For Quick Alerts
  ALLOW NOTIFICATIONS  
  For Daily Alerts

  ನಟ ಮೋಹನ್ ಲಾಲ್ ಗೆ ತೆಲುಗು ಸಿನಿ ಗಣ್ಯರಿಂದ ಬರ್ತಡೇ ವಿಶ್

  |

  ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಮಲಯಾಳಂನ ಖ್ಯಾತ ನಟ ಮೋಹನ್ ಲಾಲ್ ಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. 61ನೇ ವಸಂತಕ್ಕೆ ಕಾಲಿಟ್ಟಿರುವ ಸೂಪರ್ ಸ್ಟಾರ್ ಗೆ ಅಭಿಮಾನಿಗಳು ಮತ್ತು ಬೇರೆ ಬೇರೆ ಭಾಷೆಯ ಚಿತ್ರರಂಗದ ಗಣ್ಯರಿಂದ ಪ್ರೀತಿಯ ಶುಭಾಶಯ ತಿಳಿಸುತ್ತಿದ್ದಾರೆ.

  ಸುಮಾರು ಸುಮಾರು 3 ದಶಕಗಳಿಗೂ ಅಧಿಕ ಕಾಲ ಚಿತ್ರರಂಗದಲ್ಲಿ ಸಕ್ರೀಯರಾಗಿರುವ ಮೋಹನ್ ಲಾಲ್ ಮಲಯಾಳಂ ಮಾತ್ರವಲ್ಲದೇ ದಕ್ಷಿಣ ಭಾರತದ ಎಲ್ಲಾ ಭಾಷೆಯಲ್ಲೂ ನಟಿಸಿ ಸಿನಿ ಪ್ರೇಕ್ಷಕರ ಮನಗೆದಿದ್ದಾರೆ. ಗಡಿಗೂ ಮೀರಿದ ಅಭಿಮಾನಿ ಬಳಗ ಹೊಂದಿರುವ ಮೋಹನ್ ಲಾಲ್ ಎಲ್ಲಾ ಭಾಷೆಯ ಕಲಾವಿದರ ಜೊತೆ ಉತ್ತಮ ಸ್ನೇಹ ಬಾಂಧವ್ಯ ಹೊಂದಿದ್ದಾರೆ. ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಸೂಪರ್ ಸ್ಟಾರ್ ಗೆ ತೆಲುಗು ಸಿನಿ ಗಣ್ಯರಿಂದ ಪ್ರೀತಿಯ ವಿಶ್ ಹರಿದುಬಂದಿದೆ. ಮುಂದೆ ಓದಿ...

  ಮೆಗಾಸ್ಟಾರ್ ಚಿರಂಜೀವಿ ವಿಶ್

  ಮೆಗಾಸ್ಟಾರ್ ಚಿರಂಜೀವಿ ವಿಶ್

  ಮೋಹನ್ ಲಾಲ್ ಸ್ನೇಹಿತರ ಬಳಗದಲ್ಲಿ ತೆಲುಗಿನ ಸ್ಟಾರ್ ನಟ ಚಿರಂಜೀವಿ ಕೂಡ ಒಬ್ಬರು. ಇಬ್ಬರ ನಡುವೆ ಉತ್ತಮವಾದ ಸ್ನೇಹ ಸಂಬಂಧವಿದೆ. ಸ್ನೇಹಿತನಿಗೆ ಚಿರಂಜೀವಿ ಸಾಮಾಜಿಕ ಜಾಲತಾಣದ ಮೂಲಕ ಶುಭಾಶಯ ತಿಳಿಸಿದ್ದಾರೆ. 'ಆತ್ಮೀಯ ಮೋಹನ್ ಲಾಲ್ ಗೆ ಜನ್ಮ ದಿನದ ಶುಭಾಶಯಗಳು. ಸಿನಿಮಾ ಪ್ರತಿಭೆಯ ಪವರ್ ಹೌಸ್, ಅದ್ಭುತ ವ್ಯಕ್ತಿತ್ವ ಮತ್ತು ನನ್ನ ಪ್ರೀತಿಯ ಸಹೋದರನಿಗೆ ಹುಟ್ಟುಹಬ್ಬ ಶುಭಾಶಯಗಳು.' ಎಂದಿದ್ದಾರೆ.

