಿಜು ನೇತೃತ್ವದಲ್ಲಿ ತೀವ್ರ ಶೋಧ ನಡೆಸಿ ಆತನನ್ನು ಬಂಧಿಸಲಾಗಿದೆ.

ಜಾಸಿಕ್ ಅಲಿ ಅವರ ಕೊನೆಯ ಚಿತ್ರ ಬೈನರಿ

ಜಾಸಿಕ್ ಅಲಿ ಅವರ ನಿರ್ದೇಶನದ ಕೊನೆಯ ಚಿತ್ರ ಬೈನರಿ, ಈ ವರ್ಷ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಬೈನರಿ ಎಂಬುದು 26 ಮೇ 2023 ರಂದು ಬಿಡುಗಡೆಯಾದ ಮಲಯಾಳಂ ಚಲನಚಿತ್ರವಾಗಿದೆ. ಈ ಚಲನಚಿತ್ರವನ್ನು ಜಾಸಿಕ್ ಅಲಿ ನಿರ್ದೇಶಿಸಿದ್ದಾರೆ. ಕೈಲಾಶ್, ಜಾಯ್ ಮ್ಯಾಥ್ಯೂ ಮತ್ತು ನಿರ್ಮಲ್ ಪಲಾಜಿ ಪ್ರಮುಖ ಪಾತ್ರಗಳಲ್ಲಿದ್ದಾರೆ. ಈ ಚಿತ್ರದ ಕಥಾವಸ್ತುವು ಅನಿರೀಕ್ಷಿತವಾಗಿ ನಿರುದ್ಯೋಗಿಗಳಾಗಿರುವ ಐವರು ಯುವಕರ ಸುತ್ತ ಸುತ್ತುತ್ತದೆ.

More from Filmibeat

English summary
Director Jasik Ali arrested for sexually assaulting a minor.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X