For Quick Alerts
  ALLOW NOTIFICATIONS  
  For Daily Alerts

  ಹಿರಿಯ ನಿರ್ದೇಶಕನ ವಿರುದ್ಧ ಲೈಂಗಿಕ ಕಿರುಕುಳ ದೂರು ನೀಡಿದ ನಟಿ

  |

  ಮಲೆಯಾಳಂ ಚಿತ್ರರಂಗದ ಹಿರಿಯ ನಿರ್ದೇಶಕ ಕಮಲ್ ವಿರುದ್ಧ ಯುವತಿಯೊಬ್ಬಾಕೆ ಲೈಂಗಿಕ ಕಿರುಕುಳದ ಆರೋಪ ಹೊರಿಸಿ ದೂರು ದಾಖಲಿಸಿದ್ದಾರೆ.

  ಕಮಲ್ ಮುಂದಿನ ಸಿನಿಮಾ ಪ್ರಣಯ ಮಿನುಕ್ಕಲುಡೆ ಕಾದಲ್ ಸಿನಿಮಾದಲ್ಲಿ ನಾಯಕಿಯ ಪಾತ್ರ ನೀಡುವುದಾಗಿ ಹೇಳಿ ಲೈಂಗಿಕ ದೌಜರ್ನ್ಯ ಎಸಗಿದ್ದಾರೆ ಎಂದು ನಟಿ ದೂರಿನಲ್ಲಿ ಹೇಳಿದ್ದಾರೆ.

  ಲೈಂಗಿಕ ದೌರ್ಜನ್ಯ ಘಟನೆಯು 'ಆಮಿ' ಸಿನಿಮಾದ ಚಿತ್ರೀಕರಣದ ವೇಳೆ ನಡೆಯಿತು ಎಂದು ಸಹ ನಟಿ ಹೇಳಿದ್ದಾರೆ. ಆಮಿ ಸಿನಿಮಾದಲ್ಲಿ ಮಂಜು ವಾರಿಯರ್ ಪ್ರಮುಖ ಪಾತ್ರದಲ್ಲಿದ್ದರು.

  ಮೂರು ದಶಕದಿಂದಲೂ ಸಿನಿಮಾ ರಂಗದಲ್ಲಿರುವ ಕಮಲ್

  ಮೂರು ದಶಕದಿಂದಲೂ ಸಿನಿಮಾ ರಂಗದಲ್ಲಿರುವ ಕಮಲ್

  ಮೂರು ದಶಕಗಳಿಂದಲೂ ಮಲೆಯಾಳಂ ಸಿನಿಮಾ ಉದ್ಯಮದಲ್ಲಿರುವ ನಿರ್ದೇಶಕ ಕಮಲ್ ಮೇಲೆ ಇದೇ ಮೊದಲ ಬಾರಿಗೆ ಲೈಂಗಿಕ ದೌರ್ಜನ್ಯದ ಆರೋಪ ಬಂದಿದೆ.

  ಇನ್ನೂ ಇಬ್ಬರು ಮಹಿಳೆಯರಿಗೂ ಅನ್ಯಾಯ: ಆರೋಪ

  ಇನ್ನೂ ಇಬ್ಬರು ಮಹಿಳೆಯರಿಗೂ ಅನ್ಯಾಯ: ಆರೋಪ

  ದೂರಿನಲ್ಲಿ ಹೇಳಿರುವ ಪ್ರಕಾರ, ಯುವತಿಯು ತಾನು ಮಾತ್ರವಲ್ಲದೆ ಇನ್ನೂ ಇಬ್ಬರು ಯುವತಿಯರು ನಿರ್ದೇಶಕ ಕಮಲ್ ಇಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿರುವುದಾಗಿ ಹೇಳಿದ್ದಾರೆ. ದೂರಿನ ಪ್ರತಿಯನ್ನು ಮಲೆಯಾಳಂ ನ ಮಾಧ್ಯಮಗಳು ಪ್ರದರ್ಶಿಸಿವೆ.

  ಮಲಯಳಂ ಸಿನಿಮಾ ಅಕಾಡೆಮಿ ನಿರ್ದೇಶಕ ಕಮಲ್

  ಮಲಯಳಂ ಸಿನಿಮಾ ಅಕಾಡೆಮಿ ನಿರ್ದೇಶಕ ಕಮಲ್

  ಮಲಯಾಳಂ ಸಿನಿಮಾ ಅಕಾಡೆಮಿಯ ನಿರ್ದೇಶಕರೂ ಆಗಿರುವ ಕಮಲ್, 1986 ರಲ್ಲಿ ಮೊದಲ ಸಿನಿಮಾವನ್ನು ನಿರ್ದೇಶಿಸಿದ್ದರು. ಮೂರು ದಶಕಗಳಿಂದ ಹಲವು ಹಿಟ್ ಸಿನಿಮಾಗಳನ್ನು ನೀಡಿರುವ ಅವರು, ಹಲವು ಪ್ರಶಸ್ತಿಗಳಿಗೂ ಭಾಜನರಾಗಿದ್ದಾರೆ.

  2019 ರಲ್ಲಿ ದೂರು ದಾಖಲಾಗಿತ್ತು

  2019 ರಲ್ಲಿ ದೂರು ದಾಖಲಾಗಿತ್ತು

  2019 ರಲ್ಲಿ ವಕೀಲನೊಬ್ಬ ತನ್ನನ್ನು ನಿರ್ದೇಶಕ ಕಮಲ್ ಮನೆಯಲ್ಲಿ ಕೂಡಿಹಾಕಿಕೊಂಡು ಹಿಂಸೆ ಮಾಡಿದ್ದಾರೆ ಎಂದು ದೂರು ದಾಖಲಿಸಿದ್ದರು. ಆ ಪ್ರಕರಣ ಇನ್ನೂ ನ್ಯಾಯಾಲಯದಲ್ಲಿದೆ.

  English summary
  A young actress lodge harrasment complaint against Malayalam movie director Kamal.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X