ಮಲಯಾಳಂನಲ್ಲಿ ಮಿಂಚಲಿದ್ದಾರೆ ಕನ್ನಡದ ಕುವರಿ ಹರ್ಷಿಕಾ.!
ಕನ್ನಡ, ತಮಿಳು, ಹಾಗೂ ತೆಲುಗಿನಲ್ಲಿ ಅಭಿನಯಿಸಿದ ನಂತರ ನಟಿ ಹರ್ಷಿಕಾ ಪೂಣಚ್ಚ ಮಲಯಾಳಂ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ತ್ರಿಭಾಷಾ ನಟಿಯಾಗಿದ್ದ ಹರ್ಷಿಕಾ ಇನ್ಮುಂದೆ ಚರ್ತುಭಾಷಾ ಕಲಾವಿದೆಯಾಗಲಿದ್ದಾರೆ.
ಹೌದು, ಹರ್ಷಿಕಾ ಪೂಣಚ್ಚ ಮಲಯಾಳಂ ಚಿತ್ರವೊಂದರಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದು, ಈ ಚಿತ್ರಕ್ಕೆ 'ಚಾರ್ ಮಿನರ್' ಎಂದು ಹೆಸರಿಡಲಾಗಿದೆ. ಅಜಿತ್ ಲೋಕೇಶ್ ನಿರ್ದೇಶನ ಮಾಡುತ್ತಿರುವ ಈ ಚಿತ್ರದಲ್ಲಿ ಹೇಮಂತ್ ಮೆನನ್ ಮತ್ತು ಅಶ್ವಿನ್ ಇಬ್ಬರು ನಾಯಕರಾಗಿದ್ದಾರೆ.

ಇದೊಂದು ಟ್ರಯಾಂಗಲ್ ಲವ್ ಸ್ಟೋರಿಯಾಗಿದ್ದು, ಹರ್ಷಿಕಾ ಕನ್ನಡ ಮಾತನಾಡುವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಂದರೆ ಬೆಂಗಳೂರು ಹುಡುಗಿಯ ಪಾತ್ರ. ಚಿತ್ರಕ್ಕಾಗಿ ತಮ್ಮ ಗೆಟಪ್ ಕೂಡ ಚೇಂಜ್ ಮಾಡಿಕೊಂಡಿದ್ದಾರೆ ಹರ್ಷಿಕಾ ಪೂಣಚ್ಚ.
ಅಂದ್ಹಾಗೆ, 2008ರಲ್ಲಿ 'ಪಿಯುಸಿ' ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ಹರ್ಷಿಕಾ, ತೆಲುಗು ಮತ್ತು ತಮಿಳಿನಲ್ಲೂ ನಟಿಸಿದ್ದಾರೆ. ಸದ್ಯ, ಉಪೇಂದ್ರ ಅಭಿನಯದ 'ಉಪೇಂದ್ರ ಮತ್ತೆ ಬಾ' ಚಿತ್ರದಲ್ಲಿ ಹರ್ಷಿಕಾ ವಿಶೇಷ ಪಾತ್ರ ನಿರ್ವಹಿಸಿದ್ದು, ಈ ವಾರವಷ್ಟೇ ಬಿಡುಗಡೆಯಾಗಿದೆ.


Click it and Unblock the Notifications











