ಅವರ 'ರತಿಕ್ರೀಡೆ' ನೋಡುವಂತೆ ಆ 'ನಿರ್ದೇಶಕ' ನನ್ನನ್ನೂ ಬಲವಂತ ಮಾಡಿದ್ದ ಎಂದ ನಟಿ..!
ಹೇಮಾ ಆಯೋಗದ ವರದಿ ಜಗಜ್ಜಾಹೀರಾದ ಬೆನ್ನಲ್ಲಿಯೇ, ಮಲಯಾಳಂ ಚಿತ್ರರಂಗದಲ್ಲಿ ಒಬ್ಬೊಬ್ಬರಾಗಿಯೇ ತಮಗಾದ ಕಹಿ ಅನುಭವ ಹಂಚಿಕೊಳ್ಳಲು ಶುರು ಮಾಡಿದ್ದಾರೆ. ಈ ಸಾಲಿಗೆ ಈಗಾಗಲೇ ಸೇರಿಕೊಂಡಿರುವ ಮೀನು ಮುನೀರ್ ಮಲಯಾಳಂನ ಪ್ರಮುಖ ನಟರಾದ ಎಂ.ಮುಕೇಶ್, ಮಣಿಯನ್ ಪಿಲ್ಲ ರಾಜು, ಎಡವೇಲು ಬಾಬು ಮತ್ತು ಜಯಸೂರ್ಯ ಅವರ ಮೇಲೆ ಆಗಲೇ ಆರೋಪ ಮಾಡಿದ್ದಾರೆ. ನನಗೆ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.
ಆ ಪೈಕಿ ಎಡವೇಲು ಬಾಬು ಈಗಾಗಲೇ ಪೊಲೀಸರ ಅತಿಥಿಯಾಗಿ ಜಾಮೀನು ಪಡೆದು ಹೊರ ಬಂದಿದ್ದಾರೆ. ಇಷ್ಟೇ ಅಲ್ಲ ಆಡಳಿತಾರೂಢ ಸಿಪಿಎಂ[ಎಂ]ನ ಶಾಸಕ ಮತ್ತು ನಟ ಮುಕೇಶ್ ಅವರನ್ನು ಕೂಡ ಬಂಧಿಸಿದ್ದರು. ಆದರೆ, ಮುಖೇಶ್ ಹೈಕೋರ್ಟ್‌ನಿಂದ ನಿರೀಕ್ಷಣಾ ಜಾಮೀನು ಪಡೆದ ಹಿನ್ನೆಲೆ ಅವರನ್ನು ಕೂಡ ಬಿಡುಗಡೆ ಮಾಡಿಯಾಗಿದೆ. ಇದರ ನಡುವೆ ಈಗ ಮೀನು ಮುನೀರ್ ಈಗ ಮತ್ತೊಂದು ಬಾಂಬ್ ಎಸೆದಿದ್ದಾರೆ. ಮಲಯಾಳಂ ನಿರ್ದೇಶಕ ಬಾಲಚಂದ್ರ ಮೆನನ್ ಬಹುದೊಡ್ಡ ಕಾಮುಕ ಎಂದಿದ್ದಾರೆ.

ಹೌದು, ಬಾಲಚಂದ್ರ ಮೆನನ್ 2007ರಲ್ಲಿ ನನಗೆ ಅಶ್ಲೀಲ ವಿಡಿಯೋ ನೋಡುವಂತೆ ಒತ್ತಾಯ ಮಾಡಿದ ಎಂದು ಹೇಳಿರುವ ಮೀನು ಮುನೀರ್, ಕೆಲವರು ಪುರುಷರು ಆ ಕೋಣೆಯಲ್ಲಿದ್ದರು ಎಂದು ಹೇಳಿದ್ದಾರೆ. ಇಷ್ಟೇ ಅಲ್ಲ ಮೂವರು ಹುಡುಗಿಯರು ಕೂಡ ಗ್ರೂಪ್ ಸೆ*ನಲ್ಲಿ ತೊಡಗಿದ್ದರು ಎಂದಿರುವ ಮೀನು ಮುನೀರ್, ನಾನು ಅಲ್ಲಿಂದ ಹೊರ ಬರುವ ಪ್ರಯತ್ನವನ್ನು ಮಾಡಿದರು ಕೂಡ ಬಾಲಚಂದ್ರ ಮೆನನ್ ಬಿಡಲಿಲ್ಲ ಬದಲಿಗೆ ಅಲ್ಲಿ ನಡೆಯುತ್ತಿದ್ದ ಗ್ರೂಪ್ ಸೆ* ನೋಡುವಂತೆ ನನ್ನನ್ನೂ ಒತ್ತಾಯಿಸಿದ ಎಂದು ಹೇಳಿದ್ದಾರೆ.
