For Quick Alerts
  ALLOW NOTIFICATIONS  
  For Daily Alerts

  ಹೊಸ ಕಾರು ಖರೀದಿಸಿದ 'ಗೂಳಿ' ನಟಿ ಮಮತಾ ಮೋಹನ್ ದಾಸ್

  |

  ಸೆಲೆಬ್ರಿಟಿಗಳಿಗೆ ಕಾರು, ಬೈಕ್ ಅಂದ್ರೆ ಕ್ರೇಜ್ ಹೆಚ್ಚಿರುತ್ತದೆ. ಅದರಲ್ಲೂ ದುಬಾರಿ ಕಾರು, ಸ್ಫೋರ್ಟ್ಸ್ ಕಾರು ಅಂದ್ರೆ ಸ್ವಲ್ಪ ಹೆಚ್ಚು ಪ್ರೀತಿ. ಇತ್ತೀಚಿನ ದಿನಗಳಲ್ಲಿ ಹಲವು ಸಿನಿಮಾ ನಟಿಯರು ಹೊಸ ಹೊಸ ಕಾರು ಖರೀದಿ ಮಾಡಿದ ಸುದ್ದಿ ನೋಡಿದ್ವಿ. ಈಗ ಮಲಯಾಳಂ ಖ್ಯಾತ ನಟ ಮಮತಾ ಮೋಹನ್ ದಾಸ್‌ ಹೊಸ ಕಾರು ಖರೀದಿಸಿದ್ದಾರೆ.

  ನಟಿ ಮಮತಾ ಮೋಹನ್ ದಾಸ್ ಹಳದಿ ಬಣ್ಣದ ಪೋರ್ಷೆ 911 ಕ್ಯಾರೆರಾ ಎಸ್ ಸ್ಪೋರ್ಟ್ಸ್ ಕಾರ್ ತೆಗೆದುಕೊಂಡಿದ್ದು, ಭಾರತದಲ್ಲಿ ಈ ಕಾರು ಖರೀದಿ ಮಾಡಿದ ಮೊದಲ ಸೆಲೆಬ್ರಿಟಿ ಮಮತಾ ಎನ್ನುವ ಹೆಗ್ಗಳಿಗೆಗೆ ಪಾತ್ರವಾಗಿದ್ದಾರೆ.

  ನಟಿ ಮಮತಾ ಮೋಹನ್ ದಾಸ್ ಗೆ ಮತ್ತೆ ಕ್ಯಾನ್ಸರ್?ನಟಿ ಮಮತಾ ಮೋಹನ್ ದಾಸ್ ಗೆ ಮತ್ತೆ ಕ್ಯಾನ್ಸರ್?

  ಸ್ಪೋರ್ಟ್ಸ್ ಕಾರು ಖರೀದಿ ಮಾಡಿದ ನಂತರ ಆ ಫೋಟೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ''ದಶಕದ ನನ್ನ ಕನಸು ಕೊನೆಗೂ ಈಡೇರಿದೆ. ಈ ಕಾರಿಗಾಗಿ ನಾನು ವರ್ಷಗಳ ಕಾಲ ಕಾದಿದ್ದೆ. ಈಗ ಇದು ನನ್ನ ವಶವಾಗಿದೆ. ನನ್ನ ಕುಟುಂಬಕ್ಕೆ ನಿನ್ನನ್ನು ಸ್ವಾಗತಿಸಲು ಹೆಮ್ಮೆ ಎನಿಸುತ್ತಿದೆ'' ಎಂದು ಪೋಸ್ಟ್ ಹಾಕಿದ್ದಾರೆ.

