₹1.3 ಕೋಟಿ ಕಾರು ಖರೀದಿಸಿದ್ರೂ ಪಕ್ಕದಲ್ಲಿ ಗಂಡ ಇಲ್ಲ: 'ಗಜ' ನಟನೆಯ ದಾಂಪತ್ಯದ ಮೇಲೆ ನೆಟ್ಟಿಗರಿಗೆ ಅನುಮಾನ
ದರ್ಶನ್ ನಟಿಸಿದ ಸೂಪರ್ ಹಿಟ್ 'ಗಜ' ಸಿನಿಮಾದ ನಾಯಕಿಯ ಪರಿಚಯ ಸಿನಿಪ್ರಿಯರಿಗೆ ಇದ್ದೇ ಇದೆ. ಈ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ಈ ನಟಿಗೆ ಆರಂಭದಲ್ಲಿ ಬ್ಲಾಕ್ ಬಸ್ಟರ್ ಸಿನಿಮಾ ಸಿಕ್ಕಿತ್ತು. ಅಲ್ಲಿಂದ ಮಲಯಾಳಂ ಸಿನಿಮಾಗಳ ಜೊತೆ ಜೊತೆಗೆ ಕನ್ನಡದಲ್ಲೂ ನಟಿಸುತ್ತಿದ್ದರು. ಮದುವೆ ಬಳಿಕ ಸ್ವಲ್ಪ ಸಮಯ ಸಿನಿಮಾದಿಂದ ದೂರ ಉಳಿದಿದ್ದ ನಟಿ ಮತ್ತೆ ಸಿನಿಮಾಗೆ ಕಮ್ ಬ್ಯಾಕ್ ಮಾಡಿದ್ದಾರೆ.
ವಿವಾಹ ಬಳಿಕವೂ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕ್ರೇಜಿಸ್ಟಾರ್ ರವಿಚಂದ್ರನ್ ಜೊತೆ 'ದೃಶ್ಯಂ' ಸಿನಿಮಾದ ರಿಮೇಕ್‌ನಲ್ಲಿ ನಟಿಸಿದ್ದರು. 'ದೃಶ್ಯಂ' ಎರಡೂ ಭಾಗಗಳಲ್ಲಿಯೂ ಕ್ರೇಜಿಸ್ಟಾರ್ ಪತ್ನಿಯಾಗಿ ನಟಿಸಿ ಮೆಚ್ಚುಗೆ ಗಳಿಸಿದ್ದರು. ಮದುವೆ ಬಳಿಕ ನವ್ಯಾ ನಾಯರ್‌ಗೆ ಸಿನಿಮಾಗಳಲ್ಲಿ ನಟಿಸುವುದಕ್ಕೆ ಸಾಕಷ್ಟು ಆಫರ್‌ಗಳು ಸಿಗುತ್ತಿವೆ. ಇದೇ ಖುಷಿಯಲ್ಲಿ ಇತ್ತೀಚೆಗೆ ದುಬಾರಿ ಬೆಲೆಯ ಕಾರನ್ನು ಖರೀದಿ ಮಾಡಿದ್ದರು. ಆ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ ಖುಷಿ ಹಂಚಿಕೊಂಡಿದ್ದರು.

ಈ ಫೋಟೊಗಳನ್ನು ಶೇರ್ ಮಾಡುತ್ತಿದ್ದಂತೆ ನೆಟ್ಟಿಗರ ಕಣ್ಣುಗಳು ದೊಡ್ಡದಾಗಿವೆ. ಅದಕ್ಕೆ ಕಾರಣ ದುಬಾರಿ ಕಾರು ಅಲ್ಲ. ಕಾರು ಖರೀದಿಸುವಾಗ ನವ್ಯಾ ನಾಯರ್ ಪಕ್ಕದಲ್ಲಿ ಗಂಡ ಯಾಕಿಲ್ಲ ಅನ್ನೋ ಪ್ರಶ್ನೆ ಎದುರಾಗಿದೆ. ಅದಕ್ಕೆ ಕಾಮೆಂಟ್ ಬಾಕ್ಸ್‌ನಲ್ಲಿ ನಟಿ ನವ್ಯಾ ನಾಯರ್ ದಾಂಪತ್ಯ ಜೀವನದ ಬಗ್ಗೆ ಅನುಮಾನ ವ್ಯಕ್ತ ಪಡಿಸುವುದಕ್ಕೆ ಶುರುಮಾಡಿದ್ದಾರೆ.