ಇನ್ನೂ ಇಲ್ಲಿಯವರೆಗೆ ನಡೆದ ತನಿಖೆಯಿಂದ ತೃಪ್ತಿ ಇದೆ ಎಂದಿರುವ ಮೀನು ಮುನೀರ್, ಎಂ.ಮುಕೇಶ್‌ನಂತಹ ಪ್ರಭಾವಿ ವ್ಯಕ್ತಿಯನ್ನು ಬಂಧಿಸುವುದು ಸುಲಭ ಅಲ್ಲ ಆದರೂ ಆ ಪ್ರಯತ್ನ ನಡೆದಿದೆ ಎನ್ನುವ ಖುಷಿ ಇದೆ ಎಂದು ಹೇಳಿದ್ದಾರೆ. ಮುಂದುವರೆದು ಚಿತ್ರರಂಗಕ್ಕೆ ನಾನು ತುಂಬಾ ಕನಸುಗಳನ್ನಿಟ್ಕೊಂಡು ಬಂದಿದ್ದೆ, ಆದರೆ ಇಲ್ಲಿ ಬಂದ ನಂತರ ನನ್ನ ಕನಸೆಲ್ಲವೂ ನುಚ್ಚು ನೂರಾದವು ಎಂದಿರುವ ಮೀನು ಮುನೀರ್ ಹೇಮಾ ಆಯೋಗದ ವರದಿಯಿಂದ ಚಿತ್ರರಂಗದಲ್ಲಿ ಶುದ್ದೀಕರಣದ ಕೆಲಸ ಆರಂಭವಾಗಿದೆ ಎಂದು ಹೇಳಿದ್ದಾರೆ.
ಉಳಿದಂತೆ ಮೀನು ಮುನೀರ್ ಇವೆಲ್ಲ ಕಾರಣಗಳಿಂದ 2013ರಲ್ಲಿ ನಾನು ಮಲಯಾಳಂ ಚಿತ್ರರಂಗದಿಂದ ದೂರವಾಗಬೇಕಾಯಿತು ಎಂದು ಮೀನು ಮುನೀರ್ ಹೇಳಿದ್ದಾರೆ. ನಾನು ಮುಖೇಶ್, ಮಣಿಯನ್ಪಿಳ್ಳ ರಾಜು, ಎಡವೇಲ ಬಾಬು , ಜಯಸೂರ್ಯ, ಚಂದ್ರಶೇಖರನ್,ಪ್ರೊಡಕ್ಷನ್ ಕಂಟ್ರೋಲರ್ ನೋಬಲ್, ಬಾಲಚಂದ್ರ ಮೆನನ್ ಇವರೆಲ್ಲರಿಂದ ನಾನು ಅನುಭವಿಸಿದ ದೈಹಿಕ ಮತ್ತು ಮಾನಸಿಕ ಹಿಂಸೆಯ ಕುರಿತು ಇಡೀ ಜಗತ್ತಿಗೆ ಹೇಳಲು ಈ ಬಾರಿ ಧೈರ್ಯ ಮಾಡಿದ್ದೇನೆ ಎಂದು ಹೇಳಿದ್ದಾರೆ. ಮಲಯಾಳಂ ಚಿತ್ರರಂಗಕ್ಕೆ ಸಾಷ್ಟಾಂಗ ನಮಸ್ಕಾರ ನಾನು ಆ ಕೇರಳದ ಕಡೆ ಮುಖ ಹಾಕಿ ಮಲಗಲ್ಲ ಎಂದು ಕೂಡ ಮೀನು ಮುನೀರ್ ಇತ್ತೀಚಿಗೆ ಇಂಡಿಯಾ ಟುಡೇಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಸದ್ಯಕ್ಕೆ ಮೀನು ಮುನೀರ್ ಅವರ ಈ ಆರೋಪ ಮಲಯಾಳಂ ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಸಿದ್ದು ಬಾಲಚಂದ್ರ ಮೆನನ್ ಅವರಿಗೆ ಈ ಪ್ರಕರಣ ಮುಳ್ಳಾಗುವ ಎಲ್ಲ ಲಕ್ಷಣಗಳು ಸದ್ಯಕ್ಕೆ ದಟ್ಟವಾಗಿ ಕಂಡು ಬರುತ್ತಿವೆ.


Click it and Unblock the Notifications