  ಕಾರಿನ ನಂಬರ್‌ಗೆ ಲಕ್ಷಾಂತರ ಹಣ ಕೊಟ್ಟ ಜೂ.ಎನ್‌ಟಿಆರ್ಕಾರಿನ ನಂಬರ್‌ಗೆ ಲಕ್ಷಾಂತರ ಹಣ ಕೊಟ್ಟ ಜೂ.ಎನ್‌ಟಿಆರ್

  ಕಾರಿನ ಬೆಲೆ 1.84 ಕೋಟಿ

  ಕಾರಿನ ಬೆಲೆ 1.84 ಕೋಟಿ

  ಪೋರ್ಷೆ 911 ಕ್ಯಾರೆರಾ ಎಸ್ 2 ಸ್ಪೋರ್ಟ್ಸ್ ಕಾರಿನಲ್ಲಿ 4 ಜನರು ಕುಳಿತುಕೊಳ್ಳಬಹುದು. ಈ ಕಾರಿನ ಬೆಲೆ ಭಾರತದಲ್ಲಿ 1.84 ಕೋಟಿ (Ex showroom). ಮಮತಾ ಮೋಹನ್ ದಾಸ್ ಹೊರತುಪಡಿಸಿದರೆ, ಖ್ಯಾತ ಮಲಯಾಳಂ ನಟ, ದುಲ್ಕರ್ ಸಲ್ಮಾನ್ ಸಹ ಪೋರ್ಷೆ 911 ಜಿಟಿ 3 ಸ್ಪೋರ್ಟ್ಸ್ ಕಾರ್ ಹೊಂದಿದ್ದಾರೆ. ಇದರ ಜೊತೆಗೆ ಮಿಯಾಮಿ ಬ್ಲೂ 911 ಜಿಟಿ 3 ಕಾರು ಸಹ ಇಟ್ಟುಕೊಂಡಿದ್ದಾರೆ.

  'ಗೂಳಿ' ಚಿತ್ರದಲ್ಲಿ ನಟನೆ

  'ಗೂಳಿ' ಚಿತ್ರದಲ್ಲಿ ನಟನೆ

  ಮೂಲತಃ ಮಲಯಾಳಿ ಕುಟುಂಬದಲ್ಲಿ ಜನಿಸಿದ ನಟಿ ಮಮತಾ ಮೋಹನ್‌ದಾಸ್ ಮಲಯಾಳಂ, ತಮಿಳು ಹಾಗೂ ತೆಲುಗು ಚಿತ್ರಗಳಲ್ಲಿ ನಟಿಸಿದರು. ಕೇವಲ ನಟನೆಯಲ್ಲಿ ಮಾತ್ರವಲ್ಲ, ಮಮತಾ ಓರ್ವ ಹಿನ್ನೆಲೆ ಗಾಯಕಿಯೂ ಹೌದು. ಮಮತಾ ಮೋಹನ್‌ದಾಸ್ ಪ್ರೊಡಕ್ಷನ್ ಹೆಸರಿಲ್ಲಿ ನಿರ್ಮಾಣ ಸಂಸ್ಥೆಯೂ ಹೊಂದಿದ್ದಾರೆ. 2008ರಲ್ಲಿ ಕಿಚ್ಚ ಸುದೀಪ್ ನಟನೆ 'ಗೂಳಿ' ಚಿತ್ರದಲ್ಲಿ ಮಮತಾ ಮೋಹನ್ ದಾಸ್ ನಟಿಸಿದ್ದಾರೆ. ಇದು ಈಕೆಯ ಚೊಚ್ಚಲ ಕನ್ನಡ ಸಿನಿಮಾ ಹಾಗು ಕೊನೆಯ ಕನ್ನಡ ಸಿನಿಮಾ. ಈ ಚಿತ್ರದ ನಂತರ ಮತ್ತೆ ಯಾವತ್ತೂ ಕನ್ನಡದಲ್ಲಿ ನಟಿಸಿಲ್ಲ. ಪಿ ಸತ್ಯ ನಿರ್ದೇಶಿಸಿದ್ದ ಈ ಚಿತ್ರವನ್ನು ರಾಮು ನಿರ್ಮಾಣ ಮಾಡಿದ್ದರು.