  ಬಾಕ್ಸ್ ಆಫೀಸ್ ಕಿಂಗ್ ಮೋಹನ್ ಲಾಲ್: ಅತಿ ಹೆಚ್ಚು ಹಣ ಗಳಿಸಿದ 5 ಚಿತ್ರಗಳುಬಾಕ್ಸ್ ಆಫೀಸ್ ಕಿಂಗ್ ಮೋಹನ್ ಲಾಲ್: ಅತಿ ಹೆಚ್ಚು ಹಣ ಗಳಿಸಿದ 5 ಚಿತ್ರಗಳು

  ಶುಭಕೋರಿದ ಮಹೇಶ್ ಬಾಬು

  ಶುಭಕೋರಿದ ಮಹೇಶ್ ಬಾಬು

  ಇನ್ನು ತೆಲುಗಿನ ಮತ್ತೋರ್ವ ಖ್ಯಾತ ನಟ ಮಹೇಶ್ ಬಾಬು ಕೂಡ ಪ್ರೀತಿಯ ಶುಭಾಶಯ ತಿಳಿಸಿದ್ದಾರೆ. 'ಹುಟ್ಟುಹಬ್ಬದ ಶುಭಾಶಯಗಳು ಮೋಹನ್ ಲಾಲ್ ಸರ್. ಯಾವಾಗಲೂ ಸಂತೋಷ ಮತ್ತು ಉತ್ತಮ ಆರೋಗ್ಯದಿಂದ ಇರಿ ಎಂದು ಹಾರೈಸುತ್ತೇನೆ' ಎಂದು ಟ್ವೀಟ್ ಮಾಡಿದ್ದಾರೆ.

  ನಟ ರಾಮ್ ಚರಣ್

  ನಟ ರಾಮ್ ಚರಣ್

  ನಟ ಮೋಹನ್ ಲಾಲ್ ತೆಲುಗು ಸ್ಟಾರ್ ಚಿರಂಜೀವಿ ಕುಟುಂಬದ ಜೊತೆ ಉತ್ತಮ ಬಾಂಧವ್ಯ ಇಟ್ಟುಕೊಂಡಿದ್ದಾರೆ. ಮಲಯಾಳಂ ಸೂಪರ್ ಸ್ಟಾರ್ ಗೆ ನಟ ರಾಮ್ ಚರಣ್ ಕೂಡ ವಿಶ್ ಮಾಡಿದ್ದಾರೆ. ಶುಭಾಶಯ ತಿಳಿಸುವ ಜೊತೆಗೆ ಮೋಹನ್ ಲಾಲ್ ಜೊತೆಗಿನ ಸುಂದರ ಫೋಟೋವನ್ನು ಹಂಚಿಕೊಂಡಿದ್ದಾರೆ.

  ಮೋಹನ್ ಲಾಲ್ ಹುಟ್ಟುಹಬ್ಬ: ಸೂಪರ್ ಸ್ಟಾರ್‌ಗೆ ವಿಶ್ ಮಾಡಿದ ಸುದೀಪ್ಮೋಹನ್ ಲಾಲ್ ಹುಟ್ಟುಹಬ್ಬ: ಸೂಪರ್ ಸ್ಟಾರ್‌ಗೆ ವಿಶ್ ಮಾಡಿದ ಸುದೀಪ್

  ಚಿರು ನಂತರ ಮನೆಯಲ್ಲಿದ್ದ ಮತ್ತೊಬ್ಬ ಆಪ್ತನನ್ನು ಕಳೆದುಕೊಂಡ ಮೇಘನಾ ರಾಜ್ | Filmibeat Kannada
  ಕನ್ನಡದ ನಟ ಸುದೀಪ್ ವಿಶ್

  ಕನ್ನಡದ ನಟ ಸುದೀಪ್ ವಿಶ್

  ಕನ್ನಡದ ಖ್ಯಾತ ನಟ ಸುದೀಪ್ ಕೂಡ ಪ್ರೀತಿಯ ಶುಭಾಶಯ ತಿಳಿಸಿದ್ದಾರೆ. 'ಸಂತೋಷ ಮತ್ತು ಆರೋಗ್ಯವಾಗಿರಿ. ಮತ್ತಷ್ಟು ಶಕ್ತಿ ಸಿಗಲಿ. ಹುಟ್ಟುಹಬ್ಬದ ಶುಭಾಶಯಗಳು' ಎಂದು ಟ್ವೀಟ್ ಮಾಡಿದ್ದಾರೆ. ಇತ್ತೀಚಿಗೆ 25 ವರ್ಷದ ಸಿನಿಮಾ ಪಯಣ ಆಚರಿಸಿಕೊಂಡ ನಟ ಸುದೀಪ್ ಗೆ ಮೋಹನ್ ಲಾಲ್ ವಿಶ್ ಮಾಡಿದ್ದರು.

  English summary
  Happy Birthday Mohanlal: Telugu films stars slike Chiranjeevi, mahesh babu and Ram charan birthday wish to Mohanlal.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X