ಮಾಲಿವುಡ್ ನಟ ನಿವಿನ್ ಪೌಲಿ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲು

ಮಲಯಾಳಂ ಚಿತ್ರರಂಗದಲ್ಲಿ ಮೀಟು ವಿವಾದ ತಾರಕ್ಕಕೇರಿದೆ. ಹೇಮಾ ಕಮಿಟಿ ವರದಿ ಬೆನ್ನಲ್ಲೇ ಕೆಲ ನಟಿಯರು ತಮಗೆ ಎದುರಾದ ಕಹಿ ಅನುಭವಗಳನ್ನು ಬಿಚ್ಚಿಡುತ್ತಿದ್ದಾರೆ. ಆರೋಪ ಸಂಬಂಧ ದೂರುಗಳು ದಾಖಲಾಗುತ್ತಿದೆ. ಇದೀಗ ಖ್ಯಾತ ನಟ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ.

ಸಿನಿಮಾದಲ್ಲಿ ನಟಿಸುವ ಅವಕಾಶ ಕೊಡಿಸುವುದಾಗಿ ಹೇಳಿ ನಟ ನಿವಿನ್ ಪೌಲಿ ಕಿರುಕುಳ ನೀಡಿದ್ದಾರೆ ಎಂದು ಮಹಿಳೆಯೊಬ್ಬರು ದೂರಿದ್ದಾರೆ. ನಟಿಯೊಬ್ಬರು ಎರ್ನಾಕುಲಂ ಗ್ರಾಮಾಂತರ ಎಸ್‌ಪಿಗೆ ದೂರು ನೀಡಿದ್ದು ನಿವಿನ್ ಪೌಲಿ ವಿರುದ್ಧ ಪ್ರಕರಣ ದಾಖಲಿಸುವಂತೆ ಅವರು ಓನ್ನುಕಲ್ ಪೊಲೀಸರಿಗೆ ಸೂಚಿಸಿದ್ದಾರೆ. ಈ ವಿಚಾರ ಕೇಳಿ ಅಭಿಮಾನಿಗಳು ಶಾಕ್ ಆಗಿದ್ದಾರೆ. ತನ್ನ ಮೇಲಿನ ಆರೋಪಗಳೆಲ್ಲಾ ಸುಳ್ಳು ಎಂದು ನಿವಿನ್ ಪೋಸ್ಟ್ ಮಾಡಿದ್ದಾರೆ.

FIR has been filed against actor Nivin Pauly in a sexual assault case

ಸದ್ಯ ನಟ ನಿವಿನ್ ಪೌಲಿ ವಿರುದ್ಧ ಅತ್ಯಾಚಾರ ಪ್ರಕರಣದ ದಾಖಲಾಗಿದೆ. ಕಳೆದ ನವೆಂಬರ್‌ನಲ್ಲಿ ಸಿನಿಮಾ ಅವಕಾಶ ಕೊಡಿಸುವುದಾಗಿ ಹೇಳಿ ತಮ್ಮನ್ನು ದುಬೈಗೆ ಕರೆದುಕೊಂಡು ಹೋಗಲಾಗಿತ್ತು. ಅಲ್ಲಿ ಲೈಂಗಿಕ ಕಿರುಕುಳ ನೀಡಿದರು ಎಂದು ಆಕೆ ಹೇಳಿದ್ದಾಳೆ. ಈ ಹಿನ್ನೆಲೆಯಲ್ಲಿ ಪೊಲೀಸರು ಪ್ರಾಥಮಿಕ ತನಿಖೆ ನಡೆಸಿ ನಿವಿನ್ ಪೌಲಿ ಸೇರಿದಂತೆ ಆರು ಮಂದಿ ವಿರುದ್ಧ ಜಾಮೀನು ರಹಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಳಲ್ಲಿ ನಿರ್ಮಾಪಕರೂ ಇದ್ದಾರೆ.

ಸದ್ಯ ಪ್ರಕರಣದಲ್ಲಿ ಆರೋಪಿಗಳ ಪಟ್ಟಿಯಲ್ಲಿ ನಿವಿನ್ ಪೌಲಿ ಎ6 ಆಗಿದ್ದಾರೆ. ಶ್ರೇಯಾ ಎಂಬಾಕೆ ಪ್ರಕರಣದಲ್ಲಿ ಎ1 ಆಗಿದ್ದು ನಿರ್ಮಾಪಕ ಎ.ಕೆ. ಸುನಿಲ್​ ಎ2 ಆಗಿದ್ದಾರೆ. ಹೇಮಾ ಕಮಿಟಿ ವರದಿ ಬೆನ್ನಲ್ಲೇ ಮಲಯಾಳಂ ನಟರಾದ ಸಿದ್ದಿಕಿ, ಜಯಸೂರ್ಯ ಮತ್ತು ನಿರ್ದೇಶಕ ರಂಜಿತ್ ವಿರುದ್ಧ ದೂರುಗಳು ದಾಖಲಾಗಿದೆ. ಕೇರಳ ಸರ್ಕಾರ ಕ್ರಮಕ್ಕೆ ಮುಂದಾಗಿದ್ದು ವಿಶೇಷ ತನಿಖಾ ತಂಡ ರಚಿಸಿದೆ.