  ಡಿವೋರ್ಸ್-ಕ್ಯಾನ್ಸರ್‌

  ಡಿವೋರ್ಸ್-ಕ್ಯಾನ್ಸರ್‌

  2011ರಲ್ಲಿ ಪ್ರಜಿತ್ ಪದ್ಮನಾಭನ್ ಜೊತೆ ವೈವಾಹಿಕ ಬದುಕು ಆರಂಭಿಸಿದ ನಟಿ ಮಮತಾ ಮೋಹನ್ ದಾಸ್, ಕೇವಲ ಒಂದು ವರ್ಷದಲ್ಲಿ ಡಿವೋರ್ಸ್ ಪಡೆದುಕೊಂಡರು. ಅದಾದ ನಂತರ ನಟಿಗೆ ಕ್ಯಾನ್ಸರ್ ಇರುವುದು ಪತ್ತೆಯಾಯಿತು. ಕ್ಯಾನ್ಸರ್ ವಿರುದ್ಧ ಧೈರ್ಯದಿಂದ ಹೋರಾಟ ಮಾಡಿದ ನಟಿ ನಂತರ ಗುಣಮುಖರಾದರು. ಪ್ರಸ್ತುತ ನಟಿ ಮಮತಾ ಅಮೆರಿಕಾ ಲಾಸ್‌ ಏಂಜಲೀಸ್‌ನಲ್ಲಿ ನೆಲೆಸಿದ್ದಾರೆ.

  ಲಾಸ್ ಏಂಜಲೀಸ್‌ನಲ್ಲಿ ವಾಸ್ತವ್ಯ

  ಲಾಸ್ ಏಂಜಲೀಸ್‌ನಲ್ಲಿ ವಾಸ್ತವ್ಯ

  ಯುಎಸ್‌ನಲ್ಲಿದ್ದರೂ ಮಲಯಾಳಂ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಶೂಟಿಂಗ್ ಹಿನ್ನೆಲೆ ಕೇರಳಕ್ಕೆ ಆಗಾಗ ಬಂದು ಹೋಗ್ತಾರೆ. ಭ್ರಮಂ ಚಿತ್ರೀಕರಣಕ್ಕೆ ಕೇರಳಕ್ಕೆ ಬಂದಿರುವ ನಟಿ ಶೂಟಿಂಗ್ ಮಾಡುತ್ತಿದ್ದಾರೆ. ಈ ಚಿತ್ರದ ಅಮೇಜಾನ್ ಪ್ರೈಮ್‌ನಲ್ಲಿ ಪ್ರೀಮಿಯರ್ ಆಗಲಿದೆ. ಇದರ ಜೊತೆಗೆ ಆರೇಳು ಚಿತ್ರಗಳಲ್ಲಿ ಮಮತಾ ಮೋಹನ್ ದಾಸ್ ನಟಿಸುತ್ತಿದ್ದಾರೆ.

  ಲ್ಯಾಂಬೋರ್ಗಿನಿ ಕಾರು ಖರೀದಿ

  ಲ್ಯಾಂಬೋರ್ಗಿನಿ ಕಾರು ಖರೀದಿ

  ಭಾರತದಲ್ಲಿ ಇತ್ತೀಚಿಗಷ್ಟೆ ಲಾಂಚ್ ಆಗಿದ್ದ ಲ್ಯಾಂಬೋರ್ಗಿನಿ ಉರುಸ್ ಗ್ರಾಫೈಟ್ ಕ್ಯಾಪ್ಸುಲ್ ಕಾರನ್ನು ಜೂನಿಯರ್ ಎನ್‌ಟಿಆರ್ ಖರೀದಿ ಮಾಡಿದ್ದರು. ಕಪ್ಪು ಬಣ್ಣದ ಮ್ಯಾಟ್ ಫಿನಿಶ್ ಕಾರಿನ ಬೆಲೆ 3.16 ಕೋಟಿ (ex-showroom) ಎಂದು ವರದಿಯಾಗಿದೆ. ಈ ಕಾರಿಗೆ ತನ್ನ ಇಷ್ಟವಾದ 9999 ನಂಬರ್ ಪ್ಲೇಟ್ ಹಾಕಿಸಲು 17 ಲಕ್ಷ ರೂಪಾಯಿ ಹಣ ನೀಡಿದ್ದಾರೆ ಎಂದು ವರದಿಯಾಗಿದೆ.

  English summary
  Malayalam actress Mamta Mohandas Buys Porsche 911 Carrera S Supercar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X