ಮಲಯಾಳಂ ನಟಿ ನವ್ಯಾ ನಾಯರ್ 2010ರಲ್ಲಿ ಉದ್ಯಮಿ ಸಂತೋಷ್ ಮೆನನ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಟ್ಟಿದ್ದರು. ವಿವಾಹವಾಗುತ್ತಿದ್ದಂತೆ ನಟನೆಗೆ ಗುಡ್ ಬೈ ಹೇಳಿ ಸೀದಾ ಸಂಸಾರಿಕ ಜೀವನದಲ್ಲಿ ಬ್ಯುಸಿಯಾಗಿದ್ದರು. ಮದುವೆ ಬಳಿಕ ಸಿನಿಮಾರಂಗಕ್ಕೆ ಗುಡ್ ಬೈ ಹೇಳಿದ ಮಾಲಿವುಡ್ ನಟಿಯರ ಸಾಲಿಗೆ ನವ್ಯಾ ಕೂಡ ಸೇರಿಕೊಂಡರು. ಅಷ್ಟೇ ಅಲ್ಲದೆ ನವ್ಯಾ ಕೇರಳದಿಂದ ಮುಂಬೈಗೆ ಶಿಫ್ಟ್ ಕೂಡ ಆದರು.
ಒಂದಿಷ್ಟು ದಿನ ಸಿನಿಮಾದಿಂದ ದೂರವಿದ್ದ ನಟಿಗೆ ಮತ್ತೆ ನಟನೆ ಸೆಳೆದಿತ್ತು. ಹೀಗಾಗಿ ಮತ್ತೆ ವೃತ್ತಿ ಜೀವನಕ್ಕೆ ಹಿಂತಿರುಗುವುದಕ್ಕೆ ನಿರ್ಧರಿಸಿದ್ದರು. 'ಗಜ' ನಟಿ ಕಮ್‌ಬ್ಯಾಕ್ ಮಾಡಿದ ಸಿನಿಮಾ ಕೈ ಹಿಡಿದಿತ್ತು. ಇಲ್ಲಿಂದ ನವ್ಯಾ ನಾಯರ್ ಇದೂವರೆಗೂ ಬೇರೆ ಬೇರೆ ಭಾಷೆಯಲ್ಲಿ ಸಿನಿಮಾಗಳನ್ನು ಮಾಡುತ್ತಾ ಬ್ಯುಸಿಯಾಗಿದ್ದಾರೆ. ಹಲವು ವರ್ಷಗಳಿಂದ ಚಿತ್ರರಂಗದಿಂದ ದೂರ ಉಳಿದಿದ್ದರೂ ನವ್ಯಾ ನಟನೆ ಕಂಡು ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಆದರೆ, ನವ್ಯಾ ನಾಯರ್ ಸಿನಿಮಾರಂಗಕ್ಕೆ ವಾಪಸ್ ಬಂದ ಗಳಿಗೆಯಿಂದ ಪತಿ ಜೊತೆ ಹೆಚ್ಚಾಗಿ ಕಾಣಿಸಿಕೊಳ್ಳಲೇ ಇಲ್ಲ. ನವ್ಯಾ ಜೊತೆ ಪತಿ ಸಂತೋಷ್ ಮೆನನ್ ಕಾಣದಿರುವುದನ್ನು ಕಂಡು ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಇಷ್ಟೆಲ್ಲ ಅನುಮಾನ ಮೂಡುವುದಕ್ಕೆ ಕಾರಣ ನವ್ಯಾ ನಾಯರ್ ಕಾರು ಖರೀದಿಸುವಾಗಿನ ವಿಡಿಯೋ.
ಸುಮಾರು 1.3 ಕೋಟಿ ರೂಪಾಯಿ ಬೆಲೆಬಾಳುವ BMW X7 ಕಾರು ಖರೀದಿ ಮಾಡುವಾಗ ನವ್ಯಾ ನಾಯರ್ ಜೊತೆ ಮಗ ಹಾಗೂ ತಂದೆ ಮಾತ್ರ ಇದ್ದರು. ಈ ಸಂಭ್ರಮದಲ್ಲಿ ಗಂಡ ಯಾಕಿಲ್ಲ ಅನ್ನೋದು ಅಭಿಮಾನಿಗಳ ಪ್ರಶ್ನೆ. ಇವರ ಕಾಮೆಂಟ್ ಬಾಕ್ಸ್‌ನಲ್ಲಿ "ಗಂಡ ಎಲ್ಲಿ? ಯಾರಾದರೂ ಸ್ಪಷ್ಟಪಡಿಸಬಹುದೇ?", "ನವ್ಯಾ ಈಗ ಒಂಟಿ ಅಮ್ಮನಾ?", ಪತಿಯಿಂದ ಬೇರೆಯಾಗಿದ್ದನ್ನು ಸ್ಪಷ್ಟ ಪಡಿಸಬಹುದೇ?" ಎಂದು ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಕಳೆದ ಕೆಲವು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಹಲವು ವದಂತಿಗಳು ಹರಿದಾಡುತ್ತಿವೆ. ಆದರೆ, ಇದ್ಯಾವುದಕ್ಕೂ ನವ್ಯಾ ಪ್ರತಿಕ್ರಿಯೆ ನೀಡಿಲ್ಲ.


Click it and Unblock the Notifications