ತಮ್ಮ ಮೇಲಿನ ಆರೋಪದ ಬಗ್ಗೆ ನಟ ನಿವಿಲ್ ಪೌಲಿ ಪೋಸ್ಟ್ ಮಾಡಿದ್ದಾರೆ. "ಒಬ್ಬ ಮಹಿಳೆಗೆ ನಾನು ಕಿರುಕುಳ ಕೊಟ್ಟಿರುವುದಾಗಿ ಸುಳ್ಳು ಆರೋಪ ಕೇಳಿಬಂದಿದೆ. ಅದು ಸತ್ಯಕ್ಕೆ ದೂರವಾದುದು. ನನ್ನ ಮೇಲಿನ ಆರೋಪ ಸುಳ್ಳು ಎಂದು ಸಾಬೀತು ಮಾಡಲು ನಾನು ಪ್ರಯತ್ನಿಸುತ್ತೇನೆ. ಅದಕ್ಕಾಗಿ ಬೇಕಾದ ಕ್ರಮಗಳನ್ನು ತೆಗೆದುಕೊಳ್ಳುತ್ತೇನೆ. ಇದಕ್ಕೆ ಕಾರಣರಾದವರನ್ನು ಬೆಳಕಿಗೆ ತರುತ್ತೇನೆ. ಇನ್ನು ಮುಂದೆ ಕಾನೂನಾತ್ಮಕವಾಗಿ ಮುಂದುವರೆಯುತ್ತೇನೆ" ಎಂದು ಬರೆದುಕೊಂಡಿದ್ದಾರೆ.

ಮಾಲಿವುಡ್‌ನಲ್ಲಿ ನಟಿಯರ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯದ ಬಗ್ಗೆ ಜಸ್ಟೀಸ್ ಹೇಮಾ ಕಮಿಟಿ ಸರ್ಕಾರಕ್ಕೆ ವರದಿ ನೀಡಿದೆ. ನಿಜಕ್ಕೂ ಚಿತ್ರರಂಗದಲ್ಲಿ ಇಂತಹ ವಾತಾವರಣ ಇದೆ. ಸಾಕಷ್ಟು ಜನ ನಟಿಯರ ಮೇಲೆ ದೌರ್ಜನ್ಯ ನಡೆದಿದೆ ಎಂದು ವರದಿಯಲ್ಲಿ ಮಾಹಿತಿ ನೀಡಿದ್ದಾರೆ. ಚಿತ್ರರಂಗದಲ್ಲಿ ಮಹಿಳೆಯರಿಗೆ ಕಿರುಕುಳ ನೀಡುತ್ತಾರೆ ಎನ್ನುವುದು ಬರೀ ಆರೋಪ ಅಲ್ಲ, ಅದು ಸತ್ಯ ಎಂದು ವರದಿಯಲ್ಲಿ ತಿಳಿಸಿದ್ದಾರೆ.

ಒಂದ್ಕಾಲದಲ್ಲಿ ನಿವಿನ್ ಪೌಲಿ ಸಿನಿಮಾಗಳಿಗೆ ಭಾರೀ ಕ್ರೇಜ್ ಇತ್ತು. 'ಪ್ರೇಮಂ', 'ಬೆಂಗಳೂರು ಡೇಸ್' ರೀತಿಯ ಬ್ಲಾಕ್‌ಬಸ್ಟರ್ ಹಿಟ್ ಸಿನಿಮಾಗಳಲ್ಲಿ ಅವರು ನಟಿಸಿದ್ದರು. ಆದರೆ ಇತ್ತೀಚಿನ ವರ್ಷಗಳಲ್ಲಿ ಅವರ ಚಿತ್ರಗಳು ಅಷ್ಟಾಗಿ ಸದ್ದು ಮಾಡುತ್ತಿಲ್ಲ. ಲೈಂಗಿಕ ದೌರ್ಜನ್ಯ ನೀಡಿರುವುದಾಗಿ ಮಹಿಳೆ ಆರೋಪದ ಬಗ್ಗೆ ನಿವಿನ್ ಪೌಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದಾರೆ. ತನ್ನ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ ಮಹಿಳೆಯನ್ನು ತಾನು ನೋಡಿಲ್ಲ ಅಥವಾ ಆಕೆ ಜೊತೆ ಮಾತನಾಡಿಲ್ಲ ಎಂದು ಹೇಳಿದ್ದಾರೆ.

More from Filmibeat

English summary
Sexual Abuse case has been filed against malayalam actor Nivin Pauly
Read more about: mollywood malayalam nivin pauly
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X